ಹುಕ್ಕೇರಿ: ಕಾಮದಾಹ ತೀರಿಸಿಕೊಳ್ಳಲು ಮಗನನ್ನೇ ಕೊಂದ ತಾಯಿ!

By Suvarna NewsFirst Published Dec 15, 2019, 10:25 AM IST
Highlights

ಅನೈತಿಕ ಸಂಬಂಧ ತಿಳಿದುಕೊಂಡಿದ್ದ ಮಗನನ್ನೇ ಹೆತ್ತ ತಾಯಿಯೊಬ್ಬಳು ಹತ್ಯೆ ಮಾಡಿದ್ದಾಳೆ| ಇವಳ ಅಕ್ರಮ ಸಂಬಂಧದ ಮಾಹಿತಿ ಇದ್ದ ತನ್ನ ಮಹಿಳೆಯೊಬ್ಬಳನ್ನೇ ಬೆಂಕಿ ಹಚ್ಚಿ ಸುಟ್ಟ ಮಹಿಳೆ| ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನಡೆದ ಘಟನೆ|

ಹುಕ್ಕೇರಿ(ಡಿ.15): ತನ್ನ ಅನೈತಿಕ ಸಂಬಂಧ ತಿಳಿದುಕೊಂಡಿದ್ದ ಮಗನನ್ನೇ ಹೆತ್ತ ತಾಯಿಯೊಬ್ಬಳು ಬಾವಿಗೆ ದೂಡಿ ಹತ್ಯೆ ಮಾಡಿದ್ದಾಳೆ. ಮಾತ್ರವಲ್ಲ, ಇವಳ ಅಕ್ರಮ ಸಂಬಂಧದ ಮಾಹಿತಿ ಇದ್ದ ತನ್ನ ಮಹಿಳೆಯೊಬ್ಬಳನ್ನೇ ಬೆಂಕಿ ಹಚ್ಚಿ ಸುಟ್ಟಿದ್ದವಳನ್ನು ಪೊಲೀಸರು ಬಂಧಿಸಿದ್ದಾರೆ. 

ಈಕೆಯ ಕೃತ್ಯಕ್ಕೆ ಸಹಕಾರ ನೀಡಿದ ಆಕೆಯ ಪ್ರಿಯಕರನನ್ನೂ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ಸುಧಾ ಸುರೇಶ ಕರಿಗಾರ ಹಾಗೂ ರಮೇಶ ಕೆಂಚಪ್ಪ ಬಸ್ತವಾಡ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. 

ಸೀಮೆಎಣ್ಣೆ ಸುಟ್ಟು ಕೊಂದಳು: 

ಬೆಲ್ಲದ ಬಾಗೇವಾಡಿಯ ಸುರೇಶನೊಂದಿಗೆ ಸುಧಾ ವಿವಾಹವಾಗಿದ್ದಳು. ಜತೆಗೆ ಅದೇ ಗ್ರಾಮದ ರಮೇಶ ಬಸ್ತವಾಡ ಎಂಬಾತ ನೊಂದಿಗೆ ಈಕೆಯ ಅಕ್ರಮ ಸಂಬಂಧವಿತ್ತು. ಈ ವಿಚಾರ ಭಾಗ್ಯಶ್ರೀ ಎಂಬಾಕೆಗೆ ಗೊತ್ತಾಗಿದೆ. ಹೀಗಾಗಿ ಆಕೆ ಇವಳ ಪತಿಗೆ ಮಾಹಿತಿ ನೀಡಿದ್ದಾಳೆ. ಆಗ ಪತಿಯು ಸುಧಾಳಿಗೆ ತನ್ನ ನಡತೆ ತಿದ್ದಿಕೊಳ್ಳುವಂತೆ ಹೇಳಿದ್ದಾನೆ. ಇದರಿಂದ ಸುಧಾಳು ಭಾಗ್ಯಶ್ರೀ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾಳೆ. ಅದರಂತೆ ಡಿ.8ರಂದು ಮನೆಯಲ್ಲಿ ಭಾಗ್ಯಶ್ರೀ ಮತ್ತು ಸುಧಾ ಇಬ್ಬರೂ ಒಟ್ಟಿಗೆ ಊಟ ಮಾಡಿಕೊಂಡು ಮಲಗಿದ್ದಾರೆ. ತಡರಾತ್ರಿ ದಿಢೀರನೆ ಎದ್ದ ಸುಧಾ ನಿದ್ದೆಗೆ ಜಾರಿದ್ದ ಭಾಗ್ಯಶ್ರೀ ಮೇಲೆ ಏಕಾಏಕಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾಳೆ. ಈ ಕೃತ್ಯಕ್ಕೆ ಸುಧಾ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ರಾಮ ಸಹ ಕುಮ್ಮಕ್ಕು ನೀಡಿದ್ದಾನೆಂದು ಪೊಲೀಸರು ತನಿಖೆಯಲ್ಲಿ ಗೊತ್ತಾಗಿದೆ. 

ಮಗನನ್ನೇ ಕೊಂದ ಮಹಾಮಾರಿ: 

ತಾನು ಪರ ಪುರುಷನ ಜೊತೆಗೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಸುಧಾಳ ಪುತ್ರ ಪ್ರವೀಣನನಿಗೂ ಗೊತ್ತಿತ್ತು. ಈ ವಿಚಾರವನ್ನು ಎಲ್ಲಿ ತನ್ನ ಪತಿಗೆ ಆತ ತಿಳಿಸುತ್ತಾನೋ ಎಂದು ಹೆದರಿಕೊಂಡು ಆಗಾಗ ಅವನಿಗೆ ಸಮಾಧಾನಪಡಿಸಿದ್ದಾಳೆ. ಕೊನೆಗೆ ತನ್ನ ವಿಚಾರ ಗಂಡನಿಗೆ ಗೊತ್ತಾದರೆ ಬದುಕು ಮೂರಾಬಟ್ಟೆಯಾಗುತ್ತದೆ ಎಂದು ಹೆದರಿ ಅಕ್ಟೋಬರ್ 22, 2019 ರಂದೇ ತನ್ನ ಪುತ್ರನನ್ನು ಬಾವಿ ಹತ್ತಿರ ಕರೆದುಕೊಂಡು ಬಂದು ಅದರಲ್ಲಿ ತಳ್ಳಿದ್ದಾಳೆ. ಆಗ ಅವನು ಅದರಲ್ಲಿ ಒದ್ದಾಡಿ ಅಸುನೀಗಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವಿಚಾರವನ್ನೂ ಆಕೆ ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ. ಈ ಕುರಿತು ಸುರೇಶ ಕರಿಗಾರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣದ ಬೆನ್ನು ಹತ್ತಿದ್ದ ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಹುಕ್ಕೇರಿ ಪಿಎಸ್‌ಐ ನೇತೃತ್ವದ 18 ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪ್ರಕರಣ ಬೇಧಿಸಿದ ತಂಡಕ್ಕೆ ಪೊಲೀಸ್ ವರಿಷ್ಠಾಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ. 
 

click me!