ಹೆಬ್ಬಾಳೆ ಮುಳುಗಡೆ ಸೇತುವೆಗೆ ಮುಕ್ತಿ ಇಲ್ಲ, ಬೇಸಿಗೆ ಬಂದ್ರೂ ರಿಪೇರಿ ಭಾಗ್ಯವಿಲ್ಲ

By Suvarna News  |  First Published Mar 17, 2022, 7:54 PM IST

* ಕಳಸ-ಹೊರನಾಡು ಸಂಪರ್ಕ ಸೇತುವೆಗೆ ಮುಕ್ತಿ ಇಲ್ಲ
* ಮಳೆಗಾಲದಲ್ಲಿ ಹಲವು ಭಾರೀ ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆ
* ಚಿಕ್ಕಮಗಳೂರು ಜಿಲ್ಲೆಯ ಕಳಸದ ಹೆಬ್ಬಾಳೆ ಸೇತುವೆ


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 


ಚಿಕ್ಕಮಗಳೂರು, (ಮಾ.17): ಈ ಮಳೆಗಾಲ ಮುಗಿದ ಕೂಡಲೇ ಆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕ್ತೀವಿ ಅಂತಾ ಜನಪ್ರತಿನಿಧಿಗಳು, ಸರ್ಕಾರ ಹೇಳ್ತಾ ಬಂದು ಬರೋಬ್ಬರಿ 21 ವರ್ಷಗಳೇ ಕಳೆದಿವೆ. ಆದ್ರು ಆ ಕೂಡ ಆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಮಳೆಗಾಲದಲ್ಲಿ ದಿನಕ್ಕೆ ಲೆಕ್ಕವಿಲ್ಲದಷ್ಟು ಬಾರಿ ಮುಳುಗಡೆಯಾಗೋ ಆ ಸೇತುವೆಯಿಂದ ಅಲ್ಲಿಯ ಜನ ಅಲ್ಲೇ, ಇಲ್ಲಿಯ ಜನ ಇಲ್ಲೆ. ರಾಜಕಾರಣಿಗಳು, ಸರ್ಕಾರದ ಆಶ್ವಾಸನೆಯಿಂದ ಮಳೆಗಾಲದಲ್ಲಿ 10ಕ್ಕೂ ಹೆಚ್ಚು  ಭಾರೀ ಮುಳುಗಡೆಯಾಗಿದ್ದ  ಆ ಸಮಸ್ಯೆ ಇನ್ನು ಜೀವಂತವಾಗಿದೆ.

Latest Videos

undefined

ಹೌದು ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹೆಬ್ಬಾಳೆ ಸೇತುವೆ. ಮಳೆಗಾಲದಲ್ಲಿ ಈ ಸೇತುವೆ, ಸೇತುವೆಯಿಂದ ಮೂರ್ನಾಲ್ಕು ಅಡಿ ಎತ್ತರದಲ್ಲಿ ಹರಿಯೋ ನೀರಿನಿಂದ ದಿನಕ್ಕೆ ಎಷ್ಟು ಬಾರಿ ಮುಳುಗಡೆಯಾಗುತ್ತೋ ಗೊತ್ತಿಲ್ಲ. ಕಳೆದ 21 ವರ್ಷಗಳಿಂದ್ಲೂ ಮಳೆಗಾಲದಲ್ಲಿ ಇದು ನಿತ್ಯ ನಿರಂತರ. ಬೇಸಿಗೆಯಲ್ಲಿ ಇದರ ದುರಸ್ಥಿ ಕಾರ್ಯ ಮಾಡ್ತೇವೆ ಅಂತಾ ಜನಪ್ರತಿನಿಧಿ ಹಾಗೂ ಸರ್ಕಾರ 20 ವರ್ಷಗಳಿಂದ್ಲೂ ಹೇಳ್ತಾನೆ ಬರ್ತಿದ್ದಾರೆ. ಆದ್ರೆ, ಈವರೆಗೂ ಯಾರು ಅತ್ತ ತಲೆ ಹಾಕಿಲ್ಲ. 

Chikkamagaluru: ಭರವಸೆ ಮರೆತ ಸಚಿವರು, ಮನೆ ಕಳೆದುಕೊಂಡವರಿಗೆ ಮೂರು ವರ್ಷವಾದ್ರೂ ಮನೆ ಇಲ್ಲ!

ಈ ಸೇತುವೆ ಮುಳುಗಡೆಯಾದ್ರೆ, ಯಾವ ವಾಹನವೂ ಸಂಚರಿಸುವಂತಿಲ್ಲ. ಹೊರನಾಡಿನ ಅನ್ನಪೂರ್ಣೇಶ್ವರಿ ದೇಗುಲಕ್ಕೆ ಬರೋ ಹೊರ ರಾಜ್ಯ, ಜಿಲ್ಲೆಯ ವಾಹನಗಳು ರಾತ್ರಿ ವೇಳೆ, ಈ ಸೇತುವೆ ಮೇಲೆ ನೀರಲ್ಲಿ ತೊಯ್ದು ನಿಂತ ಉದಾಹರಣೆಗಳಿವೆ.ಕಳೆದ ಮಳೆಗಾಲ, ಈ ಭಾರಿಯೂ ಮಳೆಗಾದಲ್ಲೂ 10 ಭಾರೀ ಮುಳುಗಡೆಯಾಗಿದ್ದ ಹೆಬ್ಬಾಳೆ ಸೇತುವೆಯನ್ನು  ದುಸ್ಥಿರಯಾಗಲಿ , ಬದಲಿ ಸೇತುವೆ ನಿರ್ಮಾಣದ ಕಾರ್ಯ ಇನ್ನು ಭರವಸೆಯಾಗಿಯೇ ಉಳಿದ್ದು ಕಾರ್ಯರೂಪಕ್ಕೆ ಇನ್ನು ಬಂದಿಲ್ಲ ಎಂದು ಪ್ರಯಾಣಿಕರಾದ ರವಿ  ರೈ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಸೇತುವೆಗೆ ಯಾವುದೇ ತಡೆಗೋಡೆಗಳಿಲ್ಲ. ರಾತ್ರಿ ವೇಳೆ, ವಾಹನ ಸ್ವಲ್ಪ ಜಾರಿದ್ರು ಕೂಡ ನದಿ ಪಾಲಾಗೋದ್ರಲ್ಲಿ ಎರಡು ಮಾತಿಲ್ಲ. ಈ ಮಾರ್ಗವಾಗಿ ಹೊರನಾಡಿನ ಅನ್ನಪೂರ್ಣೇಶ್ವರಿ ದರ್ಶನ ಪಡೆಯೋಕೆ ಹೋಗೋ ಪ್ರವಾಸಿಗರೇ ಹೆಚ್ಚು. ರಸ್ತೆ ಹಾಗೂ ಕರ್ವ್ ಪರಿಚಯವಿರೋ ಚಾಲಕರಾದ್ರೆ ಓಕೆ. ಹೊಸಬರಾದ್ರೆ ಅಪಾಯ ಕಟ್ಟಿಟ್ಟ ಬುತ್ತಿ. 

ಈ ಮಾರ್ಗ ನೀರಿನಲ್ಲಿ ಮುಳುಗುದ್ರೆ ಸುಮಾರು 20 ರಿಂದ 25 ಕಿ.ಮೀ. ಮುಖಾಂತರ ಸುತ್ತಿಕೊಂಡು ದೇಗುಲಕ್ಕೆ ಹೋಗಬೇಕಾಗುತ್ತೆ. ಇಷ್ಟೂದ್ರೂ ಅಧಿಕಾರಿಗಳು ಮಾತ್ರ ಜಾಣ್ಮೆ ನಿದ್ದೆಗೆ ಜಾರಿದ್ದಾರೆ.ಈವರಗೂ ಸೇತುವೆಯನ್ನು ದುರಸ್ಥಿ ಪಡೆಸುವ ಕಾರ್ಯಕ್ಕೂ ಕೈ ಹಾಕಿದೇ ಇರುವುದು ಸ್ಥಳೀಯರಾದ ರಾಜೇಶೇಖರ್  ಆಕ್ರೋಶವನ್ನು ಹೊರಹಾಕಿದ್ದಾರೆ. 

ಒಟ್ಟಾರೆ, ಮಲೆನಾಡಲ್ಲಿ ಯತ್ತೇಚ್ಚವಾಗಿ ಸುರಿಯೋ ಮಳೆಯಿಂದ ಏಳೆಂಟು ತಿಂಗಳಕಾಲ ಸೇತುವೆ ಅಡಿಯಲ್ಲಿ ಶಾಂತಳಾಗಿ ಹರಿಯೋ ಭದ್ರೆ ಮಳೆಗಾಲದಲ್ಲಿ ಅಷ್ಟೆ ಮೇಲೆ ಅಷ್ಟೆ ವೇಗವಾಗಿ ಹರಿಯುತ್ತಾಳೆ. ಮುಂದೊಂದು ದಿನ ಮತ್ತೊಂದು ದೊಡ್ಡ ಅನಾಹುತವಾಗೋ ಮುನ್ನ ಸರ್ಕಾರ ಇತ್ತ ಗಮನ ಹರಿಸಿ ಭರವಸೆ ಮಾತುಗಳನ್ನು ಬಿಟ್ಟು ಈ ಸೇತುವೆಗೆ ತಡೆಗೋಡೆ ನಿರ್ಮಿಸಿ, ಸೇತುವೆಯನ್ನ ಎತ್ತರಿಸೋ ಕಾರ್ಯಕ್ಕೆ ಮುಂದಾಗ್ಲಿ ಅನ್ನೋದು ಎಲ್ಲರ ಆಶಯ.

click me!