
ಕಾನೂನಿನ ವಿಷ್ಯ ಬಂದಾಗ ಬಹುತೇಕರು ಹಿಂದೇಟು ಹಾಕ್ತಾರೆ. ನ್ಯಾಯಕ್ಕಾಗಿ ಹೋರಾಟ ಮಾಡುವ ಬದಲು ಸುಮ್ಮನಿರೋದು ಒಳ್ಳೆಯದು ಎಂದುಕೊಳ್ತಾರೆ. ಇದಕ್ಕೆ ಮೂರು ಮುಖ್ಯ ಕಾರಣವಿದೆ. ಒಂದು ಕೋರ್ಟ್ ಗೆ ಹೋದ ಪ್ರಕರಣ ಬೇಗ ಇತ್ಯರ್ಥವಾಗುವುದಿಲ್ಲ. ಇನ್ನೊಂದು ಮುಖ್ಯವಾದದ್ದೆಂದ್ರೆ ಕಾನೂನಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾಹಿತಿ ಕೊರತೆ. ಇದಲ್ಲದೆ ಮೂರನೇ ಕಾರಣವೆಂದ್ರೆ ದುಬಾರಿ ವಕೀಲರು. ನಮ್ಮ ದೇಶದಲ್ಲಿ ಅನೇಕರಿಗೆ ಕಾನೂನಿನ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಯಾವ ಸಮಸ್ಯೆ ಉಂಟಾದಾಗ ಯಾವ ಕೇಸ್ ಹಾಕಬೇಕು? ಯಾವ ಸೆಕ್ಷನ್ ಅಡಿ ದೂರು ದಾಖಲಿಸಬೇಕು ಎಂಬುದು ತಿಳಿದಿಲ್ಲ.
ಜನರಿಗೆ ಕಾನೂನಿ (Law.) ನ ಬಗ್ಗೆ ಅರಿವು ಮೂಡಿಸಲು ಕಾಲೇಜುಗಳಲ್ಲಿ ಕಾನೂನು ಕಲಿಸಲಾಗುತ್ತದೆ. ಲಾ ಕಲಿತವರು ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಮಾಹಿತಿ ನೀಡ್ತಾರೆ. ಆದ್ರೆ ವಕೀಲ (lawyer) ರು ಸಿಗೋದು ಕೂಡ ಅಷ್ಟು ಸುಲಭವಲ್ಲ. ವಕೀಲರ ದುಬಾರಿ ಶುಲ್ಕವನ್ನು ಪಾವತಿಸುವುದು ಎಲ್ಲರಿಗೂ ಸಾಧ್ಯವಿಲ್ಲದ ವಿಷಯವಾಗಿದೆ. ಹಾಗಾಗಿಯೇ ಬಡವರು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಸುದ್ದಿಗೆ ಹೋಗುವುದಿಲ್ಲ. ನಿಮಗೂ ಕಾನೂನಿನ ಬಗ್ಗೆ ಜ್ಞಾನವಿಲ್ಲ ಆದ್ರೆ ಹೋರಾಟ ಅನಿವಾರ್ಯ, ಕೈನಲ್ಲಿ ದುಡ್ಡಿಲ್ಲ ಎಂದಾದ್ರೆ ಚಿಂತಿಸುವ ಅಗತ್ಯವಿಲ್ಲ. ಉಚಿತ (Free) ಕಾನೂನು ಸೇವೆಯನ್ನು ನೀವು ಪಡೆಯಬಹುದು. ನಾವಿಂದು ಉಚಿತ ಕಾನೂನು ನೆರವಿನ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.
Indian Law: ಅನಾಥಾಶ್ರಮ ಸೇರ್ಬೇಕಾಗಿಲ್ಲ, ಮಗನ ಆಸ್ತಿಯಲ್ಲಿ ತಾಯಿಗೂ ಇದೆ ಹಕ್ಕು
ಉಚಿತ ಕಾನೂನಿನ ನೆರವು : ಬಡವರ ಬಳಿ ವಕೀಲರಿಗೆ ನೀಡಲು ಹಣವಿರುವುದಿಲ್ಲ. ಈ ಸತ್ಯವನ್ನು ಅರಿತು ಉಚಿತ ಕಾನೂನು ನೆರವನ್ನು ಸರ್ಕಾರ (Govt) ಪ್ರಾರಂಭಿಸಿದೆ. ಭಾರತ ಸರ್ಕಾರ ಇದಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಿದೆ. ಕಾನೂನು ಸೇವೆಗಳ ಪ್ರಾಧಿಕಾರವನ್ನು 1997 ರಲ್ಲಿ ಸ್ಥಾಪಿಸಲಾಗಿದೆ. ಆದ್ರೆ ಬಹುತೇಕರಿಗೆ ಉಚಿತ ಕಾನೂನು ಸೇವೆ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.
ಜನರಿಗೆ ಉಚಿತ ಸೇವೆ ನೀಡುವ ವಕೀಲರಿಗೆ ಎಲ್ಲಿಂದ ಬರುತ್ತದೆ ಸಂಬಳ ? : ಭಾರತ ಸರ್ಕಾರವು ಸೇವಾ ಪ್ರಾಧಿಕಾರ ಇಲಾಖೆಯಲ್ಲಿ ವಕೀಲರನ್ನು ನೇಮಿಸುತ್ತದೆ. ಅಗತ್ಯವಿರುವ ಜನರು ಈ ವಕೀಲರ ಬಳಿಗೆ ಹೋಗಬೇಕು. ವಕೀಲರು, ಜನರಿಗೆ ತಮ್ಮ ಸೇವೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಈ ವಕೀಲರಿಗೆ ಸಂಬಳವನ್ನು ನೀಡುತ್ತದೆ.
ಉಚಿತ ಕಾನೂನು ಸೇವೆ ಯಾರಿಗೆ ಲಭ್ಯ ? : ಸರ್ಕಾರ ಇದಕ್ಕೆ ಒಂದಿಷ್ಟು ನಿಯಮಗಳನ್ನು ಮಾಡಿದೆ. ಉಚಿತ ಸೇವೆಯನ್ನು ಪರಿಶಿಷ್ಟ ಜಾತಿ (Scheduled Caste), ಪರಿಶಿಷ್ಟ ಪಂಗಡದ (Scheuduled Tribes) ಜನರು, ಮಹಿಳೆಯರು, 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಮತ್ತು ದೈಹಿಕ ವಿಕಲಚೇತನರು ಪಡೆಯಬಹುದು. ಇದಲ್ಲದೆ ಬಡತನ ರೇಖೆಗಿಂತ ಕೆಳಗಿರುವ ಜನರು ಸಹ ಈ ಸೌಲಭ್ಯವನ್ನು ಪಡೆಯಬಹುದು ಎಂದು ಸರ್ಕಾರ ಹೇಳಿದೆ.
ಉಚಿತ ಕಾನೂನು ಸೇವೆ ಪಡೆಯುವುದು ಹೇಗೆ? : ಉಚಿತ ಕಾನೂನು ಸೇವೆ ಅಗತ್ಯ ನಿಮಗಿದೆ ಎಂದಾದ್ರೆ ಮೊದಲು ನೀವು ಕಾನೂನು ಸೇವಾ ಪ್ರಾಧಿಕಾರದ ಇಲಾಖೆಯಿಂದ ಅರ್ಜಿಯನ್ನು ಪಡೆಯಬೇಕು. ಈ ಅರ್ಜಿಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ನಂತರ ನಿಮ್ಮ ದಾಖಲೆಗಳನ್ನು ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸುತ್ತಾರೆ. ನಂತರ ಅವರು ನಿಮಗೆ ವಕೀಲರನ್ನು ನೀಡುತ್ತಾರೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಲಾಗಿದೆ. ನೀವು ಇಲ್ಲಿಂದ ನೆರವು ಪಡೆಯಬಹುದಾಗಿದೆ.
ಭಾರತದಲ್ಲಿ ಪೋರ್ನ್ ನೋಡುವುದು ಅಪರಾಧವಾ? ಪೋರ್ನ್ ನೋಡೋ ಮುಂಚೆ ಇದನ್ನ ತಿಳ್ಕೊಳ್ಳಿ!
ಯಾರಿಗೆ ಲಭ್ಯವಿಲ್ಲ ಉಚಿತ ಕಾನೂನು ಸೇವೆ ? : ಮೊದಲೇ ಹೇಳಿದಂತೆ ಇದಕ್ಕೆ ಕೆಲವು ನಿಯಮಗಳಿವೆ. ಮಾನನಷ್ಟ ಆರೋಪ ಹೊತ್ತಿರುವ ವ್ಯಕ್ತಿಗೆ ಉಚಿತ ಕಾನೂನು ಸೌಲಭ್ಯದ ಲಾಭ ನೀಡಲಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.