Uttara Kannada: ಸರ್ಕಾರದ ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪಾಳು ಬೀಳುತ್ತಿವೆ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ!

Published : Jun 29, 2023, 11:21 PM IST
Uttara Kannada: ಸರ್ಕಾರದ ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪಾಳು ಬೀಳುತ್ತಿವೆ ಸಾವಿರಾರು ಹೆಕ್ಟೇರ್ ಕೃಷಿ ಭೂಮಿ!

ಸಾರಾಂಶ

ರಾಜ್ಯ ಸರ್ಕಾರ ಬಡವರ ಅನುಕೂಲಕ್ಕಾಗಿ  ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆ, ಅನ್ನಭಾಗ್ಯ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ದಿನದ ಕೂಲಿಗಾಗಿ ದುಡಿಮೆ ನಂಬಿದ್ದವರು ಇದೀಗ ತಮ್ಮ ಕೆಲಸಗಳಿಂದ ವಿಮುಖರಾಗುತ್ತಿರುವ ಆತಂಕ ಸೃಷ್ಠಿಯಾಗಿದೆ. 

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.29): ರಾಜ್ಯ ಸರ್ಕಾರ ಬಡವರ ಅನುಕೂಲಕ್ಕಾಗಿ  ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆ, ಅನ್ನಭಾಗ್ಯ ಹೀಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ದಿನದ ಕೂಲಿಗಾಗಿ ದುಡಿಮೆ ನಂಬಿದ್ದವರು ಇದೀಗ ತಮ್ಮ ಕೆಲಸಗಳಿಂದ ವಿಮುಖರಾಗುತ್ತಿರುವ ಆತಂಕ ಸೃಷ್ಠಿಯಾಗಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಯಿಂದ ಜನರು ವಿಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1ಲಕ್ಷದ 25 ಸಾವಿರ ಹೆಕ್ಟೇರ್ ಕೃಷಿ ಭೂಮಿಯಲ್ಲಿ ತೋಟಗಾರಿಕಾ ಬೆಳೆ ಹಾಗೂ ಭತ್ತ ಬೆಳೆಯುತ್ತಾರೆ. ಇದರಲ್ಲಿ 66 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತ, ಜೋಳ,ಕಬ್ಬು ಬೆಳೆಯುತಿದ್ದರು. 

ಆದರೆ, ಈ ಬಾರಿ ಭತ್ತ ಬೆಳೆಯಬೇಕಿದ್ದ 7 ಸಾವಿರ ಹೆಕ್ಟೇರ್ ಭೂ ಭಾಗ ಖಾಲಿ ಬಿಡಲಾಗಿದೆ‌. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 7% ಹೆಚ್ಚು ಕೃಷಿ ಭೂಮಿ ಪಾಳು ಬಿಡಲಾಗಿದೆ. ಜಿಲ್ಲೆಯಲ್ಲಿ ಕಾರವಾರ ತಾಲೂಕು ಒಂದರಲ್ಲೇ 2 ಸಾವಿರ ಹೆಕ್ಟೇರ್ ಭತ್ತದ ಕೃಷಿ ಭೂಮಿ ಪಾಳು ಬಿಡಲಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. ಈ ಹಿಂದೆ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಗೇಣಿಗೆ ಪಡೆದು ಭತ್ತ ಬೆಳೆಯುತ್ತಿದ್ದರು. ಇನ್ನು ಕೂಲಿ ಕೆಲಸಕ್ಕೂ ಉತ್ತರ ಕರ್ನಾಟಕ ಭಾಗದವರು ಆಗಮಿಸುತಿದ್ದರಿಂದ ಮಳೆಗಾಲದಲ್ಲಿ ಭತ್ತ ನಾಟಿ ಮಾಡಲಾಗುತಿತ್ತು. 

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಆದರೆ, ಈ ಬಾರಿ ಜಿಲ್ಲೆಯ ಬಹುತೇಕ ಭಾಗದಲ್ಲಿ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಕೂಲಿ ಕಾರ್ಮಿಕ ಮಹಿಳೆಯರು ಶಕ್ತಿ ಯೋಜನೆ ಹಾಗೂ ಗೃಹ ಲಕ್ಷ್ಮಿ ಯೋಜನೆ ಪಡೆದುಕೊಳ್ಳುವುದರಲ್ಲಿ ನಿರತರಾದರೇ ಪುರುಷ ಕಾರ್ಮಿಕರು ಕೆಲಸದಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಎದುರಾಗಿದೆ. ಯುವ ಪೀಳಿಗೆಯವರಂತೂ ಕೃಷಿ ಬಗ್ಗೆ ಆಸಕ್ತಿ ತೋರದೇ ನಗರ ಪ್ರದೇಶದತ್ತ ಮುಖ ಮಾಡಿರುವ ಕಾರಣ ಇನ್ನೂ ದೊಡ್ಡ ಹೊಡೆತ ಬೀಳುವಂತಾಗಿದ್ದು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಬಂಜರಾಗಿದೆ. 

ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ

ಸರ್ಕಾರ ಈಗಲೇ ಜನರಿಗೆ ರೇಷನ್ ನೀಡಲು ಅಕ್ಕಿಯ ಕೊರತೆ ಎದುರಿಸುತ್ತಿದ್ದು, ಕೃಷಿಕರಿಗೆ ಪ್ರೋತ್ಸಾಹ ನೀಡುವಂತಹ ಯೋಜನೆ ಜಾರಿಮಾಡಬೇಕೆಂದು ಜನರ ಆಗ್ರಹ. ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಯ ಸೈಡ್ ಎ ಇಫೆಕ್ಟ್ ನಿಂದ  ಉತ್ತರಕನ್ನಡ ಜಿಲ್ಲೆಯಲ್ಲಿ  ಕೃಷಿ  ಮಾಡುವ ಆಸಕ್ತಿಯನ್ನೇ ರೈತರು, ಕೂಲಿಕಾರ್ಮಿಕರು ಕಳೆದುಕೊಂಡಿದ್ದು, ಭತ್ತ ಬೆಳೆಯುವ ಗ್ಯಾರಂಟಿಯೇ ಇಲ್ಲದಂತಾಗಿದೆ. ಇನ್ನಾದರೂ ಸರ್ಕಾರ ರೈತರು ಕೃಷಿಯಿಂದ ವಿಮುಖರಾಗದಂತೆ ಪ್ರೋತ್ಸಾಹಿಸುವ ಯೋಜನೆ ಜಾರಿಗೊಳಿಸಿದರೆ ಸರಕಾರ ನೀಡಿದ್ದ ಮಾತನ್ನು ಉಳಿಸಿಕೊಳ್ಳಬಹುದಾಗಿದೆ.

PREV
Read more Articles on
click me!

Recommended Stories

ರಾಜ್ಯದಲ್ಲಿ ಅಂತರ್ಜಾತಿ ವಿವಾಹ ಹೆಚ್ಚಾಗಬೇಕು, ಆದ್ರೆ ಒಂದರಿಂದ 2 ಮಕ್ಕಳನ್ನ ಮಾಡಿಕೊಳ್ಳಿ; ಸಿಎಂ ಸಿದ್ದರಾಮಯ್ಯ
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ