ಕೊರಟಗೆರೆ (ಮೇ.26): ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತಮ್ಮ ತಂಡದೊಂದಿಗೆ ರೆಡ್ ಝೋನ್ , ಹಾಟ್ ಸ್ಪಾಟ್ ಪ್ರದೇಶಗಳಿಗೆ ಭೇಟಿ ನೀಡಿ ಕೊರೋನಾ ಸೋಂಕಿತರಿಗೆ ಆತ್ಮಬಲ ತುಂಬುವ ಮೂಲಕ ಅರಿವು ಮೂಡಿಸುತ್ತಿದ್ದಾರೆ.
ತಾಲೂಕಿನ ಜೆಟ್ಟಿ ಅಗ್ರಹಾರ, ತೀತಾಮ ನೀಲಗೊಂಡನಹಳ್ಳಿ, ಎಲೆರಾಂಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರೋನಾ ರೆಡ್ ಝೋನ್ ಹಾಗೂ ಹಾಟ್ ಸ್ಪಾಟ್ ಗ್ರಾಮದ 25ಕ್ಕೂ ಅಧಿಕ ಕೊರೋನಾ ಸೋಂಕಿತರ ಮನೆಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಪ್ರತಿನಿತ್ಯ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ, ಅಂಗನವಾಡಿ, ಆಶಾ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ತುಮಕೂರು : ಇಳಿಕೆಯತ್ತ ಸಾಗಿದ ಕೊರೋನಾ .
ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾತನಾಡಿ ಕೊರೋನಾ ರೋಗ ಹರಡದಂತೆ ತಡೆಗಟ್ಟಲು ರೆಡ್ ಝೋನ್ ಮತ್ತು ಹಾಟ್ ಸ್ಪಾಟ್ ಎಂದು ಗುರುತಿಸಿ ತುರ್ತು ಆರೋಗ್ಯ ಸೇವೆಗೆ ಸೂಚಿಸಲಾಗಿದೆ. ಪಾಸಿಟಿವ್ ಬಂದ 24 ಗಂಟೆಯೊಳಗೆ ಜೀವ ರಕ್ಷಕ ಸೌಲಭ್ಯ ನಿಡುತ್ತೇವೆ. ಆಮ್ಲಜನಕ ಕಡಿಮೆಯಾಗಿ ಆಸ್ಪತ್ರೆ ದಾಖಲಾಗುವ ಪ್ರಕರಣ ಕಡಿಮೆಯಾಗುತ್ತಿದೆ ಎಂದರು.
ತುಮಕೂರು ಜಿಲ್ಲಾಡಳಿತ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಜಂಟಿಯಾಗಿ ಕೋವಿಡ್- 19 ತಡೆಗಟ್ಟುವ ನಿಟ್ಟಿನಲ್ಲಿ ಹಳ್ಳಿಗಳ ಮಟ್ಟದಲ್ಲಿ ಕೋವಿಡ್-19 ಟಾಸ್ಕ್ ಫೋರ್ಸ್ ರಚಿಸಿ Covid Redzone & Hotspot ಗಳಿಗೆ ಭೇಟಿ ನೀಡುವ ಮೂಲಕ ಹಾಗೂ ಸಭೆ ನಡೆಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. pic.twitter.com/rhYxrePhWS
— SP Tumkur (@SPTumkur)ಜನಸಾಮಾನ್ಯರು ಭಯಪಡದೆ ಧೈರ್ಯದಿಂದ ಕೊರೋನಾ ರೋಗದ ವಿರುದ್ದ ಎಲ್ಲರೂ ಒಂದಾಗಿ ಹೋರಾಟ ಮಾಡಬೇಕು ಎಂದರು.
ಕೊರಟಗೆರೆ ಟಾಸ್ಕ್ಫೋರ್ಸ್ ಆರೋಗ್ಯ ಇಲಾಖೆ ಗ್ರಾಪಂ, ಅಂಗನವಾಡಿ, ಆಶಾ ಪಡೆ ಇನ್ನೂ ಸಫಲವಾಗಿ ಕೆಲಸ ಮಾಡಿದರೆ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿಯಲಿದೆ ಎಂದರು.