ಹಾಲು ಕುಡಿಯೋಕೆ ಬೇಜಾರಂದ್ರೆ ಹಿಂಗ್ ಮಾಡಿ

By Web DeskFirst Published Oct 6, 2018, 4:51 PM IST
Highlights

ದಿನದ ಆರಂಭದಲ್ಲೊಂದು ಲೋಟ, ಮಲಗುವಾಗೊಂದು ಲೋಟ ಹಾಲು ಕುಡಿದರೆ, ಅಗತ್ಯ ಕ್ಯಾಲ್ಸಿಯಂ ದೇಹಕ್ಕೆ ಪೂರೈಕೆಯಾಗುತ್ತದೆ. ಅಲ್ಲದೇ ಕೆಲವು ಸಣ್ಣ ಪುಟ್ಟ ರೋಗಕ್ಕೂ ಹಾಲಿನೊಂದಿಗೆ ಅರಶಿಣ ಬೆರೆಸಿ ಕುಡಿದರೆ ಉತ್ತಮ ಮದ್ದು. ಮಲೆನಾಡು ಗಿಡ್ಡ ಅಥವಾ ಬೇರೆ ದೇಸೀ ತಳಿಯ ಹಾಲು ರುಚಿ. ಆದರೆ, ಬೆಂಗಳೂರಿನಂಥ ನಗರದಲ್ಲಿ ಈ ಭಾಗ್ಯ ಯಾರಿಗಿದೆ ಹೇಳಿ? ಪ್ಯಾಕಿನಲ್ಲಿ ಸಿಗೋ ಹಾಲನ್ನು ಕುಡಿಬೇಕೆಂದೆನಿಸುವುದೂ ಇಲ್ಲ. ಆದರೆ, ದೇಹಕ್ಕೆ ಅಗತ್ಯವಾದ ಹಾಲನ್ನು ಯಾವ್ಯಾವ ರೀತಿ ಕುಡಿಯಬಹುದು ನೋಡಿ...

ಸೋಯಾ ಹಾಲು

ಸೋಯಾಬಿನ್‌‌ನಲ್ಲಿ ತರಕಾರಿ ಎಣ್ಣೆ ಅಂಶವಿದ್ದು, ಯಾವುದೇ ಆಡುಗೆಗೆ ಬೆರೆಸಿದರೂ ರುಚಿ ಹೆಚ್ಚುತ್ತದೆ. ಹಸು ಹಾಲಿನ ಹಾಗೇ ಇರೋ ಇದರಲ್ಲಿ, 90 ಕ್ಯಾಲೊರೀಸ್, 9 ಪ್ರೊಟಿನ್, 4.5 ಫ್ಯಾಟ್ ಮತ್ತು 4ರಷ್ಟು ಕಾರ್ಬೊಹೈಡ್ರೇಟ್ ಇರುತ್ತದೆ. 

ಅಕ್ಕಿ ಹಾಲು

ಅಲರ್ಜಿ ಇದ್ದು, ಯಾವುದೇ ರೀತಿಯ ಹಣ್ಣಿನ ಜೀಜ, ಸೊಯಾ ಇಷ್ಟವಿಲ್ಲವೆಂದರೆ ಅಕ್ಕಿ ಹಾಲು ಸೇವಿಸಬಹುದು. ಇದರಲ್ಲಿ 140 ಕ್ಯಾಲೊರೀಸ್, 1 ಪ್ರೊಟೀನ್, 3 ಫ್ಯಾಟ್ ಮತ್ತು 33 ಕಾರ್ಬೊಹೈಡ್ರೇಟ್ ಅಂಶ ಹೊಂದಿತ್ತದೆ

ರಾಗಿ ಹಾಲು

ರಾಗಿ ನೆನಿಸಿಟ್ಟು, ಅರೆದು ಹಿಂಡಿ ಸಿಗುವ ಹಾಲಿಗೆ ಬೆಲ್ಲೆ ಬೆಲೆಯಿಸಿಕೊಂಡು ಕುಡಿದರೆ ದೇಹಕ್ಕೆ ತಂಪು. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳೂ ಸಿಗುತ್ತವೆ. ರಾಗಿ ಮುದ್ದೆ ತಿಂದರಾಗೋಲ್ಲ ಎನ್ನುವವರು ಈ ಹಾಲು ಕುಡಿಯಬಹುದು.

ಓಟ್ಸ್ ಹಾಲು 

ಇದನ್ನು ತಯಾರಿಸುವಾಗ ಇದಕ್ಕೆ ಎಣ್ಣೆ, ಉಪ್ಪು ಬೆರೆಸಿದರೆ ರುಚಿ ಹೆಚ್ಚುತ್ತದೆ. ಇದನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಇದರಲ್ಲಿ 170 ಕ್ಯಾಲೊರೀಸ್, 5 ಪ್ರೊಟೀನ್, 5 ಫ್ಯಾಟ್ ಮತ್ತು 29 ಕಾರ್ಬೊಹೈಡ್ರೋಟ್ ಅಂಶ ಹೊಂದುತ್ತದೆ.

ಸೆಣಿಬಿನ ಹಾಲು

ಸೆಣಿಬಿನ ಕಾಳಿನಿಂದ ತಯಾರಿಸುವ ಈ ಹಾಲಿನಲ್ಲಿ 80 ಕ್ಯಾಲೊರೀಸ್, 5 ಪ್ರೊಟೀನ್, 2 ಫ್ಯಾಟ್ ಹಾಗೂ 1 ಅಂಶ ಕಾರ್ಬೋಹೈಡ್ರೇಟ್ ಇರುತ್ತದೆ. ಅಲ್ಲದೇ ಇದರಲ್ಲಿ ಒಮೆಗಾ ಆ್ಯಸಿಡ್ ಸಹ ಅಧಕವಾಗಿರುತ್ತದೆ. 

ತೆಂಗಿನ ಹಾಲು

ದಕ್ಷಿಣ ಭಾರತದಲ್ಲಿ ತೆಂಗನ್ನು ಅಡುಗೆಗೆ ಹೆಚ್ಚು ಬಳಸುತ್ತಾರೆ. ಇದಕ್ಕೆ ನೀರು ಮತ್ತು ತೆಂಗಿನಕಾಯಿ ಸಾಕು. ಇದರಲ್ಲಿ 45 ಕ್ಯಾಲೊರೀಸ್,  4 ಫ್ಯಾಟಿನ ಅಂಶವಿದೆ. ಇದರಲ್ಲಿ ಕಾರ್ಬೊಹೈಡ್ರೇಟ್ ಇರುವುದಿಲ್ಲ

ಗೊಡಂಬಿ ಹಾಲು 

ಮಧುಮೇಹ ಇರೋರಿಗೆ ಇದು ಬೆಸ್ಟ್. ಇದರಲ್ಲಿ 25-50 ಕ್ಯಾಲೊರೀಸ್,  4 ಫ್ಯಾಟ್, ಶೇ.2ರಷ್ಟು ಕಾರ್ಬೊಹೈಡ್ರೇಟ್ ಇರುತ್ತದೆ. ನೀರಿನೊಂದಿಗೆ ಬೆರೆಸಿಕೊಂಡು ಇದನ್ನು ಕುಡಿಯಬಹುದು.

ಬಾದಾಮಿ ಹಾಲು

ದೇಹದ ತೂಕ ಹೆಚ್ಚಿಸಿಕೊಳ್ಳಲು ಇದು ಬೆಸ್ಟ್. ಇದರಲ್ಲಿ 35 ಕ್ಯಾಲೊರೀಸ್, 1 ಪ್ರೊಟೀನ್, 2 ಫ್ಯಾಟ್ ಮತ್ತು 2 ಕಾರ್ಬೊಹೈಡ್ರೇಟ್ ಅಂಶವಿರುತ್ತದೆ. 

click me!