ಬಳ್ಳಾರಿಯ ಬಿಸಿಲು ನಿರೋಧಕ ಬ್ರಿಟಿಷ್‌ ಕಟ್ಟಡಗಳು ಈಗ ಪ್ರೇಕ್ಷಣೀಯ ತಾಣಗಳು!

By Web DeskFirst Published Oct 1, 2019, 10:37 AM IST
Highlights

ಬಳ್ಳಾರಿ ಕೆಂಡದಂಥಾ ಬಿಸಿಲಿಗೆ ಫೇಮಸ್ಸು. ಬೆಳ್ಳಂಬೆಳಗೇ ಸೂರ್ಯ ನಿಗಿನಿಗಿ ಹೊಳೆಯುತ್ತಿರುತ್ತಾನೆ. ಅಂಥ ಟೈಮ್‌ನಲ್ಲಿ ಒಳಗೆ ಕೂತು ಕೆಲಸ ಮಾಡುವುದು ಸಾಹಸ. ಫ್ಯಾನ್‌ ಗಾಳಿಯೂ ಬಿಸಿ ಅನಿಸುತ್ತೆ. ಆದರೆ ಬಳ್ಳಾರಿಯಲ್ಲಿ ಕೆಲವೊಂದು ಪುರಾತನ ಕಟ್ಟಡಗಳಿವೆ. ಇಲ್ಲೊಂದು ಮ್ಯಾಜಿಕ್‌ ನಡಿಯುತ್ತೆ. ನಡು ಮಧ್ಯಾಹ್ನದ ಹೊತ್ತಿಗೂ ತಣ್ಣನೆ ಎಸಿ ಹಾಕಿದಂಥ ಹವೆ ಇರುತ್ತೆ. ಈ ಅಚ್ಚರಿಯ ವಿವರ ಇಲ್ಲಿದೆ.

ಕೆ.ಎಂ.ಮಂಜುನಾಥ್‌

ಸೂರ್ಯನ ವಿಶೇಷ ಪ್ರೀತಿಗೆ ಪಾತ್ರವಾಗಿರುವ ‘ಬಿಸಿಲೂರು ಬಳ್ಳಾರಿ’ಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವುದು ಅಷ್ಟುಸುಲಭವಲ್ಲ !

ಸದಾ ಕಾದ ಕಬ್ಬಿಣದಂತಿರುವ ವಾತಾವರಣದಲ್ಲಿ ಒಂದಷ್ಟುಹೊತ್ತು ಫ್ಯಾನ್‌ ಅಲುಗಾಡಿಲ್ಲ ಎಂದರೆ ಜೀವವೇ ಹೋದಂತೆ ಇಲ್ಲಿನ ಜನರು ಚಡಪಡಿಸುತ್ತಾರೆ. ಇನ್ನು ಗಂಟೆಗಟ್ಟಲೆ ವಿದ್ಯುತ್‌ ಕೈಕೊಟ್ಟರೆ ಈ ಊರ ಜನರ ಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಷ್ಟುದುರ್ಬರ.

ಮೈಸೂರು ದಸರಾ ಎಷ್ಟೊಂದು ಸುಂದರ! ಇವುಗಳನ್ನು ನೋಡೋದು ಮಿಸ್ ಮಾಡ್ಲೇಬೇಡಿ!

ಆದರೆ, ದಿನಗಟ್ಟಲೆ ವಿದ್ಯುತ್‌ ಹೋದರೂ, ಫ್ಯಾನು ಅಲುಗಾಡದಿದ್ದರೂ, ವಿದ್ಯುತ್‌ ದೀಪಗಳಿಲ್ಲದಿದ್ದರೂ ಒಂದಷ್ಟೂಬೇಸರಿಸಿಕೊಳ್ಳದೆ ಹಾಯಾಗಿ ಕೆಲಸ ಮಾಡಿಕೊಂಡಿರುವ ಸರ್ಕಾರಿ ಕಚೇರಿ ನೌಕರರೂ ಇಲ್ಲಿದ್ದಾರೆ. ಸೂರ್ಯನೇ ಉಸ್ತುವಾರಿ ಹೊತ್ತಂತಿರುವ ಬಳ್ಳಾರಿಯಲ್ಲಿ ಇದು ಸಾಧ್ಯವೇ ? ಎಂದು ಹುಬ್ಬೇರಿಸಬೇಡಿ. ಖಂಡಿತ ಸಾಧ್ಯವಿದೆ ಎಂಬುದನ್ನು ನಿರೂಪಿಸಿವೆ ಬ್ರಿಟೀಷ್‌ ಕಾಲದ ‘ಕೂಲ್‌ ಕೂಲ್‌’ ಕಟ್ಟಡಗಳು !!

ಇಂದಿನ ಸಿವಿಲ್‌ ತಂತ್ರಜ್ಞಾನಕ್ಕೆ ಸವಾಲ್‌

ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಮುಚ್ಛಯ, ಕೋಟೆ ಮತ್ತು ದಂಡು ಪ್ರದೇಶಗಳಲ್ಲಿನ ಹಳೆಯ ಹಲವು ಸರ್ಕಾರಿ ಕಚೇರಿಗಳಲ್ಲಿನ ವಿನ್ಯಾಸ ಮತ್ತು ನಿರ್ಮಾಣ ಇಂದಿನ ಸಿವಿಲ್‌ ಇಂಜಿನಿಯರಿಂಗ್‌ಗೆ ಸವಾಲು ಹಾಕುವಂತಿವೆ. ಎತ್ತರವಾದ ಚಾವಣಿ, ವಿಶಾಲವಾದ ಒಳ ಕೋಣೆ, ಯಥೇಚ್ಛವಾದ ಗಾಳಿ ಮತ್ತು ಬೆಳಕು ಬರುವಂತೆ ನಿರ್ಮಿಸಿರುವ ಕಟ್ಟಡಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ಈ ಕಟ್ಟಡಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಅದೆಂಥಹದ್ದೇ ಬಿಸಿಲಾದರೂ ಸಹಿಸಿಕೊಳ್ಳಬಲ್ಲರು. ಅಷ್ಟರಮಟ್ಟಿಗೆ ಬ್ರಿಟೀಷ್‌ ಕಾಲದ ಕಟ್ಟಡಗಳು ಬಿಸಿಲಿನ ಬಾಧೆಯಿಂದ ನೌಕರರನ್ನು ಈ ಕಟ್ಟಡಗಳು ರಕ್ಷಿಸುತ್ತಾ ಬಂದಿವೆ.

ಮೋದಿ ಭಾಷಣ ಮಾಡಿದ ಮ್ಯಾಡಿಸನ್ ಸ್ಕ್ವೇರ್ ಗೊತ್ತು, ಉಳಿದವು?

ಡಿಸಿ ಕಚೇರಿ ನೋಡಲು ಆಂಧ್ರದಿಂದ ಬರುತ್ತಿದ್ದರು...ಪುರಾತನ ಕಾಲದ ಬ್ರಿಟೀಷ್‌ ಕಟ್ಟಡ ಈಗಿನ ಜಿಲ್ಲಾಧಿಕಾರಿ ಕಚೇರಿಯಾಗಿ ಬದಲಾಗಿದೆ. ಇದನ್ನು ವೀಕ್ಷಣೆ ಮಾಡಲೆಂದೇ ಆಂಧ್ರಪ್ರದೇಶದ ನಾನಾ ಭಾಗಗಳಿಂದಲೂ ಜನರು ಬರುತ್ತಾರೆ. ಜೊತೆಗೆ ರೈಲ್ವೆ ನಿಲ್ದಾಣವೂ ಈ ಕಾರಣಕ್ಕೇ ಪ್ರೇಕ್ಷಣೀಯ ಸ್ಥಳವಾಗಿದೆ.- ಚನ್ನಬಸಣ್ಣ, ಲೋಹಿಯಾ ಪ್ರಕಾಶನ

ಸ್ಥಳೀಯ ಕಲ್ಲುಗಳು ಬಳಕೆ

ಸ್ಥಳೀಯವಾಗಿ ಸಿಗುತ್ತಿದ್ದ ಕಲ್ಲು, ಗಾರೆಗಳನ್ನು ಹೆಚ್ಚಾಗಿ ಬಳಸಿಕೊಂಡು ಕಟ್ಟಡಗಳನ್ನು ನಿರ್ಮಿಸಲಾಗಿದೆ. ನಗರದ ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಚೇರಿ, ಲೋಕೋಪಯೋಗಿ ಇಲಾಖೆ, ನ್ಯಾಯಾಲಯ, ದಂಡು ಪ್ರದೇಶದಲ್ಲಿರುವ ನೀರಾವರಿ ಇಲಾಖೆ, ಜಿಲ್ಲಾಧಿಕಾರಿ ಕಚೇರಿ ಹೀಗೆ ನಗರದಲ್ಲಿಯೇ ಸುಮಾರು 15ಕ್ಕೂ ಹೆಚ್ಚು ಇಲಾಖೆಗಳಿಗೆ ಬ್ರಿಟೀಷ್‌ ಕಾಲದ ಕಟ್ಟಡಗಳು ನೆಲೆಯೊದಗಿಸಿವೆ. ಬಿಸಿಲಿನ ಝಳವನ್ನು ಸಹಿಸಿಕೊಳ್ಳುವಂತೆ ಸಿವಿಲ್‌ ತಂತ್ರಜ್ಞಾನ ಬಳಕೆಯಾಗಿದೆ. ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಗಾಳಿ-ಬೆಳಕಿಗೆ ಯಾವ ಕೊರತೆಯೂ ಇಲ್ಲ.

ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!

ಈ ಕಟ್ಟಡಗಳು ಕಟ್ಟಿದ್ದೇಕೆ ?

ಈ ಹಿಂದೆ ಬಳ್ಳಾರಿಯ ದಂಡು ಪ್ರದೇಶದಲ್ಲಿ ತಮ್ಮ ಸೈನ್ಯದೊಂದಿಗೆ ಕೇಂದ್ರಸ್ಥಾನ ಮಾಡಿಕೊಂಡಿದ್ದ ಬ್ರಿಟೀಷರು ತಮ್ಮ ಆಡಳಿತದ ಅನುಕೂಲಕ್ಕಾಗಿ ಅನೇಕ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಹೆಚ್ಚಾಗಿ ಬಳಕೆ ಮಾಡಿಕೊಂಡು ತಮ್ಮದೇ ತಂತ್ರಜ್ಞಾನ ಬಳಸಿ ಕಟ್ಟಡಗಳನ್ನು ನಿರ್ಮಿಸುತ್ತಾರೆ. ಈ ಎಲ್ಲದರ ಪರಿಣಾಮವಾಗಿ ಈ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಬೇಸಿಗೆಯಲ್ಲೂ ನೆಮ್ಮದಿಯಾಗಿ ಕೆಲಸ ಮಾಡಲು ಸಾಧ್ಯವಾಗಿದೆ. ಮೂರ್ನಾಲ್ಕು ತಾಸು ವಿದ್ಯುತ್‌ ಸ್ಥಗಿತಗೊಂಡರೂ ನೈಸರ್ಗಿಕವಾಗಿ ಸಿಗುವ ಗಾಳಿ ಮತ್ತು ಬೆಳಕಿನಿಂದ ನಿತ್ಯದ ಕೆಲಸಕ್ಕೆ ಅಡ್ಡಿಯಾಗುವುದಿಲ್ಲ. ಎಲ್ಲ ಹವಮಾನಕ್ಕೂ ಒಗ್ಗುವ ಹಾಗೆ ನಿರ್ಮಾಣಗೊಂಡಿರುವ ಈ ಶಿಲಾಕಟ್ಟಡಗಳು ನೌಕರರ ಪಾಲಿಗಂತೂ ತಂಪು ನೀಡಿವೆ..

click me!