ಅಂತಾರಾಷ್ಟ್ರೀಯ ಮಹಿಳಾ ದಿನ: ಸ್ತ್ರೀ ಸಬ​ಲೀ​ಕ​ರ​ಣಕ್ಕೆ ಸರ್ಕಾ​ರದ ಯೋಜ​ನೆ​ಗ​ಳು

By Kannadaprabha News  |  First Published Mar 8, 2020, 12:32 PM IST

ಸ್ವಾತಂತ್ರ್ಯಾ ನಂತ​ರ​ ಮಹಿ​ಳೆ​ಯರ ಹಕ್ಕು​ಗಳ ರಕ್ಷ​ಣೆಗೆ, ಸುರ​ಕ್ಷ​ತೆಗೆ, ಸ್ವಾವ​ಲಂಬಿ ಜೀವ​ನ​ಕ್ಕೆ, ಸಬ​ಲೀ​ಕ​ರ​ಣಕ್ಕೆ ಸರ್ಕಾ​ರ​ಗಳು ಅನೇಕ ಕ್ರಮ ಕೈಗೊ​ಳ್ಳು​ತ್ತಿ​ವೆ. ಸಂವಿ​ಧಾ​ನಾ​ತ್ಮ​ಕ​ವಾಗಿಯೂ ಮಹಿ​ಳೆ ಸಮಾನ ಸ್ಥಾನ​ಮಾನ ಪಡೆ​ದಿ​ದ್ದಾಳೆ. ಆದಾ​ಗ್ಯೂ ಭಾರ​ತ​ದಲ್ಲಿ ಮಹಿಳಾ ಸಮಾ​ನತೆ ಎಂಬುದು ಇನ್ನೂ ಮರೀ​ಚಿಕೆ ಎಂದರೆ ತಪ್ಪಾ​ಗಲ್ಲ.


ಸ್ವಾತಂತ್ರ್ಯಾ ನಂತ​ರ​ ಮಹಿ​ಳೆ​ಯರ ಹಕ್ಕು​ಗಳ ರಕ್ಷ​ಣೆಗೆ, ಸುರ​ಕ್ಷ​ತೆಗೆ, ಸ್ವಾವ​ಲಂಬಿ ಜೀವ​ನ​ಕ್ಕೆ, ಸಬ​ಲೀ​ಕ​ರ​ಣಕ್ಕೆ ಸರ್ಕಾ​ರ​ಗಳು ಅನೇಕ ಕ್ರಮ ಕೈಗೊ​ಳ್ಳು​ತ್ತಿ​ವೆ. ಸಂವಿ​ಧಾ​ನಾ​ತ್ಮ​ಕ​ವಾಗಿಯೂ ಮಹಿ​ಳೆ ಸಮಾನ ಸ್ಥಾನ​ಮಾನ ಪಡೆ​ದಿ​ದ್ದಾಳೆ. ಆದಾ​ಗ್ಯೂ ಭಾರ​ತ​ದಲ್ಲಿ ಮಹಿಳಾ ಸಮಾ​ನತೆ ಎಂಬುದು ಇನ್ನೂ ಮರೀ​ಚಿಕೆ ಎಂದರೆ ತಪ್ಪಾ​ಗಲ್ಲ.

ನಿತ್ಯ ಕಿವಿಗೆ ಅಪ್ಪ​ಳಿ​ಸುವ ಕೌಟುಂಬಿಕ ಹಿಂಸೆ, ತಾರ​ತಮ್ಯ, ಅತ್ಯಾ​ಚಾರ, ದೌರ್ಜನ್ಯ ಪ್ರಕ​ರ​ಣ​ಗಳು ಸ್ತ್ರೀ ಸಶ​ಕ್ತೀ​ಕ​ರ​ಣಕ್ಕೆ, ಸಬ​ಲೀ​ಕ​ರಣಕ್ಕೆ ಭಾರತ ಇನ್ನಷ್ಟುಕ್ರಮ ಜರು​ಗಿ​ಸ​ಬೇಕು ಎಂಬು​ದನ್ನು ಸಾರಿ ಹೇಳು​ತ್ತವೆ. ಈ ಹಿನ್ನೆ​ಲೆ​ಯಲ್ಲಿ ಸರ್ಕಾ​ರ​ಗಳು ಮಹಿಳಾ ಸಬ​ಲೀ​ಕ​ರ​ಣಕ್ಕೆ ಈಗಾ​ಗಲೇ ಜಾರಿ ಮಾಡಿ​ರುವ ಕೆಲ ಯೋಜ​ನೆ​ಗಳ ಪಟ್ಟಿಇಲ್ಲಿ​ದೆ.

Tap to resize

Latest Videos

ಬೇಟಿ ಬಚಾವೋ, ಬೇಟಿ ಪಢಾವೋ ಯೋಜ​ನೆ

ಹೆಣ್ಣು ಭ್ರೂಣ ಹತ್ಯೆ​ಯನ್ನು ತಡೆ​ಗ​ಟ್ಟುವ ಮಹ​ತ್ತರ ಉದ್ದೇ​ಶದಿಂದ ಜನ​ವರಿ 22, 2015ರಂದು ಹರ್ಯಾಣದ ಪಾಣಿ​ಪ​ತ್‌​ನಲ್ಲಿ ಈ ಯೋಜನೆಯನ್ನು ತರ​ಲಾ​ಯಿತು. ಈ ಯೋಜ​ನೆ​ಯು ​ವನ್ನು ಹೊಂದಿ​ದೆ. ಮೊದ​ಮೊ​ಲಿಗೆ ಪುರುಷ-ಸ್ತ್ರೀ ಅನು​ಪಾ​ತದ ಬಗ್ಗೆ ಜಾಗೃತಿ ಮೂಡಿ​​ಸು​ತ್ತಿ​ದ್ದರೂ, ಅನಂತ​ರ​ದಲ್ಲಿ ಹೆಣ್ಣು ಭ್ರೂಣ ಹತ್ಯೆ, ತಾರ​ತಮ್ಯ ಆಧಾ​ರಿತ ಶಿಕ್ಷಣ, ಲಿಂಗಾಧ​ರಿತ ಅಬಾ​ರ್ಷನ್‌ ಮುಂತಾದವುಗಳ ವಿರುದ್ಧ ಜಾಗೃತ ಮೂಡಿ​ಸಲು ಬಳ​ಸ​ಲಾ​ಯಿ​ತು. ಈ ಯೋಜ​ನೆ​ಯಿಂದ ಅಲ್ಪ​ಮ​ಟ್ಟಿಗೆ ಮಹಿಳಾ ಸಾಕ್ಷ​ರತೆ ಮತ್ತು ಸ್ತ್ರೀ-ಪುರು​ಷರ ಅನು​ಪಾತ ಹೆಚ್ಚಾ​ಗಿದೆ ಎನ್ನ​ಲಾ​ಗಿ​ದೆ.

ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಗೆದ್ದು ಬೀಗಿದ ಛಲಗಾತಿ ಶ್ರುತಿ ನಾಯ್ಡು!

ಮಹಿಳಾ ಇ-ಹಟ್‌

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 2016ರಲ್ಲಿ ಈ ಯೋಜ​ನೆ​ಯನ್ನು ಜಾರಿ ಮಾಡಿತು. ಮಹಿಳಾ ಉದ್ಯ​ಮಿ​ಗ​ಳು, ಸ್ವಸ​ಹಾಯ ಗುಂಪು​ಗಳು, ಸರ್ಕಾ​ರೇ​ತರ ಸಂಸ್ಥೆ​ಗ​ಳು ಉತ್ಪಾ​ದಿ​ಸುವ ಉತ್ಪ​ನ್ನ​ಗ​ಳಿಗೆ ಆನ್‌​ಲೈ​ನ್‌​ನಲ್ಲಿ ಮಾರು​ಕಟ್ಟೆಒದ​ಗಿ​ಸುವ ಉದ್ದೇ​ಶ​ವನ್ನು ಈ ಯೋಜ​ನೆ ಹೊಂದಿ​ದೆ. ಈ ಮೂಲಕ ಮಾರಾ​ಟ​ಗಾ​ರರು, ಗ್ರಾಹ​ಕ​ರಿಗೆ ನೇರ ಸಂಪರ್ಕ ಕಲ್ಪಿ​ಸು​ತ್ತಿದೆ. 18 ವರ್ಷ ತುಂಬಿದ ಪ್ರತಿ​ಯೊಬ್ಬ ಮಹಿಳಾ ಉದ್ಯ​ಮಿಯೂ ಈ ಯೋಜ​ನೆಯ ಲಾಭ ಪಡೆ​ಯ​ಬ​ಹು​ದಾ​ಗಿದೆ. ಮಧ್ಯ​ವ​ರ್ತಿ​ಗಳ ಸಹಾಯ ಇಲ್ಲದೆ ಮೊಬೈಲ್‌ ಮೂಲ​ಕವೇ ಈ ಯೋಜ​ನೆಯ ಲಾಭ ಪಡೆ​ಯ​ಬ​ಹುದು. ಈ ಯೋಜನೆ ಜಾರಿ​ಯಾ​ದಾ​ಗಿ​ನಿಂದ 17 ಲಕ್ಷ ಜನರು ಈ ಪೋರ್ಟ​ಲ್‌ಗೆ ಭೇಟಿ ನೀಡಿ​ದ್ದಾರೆ. ಇದ​ರಲ್ಲಿ 2000 ಉತ್ಪ​ನ್ನ​ಗಳಿದ್ದು, 24 ರಾಜ್ಯ​ಗ​ಳಲ್ಲಿ ಇದ​ರ ಸೇವೆ ಲಭ್ಯ​ವಿ​ದೆ.

ಮಹಿಳಾ ಶಕ್ತಿ ಕೇಂದ್ರ

ಗ್ರಾಮೀಣ ಮಹಿ​ಳೆ​ಯರ ಸಬ​ಲೀ​ಕ​ರಣ ಉದ್ದೇ​ಶ​ದಿಂದ 2017ರಲ್ಲಿ ಈ ಯೋಜ​ನೆ​ಯನ್ನು ಜಾರಿ ಮಾಡ​ಲಾ​ಗಿ​ದೆ. 155 ಹಿಂದು​ಳಿದ ಜಿಲ್ಲೆ​ಗಳ ಸ್ವಯಂ ಸೇವಕ ವಿದ್ಯಾ​ರ್ಥಿ​ಗಳ ಮೂಲಕ ಗ್ರಾಮೀಣ ಮಹಿ​ಳೆ​ಯ​ರಿಗೆ ಕೌಶಲ್ಯ ಅಭಿ​ವೃದ್ಧಿ, ಉದ್ಯೋಗ, ಡಿಜಿ​ಟಲ್‌ ಸಾಕ್ಷ​ರತೆ, ಆರೋಗ್ಯ ಮತ್ತು ಪೌಷ್ಟಿ​ಕತೆ ಕುರಿ​ತಂತೆ ಅರಿವು ಮೂಡಿ​ಸು​ವುದು ಇದರ ಉದ್ದೇಶ. ಪ್ರತಿ ರಾಜ್ಯ, ಜಿಲ್ಲಾ, ಬ್ಲಾಕ್‌ ಮಟ್ಟ​ದಲ್ಲಿ ಇದು ಕಾರ‍್ಯ​ನಿ​ರ್ವ​ಹಿ​ಸು​ತ್ತಿ​ದೆ.

ವರ್ಕಿಂಗ್‌ ವುಮನ್‌ ಹಾಸ್ಟೆಲ್‌

ಉದ್ಯೋಗಸ್ಥ ಮಹಿಳಾ ಸುರ​ಕ್ಷತೆ ದೃಷ್ಟಿ​ಯಿಂದ ಮತ್ತು ಸೂಕ್ತ, ವ್ಯವ​ಸ್ಥಿತಿ ವಸತಿ ಒದ​ಗಿ​ಸುವ ದೃಷ್ಟಿ​ಯಿಂದ ಜಾರಿಗೆ ತರ​ಲಾದ ಯೋಜನೆ ಇದು. ಮಕ್ಕ​ಳಿಗೆ ಡೇ ಕೇರ್‌ ವ್ಯವ​ಸ್ಥೆ​ಯನ್ನೂ ಒ​ಳ​ಗೊಂಡಿ​ದ್ದು, ನಗರ, ಅರೆ ನಗರ ಮತ್ತು ಗ್ರಾಮೀಣ ಪ್ರದೇ​ಶ​ದಲ್ಲೂ ಈ ಸೌಲ​ಭ್ಯ​ವಿ​ದೆ. ಮೆಟ್ರೋ ನಗ​ರ​ಗ​ಳಲ್ಲಿ ತಿಂಗ​ಳಿ​ಗೆ 50,000ಕ್ಕಿಂತ ಕಡಿಮೆ ಆದಾಯ ಇರುವ ಹಾಗೂ ಉಳಿದ ಸ್ಥಳ​ಗ​ಳಲ್ಲಿ ತಿಂಗ​ಳಿಗೆ 35,000 ಕಡಿಮೆ ಆದಾಯ ಇರು​ವ ಯಾವುದೇ ಮಹಿಳೆ ಈ ಸೌಲಭ್ಯ ಪಡೆಯಬ​ಹುದು. ಈ ಯೋಜ​ನೆ​ಯಡಿ 890 ಹಾಸ್ಟೆ​ಲ್‌​ಗಳು ಮಂಜೂ​ರಾ​ಗಿದ್ದು, 66,000 ಉದ್ಯೋ​ಗಸ್ಥ ಮಹಿ​ಳೆ​ಯರು ಈ ಯೋಜನೆ ಫಲಾ​ನು​ಭ​ವಿ​ಗ​ಳಾ​ಗಿ​ದ್ದಾ​ರೆ.

ಮಹಿಳಾ ದಿನ ವಿಶೇಷ; ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಸಾಕೇ!

ಸುಕನ್ಯಾ ಸಮೃದ್ಧಿ ಯೋಜ​ನೆ

ಸುಕನ್ಯಾ ಸಮೃದ್ಧಿ ಯೋಜನೆಯು ‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಯೋಜನೆ. ಬಡ ಕುಟುಂಬ​ದಲ್ಲಿ ಜನಿ​ಸುವ ಹೆಣ್ಣು ಮಗುವಿಗೆ ಒಂದು ಸಣ್ಣ ಉಳಿತಾಯ ಠೇವಣಿ ಇಡು​ವ ಯೋಜನೆಯಾಗಿದೆ. ಹೆಣ್ಣು ಮಗು ಜನಿ​ಸಿದ ನಂತರ 10 ವರ್ಷದ ಒಳ​ಗಾಗಿ ಯಾವು​ದೇ ಪæäೕಸ್ಟ್‌ ಆಫೀ​ಸ್‌ ಅಥವಾ ಕಮ​ರ್ಷಿ​ಯಲ್‌ ಬ್ಯಾಂಕ್‌ನಲ್ಲಿ ಖಾತೆ ತೆರೆ​ಯಬ​ಹುದು.

ಇದಕ್ಕೆ ತಂದೆ ತಾಯಿ ಅಥವಾ ಪೋಷ​ಕರು ವರ್ಷಕ್ಕೆ ಎಷ್ಟಾ​ದರೂ ಹಣ ಡೆಪಾ​ಸಿಟ್‌ ಮಾಡ​ಬ​ಹುದು. ಈ ಹಣಕ್ಕೆ 8.6%ನಷ್ಟುಬಡ್ಡಿ ಬರು​ತ್ತದೆ ಮತ್ತು ಬಡ್ಡಿ ಆದಾಯವು ತೆರಿಗೆ ಮುಕ್ತವಾಗಿರುತ್ತದೆ. ಹೆಣ್ಣು ಮಗು​ವಿಗೆ 10 ವರ್ಷ ತುಂಬಿದ ಬಳಿಕ ಉಳಿ​ತಾಯ ಮಾಡಿದ ಹಣ​ದಲ್ಲಿ 50% ಹಣ​ವನ್ನು ಶೈಕ್ಷ​ಣಿಕ ಖರ್ಚಿಗೆ ಬಳ​ಸಿ​ಕೊ​ಳ್ಳ​ಬ​ಹುದು. ಸರ್ಕಾರ ಪ್ರತಿವರ್ಷ ಬಡ್ಡಿ ಆದಾಯ ಪ್ರಕಟಿಸುತ್ತದೆ. ಖಾತೆ ಆರಂಭಿಸಿದ ದಿನದಿಂದ 21 ವರ್ಷಗಳವರೆಗೆ ಖಾತೆ ಚಾಲನೆಯಲ್ಲಿರುತ್ತದೆ. ತದನಂತರ ಖಾತೆಯನ್ನು ಮುಕ್ತಾಯಗೊಳಿಸಿ, ಖಾತೆ ಹೊಂದಿರುವ ಹೆಣ್ಣು ಮಗುವಿಗೆ ಸಂಪೂರ್ಣ ಮೊತ್ತವನ್ನು ನೀಡಲಾಗುತ್ತದೆ.

ನಾರಿ ಶಕ್ತಿ ಪುರ​ಸ್ಕಾ​ರ

1999ರಲ್ಲಿ ಜಾರಿಗೆ ತರ​ಲಾದ ಈ ಯೋಜ​ನೆಯು ಮಹಿಳಾ ಸಬ​ಲೀ​ಕ​ರ​ಣ​ಕ್ಕಾಗಿ ಶಾಶ್ವತ ಕೊಡುಗೆ ನೀಡುವ, ದುಡಿ​ಯುವ ಹೆಣ್ಣು ಮಕ್ಕ​ಳನ್ನು ಗುರು​ತಿಸಿ ನೀಡುವ ಪುರ​ಸ್ಕಾ​ರ​ವಾ​ಗಿ​ದೆ. ಇದು ಭಾರ​ತ​ದಲ್ಲಿ ನೀಡ​ಲಾ​ಗುವ ಅತ್ಯು​ನ್ನತ ನಾಗ​ರಿಕ ಗೌರ​ವ​ಗ​ಳಲ್ಲಿ ಒಂದು. ಪ್ರತಿ ವರ್ಷ ಮಾಚ್‌ರ್‍ 8 ರಂದು ಅರ್ಹ ಸಾಧ​ಕಿ​ಯ​ರಿಗೆ ದೇಶದ ರಾಷ್ಟ್ರ​ಪತಿ ಪ್ರಶಸ್ತಿ ಪ್ರದಾನ ಮಾಡು​ತ್ತಾರೆ. ಪ್ರಶಸ್ತಿ ಪತ್ರ ಮತ್ತು 1,00,000 ರು. ನಗ​ದನ್ನು ಒಳ​ಗೊಂಡಿ​ರು​ತ್ತ​ದೆ.

ಒನ್‌ ಸ್ಟಾಪ್‌ ಸೆಂಟರ್‌ ಯೋಜ​ನೆ

ಖಾಸಗಿ ಅಥವಾ ಸಾರ್ವ​ಜ​ನಿಕ ವಲ​ಯ​ಗ​ಳಲ್ಲಿ ದೌರ್ಜನ್ಯ ಎದು​ರಿ​ಸುವ ಮಹಿ​ಳೆ​ಯ​ರಿಗೆ ಒಂದೇ ಸೂರಿ​ನಡಿ ಬೆಂಬ​ಲ ಮತ್ತು ನೆರವು ನೀಡುವ ಯೋಜನೆ ಇದು. ಮಹಿಳೆಯರ ಮೇಲಿನ ಯಾವುದೇ ರೀತಿಯ ಹಿಂಸಾಚಾರದ ವಿರುದ್ಧ ಹೋರಾಡಲು ನೊಂದ ಹೆಣ್ಣು​ಮ​ಕ್ಕ​ಳಿಗೆ ವೈದ್ಯಕೀಯ, ಕಾನೂನು ಬೆಂಬ​ಲ ಮತ್ತು ಸಮಾಲೋಚನೆಯಂಥ ತುರ್ತು ನೆರ​ವನ್ನು ನೀಡ​ಲಾ​ಗುತ್ತ​ದೆ. ನಿರ್ಭಯಾ ಫಂಡ್‌ ಮೂಲಕ ಈ ಯೋಜ​ನೆಗೆ ಹಣ ಒದ​ಗಿ​ಸ​ಲಾ​ಗು​ತ್ತಿದೆ.

ಸ್ವಾಧಾರ್‌ ಗ್ರೇ ಸ್ಕೀಮ್‌

ಕೌಟುಂಬಿಕ ಸಮಸ್ಯೆ, ಅಪ​ರಾಧ, ಹಿಂಸೆ, ಮಾನ​ಸಿಕ ಒತ್ತಡ, ಸಾಮಾ​ಜಿಕ ಬಹಿ​ಷ್ಕಾರ ಮುಂತಾದ ಸಂದ​ರ್ಭ​ಗ​ಳ​ಲ್ಲಿ ಮಹಿ​ಳೆ​ಯ​ರಿಗೆ ತಾತ್ಕಾ​ಲಿಕ ವಸತಿ ಸೌಲಭ್ಯ ಒದ​ಗಿ​ಸುವ ಯೋಜನೆ ಇದಾ​ಗಿದೆ. ಇದೇ ರೀತಿ ಉದ್ದೇ​ಶ​ವನ್ನು ಹೊಂದಿ​ರುವ ಇನ್ನೊಂದು ಯೋಜನೆ ಶಾರ್ಟ್‌ ಸ್ಟೇ ಹೋಂ (ಎ​ಎ​ಸ್‌​ಎ​ಸ್‌​ಎ​ಚ್‌​). ನಿರ್ಗ​ತಿ​ಕ​ರಾದ ಮಹಿ​ಳೆ​ಯ​ರಿಗೆ ಪ್ರಾಥ​ಮಿ​ಕ​ವಾಗಿ ಆಹಾರ, ವಸತಿ, ಬಟ್ಟೆ, ಮೆಡಿ​ಕಲ್‌ ಟ್ರೀಟ್‌ಮೆಂಟ್‌ ಒದ​ಗಿ​ಸ​ಲಾ​ಗು​ತ್ತದೆ. ಕುಟುಂಬ ಅಥವಾ ಸಮಾಜದಲ್ಲಿ ಅವರ ಮರು ಹೊಂದಾಣಿಕೆಗೆ ಕ್ರಮಗಳನ್ನು ತೆಗೆದುಕೊಳ್ಳಲು ಅವರಿಗೆ ಕಾನೂನು ನೆರವು ಮತ್ತು ಮಾರ್ಗದರ್ಶನವನ್ನೂ ನೀಡಲಾಗು​ತ್ತ​ದೆ. ಅಪ​ರಾಧ ಮುಕ್ತ​ವಾಗಿ ಘನ​ತೆ​ಯಿಂದ ಬಾಳಲು ಈ ಯೋಜನೆ ಅನುವು ಮಾಡಿಕೊಡುತ್ತದೆ.

ನಿರಾಶ್ರಿತರ ಹಸಿವು ನೀಗಿಸಿದ 'ಸ್ನೇಹಾ'ಗೆ ಮೋದಿ ಟ್ವಿಟರ್ ಖಾತೆ!, ಯಾರೀಕೆ?

ಪ್ರಧಾ​ನ ​ಮಂತ್ರಿ ಉಜ್ವಲಾ ಯೋಜ​ನೆ

ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಹೊಗೆ​ಯುಕ್ತ ಅಡು​ಗೆ​ಮ​ನೆ​ಯಿಂದ ಮುಕ್ತಿ ನೀಡಿ, ಶುದ್ಧ ಇಂಧನವನ್ನು ಒದಗಿಸುವ ಮಹ​ತ್ತರ ಉದ್ದೇ​ಶ​ದಿಂದ 2016ರಲ್ಲಿ ಈ ಯೋಜ​ನೆ​ಯನ್ನು ಜಾರಿಗೆ ತರ​ಲಾ​ಗಿದೆ. ಪಳೆಯುಳಿಕೆ ಇಂಧನಗಳು ಮತ್ತು ಇತರ ಇಂಧನಗಳನ್ನು ಅಡುಗೆಗಾಗಿ ಬಳಸುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ನಿಗ್ರಹಿಸುವುದು, ಅಡುಗೆಗೆ ಬಳಸುವ ಅಶುದ್ಧ ಇಂಧನಗಳ ಪರಿಣಾಮವಾಗಿ ಸಂಭವಿಸುವ ಸಾವುನೋವುಗಳನ್ನು ಕಡಿಮೆ ಮಾಡುವುದು ಈ ಯೋಜ​ನೆಯ ಉದ್ದೇಶ. ಸದ್ಯ 3.4 ಲಕ್ಷ ಮಹಿ​ಳೆ​ಯರು ಈ ಯೋಜ​ನೆಯ ಫಲಾ​ನು​ಭ​ವಿ​ಗಳಾ​ಗಿ​ದ್ದಾ​ರೆ.

ಶಿ-ಬಾಕ್ಸ್‌ ಪೋರ್ಟ​ಲ್‌

ಉದ್ಯೋಗ ಸ್ಥಳ​ಗ​ಳಲ್ಲಿ ಲೈಂಗಿಕ ದೌರ್ಜನ್ಯ ಎದು​ರಿ​ಸುವ ಮಹಿ​ಳೆ​ಯ​ರಿಗೆ ಸೂಕ್ತ ಪರಿ​ಹಾರ ಅಥವಾ ಸುರ​ಕ್ಷಿತ ವಾತಾ​ವ​ರಣ ನಿರ್ಮಿ​ಸುವ ಉದ್ದೇ​ಶ​ದಿಂದ 2018ರಲ್ಲಿ ಈ ಯೋಜ​ನೆ​ಯನ್ನು ಜಾರಿ ಮಾಡ​ಲಾ​ಗಿದೆ. ಇದ​ರ​ಡಿ​ಯಲ್ಲಿ ಉದ್ಯೋ​ಗಸ್ಥ ಮಹಿ​ಳೆ​ಯರು ಉದ್ಯೋಗ ಮಾಡುವ ಸ್ಥಳ​ದ​ಲ್ಲಿ​ನ ಯಾವುದೇ ರೀತಿಯ ದೌರ್ಜ​ನ್ಯದ ಬಗ್ಗೆ ದೂರು ನೀಡಬಹು​ದಾ​ಗಿದೆ. ಈ ದೂರು ನೇರ​ವಾಗಿ ಕೇಂದ್ರ ಮತ್ತು ರಾಜ್ಯದ ಸಂಬಂಧಿತ ಅಧಿ​ಕಾ​ರಿ​ಗಳ ಬಳಿ ಹೋಗು​ವು​ದ​ರಿಂದ ಶೀಘ್ರ ಕ್ರಮ ಕೈಗೊಳ್ಳಲಾಗು​ತ್ತ​ದೆ.

ಸ್ಟೆಪ್‌ (ಎ​ಸ್‌​ಟಿ​ಇ​ಪಿ​)

ಮಹಿಳೆಯರಿಗಾಗಿ ವೃತ್ತಿ ತರಬೇತಿ ಮತ್ತು ಉದ್ಯೋಗ ಬೆಂಬಲಿತ ಯೋಜನೆಯನ್ನು(ಸ್ಟೆಪ್‌) ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ 1986ರಲ್ಲಿ ಪ್ರಾರಂಭಿ​ಸಿ​ದೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿ​ಕ​ವಾಗಿ ಸದೃ​ಢ​ರ​ನ್ನಾಗಿ ಮಾಡಲು ಈ ಯೋಜ​ನೆ​ಯನ್ನು ಜಾರಿ ಮಾಡ​ಲಾ​ಗಿ​ದೆ.

 

click me!