ಸ್ಟ್ರಾಬೆರಿ ಕಾಲುಗಳಿಂದ ಮುಕ್ತಿ ಬೇಕಾ? ಹಿಂಗ್ ಮಾಡಿ

By Web Desk  |  First Published May 7, 2019, 3:34 PM IST

ಸೇಬುವಿನಂತೆ ನುಣುಪಾದ ಕಾಲುಗಳು ಯಾರಿಗೆ ಬೇಡ ಹೇಳಿ? ಆದರೆ, ಸ್ಟ್ರಾಬೆರಿಯಂತೆ ಚುಕ್ಕೆಗಳಿರುವ ಕಾಲುಗಳು ಮಾತ್ರ ದೊಡ್ಡ ತಲೆನೋವು. ಈ ಸ್ಟ್ರಾಬೆರಿ ಕಾಲುಗಳು ಯಾಕಾಗುತ್ತವೆ, ಹೋಗಲಾಡಿಸುವುದು ಹೇಗೆ ತಿಳ್ಕೋಬೇಕಾ?


ಸ್ಟ್ರಾಬೆರಿ ಕಾಲುಗಳು ಬಹಳ ಸಾಮಾನ್ಯ. ಹೇರ್ ಫೋಲಿಕಲ್‌ಗಳಲ್ಲಿ ಡೆಡ್‌ಸ್ಕಿನ್ ಸೆಲ್ಸ್, ಕೊಳೆ, ಎಣ್ಣೆ ಸೇರಿಕೊಂಡಾಗ ಚರ್ಮದ ಮೇಲಿನ ರಂಧ್ರಗಳು ದೊಡ್ಡದಾಗಿ ಸ್ಟ್ರಾಬೆರಿ ಕಾಲುಗಳಾಗಿ ಕಾಣುತ್ತವೆ. ಅದರಲ್ಲೂ ಗಾಳಿಗೆ ತೆರೆದುಕೊಂಡ ಬಳಿಕ ಅದು ಇನ್ನಷ್ಟು ಕಪ್ಪಾಗುತ್ತದೆ. ಇದರಿಂದ ಆಸೆಯಿಂದ ಕೊಂಡ ಶಾರ್ಟ್ಸ್‌ಗಳು, ಸ್ಕರ್ಟ್‌ಗಳು ಬೀರಿನಿಂದ ಹೊರಬರಲು ಧೈರ್ಯ ತೋರುವುದೇ ಇಲ್ಲ. 

ಹಾಗಿದ್ದರೆ, ಈ ಸ್ಟ್ರಾಬೆರಿ ಕಾಲುಗಳಿಗೆ ಮುಕ್ತಿ ಹೇಳಿ ಮೇಣದಂಥ ಹೊಳೆವ ತ್ವಚೆ ಪಡೆಯುವುದು ಹೇಗೆ?

Tap to resize

Latest Videos

ಆರೋಗ್ಯ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

- ಮುಖದ ಕಲೆಗಳಂತೆ ಟ್ರೀಟ್ ಮಾಡಿ
ಮೊಡವೆಗಳು, ಬ್ಲಾಕ್‌ಹೆಡ್ಸ್ ಹಾಗೂ ಮುಖದ ಇತರೆ ಕಲೆಗಳನ್ನು ಹೋಗಲಾಡಿಸುವ ಉತ್ಪನ್ನಗಳನ್ನೇ ಸ್ಟ್ರಾಬೆರಿ ಕಾಲುಗಳಿಗೂ ಬಳಸಿ. ಅವುಗಳಲ್ಲಿರುವ ಸ್ಯಾಲಿಸಿಲಿಕ್ ಆ್ಯಸಿಡ್, ಬೆಂಬೋಲ್ ‌ಪೆರಾಕ್ಸೈಡ್‌ನಂಥ ರಾಸಾಯನಿಕಗಳು ಬ್ಯಾಕ್ಟೀರಿಯಾಗಳನ್ನು ಕೊಂದು, ಡೆಡ್‌ಸ್ಕಿನ್ ಸೆಲ್‌ಗಳನ್ನು ತೆಗೆದು ರಂಧ್ರವನ್ನು ಓಪನ್ ಮಾಡುತ್ತದೆ. ಹೀಗೆ ಮುಚ್ಚಿದ ರಂಧ್ರ ತೆರೆದು ಕಪ್ಪಾದ ಕಲೆ ಹೋಗಿಸುವಲ್ಲಿ ವಿಟಮಿನ್ ಎ ಹಾಗೂ ವಿಟಮಿನ್ ಸಿ ಕೂಡಾ ಮ್ಯಾಜಿಕ್ ಮಾಡುತ್ತವೆ. ಇದಲ್ಲದೆ, ಆ್ಯಸ್ಪಿರಿನ್ ಮಾತ್ರೆ ಪುಡಿ ಮಾಡಿ ನೀರು ಬೆರೆಸಿ, ಆ ಪೇಸ್ಟ್ ಹಚ್ಚಿ ಒಣಗಿದ ಬಳಿಕ ತೊಳೆದು ನೋಡಿ. 

ಸರಿಯಾಗಿ ವ್ಯಾಕ್ಸ್/ ಶೇವ್ ಮಾಡಿ
ಕಾಲಿನ ರೋಮಗಳನ್ನು ತೆಗೆಯಲು ಶೇವಿಂಗ್ ಸುಲಭವೆನಿಸಿದರೆ ಬ್ಲೇಡ್ ಶಾರ್ಪ್ ಇರುವಂತೆ ನೋಡಿಕೊಳ್ಳಿ. ಪ್ರತಿ ಬಾರಿ ಹೊಸ ಬ್ಲೇಡ್ ಬಳಸುವುದು ಉತ್ತಮ. ಶೇವ್ ಮಾಡುವ ಮುನ್ನ ಒಮ್ಮೆ ಸ್ಕ್ರಬ್ ಮಾಡಿ. ನೀವು ವ್ಯಾಕ್ಸ್ ಮಾಡಿಸುವುದಾದರೆ, ಅದಕ್ಕೂ ಮುಂಚೆ ಮೂರು ದಿನಗಳ ಕಾಲ ಸ್ಕ್ರಬ್ ಮಾಡಿ. ವ್ಯಾಕ್ಸ್ ದಿನ ಮಾಯಿಸ್ಛರೈಸರ್ ಹಚ್ಚಬೇಡಿ. ವ್ಯಾಕ್ಸ್ ಬಳಿಕ ರೋಸ್ ವಾಟರ್‌ನಂಥ ಟೋನರ್ ಹಚ್ಚಿ. ಎಲೆಕ್ಟ್ರಿಕ್ ಎಪಿಲೇಟರ್ ಇದ್ದರೆ ಅದನ್ನೇ ಬಳಸಿ. ಏಕೆಂದರೆ ಅದು ಕೂದಲನ್ನು ಬೇರಿನಿಂದಲೇ ತೆಗೆಯುತ್ತದೆ. 

ಪ್ರತಿನಿತ್ಯ ಎಕ್ಸ್‌ಫೋಲಿಯೇಟ್ ಮಾಡಿ
ಕಾಲಿನ ಹೇರ್ ರಿಮೂವ್ ಮಾಡಿದ ಎರಡು ದಿನಗಳ ಬಳಿಕ ಪ್ರತಿ ಎರಡು ದಿನಕ್ಕೊಮ್ಮೆ ಸ್ಕ್ರಬ್ ಮಾಡಿ. ಇದರಿಂದ ಹೇರ್ ಫೋಲಿಕಲ್‌ಗಳು ಮುಚ್ಚಿಕೊಳ್ಳುತ್ತವೆ ಹಾಗೂ ಡೆಡ್ ಸ್ಕಿನ್ ಸೆಲ್ಸ್ ಇರುವುದಿಲ್ಲ. ಇದಕ್ಕಾಗಿ ಬೇಕಿಂಗ್ ಸೋಡಾ ಹಾಗೂ ಮಜ್ಜಿಗೆಯ ಪೇಸ್ಟ್ ಮಾಡಿಕೊಂಡು ರಬ್ ಮಾಡಬಹುದು. ಇಲ್ಲವೇ ಉಪ್ಪು ಹಾಗೂ ಹಾಲಿನ ಪೇಸ್ಟ್ ಕೂಡಾ ಉತ್ತಮ ಫಲಿತಾಂಶ ನೀಡುತ್ತದೆ. 

ಮಾಯಿಶ್ಚರೈಸ್
ನಿಮ್ಮದು ಒಣಚರ್ಮವಾಗಿದ್ದರೆ ಸ್ಟ್ರಾಬೆರಿ ಲೆಗ್ಸ್ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ದಿನಕ್ಕೆರಡು ಬಾರಿ ಕಾಲಿನ ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ. 

click me!