ಮಕ್ಕಳ ಭಾವನಾತ್ಮಕ ಆರೋಗ್ಯ ಕಾಪಾಡುವುದು ಹೇಗೆ?

By Web Desk  |  First Published Aug 4, 2019, 2:58 PM IST

ಭಾವನಾತ್ಮಕವಾಗಿ ಮಕ್ಕಳನ್ನು ಸಬಲರನ್ನಾಗಿಸುವುದು ಮುಖ್ಯ. ಇದು ಜೀವನ ಪೂರ್ತಿ ಅವರ ಸಹಾಯಕ್ಕೆ ನಿಲ್ಲುತ್ತದೆ. ಭಾವನೆಗಳನ್ನು ನಿಭಾಯಿಸುವ ಕೌಶಲ್ಯ ಮಕ್ಕಳಿಗೆ ಕಲಿಸುವುದು ಹೇಗೆ?


ನವ ತಾಯಂದಿರಿಗೆ ಮಗುವಿನ ಡೈಪರ್ ಬದಲಿಸಿ, ಹಾಲು ಕುಡಿಸಿ, ನಿದ್ದೆಗೆಟ್ಟು ಮಗುವಿನ ಆರೈಕೆ ಮಾಡುವುದರಲ್ಲೇ ಸಾಕು ಬೇಕಾಗಿರುತ್ತದೆ. ಅಂಥದರಲ್ಲಿ ಮಗುವಿನ ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯ, ಬೆಳವಣಿಗೆ ಕುರಿತು ಯೋಚಿಸುತ್ತಾ ಕೂರುವುದು ದೂರದ ಮಾತು. ಆದರೆ, ಅಪ್ಪ ಅಮ್ಮಂದಿರು ಅರ್ಥ ಮಾಡಿಕೊಳ್ಳಬೇಕಾದ್ದೇನೆಂದರೆ ಮಗು ಹುಟ್ಟಿದಾಗಿನಿಂದಲೇ ಅದರ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅವರು ಜವಾಬ್ದಾರರಾಗುತ್ತಾರೆ ಎಂಬುದು. ಮಗು ಹುಟ್ಟಿದ ಬಳಿಕವೇ ನಿಮಗೆ ತಾಳ್ಮೆ ಎಷ್ಟು ಕಡಿಮೆ ಇದೆ ಎಂದು ಅರ್ಥವಾಗುವುದು. ಆದರೆ, ಅದು ಮಕ್ಕಳಿಗೂ ಅರ್ಥವಾಗುತ್ತದೆ. ಅವರು ನಿಮ್ಮನ್ನು ರೋಲ್ ಮಾಡೆಲ್ ಆಗಿ ಪರಿಗಣಿಸಿರುತ್ತಾರೆ. ಹೀಗಾಗಿ ಅವರು ನಿಮ್ಮನ್ನು ಫಾಲೋ ಮಾಡಬಲ್ಲರು.

1. ಗಮನ ನೀಡಿ

Latest Videos

undefined

ಮಕ್ಕಳು ನಿಮ್ಮ ಗಮನ ಬಯಸುತ್ತಾರೆ. ಕೇವಲ ಐದು ನಿಮಿಷಕ್ಕೇ ಆಗಲಿ, ಮೊಬೈಲ್ ನೋಡದೆ, ಮಧ್ಯೆ ಬೇರೆ ಮಾತನಾಡದೆ ಮಕ್ಕಳಿಗೆ ಬೇಕಾದ ಸಂಪೂರ್ಣ ಗಮನ ನೀಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅವರ ಮಾತುಗಳಿಗೆ ಪ್ರತಿಕ್ರಿಯಿಸಿ. ಇದು ಅವರ ಎಲ್ಲ ರೀತಿಯ ಬೆಳವಣಿಗೆಗೆ ಅಗತ್ಯ. ಪೋಷಕರು ಮಕ್ಕಳು ಬಯಸುವ ಗಮನವನ್ನು ನೀಡುವುದರಿಂದ ಮಕ್ಕಳಿಗೆ ತಾವು ಪ್ರೀತಿಸ್ಪಡುತ್ತಿದ್ದೇವೆ,  ತಮಗೆ ಬೆಲೆ ಸಿಗುತ್ತಿದೆ ಎನಿಸುತ್ತದೆ. ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. 

ಮಕ್ಕಳ ಕೈಗೆ ಸ್ಮಾರ್ಟ್‌ಫೋನ್; ಮೆದುಳಿನ ಬೆಳವಣಿಗೆಗೂ ಮಾರಕ!

2. ಎಮೋಷನಲ್ ಅವೇರ್‌ನೆಸ್ ಬೆಳೆಸಿ

ಮಕ್ಕಳಿಗೆ ಬಾಲ್ಯದಲ್ಲೇ ಎಮೋಶನಲ್ ಅವೇರ್ನೆಸ್ ಬೆಳೆಸುವುದು ಬಹಳ ಮುಖ್ಯ. ಅವರು ಅನುಭವಿಸುವ ಎಲ್ಲ ಭಾವನೆಗಳನ್ನು ಗುರುತಿಸಲು ಸಹಾಯ ಮಾಡಿ. ಅವರಲ್ಲಿ ಆಗಾಗ ಹೇಗನಿಸುತ್ತಿದೆ, ಮತ್ತು ಏಕೆ ಹಾಗನಿಸುತ್ತಿದೆ ಎಂಬುದನ್ನು ವಿಚಾರಿಸಿ. ಇದರಿಂದ ಅರ ಗಮನ ಅವರ ಫೀಲಿಂಗ್ಸ್ ಮೇಲೆ ಬರುತ್ತದೆ. ಇದರಿಂದ ಅವರು ತಮ್ಮ ಭಾವನೆಗಳನ್ನು ಗುರುತಿಸಿ ಏಕೆ ಹಾಗೆನಿಸುತ್ತಿದೆ ಎಂಬುದನ್ನು ಲಾಜಿಕಲಿ ಯೋಚಿಸತೊಡಗುತ್ತಾರೆ. ಜೊತೆಗೆ, ಯಾವ ವಯಸ್ಸಿಗೆ ಯಾವೆಲ್ಲ ಭಾವನೆಗಳು ಸರಿಯಾದವು ಎಂಬುದನ್ನು ಕೂಡಾ ಮಕ್ಕಳಿಗೆ ಹೇಳಿಕೊಡಿ. ಮತ್ತೊಬ್ಬರ ಭಾವನೆಗಳಿಗೆ ಅವರು ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ಕಲಿಸಿ. ಈ ವಿಷಯದಲ್ಲಿ ನೀವೇ ಮಾದರಿಯಾಗುವುದು ಉತ್ತಮ. 

3. ಕೇಳಿ

ಮಕ್ಕಳು ಮಾತಿನಲ್ಲಿ ತಮ್ಮನ್ನು ವ್ಯಕ್ತಪಡಿಸಿಕೊಳ್ಳುವುದನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸಿ. ಅವರು ಹೇಳುವುದನ್ನು ಸಂಪೂರ್ಣವಾಗಿ ಕೇಳಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ. ಉದಾಹರಣೆಗೆ, ಮಗು ಈಗಷ್ಟೇ ಊಟ ಮಾಡಿರುತ್ತದೆ. ಆದರೂ, ನನಗೆ ಹಸಿವಾಗುತ್ತಿರುವುದರಿಂದ ಸಿಟ್ಟು ಬರುತ್ತಿದೆ ಎಂದರೆ, ನಿನಗೆ ಹಸಿವಾಗುತ್ತಿಲ್ಲ, ಈಗಷ್ಟೇ ಊಟ ಮಾಡಿದ್ದಿ ಎನ್ನುವ ಬದಲಿಗೆ, ತಿನ್ನಲು ಏನು ಕೊಡಲಿ ಎಂದೋ, ಅಥವಾ ಸಿಟ್ಟು ಬರಲು ಹಸಿವೊಂದೇ ಕಾರಣವಾ ಅಥವಾ ಬೇರೇನಾದರೂ ಇದೆಯೇ ಎಂದು ವಿಚಾರಿಸಿ. ಇದರಿಂದ ನೀವು ಅವರನ್ನು ಅರ್ಥ ಮಾಡಿಕೊಳ್ಳುತ್ತಿದ್ದೀರಿ, ಅವರ ಮಾತಿಗೆ ಬೆಲೆ ಕೊಡುತ್ತಿದ್ದೀರಿ ಎಂಬ ಭಾವನೆ ಅವರಲ್ಲಿ ಹುಟ್ಟುತ್ತದೆ. 

ಪಠ್ಯದಲ್ಲಿನ್ನು ಲಿವ್‌ಇನ್‌, ಸಲಿಂಗ, ಸಿಂಗಲ್‌ಪೇರೆಂಟ್‌ಗೂ ಕುಟುಂಬ ವ್ಯವಸ್ಥೆ ಸ್ಥಾನ!

4. ನಿಭಾಯಿಸುವ ಕೌಶಲ್ಯಗಳು

ಮಕ್ಕಳಿಗೆ ಸಿಟ್ಟು ಬಂದಾಗ, ಭಯವಾದಾಗ, ಸಂತೋಷವಾದಾಗ, ಕಿರಿಕಿರಿಯಾದಾಗ ಹೀಗೆ ಮುಂತಾದ ಸಂದರ್ಭಗಳಲ್ಲಿ ಹೇಗೆ ಪ್ರತಿಕ್ರಿಯಿಸಿಬೇಕು. ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ತಿಳಿಸಿಕೊಡಿ. ಇಂಥ ಸಂದರ್ಭಗಳಲ್ಲಿ ಏನು ಮಾಡಬಹುದೆಂಬುದನ್ನು ಅವರಿಗೆ ಕಾಣುವಂತೆ ಎಲ್ಲಾದರೂ ಬರೆದಿಡಿ. ಇದು ಅವರಿಗೆ ರಿಮೈಂಡರ್‌ನಂತೆ ಕೆಲಸ ಮಾಡುತ್ತದೆ. ಬರೆಯಲು ಬಾರದ ಮಕ್ಕಳಿಗೆ ಹಾಡಿನ ರೂಪದಲ್ಲಿ ಹೇಳಿಕೊಡಿ- ಸಿಟ್ಟು ಬಂದಾಗ 10ರವರೆಗೆ ಎಣಿಸಲು, ಜೋರಾಗಿ ಉಸಿರಾಡಲು, ಬಣ್ಣ ಹಾಕಲು, ಮೇಲೆ ಕೆಳಗೆ ಓಡಲು ಹೇಳಿಕೊಡಬಹುದು. 

'ತುಂಟಿ'ಯಂಥ ಪದ ಬಳಸದೇ ಬುದ್ಧಿ ಹೇಳಿ ಮಕ್ಕಳಿಗೆ...

5. ಕ್ಷಮೆ ಹಾಗೂ ಮರೆಯುವುದನ್ನು ಕಲಿಸಿ

ಮಕ್ಕಳಿಗೆ ಕ್ಷಮಿಸಲು ಕಲಿಸುವುದು ಬಹಳ ಮುಖ್ಯ. ಇದು ಮಕ್ಕಳು ದೊಡ್ಡವರಾಗಿ ವೃದ್ಧರಾಗುವವರೆಗೂ ಸಹಾಯಕ್ಕೆ ಬರುತ್ತದೆ. ಸಣ್ಣ ಸಣ್ಣ ವಿಷಯಗಳನ್ನು ಬಿಟ್ಟು ಹಾಕಲು ಹೇಳಿಕೊಡಿ. ಸಾಧ್ಯವಾದಷ್ಟು ಎಲ್ಲವನ್ನೂ ಸಕಾರಾತ್ಮಕವಾಗಿ ನೋಡುವುದು ಕಲಿಸಿ. ನಾಯಿ ಅವರ ಗೊಂಬೆ ಹಾಳು ಮಾಡಿದಾಗ, ಪರವಾಗಿಲ್ಲ ನಾಯಿ ಅಷ್ಟು ಹೊತ್ತು ಖುಷಿಯಾಗಿತ್ತಲ್ಲ ಎಂದು ಒಪ್ಪಿಕೊಳ್ಳಲು ಹೇಳಿಕೊಡಿ. ತಂಗಿ ತನ್ನ ಬಟ್ಟೆ ಹರಿದಾಗ, ತೊಂದರೆಯಿಲ್ಲ, ಬಟ್ಟೆ ಬದಲಿಸುತ್ತೇನೆ, ಮುಂದಿನ ಬಾರಿ ಹೀಗೆ ಮಾಡಬೇಡ ಎನ್ನುವುದನ್ನು ಹೇಳಿಕೊಡಿ. ಇದರಿಂದ ಮಕ್ಕಳು ಸಣ್ಣಪುಟ್ಟದ್ದಕ್ಕೂ ಬೇಜಾರು ಮಾಡಿಕೊಂಡು ಕೂರುವ ಅಭ್ಯಾಸದಿಂದ ಹೊರಬರುತ್ತಾರೆ. 

click me!