Amazing Idea : ಶಾಲೇಲಿ ಮಕ್ಕಳು ನಿದ್ರಿಸೋದ ತಪ್ಪಿಸಲು ಐ ಐಡಿಯಾ ಬೆಸ್ಟ್ ನೋಡಿ!

Published : Apr 13, 2023, 01:00 PM IST
Amazing Idea : ಶಾಲೇಲಿ ಮಕ್ಕಳು ನಿದ್ರಿಸೋದ ತಪ್ಪಿಸಲು ಐ ಐಡಿಯಾ ಬೆಸ್ಟ್ ನೋಡಿ!

ಸಾರಾಂಶ

ನಿದ್ರೆ ಪ್ರತಿಯೊಬ್ಬ ವ್ಯಕ್ತಿಗೆ ಅಗತ್ಯವಿದೆ. ದಿನದ ಕೆಲಸದ ಮಧ್ಯೆ ಮಾಡುವ ಚುಟುಕು ನಿದ್ರೆ ಮನಸ್ಸಿಗೆ ಚೈತನ್ಯ ನೀಡುತ್ತದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಮಕ್ಕಳಿಗೆ ನಿದ್ರೆ ಮಾಡುವ ಅವಕಾಶವನ್ನು ಶಾಲೆಯಲ್ಲಿ ನೀಡಲಾಗಿದೆ. ಕಚೇರಿಯಲ್ಲೂ ಈ ರೂಲ್ಸ್ ಇದ್ರೆ ಎಷ್ಟು ಚೆಂದ ಎನ್ನುತ್ತಿದ್ದಾರೆ ನೆಟ್ಟಿಗರು.  

ನಿರಂತರ ಚಟುವಟಿಕೆ ಪ್ರತಿಯೊಬ್ಬರನ್ನು ಸುಸ್ತು ಮಾಡುತ್ತೆ. ಶಾಲೆಯಿರಲಿ, ಕಾಲೇಜಿರಲಿ, ಕಚೇರಿಯಿರಲಿ ಇಲ್ಲ ಹೊರಗೆ ದುಡಿಯುವ ಯಾವುದೇ ಕೆಲಸವಿರಲಿ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಒಂದೇ ಸಮನೆ ಕೆಲಸ ಮಾಡೋದು ತುಂಬಾ ಕಷ್ಟದ ಕೆಲಸ. ಒಂದೇ ಕೆಲಸವನ್ನು ನೀವು ಒಂದು ಗಂಟೆ ನಿರಂತರವಾಗಿ ಮಾಡಿದ್ರೂ ದೇಹ ಮತ್ತು ಮನಸ್ಸು ಎರಡೂ ದಣಿಯುತ್ತದೆ.

ದೈಹಿಕ ಶ್ರಮದ ಕೆಲಸ ಮಾತ್ರವಲ್ಲ ಮನಸ್ಸಿಗೆ ಕೆಲಸ (Work) ನೀಡುವ ಕೆಲಸವೂ ಮನುಷ್ಯನನ್ನು ಸುಸ್ತು ಮಾಡುತ್ತೆ. ಶಾಲೆ (School) ಯಲ್ಲಿ ಒಂದೇ ಸಮನೆ ಪಾಠ ಕೇಳ್ತಾ, ಓದುತ್ತಿದ್ದರೆ ಮಕ್ಕಳ ಮನಸ್ಸು ದಣಿಯುತ್ತದೆ. ಕಂಪ್ಯೂಟರ್ (Computer) ಮುಂದೆ ಕುಳಿತು ಎಂಟು ಗಂಟೆಗಳ ಕಾಲ ಕೆಲಸ ಮಾಡಿದ ವ್ಯಕ್ತಿ ಕೂಡ ಬಳಲುತ್ತಾನೆ. ಕೆಲಸದ ಮಧ್ಯೆ ಸ್ವಲ್ಪ ವಿಶ್ರಾಂತಿ ಸಿಕ್ಕು, ಸಣ್ಣದೊಂದು ನಿದ್ರೆ ಮಾಡಿದ್ರೆ ಎಷ್ಟು ಒಳ್ಳೆದಲ್ವಾ ಎನ್ನಿಸುತ್ತೆ. ಕೆಲವರು ಸಿಕ್ಕ ಸಮಯದಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಕೆಲವರಿಗೆ ಸಣ್ಣ ನಿದ್ರೆ ಮತ್ತೆ ಕೆಲಸ ಮಾಡಲು ದೊಡ್ಡ ಶಕ್ತಿಯನ್ನು ನೀಡುತ್ತದೆ. ನಿಮಗೆ ನಿದ್ರೆ ಬರಲಿ, ಬಿಡಲಿ ಐದು ನಿಮಿಷ ಖುರ್ಚಿಗೆ ಒರಗಿ ಕಣ್ಣು ಮುಚ್ಚಿದ್ರೂ ಹಿತವೆನ್ನಿಸುತ್ತದೆ. ಕಿಂಡರ್ ಗಾರ್ಡನ್ ಗಳಲ್ಲಿ ಮಕ್ಕಳಿಗೆ ನಿದ್ರೆ ಮಾಡುವ ಅವಕಾಶವನ್ನು ನೀಡಲಾಗುತ್ತದೆ. ಆದ್ರೆ ಮಕ್ಕಳು ದೊಡ್ಡವರಾಗ್ತಿದ್ದಂತೆ ಓದಿನ ಹೊಣೆ ಹೆಚ್ಚಾಗುತ್ತದೆ. ಶಾಲೆಯಲ್ಲಿರಲಿ, ಮನೆಯಲ್ಲಿ ನಿದ್ರೆ ಮಾಡೋಕೂ ಅವಕಾಶ ಸಿಗೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈಗ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ತರಗತಿಯ ಬಿಡುವಿನ ಮಧ್ಯೆ ಮಕ್ಕಳಿಗೆ ನಿದ್ರೆ ಮಾಡಲು ಅವಕಾಶ ನೀಡಲಾಗಿದೆ.  

CHILDRENS HEALTH: ಚಿಕ್ಕ ಮಕ್ಕಳಿಗೆ ಮೊಸರು, ಮಜ್ಜಿಗೆ ಕೊಡಬಹುದಾ?

ಉದ್ಯಮಿ ಹರ್ಷ್ ಗೋಯೆಂಕಾ ಅವರು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ತೋರಿಸಿರುವಂತೆ ಮಾಡಿದ್ರೆ  ವಿದ್ಯಾರ್ಥಿಗಳಿಂದ ಹಿಡಿದು ಉದ್ಯೋಗಿಗಳವರೆಗೆ ಎಲ್ಲರೂ ಸದಾ ಕ್ರಿಯಾಶೀಲರಾಗಿರಬಹುದು.  
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಸ್ವಲ್ಪ ಹೊತ್ತು ತರಗತಿಗೆ ವಿರಾಮ ನೀಡಲಾಗುತ್ತದೆ. ಆಗ ಎಲ್ಲಾ ಮಕ್ಕಳ ಕುರ್ಚಿ ಮಲಗುವ ಕುರ್ಚಿಗಳಾಗಿ ಬದಲಾಗುತ್ತದೆ. ಕುರ್ಚಿಯನ್ನು ಬಿಡಿಸುವ ಮಕ್ಕಳು ಕುರ್ಚಿಗೆ ಒರಗಿ ಮಲಗುತ್ತಾರೆ. ಮಕ್ಕಳು ಪಡೆದ ಕಿರು ನಿದ್ದೆ ಸ್ವಲ್ಪ ಸಮಯವಾದರೂ ಮತ್ತೆ ಅವರನ್ನು ರೀಚಾರ್ಜ್ ಮಾಡುತ್ತದೆ. ಅವರ ಓದುವ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

Health Tips: ಒಗ್ಗರಣೆಗೆ ಬಳಸೋದು ಮಾತ್ರವಲ್ಲ, ಕಿಡ್ನಿ ಸಮಸ್ಯೆನೂ ಬಗೆಹರಿಸುತ್ತೆ ಸಾಸಿವೆ

ಈ ಕೂಲ್ ಕಾನ್ಸೆಪ್ಟ್ ಶಾಲೆಗಳಲ್ಲಿ ಮಾತ್ರವಲ್ಲದೆ ಕಚೇರಿಗಳಲ್ಲಿಯೂ ಕಾರ್ಯಗತಗೊಳಿಸಬೇಕೆಂದು ನೆಟ್ಟಿಗರು ಹೇಳ್ತಿದ್ದಾರೆ. ಶಾಲಾ ವಿರಾಮದಲ್ಲಿ ಕೂಲ್ ಐಡಿಯಾ  ಎಂದು ವಿಡಿಯೋ ಹಂಚಿಕೊಂಡಿರು ಹರ್ಷ್ ಗೋಯೆಂಕಾ ಶೀರ್ಷಿಕೆ ನೀಡಿದ್ದಾರೆ. ಕೆಲವು ಸೆಕೆಂಡುಗಳ ಈ ವೀಡಿಯೊವನ್ನು ಇದುವರೆಗೆ 12 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ನಮ್ಮ ಪಾರ್ಲಿಮೆಂಟ್ ಗೆ ಇಂಥದ್ದೊಂದು ಬೇಕು ಎಂದು ಒಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಅತ್ಯುತ್ತಮ, ಟ್ವಿಟರ್‌ನಲ್ಲಿ ನಾನು ಓದಿದ ಇತ್ತೀಚಿನ ಅಧ್ಯಯನದ ಪ್ರಕಾರ, ದಿನಕ್ಕೆ 15 ನಿಮಿಷಗಳ ನಿದ್ದೆ ಹೃದಯದ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಇದು ಎಲ್ಲ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ. ನಾನು ಓದುತ್ತಿದ್ದಾಗ ಇದೆಲ್ಲ ಎಲ್ಲಿತ್ತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಸಮಯದ ಸರಿಯಾದ ಸದ್ಬಳಕೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಇದು ಬ್ಯುಸಿನೆಸ್ ಕ್ಲಾಸ್ ಸ್ಕೂಲ್ ಎಂದು ಒಬ್ಬರು ಹೇಳಿದ್ರೆ, ಇದು ಚೀನಾ ಆಗಿರಬಹುದು .. ಆದರೆ ಜಪಾನ್ ಮೂಲ ಶಿಕ್ಷಣವು ಒಳ್ಳೆಯ ಮಾರ್ಗವಾಗಿದೆ . ಅವರು ಮಕ್ಕಳಿಗೆ ಸಮಾಜದ ಮೂಲಭೂತ ನೀತಿಗಳನ್ನು ಒಂದೆರಡು ವರ್ಷಗಳವರೆಗೆ ಕಲಿಸುತ್ತಾರೆ. ಆದರೆ ಇಲ್ಲಿ ಭಾರತದಲ್ಲಿ ಮಕ್ಕಳು ಕೇವಲ ಪರೀಕ್ಷೆಯ ಒತ್ತಡದಲ್ಲಿರುತ್ತಾರೆ ಎಂದು ಬರೆದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana