ಮನೆಯಲ್ಲೇ ಕೆಲವೊಂದಿಷ್ಟು ಆರೋಗ್ಯ ಸಮಸ್ಯೆಗಳನ್ನು ತಪಾಸಣೆ ಮೂಲಕ ಕಂಡುಕೊಳ್ಳಬಹುದು. ಆಗಾಗ ಈ ಟೆಸ್ಟ್‌ಗಳನ್ನು ಮಾಡಿಕೊಳ್ಳುತ್ತಿದ್ದರೆ, ಕಾಯಿಲೆಯ ಆರಂಭಿಕ ಹಂತದಲ್ಲೇ ಅದನ್ನು ಗುರುತಿಸಿದಂತಾಗುತ್ತದೆ. ಇದರಿಂದ ಚಿಕಿತ್ಸೆ ಸುಲಭವಾಗುತ್ತದೆ.
ನಲವತ್ತು ವರ್ಷ ದಾಟಿದ ಮೇಲೆ ವರ್ಷಕ್ಕೊಮ್ಮೆ ಆಸ್ಪತ್ರೆಯಲ್ಲಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ ರೂಢಿ. ಆದರೆ, ಸಣ್ಣ ಪುಟ್ಟ ಆರೋಗ್ಯ ಏರುಪೇರಿಗೂ ಗಾಬರಿಯಾಗಿ ಆಸ್ಪತ್ರೆಗೆ ಓಡಿ, ಗಂಟೆಗಟ್ಟಲೆ ಕಾದು ಟೆಸ್ಟ್ ಮಾಡಿಸಿ, ರಿಪೋರ್ಟ್ ಬರಲು ಮತ್ತೆರಡು ದಿನ ಕಾದು... ಇದು ಬಹಳ ರಗಳೆಯ ಕೆಲಸ. ನಿಮ್ಮ ಸಮಯವೂ ವ್ಯರ್ಥ, ವೈದ್ಯರ ಸಮಯವೂ ವ್ಯರ್ಥ. ಅದರ ಬದಲಿಗೆ ಒಂದಿಷ್ಟು ಆರೋಗ್ಯ ತಪಾಸಣೆಗಳನ್ನು ಆಗಾಗ ಮನೆಯಲ್ಲೇ ಮಾಡಿಕೊಳ್ಳಬಹುದು. ನಿಜವಾಗಿ ಗಾಬರಿಯಾಗುವಂಥ ವಿಷಯ ಕಂಡುಬಂದರೆ ಮಾತ್ರ ಆಸ್ಪತ್ರೆಗೆ ಎಡತಾಕಿದರಾಯ್ತು. ಹಾಗಿದ್ದರೆ ಯಾವೆಲ್ಲ ತಪಾಸಣೆಗಳನ್ನು ಮನೆಯಲ್ಲೇ ಮಾಡಿಕೊಳ್ಳಬಹುದು ಗೊತ್ತಾ?
1. ದೇಹದ ಉಷ್ಣತೆ
ವ್ಯಕ್ತಿಯೊಬ್ಬನ ದೇಹದ ಸಾಮಾನ್ಯ ಉಷ್ಣತೆಯು 37 ಡಿಗ್ರಿ ಸೆಲ್ಶಿಯಸ್ (98.6 ಡಿಗ್ರಿ ಫ್ಯಾರನ್ಹೀಟ್) ಇರಬೇಕು. ಇದು ನೀವು ದೇಹದ ಯಾವ ಅಂಗದಲ್ಲಿ ಟೆಸ್ಟ್ ಮಾಡಿದಿರಿ, ವಯಸ್ಸೆಷ್ಟು, ದಿನದ ಯಾವ ಸಮಯದಲ್ಲಿ ಟೆಸ್ಟ್ ಮಾಡಿದಿರಿ ಮುಂತಾದ ಅಧಾರದ ಮೇಲೆ ಸ್ವಲ್ಪ ಹೆಚ್ಚು ಕಡಿಮೆಯಾಗಬಹುದು. ಆದರೆ, ಈ ಉಷ್ಣತೆಯಲ್ಲಿ ಗಮನಾರ್ಹ ಏರುಪೇರು ಕಂಡುಬಂದರೆ ಆಗ ಅದು ಇನ್ಫೆಕ್ಷನ್ ಅಥವಾ ಕಾಯಿಲೆಯನ್ನು ಸೂಚಿಸುತ್ತದೆ. ಮನೆಯಲ್ಲಿ ಒಳ್ಳೆಯ ಥರ್ಮೋಮೀಟರ್ ತಂದಿಟ್ಟುಕೊಂಡು ಆಗಾಗ ದೇಹದ ಉಷ್ಣತೆಯನ್ನು ಪರೀಕ್ಷಿಸುತ್ತಿರಿ.
ತೂಕ ಕಮ್ಮಿಗೂ ಟೀ ಎಂಬ ಬೆಸ್ಟ್ ಮದ್ದು...
2. ಟೆಸ್ಟಿಕ್ಯುಲಾರ್ ಚೆಕ್
ಈ ಪರೀಕ್ಷೆಯನ್ನು ಪುರುಷರು ಪ್ರತಿನಿತ್ಯ ಮಾಡಿಕೊಳ್ಳಬೇಕು. ತಮ್ಮ ಟೆಸ್ಟಿಕಲ್ಸ್‌ನಲ್ಲಿ ಯಾವುದಾದರೂ ಗಂಟು ಅಥವಾ ಊತವಿದೆಯೇ ಇಲ್ಲವೇ ನೋವು ಇದೆಯೇ ಎಂದು ಪ್ರತಿ ಬಾರಿ ಸ್ನಾನದ ಬಳಿಕ ಪರೀಕ್ಷೆ ಮಾಡಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಹಾಗೇನಾದರೂ ಇದ್ದರೆ ಅದು ಟೆಸ್ಟಿಕಲ್ ಕ್ಯಾನ್ಸರ್‌ನ್ನು ಸೂಚಿಸುತ್ತಿರಬಹುದು. ಆಗ ತಡ ಮಾಡದೆ ವೈದ್ಯರನ್ನು ಕಾಣಬೇಕು.
3. ಬ್ರೆಸ್ಚ್ ಚೆಕ್
ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಬ್ರೆಸ್ಟ್ ಎಲ್ಲೆಲ್ಲಿ ಹೇಗಿರುತ್ತದೆ ಎಂಬ ಅರಿವಿರುತ್ತದೆ. ಪೀರಿಯಡ್ಸ್ ಸೈಕಲ್‌ನಲ್ಲಿ ಆಗಾಗ ಸಣ್ಣ ಪುಟ್ಟ ಬದಲಾವಣೆಗಳಾಗೋದು ಸಾಮಾನ್ಯ. ಆದರೆ ಎಲ್ಲಾದರೂ ಚರ್ಮ ಹೆಚ್ಚಿನ ಸುಕ್ಕಾದರೆ, ಗಂಟುಗಳು ಸಿಕ್ಕಿದರೆ ಅಥವಾ ಎದೆಯ ಆಕಾರ ಗಣನೀಯವಾಗಿ ಬದಲಾದರೆ, ಕೀವು ಬಾವು ಏನಾದರೂ ಕಂಡುಬಂದರೆ ಅವು ಬ್ರೆಸ್ಟ್ ಕ್ಯಾನ್ಸರ್ ಲಕ್ಷಣಗಳಿರಬಹುದು. ತಕ್ಷಣ ವೈದ್ಯರನ್ನು ಕಾಣುವುದು ಅಗತ್ಯ.
4. ಹೃದಯ ಬಡಿತ ತಪಾಸಣೆ
ಸೆನ್ಸಿಟಿವ್ ಹಲ್ಲಿನ ಸಮಸ್ಯೆಯೇ? ಇಲ್ಲಿದೆ ಮನೆ ಮದ್ದು
ಬಿಪಿ ಮೆಷಿನ್ ತಂದಿಟ್ಟುಕೊಂಡರೆ ಅದರಲ್ಲಿ ಹೃದಯ ಬಡಿತವೂ ರೆಕಾರ್ಡ್ ಆಗುತ್ತದೆ. ವಯಸ್ಸು, ಲಿಂಗ ಇತ್ಯಾದಿ ಕಾರಣಗಳಿಂದ ಸಾಮಾನ್ಯ ಹೃದಯ ಬಡಿತದಲ್ಲಿ ಬದಲಾವಣೆ ಇರುವುದು ಕಾಮನ್. ಆದರೆ, ಪ್ರತಿದಿನ ಇರುವ ಪಲ್ಸ್ ರೇಟ್‌ಗಿಂತ ನಿಮಿಷಕ್ಕೆ 10ಕ್ಕೂ ಹೆಚ್ಚು ಬಡಿತಗಳಲ್ಲಿ ವ್ಯತ್ಯಾಸ ಕಂಡುಬಂದರೆ ಸ್ವಲ್ಪ ಗಮನ ಹರಿಸಬೇಕು. 100 ಬಿಪಿಎಂಗಿಂತಲೂ ಹೆಚ್ಚಿನ ಪಲ್ಸ್ ಇದ್ದರೆ ಅದು ನೀವು ಒತ್ತಡದಲ್ಲಿರುವುದನ್ನು ಅಥವಾ ಡಿಹೈಡ್ರೇಶನ್, ಅತಿ ಉತ್ಸಾಹದಲ್ಲಿರುವಿಕೆ ಅಥವಾ ಕಾಯಿಲೆಯನ್ನು ಸೂಚಿಸುತ್ತಿರಬಹುದು.
5. ರಕ್ತದೊತ್ತಡ (ಬಿಪಿ)
ಹೈ ಬಿಪಿಯು ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಹಾರ್ಟ್ ಫೇಲ್ಯೂರ್, ಕಿಡ್ನಿ ಫೇಲ್ಯೂರ್ ಮುಂತಾದ ಅಪಾಯಕಾರಿ ಕಾಯಿಲೆಗಳನ್ನು ತಂದು ಬಿಡಬಹುದು. ಇವುಗಳಿಗೆ ಸಾಮಾನ್ಯವಾಗಿ ಯಾವುದೇ ವಾರ್ನಿಂಗ್ ಸೈನ್‌ಗಳು ಇರುವುದಿಲ್ಲ. ಹಾಗಾಗಿ, ವಾರಕ್ಕೊಮ್ಮೆಯಾದರೂ ಬಿಪಿ ಚೆಕ್ ಮಾಡಿಕೊಳ್ಳುತ್ತಿರುವುದು ಉತ್ತಮ ಅಭ್ಯಾಸ. ಸಾಮಾನ್ಯವಾಗಿ ರಕ್ತದೊತ್ತಡವು 90/ 60 ಹಾಗೂ 120/80 ಗಳ ನಡುವೆ ಇರಬೇಕು. ಬಿಪಿ ಹೆಚ್ಚಿದ್ದರೆ ನಿಯಂತ್ರಣಕ್ಕೆ ತರಲು ಉಪ್ಪು ಹಾಗೂ ಆಲ್ಕೋಹಾಲ್ ತ್ಯಜಿಸಿ. ಉತ್ತಮ ಆಹಾರ ತೆಗೆದುಕೊಳ್ಳಿ, ವ್ಯಾಯಾಮ ಮಾಡಿ ತೂಕ ಇಳಿಸಿ ನೋಡಿ. ಜೊತೆಗೆ ವೈದ್ಯರ ಸಹಾಯ ಪಡೆಯುವುದೂ ಅಗತ್ಯ.