ದಿನದಿಂದ ದಿನಕ್ಕೆ ಜನರಲ್ಲಿ ಟೂರಿಗೆ ಹೋಗುವ ಆಸಕ್ತಿ ಹೆಚ್ಚುತ್ತಿವೆ. ವಿವಿಧ ಸಾಹಸ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳುವ ಹುಚ್ಚು ಹೆಚ್ಚುತ್ತಿದೆ. ಇಂಥ ವಿಶೇಷ ಆಸಕ್ತಿ ಇರೋರಿಗೆ ಇವು ಹೇಳಿ ಮಾಡಿಸಿದ ಜಾಗಗಳು...
ಹಾಟ್ ಏರ್ ಬಲೂನ್ ರೈಡ್ ವಿದೇಶದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇತ್ತೀಚಿಗೆ ಭಾರತದಲ್ಲಿಯೂ ಖ್ಯಾತವಾಗುತ್ತಿದೆ. ಈ ಸಾಹಸಮಯ ರೈಡ್ ಅನ್ನು ಎಂಜಾಯ್ ಮಾಡುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚುತ್ತಿದೆ. ನಿಮಗೂ ಹಾಟ್ ಏರ್ ಬಲೂನ್ ರೈಡ್ ಮಾಡಿ, ರಮಣೀಯ ಭೂ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಇರಾದೆ ಇದ್ದರೆ, ಈ ತಾಣಗಳು ಬೆಸ್ಟ್....
ಮಹಾರಾಷ್ಟ್ರದ ಲೋನಾವಾಲಾ: ಇಲ್ಲಿ ರೈಡಿಂಗ್ ಜೊತೆಗೆ ಸುಂದರವಾದ ಹಸಿರು ತುಂಬಿದ ಬೆಟ್ಟ, ಗುಡ್ಡಗಳು, ನದಿ ಜಲಪಾತವಲ್ಲದೇ, ಹಲವಾರು ಸುಂದರ ದೃಶ್ಯಗಳೂ ಕಾಣ ಸಿಗುತ್ತವೆ.
ಎತ್ತರ : 4000 ಅಡಿ , ಸಮಯ : 60 ನಿಮಿಷ, ದರ : 6000-12000 ರೂಪಾಯಿ/ವ್ಯಕ್ತಿಗೆ.
ಕರ್ನಾಟಕದ ಹಂಪಿ: ಈ ರೈಡಿಂಗ್ ಎಂಜಾಯ್ ಮಾಡಲು ಮತ್ತೊಂದು ಉತ್ತಮ ತಾಣ ಹಂಪಿ. ಇಲ್ಲಿ ನೀವು ಹಂಪಿಯ ಸುಂದರವಾದ ದೃಶ್ಯ, ಗುಹೆಗಳು, ಮಂದಿರವನ್ನು ನೋಡುತ್ತಾ ಎಂಜಾಯ್ ಮಾಡಬಹುದು.
ಎತ್ತರ : 5000 ಅಡಿ , ಸಮಯ : 60 ನಿಮಿಷ, ದರ : 8000-12000 ರೂಪಾಯಿ/ವ್ಯಕ್ತಿಗೆ
ಹರಿಯಾಣದ ದಮ್ ದಮ ಲೇಕ್: ಇದು ಪಿಕ್‌ನಿಕ್ ಸ್ಪಾಟ್ ಆಗಿದ್ದು, ಅಲ್ಲಿ ನೀವು ಏರ್ ಬಲೂನ್ ರೈಡ್ ಮಾಡಬಹುದು.
ಎತ್ತರ : 5000 ಅಡಿ , ಸಮಯ : 60 ನಿಮಿಷ, ದರ : 9000-13000 ರೂಪಾಯಿ ವ್ಯಕ್ತಿಗೆ.
ರಾಜಸ್ಥಾನ: ಇದು ಕೋಟೆ ಹಾಗೂ ಮರುಭೂಮಿಗಾಗಿ ಮಾತ್ರವಲ್ಲ. ಬದಲಾಗಿ ಹಾಟ್ ಏರ್ ಬಲೂನ್ ರೈಡಿಗೂ ಪರ್ಫೆಕ್ಟ್ ತಾಣ.
ಎತ್ತರ : 4000 ಅಡಿ , ಸಮಯ : 60 ನಿಮಿಷ, ದರ : 6000-12000 ರೂಪಾಯಿ/ವ್ಯಕ್ತಿಗೆ.
ಉತ್ತರ ಪ್ರದೇಶ: ಕಡಿಮೆ ಖರ್ಚಿನಲ್ಲಿ ಈ ರೈಡ್ ಮಾಡಬೇಕೆಂದರೆ ಉತ್ತರ ಪ್ರದೇಶಕ್ಕೆ ತೆರಳಿ. ಇಲ್ಲಿ ತಾಜ್ ಮಹಲನ್ನು ಸಂಗಾತಿ ಜತೆಯಾಗಿ ಹಾರಾಡುತ್ತ ನೋಡಬಹುದು. ಸಂಗಾತಿಗೆ ಸರ್ಪ್ರೈಸ್ ಕೊಡುವ ಪ್ಲಾನ್ ಇದ್ದರೆ ಇಲ್ಲಿಗೆ ತೆರಳಿ.
ಎತ್ತರ : 500 ಅಡಿ , ಸಮಯ : 15-20 ನಿಮಿಷ, ದರ :500-750 ರೂಪಾಯಿ ವ್ಯಕ್ತಿಗೆ.
ಗೋವಾ: ಇಲ್ಲಿ ವಾಟರ್ ಸ್ಪೋರ್ಟ್ಸ್ ಮಾತ್ರವಲ್ಲದೇ, ಏರ್ ಬಲೂನ್ ರೈಡ್ ಇದೆ. ಇದರಲ್ಲಿ ರೈಡ್ ಮಾಡುತ್ತ ಗೋವಾದ ಸುಂದರವಾದ ತಾಣಗಳು ಹಾಗು ಬೀಚ್‌ಗಳನ್ನೂ ನೋಡಬಹುದು.
ಎತ್ತರ : 4000 ಅಡಿ , ಸಮಯ : 60 ನಿಮಿಷ, ದರ : 14000 ರೂಪಾಯಿ ವ್ಯಕ್ತಿಗೆ.