ಶಿಕ್ಷಣದ ವ್ಯಾಪಾರೀಕರಣ ನೀತಿಯಿಂದ ಭವಿಷ್ಯದಲ್ಲಿ ನಿರ್ಮಿಸಬೇಕಾದ ಪ್ರಸಿದ್ಧ ಕರ್ನಾಟಕ ಕಲಾ ಮಹಾವಿದ್ಯಾಲಯವೇ ಹಗಲು ದರೋಡೆ ಇಳಿದಿದೆ ಇದರಿಂದ ಪಾಲಕರು ಮತ್ತು ಪೋಷಕರ ಜೇಬಿಗೆ ಕತ್ತರಿ ಬಿದ್ದಿದೆ 2024_25ನೇ ಶೈಕ್ಷಣಿಕ ವರ್ಷ ಕಾರ್ಯಾರಂಭಿಸಿದೆ ಪ್ರವೇಶ ಪ್ರಕ್ರಿಯೆ ನಡೆದಿದೆ.
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ (ಜು.18): ಶಿಕ್ಷಣದ ವ್ಯಾಪಾರೀಕರಣ ನೀತಿಯಿಂದ ಭವಿಷ್ಯದಲ್ಲಿ ನಿರ್ಮಿಸಬೇಕಾದ ಪ್ರಸಿದ್ಧ ಕರ್ನಾಟಕ ಕಲಾ ಮಹಾವಿದ್ಯಾಲಯವೇ ಹಗಲು ದರೋಡೆ ಇಳಿದಿದೆ ಇದರಿಂದ ಪಾಲಕರು ಮತ್ತು ಪೋಷಕರ ಜೇಬಿಗೆ ಕತ್ತರಿ ಬಿದ್ದಿದೆ 2024_25ನೇ ಶೈಕ್ಷಣಿಕ ವರ್ಷ ಕಾರ್ಯಾರಂಭಿಸಿದೆ ಪ್ರವೇಶ ಪ್ರಕ್ರಿಯೆ ನಡೆದಿದೆ. ಕರ್ನಾಟಕ ಕಾಲೇಜು ಬಿಎ ಪದವಿ ಪ್ರಥಮ ವರ್ಷದ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಸಾವಿರಾರು ರೂಪಾಯಿ ಹೆಚ್ಚುವರಿ ಶುಲ್ಕ ವಸೂಲಾತಿಗೆ ಇಳಿದಿದೆ.
ರಾಯಚೂರು, ಕೊಪ್ಪಳ, ಯಾದಗಿರಿ, ಗದಗ, ಹಾವೇರಿ ಬಾಗಲಕೋಟಿ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರಿಸಿ ಧಾರವಾಡದ ಕರ್ನಾಟಕ ಮಹಾವಿದ್ಯಾಲಯಕ್ಕೆ ಬರುವುದು ವಿಶೇಷ. ಇದನ್ನೇ ಬಂಡವಾಳ ಮಾಡಿಕೊಂಡ ಕೆಸಿಡಿ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ವಸೂಲಿಗೆ ಇಳಿದಿದೆ. ಹೆಚ್ಚಿನ ಶುಲ್ಕ ಬಗ್ಗೆ ಪ್ರಶ್ನಿಸುವ ವಿದ್ಯಾರ್ಥಿಗಳಿಗೆ ಕೆಸಿಡಿ, ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಡೆಗೆ ಬೊಟ್ಟು ಮಾಡುತ್ತಿದೆ.ಇನ್ನೂ ಕವಿವಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.ನಿರ್ವಹಣೆ ದುಸ್ತರವಾಗಿದೆ.
ಈ ಕಾರಣಕ್ಕೆ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಶೇ.25 ಶುಲ್ಕ ಹೆಚ್ಚಿಸಿದ ಹಾಗೂ ಅನುದಾನ ನೀಡಿದ ಸರ್ಕಾರದ ಕಡೆಗೆ ಕವಿವಿಯ ಆಡಳಿತ ಮಂಡಳಿ ತೋರಬೆರಳು,ಅರ್ಜಿ ಶುಲ್ಕ, ಪರೀಕ್ಷೆ ಶುಲ್ಕ, ಬೋಧನೆ, ಅಭಿವೃದ್ಧಿ, ಕ್ರೀಡೆ, ಗ್ರಂಥಾಲಯ ಮತ್ತು ಲ್ಯಾಬ್ ಹೀಗೆ ವಿವಿಧ ಶುಲ್ಕದ ಹೆಸರಿನಲ್ಲಿ ಸಾವಿರಾರು ರೂಪಾಯಿ ಹಣ ಪೀಕುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಂದ ಗಂಭೀರ ಆರೋಪವೂ ಸಹ ಕೇಳಿಬಂದಿದೆ. ಕೆಸಿಡಿಯಲ್ಲಿ ಪದವಿಗೆ 360 ಸಾಮಾನ್ಯ ಸೀಟುಗಳಿವೆ ಆದರೆ ಅವುಗಳನ್ನು ಮುಚ್ಚಿಟ್ಟ ಆಡಳಿತ ಮಂಡಳಿ, ಮಂಗಳವಾರದ ಪ್ರವೇಶ ಕೌನ್ಸಲಿಂಗ್ ವೇಳೆ ಹೆಚ್ಚಿನ ಶುಲ್ಕದಡಿ ಪ್ರವೇಶ ಪಡೆಯಲು ವಿದ್ಯಾರ್ಥಿಗೆ ಹೇಳಿದ್ದು ನಾಚಿಗೇಡಿನ ಸಂಗತಿ.
ಎಚ್‌ಡಿಕೆ ಕಾವೇರಿ ಸಮಸ್ಯೆ ಪರಿಹರಿಸಿದರೆ ನಾನು ಮುಂದಿನ ಚುನಾವಣೆಗೇ ನಿಲ್ಲಲ್ಲ: ಸಚಿವ ಚಲುವರಾಯಸ್ವಾಮಿ
ಹೆಚ್ಚುವರಿ ಶುಲ್ಕ ವಸೂಲಿ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದ ಹಿನ್ನಲೆ ಪ್ರವೇಶ ಕೌನ್ಸಲಿಂಗ್ ತಾತ್ಕಾಲಿಕ ಸ್ಥಗಿತಗೊಳಿಸಿದೆ ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣ ನೀತಿಯಿಂದ ಪಾಲಕರು ಮತ್ತು ವಿದ್ಯಾರ್ಥಿಗಳು ಹೌಹಾರಿದ್ದಾರೆ ವಿದ್ಯಾರ್ಥಿಗಳ ಭವ್ಯ ಭವಿಷ್ಯ ರೂಪಿಸಬೇಕಾದ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯಗಳೇ ಹಣ ಸುಲಿಗೆಗೆ ಇಳಿದರೆ "ಬೇಲಿಯೇ ಎದ್ದು ಹೊಲ ಮೇಯಿದಂತೆ' ಆಗಲಿದೆ. ಕೆಸಿಡಿ ಹಣ ವಸೂಲಿಗೆ ಕಡಿವಾಣ ಹಾಕಲಿದೆಯೇ ಕಾದುನೋಡಬೇಕಿದೆ. ಪದವಿ ಪ್ರವೇಶಕ್ಕೆ ಶೇ 97 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ಕಟ್ಟುವಂತೆ ತಿಳಿಸುವುದು ಅಸಹ್ಯ ಹೆಚ್ಚುವರಿ ಶುಲ್ಕ ನೀತಿ ಕೈಬಿಡಬೇಕು ಎಂದು ಪೋಷಕರು ಮತ್ತು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.