ಬೆವರಲ್ಲೂ ಮೆನ್ ಆರ್ ಫ್ರಂ ಮಾರ್ಸ್, ವಿಮೆನ್ ಆರ್ ಫ್ರಂ ವೀನಸ್

Published : Jun 19, 2018, 09:43 AM IST
ಬೆವರಲ್ಲೂ ಮೆನ್ ಆರ್ ಫ್ರಂ ಮಾರ್ಸ್, ವಿಮೆನ್ ಆರ್ ಫ್ರಂ ವೀನಸ್

ಸಾರಾಂಶ

ಶಕ್ತಿ, ಮಾನಸಿಕ ಹಾಗೂ ದೈಹಿಕವಾಗಿ ವಿಭಿನ್ನವಾಗಿರುವ ಹೆಣ್ಣು-ಗಂಡಿನ ಬೆವರಿನಲ್ಲಿಯೂ ವ್ಯತ್ಯಾಸವಿರುತ್ತದೆ, ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಹೆಣ್ಣಿಗಿಂತ ಗಂಡು ನಾಲ್ಕು ಪಟ್ಟು ಹೆಚ್ಚು ಬೆವರುತ್ತಾರೆ. ವಿವರೀತ ವರ್ಕ್‌ಔಟ್ ಮಾಡಿದರೆ ಮಾತ್ರ ಹೆಣ್ಣು, ಗಂಡಿನಂತೆ ಬೆವರುತ್ತಾಳೆ.

* ಎಕ್ರೈನ್ ಮತ್ತು ಅಪೊಕ್ರೈನ್ ಎಂಬ ಬೆವರು ಗ್ರಂಥಿಗಳು ಮನುಷ್ಯನ ದೇಹದಲ್ಲಿರುತ್ತವೆ. ಎಕ್ರೈನ್ ಗ್ರಂಥಿಗಳು ನೀರು ರೂಪದ ಬೆವರು ಉತ್ಪಾದಿಸುತ್ತದೆ. ದೇಹದ ಎಲ್ಲ  ಭಾಗದಲ್ಲದೇ ಮುಖ, ಕೈ ಮತ್ತು ಪಾದದಲ್ಲಿ ಹೆಚ್ಚು ಬೆವರುವಂತೆ ಈ ಗ್ರಂಥಿ ಮಾಡುತ್ತದೆ. ದೇಹದಲ್ಲಿ ಕೂದಲಿರುವ ಭಾಗದಲ್ಲಿ ಬೆವರಲು ಅಪೊಕ್ರೈನ್ ಗ್ರಂಥಿ ಕಾರಣ. 

* ಬೆವರಿನ ಮೂಲಕ ರಕ್ತದ ವಿಶಕಾರಿ ಅಂಶಗಳು ಹೊರ ಹೋಗುತ್ತದೆ. ಇದು ಹೃದಯದ ಆರೋಗ್ಯಕ್ಕೆ ಒಳಿತು. 

* ದೇಹದ ಕಲ್ಮಶಗಳು, ಧೂಳು, ಪರಾಗ, ಬ್ಯಾಕ್ಟೀರಿಯಾಗಳು ಬೆವರಿನ ಮೂಲಕ ಹೊರ ಹೋಗುವುದರಿಂದ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. 

* ಚರ್ಮದ ಮೇಲೆ ಗಾಯವಾಗಿದ್ದರೆ, ವಾಸಿಯಾಗಲು ಬೆವರು ಸಹಕರಿಸಿ, ಹೊಸ ಚರ್ಮ ಬೆಳೆಯಲು ಅನುವು ಮಾಡಿಕೊಡುತ್ತದೆ.

* ಬೆವರು ಗ್ರಂಥಿಗಳು ಕ್ರಿಯಾಶೀಲವಾಗಿ, ವಿಪರೀತ ಬೆವರುವುದನ್ನು ಹೈಡ್ರೋಸಿನ್ ಎನ್ನುತ್ತಾರೆ. 

* ಸುಖಾ ಸುಮ್ಮನೆ ಕೂತಾಗಲೂ ಹೆಚ್ಚೆಚ್ಚು ಬೆವರಿದರೆ, ಅದು ಥೈರಾಯಿಡ್. ಮಧುಮೇಹ ಅಥವಾ ಹೃದ್ರೋಗದ ಲಕ್ಷಣವಾಗಿರುತ್ತದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Silver Toe Rings: ಈ ಬೆಳ್ಳಿ ಕಾಲುಂಗುರಗಳ ಡಿಸೈನ್ ನಿಮ್ಮ ಪಾದಗಳ ಅಂದವನ್ನು ದುಪ್ಪಟ್ಟು ಮಾಡುತ್ತೆ!
Reservation ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪು