ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಾಗೆ ಜಿಲ್ಲಾದ್ಯಂತ ಹಿಪ್ಪು ನೇರಳೆ ಸೊಪ್ಪಿಗೆ ಕೆಂಪುತಲೆ ಹುಳುಗಳ ಕಾಟಕ್ಕೆ ಅಕ್ಷರಶಃ ಜಿಲ್ಲೆಯ ರೇಷ್ಮೆ ಬೆಳೆಗಾರರು ತೀವ್ರ ಕಂಗಾಲಾಗಿದ್ದು, ರೇಷ್ಮೆ ಕೃಷಿ ಸಾಕು ಅನಿಸುವಷ್ಟರ ಮಟ್ಟಿಗೆ ಕೆಂಪುತಲೆ ಹುಳುಗಳ ಕಾಟಕ್ಕೆ ರೇಷ್ಮೆ ಬೆಳೆಗಾರರು ಹೈರಾಣಗುತ್ತಿದ್ದಾರೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ: ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಾಗೆ ಜಿಲ್ಲಾದ್ಯಂತ ಹಿಪ್ಪು ನೇರಳೆ ಸೊಪ್ಪಿಗೆ ಕೆಂಪುತಲೆ ಹುಳುಗಳ ಕಾಟಕ್ಕೆ ಅಕ್ಷರಶಃ ಜಿಲ್ಲೆಯ ರೇಷ್ಮೆ ಬೆಳೆಗಾರರು ತೀವ್ರ ಕಂಗಾಲಾಗಿದ್ದು, ರೇಷ್ಮೆ ಕೃಷಿ ಸಾಕು ಅನಿಸುವಷ್ಟರ ಮಟ್ಟಿಗೆ ಕೆಂಪುತಲೆ ಹುಳುಗಳ ಕಾಟಕ್ಕೆ ರೇಷ್ಮೆ ಬೆಳೆಗಾರರು ಹೈರಾಣಗುತ್ತಿದ್ದಾರೆ.
ಮೊದಲೇ (Silk) ಗೂಡ ಧಾರಣೆ ಯಲ್ಲಿ (Market) ಏರಳಿತದಿಂದ ರೇಷ್ಮೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಗುರಿಯಾಗುತ್ತಿದ್ದಾರೆ. ಬೆಳೆ ಬಂದರೆ ಮಾರುಕಟ್ಟೆಯಲ್ಲಿ ಬೆಲೆ ಇರಲ್ಲ. ಮಾರುಕಟ್ಟೆಯಲ್ಲಿ ಬೆಲೆ ಇದ್ದರೆ ಬೆಳೆ ಕೈಗೆ ಸಿಗಲ್ಲ ಎನ್ನುವ ಸಂಕಟ ಎದುರಿಸುತ್ತಿರುವ ರೇಷ್ಮೆ ಬೆಳೆಗಾರರಿಗೆ ಇದೀಗ ರೇಷ್ಮೆ ಹುಳು ಸಾಕಾಣಿಗೆ ಬಳಸುವ ಹಿಪ್ಪುನೇರಳೆ ಸೊಪ್ಪಿಗೆ ಹುಳುಗಳ ಕಾಟ ಶುರುವಾಗಿದೆ.
ಜಿಲ್ಲಾದ್ಯಂತ ಸದ್ಯ ಹವಮಾನ ವೈಪರೀತ್ಯದ ಪರಿಣಾಮ ಹಲವು ದಿನಗಳಿಂದ ಮೂಡ ಕವಿದ ವಾತಾವರಣ ಇದ್ದು ಇದರ ಪರಿಣಾಮ ಈಗ ಹಿಪ್ಪು ನೇರಳೆ ಸೊಪ್ಪಿಗೆ ಕೆಂಪುತಲೆ ಹುಳುಗಳು ದಾಳಿ ಮಾಡಿ ಸೊಪ್ಪನ್ನು ಎಲೆಗಳಿಂದ ಕಾಂಡದವರಾಗಿ ನಾಶ ಮಾಡುತ್ತಿದ್ದು ರೇಷ್ಮೆ ಬೆಳೆಗಾರರು ತೀವ್ರ ಇಕ್ಕಿಟ್ಟಿಗೆ ಸಿಲುಕುವಂತಾಗಿದೆ. ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿದ್ದ ರೇಷ್ಮೆ ಬೆಳೆಗಾರರು ವರ್ಷದಿಂದ ಸುಧಾರಿಸಿಕೊಳ್ಳುವತ್ತಾ ಹೆಜ್ಜೆ ಹಾಕಿದರೂ ವರ್ಷದಿಂದ ಎಡಬಿಡೇ ಕಾಡುತ್ತಿರುವ ಮಳೆ ಹಾಗೂ ಹವಮಾನ ವೈಪರಿತ್ಯದಿಂದ ಹಿಪ್ಪು ನೇರಳೆ ಸೊಪ್ಪಿಗೆ ಕೆಂಪುತಲೆ ಹುಳುಗಳ ಕಾಟ ಆರಂಭವಾಗಿದೆ.
ರೇಷ್ಮೆ ಹುಳು ಸಾಕಾಣಿಗೆ ಬೇಕಾದ ಸೊಪ್ಪನ್ನು ನಾಶಪಡಿಸುತ್ತಿರುವುದರಿಂದ ಬೆಳೆಗಾರರು ಸೊಪ್ಪಿನ ರಕ್ಷಣೆಗೆ ಪರದಾಡಬೇಕಾಗಿದೆ. ಇತ್ತೀಚೆಗೆ ಅಂತೂ ಜಿಲ್ಲೆಯಲ್ಲಿ ಕೆಂಪುತಲೆ ಹುಳುಗಳ ಕಾಟ ವಿಪರೀತವಾಗಿದ್ದು ಎಷ್ಟೇ ಜೋಪಾನವಾಗಿ ರೈತರು ಹಿಪ್ಪು ನೇರಳೆ ಸೊಪ್ಪನ್ನು ರಕ್ಷಿಸಿಕೊಂಡರೂ ಬಂದರೂ ಚಳಿಗಾಲ ಅಥವ ಮೂಡಕವಿದ ವಾತಾವರಣ ಉಂಟಾಗುತ್ತಿದ್ದಂತೆ ಈ ಹುಳುಗಳ ಕಾಟ ಶುರುವಾಗಿ ರೇಷ್ಮೆ ಉತ್ಪಾದನೆಗೆ ಗುಣಮಟ್ಟದ ಸೊಪ್ಪಿಗಾಗಿ ಅನ್ನದಾತರು ಅಲೆದಾಡುವಂತಾಗಿದೆ. ಕೃಷಿ ವಿಜ್ಞಾನಿಗಳು ಹೇಳುವ ಪರಿಹಾರ ಮಾರ್ಗಗಳನ್ನು ಅನುಸರಿಸಿದರೂ ಔಷಧ ಸಿಂಪಡಣೆಗೆ ಸಾವಿರಗಟ್ಟಲೇ ಹಣ ಬೇಕಿದೆ. ಇದು ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
ರೇಷ್ಮೆ ಬೆಳೆಗಾರರ ಬೇಡಿಕೆಗೆ ಸ್ಪಂದಿಸಿ
ಜಿಲ್ಲೆಯ ರೇಷ್ಮೆ ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಬೇಕೆಂದು ಕೋರಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯಕರ್ತರು ಸೋಮವಾರ ಬೆಂಗಳೂರಿನ ರೇಷ್ಮೆ ಕೃಷಿ ಆಯುಕ್ತರ ಕಚೇರಿಯಲ್ಲಿ ಉಪ ಆಯುಕ್ತ ನಾಗಭೂಷಣ್‌ಗೆ ಮನವಿ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ನೇತೃತ್ವದ ಜಿಲ್ಲೆಯ ರೇಷ್ಮೆ ಬೆಳೆಗಾರರ ನಿಯೋಗ ಉಪ ಆಯುಕ್ತರನ್ನು ಭೇಟಿ ಮಾಡಿ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ಪ್ರತಿ 7 ವರ್ಷಕ್ಕೊಮ್ಮೆ ರೈತರಿಗೆ ಹೊಸದಾಗಿ ಹನಿ ನೀರಾವರಿ ಸಾಮಗ್ರಿಗಳನ್ನು ನೀಡುತ್ತಿದ್ದು, ಇದಕ್ಕೆ ರೇಷ್ಮೆ ಬೆಳೆಗಾರರನ್ನು ಪರಿಗಣಿಸಬೇಕೆಂದು ಮನವಿ ಮಾಡಿದರು.
ಸರ್ಕಾರ ರೇಷ್ಮೆ ಕೃಷಿಯಲ್ಲಿ ತೊಡಗಿರುವ ರೈತರಿಗೆ ಹಿಪ್ಪುನೇರಳೆ, ಸೊಪ್ಪು ಕಟಾವು ಮಾಡುವ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ನೀಡಬೇಕು, ರೇಷ್ಮೆ ಬೆಳೆಯುವ ಎಲ್ಲಾ ರೈತರಿಗೆ ಯಾವುದೇ ಜಾತಿ, ಭೇಧ ಮಾಡದೇ ಪ್ರೋತ್ಸಾಹ ಧನ ನೀಡಬೇಕು, ರೇಷ್ಮೆ ಹುಳು ಸಾಕಾಣಿಕೆ ಮನೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು, ರೇಷ್ಮೆ ಚಾಕಿ ಹುಳುಗಳ ದುಬಾರಿ ಆಗಿದ್ದು ಬೆಲೆ ನಿಯಂತ್ರಣದಲ್ಲಿ ಇಡಬೇಕು, ರೇಷ್ಮೆ ಸೊಪ್ಪಿಗೆ ಬರುವ ರೋಗ ನಿಯಂತ್ರಣಕ್ಕೆ ಬಳಸುವ ಔಷಧಿಗಳ ಹಾಗೂ ಕೀಟನಾಶಕಗಳನ್ನು ರೈತರಿಗೆ ಶೇ.90 ರಷ್ಟುರಿಯಾಯಿತಿ ದರದಲ್ಲಿ ಮಾರಾಟ ಮಾಡಬೇಕು, ಕಾಲಕಾಲಕ್ಕೆ ರೇಷ್ಮೆ ಕೃಷಿ ಬಗ್ಗೆ ತಜ್ಞರಿಂದ ಬೆಳೆಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ ರೇಷ್ಮೆ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕೆಂದು ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದರು.