ಹ್ಯಾಪಿ ಮದರ್ಸ್ ಡೇ ಅಂತಾ ವಿಶ್ ಮಾಡ್ತೇವೆ. ತಾಯಿಗೆ ಈ ಮಾತನ್ನು ಹೇಳದೆ ಹೋದ್ರೂ ಸ್ಟೇಟರ್ಸ್, ಫೇಸ್ಬುಕ್ ನಲ್ಲಿ ಸಂದೇಶ ಮಿಂಚುತ್ತಿರುತ್ತದೆ. ಆದ್ರೆ ಈ ದಿನ ಹೇಗೆ ಶುರುವಾಯ್ತು ಎಂಬುದು ಅನೇಕರಿಗೆ ಗೊತ್ತಿಲ್ಲ.
ತಾಯಿ (Mother) – ಮಗು (Child)ವಿನ ಸಂಬಂಧದ ಬಗ್ಗೆ ವರ್ಣಿಸೋದು ಕಷ್ಟ. ಮಗುವನ್ನು ಹೊತ್ತು, ಹೆತ್ತು ಮಾಡಿದ್ರೆ ತಾಯಿ ಜವಾಬ್ದಾರಿ (Responsibility), ಕರ್ತವ್ಯ, ಪ್ರೀತಿ (Love) ಮುಗಿಯಲಿಲ್ಲ. ಕರುಳಿನ ಕುಡಿಯ ಪ್ರತಿ ಸುಖ-ದುಃಖದಲ್ಲೂ ಜೊತೆಗೆ ನಿಲ್ಲುವವಳು ತಾಯಿ. ತಾಯಿಯ ಪ್ರಾಮುಖ್ಯತೆಯನ್ನು ಪದ (word) ಗಳಲ್ಲಿ ಹೇಳುವುದು ಸುಲಭವಲ್ಲ. ತಾಯಿ ಜೊತೆಗಿರುವ ಪ್ರತಿ ಕ್ಷಣವನ್ನೂ ತಾಯಂದಿರ ದಿನವನ್ನಾಗಿ ಆಚರಣೆ ಮಾಡ್ಬೇಕು. ಪ್ರತಿ ದಿನ, ಪ್ರತಿ ಕ್ಷಣ ತಾಯಿಯನ್ನು ಪ್ರೀತಿ, ಗೌರವ (Respect) ದಿಂದ ನೋಡಿಕೊಳ್ಳಬೇಕು. ತಾಯಿಗೆ ಗೌರವ ನೀಡುವ ಮಕ್ಕಳಿಗೆ ಪ್ರದಿ ದಿನ ತಾಯಂದಿರ ದಿನವಾಗಿದ್ದರೂ ವರ್ಷದ ಒಂದು ದಿನವನ್ನು ಮಾತೃತ್ವದ ಪ್ರಾಮುಖ್ಯತೆಗೆ ನಿಗದಿಪಡಿಸಲಾಗಿದೆ,. ಅದನ್ನು ನಾವು ತಾಯಂದಿರ ದಿನವೆಂದು (Mothers day ) ಆಚರಿಸುತ್ತೇವೆ. ಈ ವರ್ಷ ಮೇ 8 (May 8th) ರಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.
ಮೇ ತಿಂಗಳ ಎರಡನೇ ಭಾನುವಾರದಂದು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲದ ತಾಯಂದಿರ ದಿನವನ್ನು ಆಚರಿಸುವ ಪರಿಪಾಠ ಬಹಳ ಹೆಚ್ಚಾಗಿದೆ. ಇದರಿಂದಾಗಿ ಅನೇಕ ಜನರು ತಾಯಂದಿರ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಂದು ನಾವು ತಾಯಂದಿರ ದಿನದ ಬಗ್ಗೆ ಸ್ವಲ್ಪ ಮಾಹಿತಿಯನ್ನು ನೀಡ್ತೇವೆ.
ತಾಯಂದಿರ ದಿನದ ಆರಂಭ ಹೇಗಾಯ್ತು? : ಅನ್ನಾ ಜೋರ್ವಿಸ್ ಎಂಬ ಅಮೇರಿಕನ್ ಮಹಿಳೆಯು ತಾಯಂದಿರ ದಿನವನ್ನು ಪ್ರಾರಂಭಿಸಿದರು. ಅನ್ನಾ ತನ್ನ ತಾಯಿಯೊಂದಿಗೆ ವಿಶೇಷವಾದ ಬಾಂಧವ್ಯವನ್ನು ಹೊಂದಿದ್ದರು. ಅನ್ನಾ ತನ್ನ ತಾಯಿಯಿಂದ ಸ್ಫೂರ್ತಿಗೊಂಡಿದ್ದರು. ಅವರ ತಾಯಿಯ ಮರಣದ ನಂತರ ಅನ್ನಾ ಮದುವೆಯಾಗದಿರಲು ನಿರ್ಧರಿಸಿದರು. ತನ್ನ ತಾಯಿಗೆ ತನ್ನ ಜೀವವನ್ನು ಸಮರ್ಪಿಸಿಕೊಳ್ಳಲು ಮುಂದಾದ್ರು. ಇದೇ ಕಾರಣಕ್ಕೆ ಅನ್ನಾ, ತಾಯಂದಿರ ದಿನವನ್ನು ಶುರು ಮಾಡಿದ್ರೆ. ಅದಕ್ಕಾಗಿಯೇ ಕ್ರಿಶ್ಚಿಯನ್ ಸಮುದಾಯದ ಅನೇಕ ಜನರು ಈ ದಿನವನ್ನು ವರ್ಜಿನ್ ಮೇರಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಆದರೆ ಯುರೋಪಿನಲ್ಲಿ ಇದನ್ನು ಮದರ್ರಿಂಗ್ ಸಂಡೆ ಎಂದು ಕರೆಯಲಾಗುತ್ತದೆ.
ಈ ನೈಸರ್ಗಿಕ ವಸ್ತುಗಳನ್ನು ಬಳಸಿ ಸುಲಭವಾಗಿ ಕೂದಲನ್ನು ಕಪ್ಪಾಗಿಸಿ
ಮೇ ತಿಂಗಳ ಎರಡನೇ ಭಾನುವಾರದಂದೆ ಆಚರಣೆ ಏಕೆ? : ಸಾಮಾನ್ಯವಾಗಿ ಎಲ್ಲರನ್ನು ಈ ಪ್ರಶ್ನೆ ಕಾಡುತ್ತದೆ. ಅನ್ನಾ ಜೋರ್ವಿಸ್ ತಾಯಂದಿರ ದಿನಕ್ಕೆ ಅಡಿಪಾಯವನ್ನು ಹಾಕಿದರು. ಆದರೆ ಔಪಚಾರಿಕವಾಗಿ ತಾಯಂದಿರ ದಿನವನ್ನು ಮೇ 9, 1914 ರಂದು ಅಮೆರಿಕದ ಅಂದಿನ ಅಧ್ಯಕ್ಷ ವುಡ್ರೋ ವಿಲ್ಸನ್ ಪ್ರಾರಂಭಿಸಿದರು. ಯುಎಸ್ ಸಂಸತ್ತಿನಲ್ಲಿ ಕಾನೂನನ್ನು ಅಂಗೀಕರಿಸುವ ಮೂಲಕ, ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲು ಘೋಷಿಸಲಾಯಿತು. ಅಂದಿನಿಂದ, ಅಮೆರಿಕ, ಯುರೋಪ್ ಮತ್ತು ಭಾರತ ಸೇರಿದಂತೆ ಹಲವೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಅದೇ ಸಮಯದಲ್ಲಿ, ಪ್ರಪಂಚದ ಅನೇಕ ದೇಶಗಳಲ್ಲಿ, ತಾಯಿಯ ದಿನವನ್ನು ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ.
ಅಯ್ಯಯ್ಯೋ..ಇಂಥಾ ಆಹಾರಗಳನ್ನು ತಿಂದ್ರೆ ಬೇಗ ವಯಸ್ಸಾಗುತ್ತಂತೆ !
ತಾಯಂದಿರ ದಿನದ ಪ್ರಾಮುಖ್ಯತೆ : ತಾಯಿಯ ಮಹತ್ವವನ್ನು ಜನರಿಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ. ತಾಯಂದಿರ ದಿನದ ಮಹತ್ವವನ್ನು ಅರಿತ ಜನರು, ತಮ್ಮದೇ ಆದ ರೀತಿಯಲ್ಲಿ ತಾಯಂದಿರ ದಿನವನ್ನು ಆಚರಿಸುತ್ತಾರೆ. ವಿಶೇಷವಾಗಿ ಭಾರತದಲ್ಲಿ, ಮಕ್ಕಳು ತಮ್ಮ ತಾಯಿಗೆ ವಿಶೇಷ ಭಾವನೆ ಮೂಡಿಸಲು ಏನಾದರೂ ವಿಶೇಷವಾದ ಯೋಜನೆ ರೂಪಿಸುತ್ತಾರೆ. ತಾಯಿಯನ್ನು ಗೌರವಿಸುವವರು ಆ ದಿನ ವಿಶೇಷ ಊಟ, ಉಡುಗೊರೆ ವ್ಯವಸ್ಥೆ ಮಾಡ್ತಾರೆ. ಮತ್ತೆ ಕೆಲವರಿಗೆ ತಾಯಿ ಮಾಡಿದ ಕೆಲಸ ಮರೆತು ಹೋಗಿರುತ್ತದೆ. ತಾಯಂದಿರ ದಿನಕ್ಕೆ ಶುಭ ಕೋರದೆ,ಉಡುಗೊರೆ ನೀಡದೆ ಆಕೆಯನ್ನು ಹೊರ ಹಾಕಿದ ಉದಾಹರಣೆಗಳು ಸಾಕಷ್ಟಿವೆ.