ಅನ್ನದಾತರನ್ನು ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇವೆ. ಒಂದೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಸಾಲ ಸೋಲ ಮಾಡಿ ಭತ್ತ ನಾಟಿ ಮಾಡಿದ ರೈತರು ಭತ್ತ ಕಟಾವು ಮಾಡಲಾಗದೆ ಒಣಗಿ ಉದುರಿ ಹೋಗುತ್ತಿರುವ ಭತ್ತ, ಜೊತೆಗೆ ಮಾರುಕಟ್ಟೆ ಸಮಸ್ಯೆ ಎದುರಿಸುವಂತಾಗಿದೆ.
ವರದಿ: ಪುಟ್ಟರಾಜು. ಆರ್.ಸಿ.ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಡಿ.23): ಅನ್ನದಾತರನ್ನು ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇವೆ. ಒಂದೆಡೆ ಅಕಾಲಿಕ ಮಳೆ, ಮತ್ತೊಂದೆಡೆ ಸಾಲ ಸೋಲ ಮಾಡಿ ಭತ್ತ ನಾಟಿ ಮಾಡಿದ ರೈತರು ಭತ್ತ ಕಟಾವು ಮಾಡಲಾಗದೆ ಒಣಗಿ ಉದುರಿ ಹೋಗುತ್ತಿರುವ ಭತ್ತ, ಜೊತೆಗೆ ಮಾರುಕಟ್ಟೆ ಸಮಸ್ಯೆ ಎದುರಿಸುವಂತಾಗಿದೆ. ಅದೇನು ಅಂತೀರಾ ಈ ಸ್ಟೋರಿ ನೋಡಿ.. ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ಹಾಗು ಯಳಂದೂರು ತಾಲೂಕುಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಸಾಲ ಸೋಲ ಮಾಡಿದ ರೈತರು ಬೆವರು ಸುರಿಸಿ ಭತ್ತ ಬೆಳೆದ ರೈತರೇನೋ ತುಂಬಾ ಖುಷಿಯಿಂದಿದ್ದರು.
undefined
ಆದರೆ ಈಗ ಹೊಸ ಸಮಸ್ಯೆಯೊಂದು ಎದುರಾಗಿದೆ. ಭತ್ತ ಕಟಾವು ಮಾಡಲು ಸ್ಥಳೀಯವಾಗಿ ಕೂಲಿ ಕಾರ್ಮಿಕರು ಬರುತ್ತಿಲ್ಲ. ಪ್ರತಿ ಬಾರಿ ಪಕ್ಕದ ತಮಿಳುನಾಡು ರಾಜ್ಯದಿಂದ ನೂರಾರು ಸಂಖ್ಯೆಯ ಭತ್ತ ಕಟಾವು ಯಂತ್ರಗಳು ರಾಜ್ಯವನ್ನು ಪ್ರವೇಶಿಸುತ್ತಿದ್ದವು ಆದರೆ ಈ ಬಾರಿ ತಮಿಳುನಾಡಿನಿಂದ ಸಾಕಷ್ಟು ಯಂತ್ರಗಳು ಬಂದಿಲ್ಲ. ಹಾಗಾಗಿ ಭತ್ತದ ಬೆಳೆ ಒಣಗುತ್ತಿದ್ದು ರೈತರು ಭತ್ತ ಕಟಾವು ಮಾಡಲು ಪರದಾಡುವಂತಾಗಿದೆ.
ಒಂದೆಡೆ ಭತ್ತ ಒಣಗಿ ನೆಲಕ್ಕೆ ಉದುರುತ್ತಿದ್ದರೆ ಮತ್ತೋಂದೆಡೆ ಉಳಿದ ಭತ್ತವನ್ನಾದರು ಒಳ್ಳೆ ಬೆಲೆಗೆ ಮಾರಾಟ ಮಾಡೋಣ ಅಂದ್ರೆ ಸರ್ಕಾರದಿಂದಲು ಭತ್ತ ಖರೀದಿ ಕೇಂದ್ರ ತೆರೆದಿಲ್ಲ ಹಾಗಾಗಿ ಭತ್ತ ಬೆಳೆದ ರೈತರು ಕಣ್ಣೀರು ಹಾಕುವಂತಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಕೊಡುವ ಹಣವನ್ನಾದ್ರೂ ನಮಗೆ ನೀಡಿ ಭತ್ತ ಖರೀದಿಸಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 20 ದಿನಗಳ ಹಿಂದೆನೆ ಕಟಾವಿಗೆ ಬಂದಿರುವ ಭತ್ತದ ಕಟಾವಿನ ಸಮಸ್ಯೆ ಇದ್ದರೆ ಮತ್ತೊಂದೆಡೆ ಮಾರುಕಟ್ಟೆಯ ಸಮಸ್ಯೆಯು ರೈತರ ನ್ನು ಬಾಧಿಸುತ್ತಿದೆ. ಡಿಸೆಂಬರ್ ಮುಗಿಯುತ್ತಿದ್ದರೂ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಕೇಂದ್ರಗಳನ್ನು ತೆರೆದಿಲ್ಲ.
ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು?: ಪ್ರಾಣಿಗಳು ಸತ್ತರೆ ಮರಣೋತ್ತರ ಪರೀಕ್ಷೆ ಹೇಗೆ?
ಖಾಸಗಿ ವ್ಯಾಪಾರಿಗಳು ಕೇಳಿದಷ್ಟು ಬೆಲೆಗೆ ರೈತರು ಭತ್ತ ಮಾರಬೇಕಿದೆ. ಹಾಗಾಗಿ ಭತ್ತ ಬೆಳೆದಿರುವ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು ಆದಷ್ಟು ಬೇಗ ಸರ್ಕಾರ ಇತ್ತ ಗಮನ ಹರಿಸಿ ಈ ಭಾಗದಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಸಕಾಲದಲ್ಲಿ ಭತ್ತ ಕಟಾವು ಮಾಡಲಾಗದೆ ಹಾಗು ಖರೀದಿ ಕೇಂದ್ರಗಳಿಲ್ಲದೆ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಒಟ್ಟಾರೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಾಗಿದೆ.