ಗಾಬರಿಗೆ ಬೀಳ್ದೆ ಯುಪಿಐ ಸ್ಕ್ಯಾಮ್ ತಡೆದ ಮುಂಬೈ ಮಹಿಳೆ; ತಮನ್ನಾ ಕತೆಯೀಗ ವೈರಲ್

By Suvarna NewsFirst Published Jan 7, 2024, 5:06 PM IST
Highlights

ಯುಪಿಐ ಪಾವತಿ ವ್ಯವಸ್ಥೆಯ ಇಂದಿನ ದಿನಗಳಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಕಾಗುವುದಿಲ್ಲ. ಮುಂಬೈನಲ್ಲಿ ಮಹಿಳೆಯರೊಬ್ಬರು ಸೈಬರ್ ಅಪರಾಧ ಕೃತ್ಯವೊಂದನ್ನು ತಾವು ಹೇಗೆ ಎದುರಿಸಿದೆ ಎನ್ನುವುದಾಗಿ ತಿಳಿಸಿರುವುದು ಈಗ ವೈರಲ್ ಆಗಿದೆ. 

ಸೈಬರ್ ಕ್ರೈಮ್ ಇಂದು ಮನೆಮನೆಗೂ ಎದುರಾಗಿರುವ ಆತಂಕವಾಗಿದೆ. ಸ್ಮಾರ್ಟ್ ಫೋನ್ ಗಳು ಮನೆಯಲ್ಲೇ ಬ್ಯಾಂಕಿಂಗ್ ಸೌಲಭ್ಯ ಒದಗಿಸಿವೆ ಎನ್ನುವುದು ನಿಜವಾದರೂ ಅಷ್ಟೇ ಅಪಾಯವೂ ಅದರಿಂದ ಎದುರಾಗಿದೆ. ಬ್ಯಾಂಕ್ ಖಾತೆಯಲ್ಲಿ ಇಟ್ಟಿರುವ ಹಣಕ್ಕೆ ಗ್ಯಾರೆಂಟಿಯೇ ಇಲ್ಲ ಎನ್ನುವಂತಾಗಿದೆ. ಗ್ರಾಹಕರು ಎಷ್ಟು ಎಚ್ಚೆತ್ತುಕೊಂಡರೂ ಸೈಬರ್ ಅಪರಾಧಿಗಳು ಇನ್ನಷ್ಟು ಚುರುಕಾಗಿ, ಮತ್ತಷ್ಟು ಹೊಸ ಹೊಸ ಐಡಿಯಾಗಳೊಂದಿಗೆ ಜನಜೀವನಕ್ಕೆ ಲಗ್ಗೆ ಇಡುತ್ತಲೇ ಇದ್ದಾರೆ. ಅಪರಿಚಿತ ಫೋನ್ ಕರೆಗಳನ್ನು ಸ್ವೀಕರಿಸುವುದು, ಯಾರಿಗಾದರೂ ಸಹಾಯದ ದೃಷ್ಟಿಯಿಂದ ಫೋನ್ ನೀಡುವುದು, ಒಟಿಪಿ ಬಹಿರಂಗಪಡಿಸುವುದು, ಯಾವುದೋ ಲಿಂಕ್ ಒತ್ತುವುದೆಲ್ಲ ಅಪಾಯಕಾರಿ ಎನ್ನುವುದು ಈಗ ಸಾಬೀತಾಗಿದೆ. ಈ ಬಗ್ಗೆ ಎಲ್ಲರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತೇವೆ.

ಆದರೆ, ಮುಂಬೈನಲ್ಲಿ ನಡೆದ ಒಂದು ಸೈಬರ್ ಅಪರಾಧ ಪ್ರಕರಣ ಎಲ್ಲರಿಗೂ ಇನ್ನಷ್ಟು ಎಚ್ಚರಿಕೆ ನೀಡುವಂತಿದೆ. ಜತೆಗೆ, ಮಹಿಳೆಯೊಬ್ಬರು ಇದನ್ನು ಚುರುಕಿನಿಂದ ನಿಗ್ರಹಿಸಿರುವುದು ಸಹ ಅಷ್ಟೇ ರೋಚಕವಾಗಿದೆ. ಇಂದಿನ ದಿನಗಳಲ್ಲಿ ಎಲ್ಲರೂ ಧಾರಾಳವಾಗಿ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಕೆ ಮಾಡುತ್ತೇವೆ. ಚಿಕ್ಕಪುಟ್ಟ ಪಾವತಿಯಿಂದ ಹಿಡಿದು ಕೆಲವು ಸಾವಿರಾರು ರೂಪಾಯಿಗಳವರೆಗೂ ಯುಪಿಐ ಮೂಲಕ ಹಣ ಪಾವತಿ ಮಾಡುತ್ತೇವೆ. ಮೊಬೈಲ್ ನಲ್ಲಿ ಈಸಿಯಾಗಿ ಸ್ಪರ್ಶ ಮಾಡಿಬಿಟ್ಟರೆ ಮುಗಿಯಿತು. ಆದರೆ, ಇಂಥ ಯುಪಿಐನಲ್ಲೂ ಈಗ ಕನ್ನ ಹಾಕುವ ಕಾರ್ಯಾಚರಣೆ ಶುರುವಾಗಿದೆ. 

ಪ್ರತಿಷ್ಠಿತ ಅವಾರ್ಡ್ ಪಡೆಯಲು ಲಂಚ ಕೊಟ್ಟ ಸ್ಟಾರ್ ನಟ; ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!

ಗಡಿಬಿಡಿ ಸೃಷ್ಟಿಸುವ ಉದ್ದೇಶ: ಇತ್ತೀಚೆಗೆ ಮುಂಬೈನಲ್ಲಿ ತಮನ್ನಾ (Tamannah) ಎಂಬ ಮಹಿಳೆಯರೊಬ್ಬರು (Woman) ಇಂಥದ್ದೊಂದು ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಫೋನ್ ಗೆ (Phone) ಒಂದು ದಿನ ಅಪರಿಚಿತರೊಬ್ಬರ ಕಾಲ್ (Call) ಬಂತು. ಮಹಿಳೆಯ ತಂದೆಯಿಂದ ಅವರ ಸಂಖ್ಯೆ ದೊರಕಿರುವುದಾಗಿ ಅಪರಿಚಿತರು ತಿಳಿಸಿ, ಜಿಪೇ (GPay) ಮಾಡುವುದು ಅವರಿಗೆ ತಿಳಿದಿಲ್ಲ, ಹೀಗಾಗಿ, ತಾವು ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿದರು. ಆಗ ಅವರಿಗೆ 50 ಸಾವಿರ ರೂಪಾಯಿ ಸಂದಾಯವಾಗಿರುವ ಕುರಿತು ಮೆಸೇಜ್ (Message) ಬಂತು. ಆದರೆ, ಅವರು ನಿರೀಕ್ಷೆ ಮಾಡುತ್ತಿದ್ದ ಹಣ ಕೇವಲ 5 ಸಾವಿರ ರೂಪಾಯಿ ಆಗಿತ್ತು. ಆ ಕಡೆಯಿಂದ ಬಂದ ಕಾಲ್ ನಲ್ಲಿ ಮಾತನಾಡಿದ ಅಪರಿಚಿತರು, ಮಿಸ್ಟೇಕ್ (Mistake) ಆಗಿ ಹೆಚ್ಚು ಹಣ ಖಾತೆಗೆ ಬಂದಿರುವಂತೆ ಬಿಂಬಿಸಲು ಗಡಿಬಿಡಿಯಲ್ಲಿ ಮಾತನಾಡುತ್ತಿದ್ದರು. 45 ಸಾವಿರ ರೂಪಾಯಿಯನ್ನು ವಾಪಸ್ ಹಾಕುವಂತೆ ತಿಳಿಸಿದರು. ವಿಶ್ವಾಸ ಗಳಿಸಲು ಮಧ್ಯೆ ಮಧ್ಯೆ “ಬೇಟಾ ಬೇಟಾ’ ಎನ್ನುತ್ತಿದ್ದರು. ತಮನ್ನಾ ಅವರ ಮೇಲೆ ಒತ್ತಡ ಹಾಕುವ ಪ್ರಯತ್ನ ಇದಾಗಿತ್ತು. ಆದರೆ, ಅವರು ಎಷ್ಟು ಬಾರಿ ಹೇಳಿದರೂ, ತಮನ್ನಾ ತಮ್ಮ ಶಾಂತಿ (Calm) ಕಳೆದುಕೊಳ್ಳಲಿಲ್ಲ. 

Omg guys, someone recently tried to scam me with UPI.

I was at my parents'. My dad and I had just discussed about maturing investments and what to do next with it.

He had just left the house.

I get a call from some guy who said he got my number from my dad...

— Tamanna (@itssynecdoche)

 

ನಾಪತ್ತೆ (Dissapear)
ಅಪರಿಚಿತರ ಕಡೆಯಿಂದ ಇವರಿಗೆ ಗೂಗಲ್ ಪೇ ನಲ್ಲಿ ಕೇವಲ ಸಂದೇಶ ಮಾತ್ರ ಬಂದಿತ್ತು. ಹಣವೇನೂ (Money) ಸ್ವೀಕಾರವಾಗಿರಲಿಲ್ಲ. ಹೀಗಾಗಿ, ಕಾಯುತ್ತ ಕುಳಿತರು. ಬ್ಯಾಂಕಿನಿಂದ ಹಣ ಸ್ವೀಕಾರವಾದ ಹೊರತು ವಾಪಸ್ ಹಾಕುವ ವಿಚಾರವನ್ನು ಅವರು ಮಾಡಿರಲಿಲ್ಲ. ಹೊರಗೆ ಹೋಗಿದ್ದ ತಂದೆ ವಾಪಸ್ ಬರುವವರೆಗೆ ಕಾಯಲು ನಿರ್ಧರಿಸಿದರು. ಕೆಲ ಸಮಯದ ಬಳಿಕ ಅದುವರೆಗೆ ಪದೇ ಪದೆ ಫೋನ್ ಮಾಡಿದ್ದ ದುಷ್ಕರ್ಮಿಗಳು ಆಗ ನಾಪತ್ತೆಯಾದರು. ಪದೇ ಪದೆ ಸಂದೇಶ ಕಳಿಸಿದರೂ ತಮನ್ನಾ ಪ್ರತಿಕ್ರಿಯೆ ನೀಡಲು ಹೋಗಿರಲಿಲ್ಲ. ಗಡಿಬಿಡಿಯಲ್ಲಿದ್ದಂತೆ ವರ್ತಿಸುವ ಮೂಲಕ, ಅದೇ ಗಡಿಬಿಡಿಯಲ್ಲಿ ಇವರು ಹಣ ಕಳಿಸಲಿ ಎಂದು ನಾಟಕವಾಡಿದ್ದ ದುಷ್ಕರ್ಮಿಗಳು ಈಕೆ ತಡ ಮಾಡಿದಾಗ ನಾಪತ್ತೆಯಾಗಿದ್ದರು. 

ಯಶ್ ಜತೆಯಾಗಲಿರುವ ಬಾಲಿವುಡ್ ಸುಂದರಿ; ರವೀನಾ ಟಂಡನ್ ಅಲ್ಲ, ಬೇರೆ ಬೆಡಗಿ!

ತಮ್ಮ ಈ ಅನುಭವವನ್ನು ತಮನ್ನಾ ಶೇರ್ (Share) ಮಾಡಿದ್ದಾರೆ. ಹಲವರು ಇದಕ್ಕೆ ದನಿಗೂಡಿಸಿದ್ದು, ಇಂತಹ ಅನೇಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ತಮನ್ನಾ ಪ್ರಕಾರ, ಇಪಿಎಫ್ ಒ ವೆಬ್ ಸೈಟ್ ನಲ್ಲಿ ಆಧಾರ್ ಮಾಹಿತಿ ಎಂಟ್ರಿ ಮಾಡಿದ ತಕ್ಷಣ ಆಕೆಗೆ ದುಷ್ಕರ್ಮಿಗಳಿಂದ ಕಾಲ್ ಬಂದಿತ್ತು. ಏನಾದರೂ ಲಿಂಕ್ ಇರುವ ಬಗ್ಗೆ ಅವರು ಅನುಮಾನ (Suspect) ವ್ಯಕ್ತಪಡಿಸಿದ್ದಾರೆ. 

click me!