ಮಕ್ಕಳಿಗೆ ಎದೆ ಹಾಲು ಬಹಳ ಪ್ರಯೋಜನಕಾರಿ. ಆದ್ರೆ ಈ ಎದೆ ಹಾಲನ್ನು ದೊಡ್ಡವರು ಕುಡಿದ್ರೆ? ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ತನ್ನ ಸಹೋದ್ಯೋಗಿಗಳಿಗೆ ಈ ಆಫರ್ ನೀಡಿದ್ದಾರೆ. ಮುಂದೇನಾಯ್ತು ನೀವೇ ನೋಡಿ.
ಸೋಶಿಯಲ್ ಮೀಡಿಯಾ (social media ) ದಲ್ಲಿ ಪ್ರಸಿದ್ಧಿ ಪಡೆಯಲು ಜನರು ಏನೆಲ್ಲ ಮಾಡ್ತಾರೆ. ಇತ್ತೀಚಿನ ದಿನಗಳಲ್ಲಿ ವೀವ್ಸ್ ಹೆಚ್ಚಿಸಿಕೊಳ್ಳಲು ಜನರು ಹೊಸ ಹೊಸ ಪ್ರಯತ್ನಗಳನ್ನು ನಡೆಸ್ತಿದ್ದಾರೆ. ಸಾಹಸ ಕೆಲಸಕ್ಕೆ ಕೈ ಹಾಕಿ ಜೀವವನ್ನೇ ಬಲಿ ನೀಡಿದ ಅನೇಕ ಘಟನೆಗಳಿವೆ. ಆದ್ರೆ ಈಗ ವಿಚಿತ್ರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು ಕಂಗಾಲಾಗಿದ್ದಾರೆ.
ಬ್ರೆಸ್ಟ್ ಮಿಲ್ಕ್ (Breast milk), ಮಕ್ಕಳಿಗೆ ಅತ್ಯಗತ್ಯ. ಹುಟ್ಟಿದ ತಕ್ಷಣ ತಾಯಿ ಎದೆ ಹಾಲನ್ನು ಮಕ್ಕಳಿಗೆ ನೀಡುವಂತೆ ವೈದ್ಯರು ಸಲಹೆ ನೀಡ್ತಾರೆ. ಮಗು ಜನಿಸಿದ ಒಂದುವರೆ ಎರಡು ವರ್ಷಗಳ ಕಾಲ, ಬ್ರೆಸ್ಟ್ ಮಿಲ್ಕ್ ಅಗತ್ಯವಾಗಿ ಮಕ್ಕಳಿಗೆ ನೀಡ್ಬೇಕು. ಇದ್ರಲ್ಲಿರುವ ಪೋಷಕಾಂಶ ಮಕ್ಕಳ ರೋಗ ನಿರೋಧಕ ಶಕ್ತಿ (immunity)ಯನ್ನು ಹೆಚ್ಚಿಸುತ್ತದೆ. ಬ್ರೆಸ್ಟ್ ಮಿಲ್ಕನ್ನು ವಯಸ್ಕರು ಸೇವಿಸಬಹುದೇ ಎಂಬ ಪ್ರಶ್ನೆ ಆಗಾಗ ಕೇಳಿ ಬರ್ತಿರುತ್ತದೆ. ಇದೇ ವಿಚಾರಕ್ಕೆ ಈಗ ಸಾರಾ ಸ್ಟೀವನ್ಸನ್ ವಿಡಿಯೋ ಚರ್ಚೆಗೆ ಬಂದಿದೆ. ಸಾರಾ ಸ್ಟೀವನ್ಸನ್ (Sarah Stevenson) ಆಸ್ಟ್ರೇಲಿಯಾದ ಪ್ರಸಿದ್ಧ ಇನ್ಫ್ಲುಯನ್ಸರ್ (influencer). ಆಕೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಆಕೆ ಬ್ರೆಸ್ಟ್ ಮಿಲ್ಕ್ ನೀಡೋದನ್ನು ಕಾಣ್ಬಹುದು. ಕ್ರಿಸ್ಮಸ್ ಪಾರ್ಟಿ (Christmas party)ಯ ವಿಡಿಯೋ ಇದಾಗಿದೆ. ಸಾರಾ ತನ್ನ ಸಹೋದ್ಯೋಗಿಗಳು ಹಾಗೂ ಪತಿ ಜೊತೆ ಬೋಟ್ ನಲ್ಲಿ ಹೋಗ್ತಿದ್ದಾಳೆ. ಈ ವೇಳೆ ಆಕೆ ಬ್ರೆಸ್ಟ್ ಮಿಲ್ಕ್ ಪಂಪ್ ಮಾಡಿ ಅದನ್ನು ಬಾಟಲಿಗೆ ತುಂಬ್ತಾಳೆ, ನಂತ್ರ ಅದನ್ನು ಸಹೋದ್ಯೋಗಿಗಳಿಗೆ ಕುಡಿಯಲು ನೀಡ್ತಾಳೆ. ಆದ್ರೆ ಸಾರಾ ಆಫರನ್ನು ಎಲ್ಲರೂ ಒಪ್ಪಿಕೊಳ್ಳೋದಿಲ್ಲ. ಕೆಲವರು ಹಾಲನ್ನು ಕುಡಿದ್ರೆ ಮತ್ತೆ ಕೆಲವರು ನಿರಾಕರಿಸ್ತಾರೆ.
undefined
ಹಾಲು ಕುಡಿಯೋದ್ರಿಂದ ಬರುತ್ತಂತೆ ಡಯಾಬಿಟೀಸ್… ಹುಷಾರಾಗಿರಿ ಇದು ತುಂಬಾನೆ
sarahs_day ಹೆಸರಿನ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಹೊಸದಾಗಿ ಪಂಪ್ ಮಾಡಿದ ಎದೆಹಾಲನ್ನು ಪ್ರಯತ್ನಿಸದಿದ್ದರೆ ಅವರು ನಿಜವಾಗಿಯೂ ನಿಜವಾದ ಸ್ನೇಹಿತರೇ!? ಇದು ನಿಜವಾಗಿಯೂ ಸುಖಕರವಾಗಿದೆ ಎಂಬ ಶೀರ್ಷಿಕೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದ್ರಲ್ಲಿ ಸಾರಾ ಮೊದಲು ಎದೆ ಹಾಲನ್ನು ಪಂಪ್ ಮಾಡ್ತಾಳೆ. ನಂತ್ರ ಅದನ್ನು ತನ್ನ ಸ್ನೇಹಿತೆಗೆ ನೀಡ್ತಾಳೆ. ಆಕೆ ಸ್ವಲ್ಪ ಕುಡಿದು ಓ ಎನ್ನುವ ರೀತಿ ರಿಯಾಕ್ಷನ್ ನೀಡ್ತಾಳೆ. ನಂತ್ರ ಇನ್ನೊಬ್ಬರಿಗೆ ಅದನ್ನು ನೀಡಲಾಗುತ್ತದೆ. ಆಕೆ ಕೂಡ ಸ್ವಲ್ಪ ಕುಡಿಯುತ್ತಾಳೆ. ಆದ್ರೆ ಆಕೆ ಪತಿ ಮತ್ತು ಅಲ್ಲಿದ್ದ ಮಗು ಅದನ್ನು ಕುಡಿಯಲು ನಿರಾಕರಿಸ್ತಾರೆ.
ಈ ಯುವಕನೇ ಅದೃಷ್ಟವಂತ; ವೈರಲ್ ಆಯ್ತು ಅಮ್ಮ-ಮಗನ ಕ್ಯೂಟ್ ವಿಡಿಯೋ ವೈರಲ್
ಸಾರಾ ವೀಡಿಯೊವನ್ನು 14 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 24000 ಕ್ಕೂ ಹೆಚ್ಚು ಲೈಕ್ ಬಂದಿದೆ. ಸಾರಾ ಸ್ಟೀವನ್ಸನ್ 12 ಲಕ್ಷ ಫಾಲೋವರ್ಸ್ ಹೊಂದಿದ್ದು, ಪ್ರಸಿದ್ಧ ಇನ್ಫ್ಲುಯೆನ್ಸರ್. ಕೆಲ ಬಳಕೆದಾರರು ವೀಡಿಯೋವನ್ನು ನೋಡಿ ಆಶ್ಚರ್ಯಪಟ್ಟರೆ, ಕೆಲವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಾರಾ ಕೆಲಸಕ್ಕೆ ಬೆಂಬಲ ನೀಡಿದ್ದಾರೆ. ಇದನ್ನು ನಾನು ಟೇಸ್ಟ್ ಮಾಡಿದ್ದೇನೆ. ಸ್ವಲ್ಪ ಸಿಹಿಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಬೆಳಗಿನ ಚಹಾದಲ್ಲಿ ನಾನು ಅದನ್ನು ಬಳಸಿದ್ದೇನೆ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. 3 ಮಕ್ಕಳಿಗೆ ಹಾಲುಣಿಸಿದ್ದೇನೆ, ಆದರೆ ಅದನ್ನು ನಾನೇ ಬಳಸಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ. ನಿಜವಾಗ್ಲೂ ಸ್ನೇಹಿತರು ಇದನ್ನು ಕುಡಿದಿದ್ದಾರಾ? ನಂಬೋಕೆ ಸಾಧ್ಯವಿಲ್ಲ, ಜನರು ಇಂಥ ಕೆಲಸವನ್ನು ಹೇಗೆ ಮಾಡ್ತಾರೆ ಹೀಗೆ ನಾನಾ ಕಮೆಂಟ್ ವಿಡಿಯೋಕ್ಕೆ ಬಂದಿದೆ.