Mysuru : ಉನ್ನತ ಶಿಕ್ಷಣದ ಪ್ರಮಾಣ ಶೇ.32ಕ್ಕೆ ಏರಿಸುವ ಗುರಿ

By Kannadaprabha News  |  First Published Dec 8, 2022, 5:15 AM IST

ಮೈಸೂರು ವಿವಿ ಸಿಎಸ್‌ಐಆರ್‌- ಯುಜಿಸಿ ನೆಟ್‌ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟಆಶ್ವಾಸನಾ ಕೋಶ, ಸಂಶೋಧನಾ ವಿದ್ವಾಂಸರ ಸಂಘವು ಪರಿಣಾಮಕಾರಿ ಪರಿಶೋಧನಾ ಲೇಖನ ರಚನೆ: ನೆನಪಿನಲ್ಲಿರಬೇಕಾದಂತಹ ಅಂಶಗಳು ಕುರಿತು ಕಾರ್ಯಾಗಾರ ಆಯೋಜಿಸಿತ್ತು.


  ಮೈಸೂರು (ಡಿ.08):  ಮೈಸೂರು ವಿವಿ ಸಿಎಸ್‌ಐಆರ್‌- ಯುಜಿಸಿ ನೆಟ್‌ ತರಬೇತಿ ಕೇಂದ್ರ, ಆಂತರಿಕ ಗುಣಮಟ್ಟಆಶ್ವಾಸನಾ ಕೋಶ, ಸಂಶೋಧನಾ ವಿದ್ವಾಂಸರ ಸಂಘವು ಪರಿಣಾಮಕಾರಿ ಪರಿಶೋಧನಾ ಲೇಖನ ರಚನೆ: ನೆನಪಿನಲ್ಲಿರಬೇಕಾದಂತಹ ಅಂಶಗಳು ಕುರಿತು ಕಾರ್ಯಾಗಾರ ಆಯೋಜಿಸಿತ್ತು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ(Mysuru)  ವಿವಿ ಹಂಗಾಮಿ ಕುಲಪತಿ ಪೊ›.ಎಚ್‌. ರಾಜಶೇಖರ್‌, ಭಾರತದಲ್ಲಿ (India)  ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕ್ಷಿಪ್ರ ಗತಿಯಲ್ಲಿ ಹೆಚ್ಚಾಗುತ್ತಿದ್ದು, 52,000ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ. ಈ ಮೂಲಕ ವಿಶ್ವದ ಉನ್ನತ ವ್ಯವಸ್ಥೆಯನ್ನು ಹೊಂದಿದೆ. ಆದರೂ ಅನೇಕ ಶಿಕ್ಷಣ ಮಹತ್ವಾಕಾಂಕ್ಷಿಗಳಿಗೆ ಉನ್ನತ ಶಿಕ್ಷಣ ಲಭ್ಯವಾಗುತ್ತಿಲ್ಲ. ಪ್ರಸ್ತುತ ಭಾರತದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಶೇ. 27.1 ರಷ್ಟಿದ್ದು, ಶೇ.32 ಪ್ರಮಾಣ ಸಾಧಿಸುವ ಗುರಿಯಿಂದ ಹಿಂದೆ ಉಳಿದಿದೆ ಎಂದು ತಿಳಿಸಿದರು.

Tap to resize

Latest Videos

ಭಾರತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನಿರಂತರವಾಗಿ ಶ್ರಮಿಸುತ್ತಿದ್ದು ಎನ್‌ಐಆರ್‌ಎಫ್‌, ಎನ್‌ಎಎಸಿ ಹಾಗೂ ಇತರೆ ರಾರ‍ಯಂಕಿಂಗ್‌ ಏಜೆನ್ಸಿಗಳು ಉನ್ನತ ಶಿಕ್ಷಣ ಸಂಸ್ಥೆಗಳು ಒದಗಿಸುತ್ತಿರುವ ಶಿಕ್ಷಣದ ಗುಣಮಟ್ಟದ ಮೇಲೆ ಪ್ರಭಾವ ಬೀರಿದೆ. ಪ್ರಕಟಣೆಗಳಲ್ಲಿ ಭಾರತ ವಿಶ್ವದಲ್ಲಿ 3ನೇ ಸ್ಥಾನದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಸಾಧನೆ ಅತ್ಯುತ್ತಮವಾಗಿರದಿದ್ದರೂ ಈ ಸವಾಲಿನ ಸನ್ನಿವೇಶದಲ್ಲಿ ಗಮನಾರ್ಹವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಳೆದ ವರ್ಷ ಮೈಸೂರು ವಿವಿ ನ್ಯಾಕ್‌ ವತಿಯಿಂದ ಎ’ ಶ್ರೇಣಿ ಲಭಿಸಿದ್ದು, ವಿಶ್ವವಿದ್ಯಾನಿಲಯಗಳ ಪೈಕಿ 33ನೇ ಶ್ರೇಯಾಂಕ ಪಡೆದುಕೊಂಡಿದೆ. ಈ ಮೂಲಕ ನಮ್ಮ ವಿವಿಯು ಕರ್ನಾಟಕದಲ್ಲಿ ಮೊದಲನೇ ಸ್ಥಾನದಲ್ಲಿದೆ. ನಮ್ಮ ವಿಶ್ವವಿದ್ಯಾನಿಲಯ ಇನ್ನೂ ಉತ್ತಮ ಸಾಧನೆ ಮಾಡಬಹುದಾಗಿತ್ತು. ಆದರೆ ಬೋಧಕರ ಕೊರತೆ ಹಾಗೂ ಸಂಶೋಧನಾ ಪರಿಣಾಮದ ಕೊರತೆಯಿಂದಾಗಿ ಸಾಧ್ಯವಾಗಿಲ್ಲ ಎಂದು ಅವರು ವಿವರಿಸಿದರು.

ಕೃತಿ ಚೌರ್ಯದ ಪರಿಣಾಮ ವ್ಯಕ್ತಿಗತ, ವೃತ್ತಿಪರ, ತಾತ್ವಿಕ ಹಾಗೂ ಕಾನೂನು ಈ ಪೈಕಿ ಯಾವುದಾದರೂ ಅಂಶಗಳ ಮೇಲೆ ಉಂಟಾಗಬಹುದು. ಕೃತಿಚೌರ್ಯ ಎಂದರೆ ತಿದ್ದಲಾಗದ ಸಮಸ್ಯೆ, ಅದರಲ್ಲಿಯೂ ವಿಶೇಷವಾಗಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಕೃತಿ ಚೌರ್ಯ ಎಂದರೆ ಮತ್ಯಾರದ್ದೋ ಕೆಲಸವನ್ನು ಅವರಿಗೆ ಮಾನ್ಯತೆ ನೀಡದೆ ಅದನ್ನು ಬಳಸಿಕೊಳ್ಳುವುದು ಎನ್ನಬಹುದು. ಶೈಕ್ಷಣಿಕ ಬರವಣಿಗೆ ಕ್ಷೇತ್ರದಲ್ಲಿ ಕೃತಿಚೌರ್ಯದಲ್ಲಿ, ಯಾವುದಾದರೂ ಒಂದು ಮೂಲದಿಂದ ಪದಗಳು, ಕಲ್ಪನೆಗಳು ಹಾಗೂ ಮಾಹಿತಿ ತೆಗೆದುಕೊಂಡು ಅದನ್ನು ಸರಿಯಾದ ಅರ್ಥ ಬಾರದಿರುವಂತೆ ಬಳಸಿಕೊಳ್ಳುವುದು ಎಂದು ಅವರು ವಿವರಿಸಿದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌. ರಂಗಪ್ಪ ಮಾತನಾಡಿ, ಬೋಧನೆಗೆ ಜೊತೆಗೆ ಸಂಶೋಧನೆಗೂ ಒತ್ತು ನೀಡಿ ಎಂದರು. ಅಲ್ಲದೇ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಬೇಕು. ಆಗ ಮಾತ್ರ ಕೃತಿಚೌರ್ಯ ಆಗಿದೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗುತ್ತದೆ ಎಂದರು.

ಐಎನ್‌ಎಸ್‌ಎ ಹಿರಿಯ ವಿಜ್ಞಾನಿ ಪೊ›.ಕೆ.ಆರ್‌. ಶಿವಣ್ಣ, ಕಲಾನಿಕಾಯ ಡೀನ್‌ ಪ್ರೊ. ಮುಜಾಫರ್‌ ಅಸಾದಿ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಡೀನ್‌ ಪೊ›.ಎಚ್‌.ಟಿ. ಬಸವರಾಜಪ್ಪ, ಕಾನೂನು ನಿಕಾಯ ಡೀನ್‌ ಟಿ.ಆರ್‌. ಮಾರುತಿ, ಶಿಕ್ಷಣ ನಿಕಾಯ ಡೀನ್‌ ಪೊ›.ಎಸ್‌. ಮದಿಅಳಗನ್‌, ಎಂಜಿನಿಯರಿಂಗ್‌ ನಿಕಾಯ ಡೀನ್‌ ಪೊ›.ಬಿ. ಶಂಕರ್‌, ಮೈಸೂರು ವಿವಿ ಐಕ್ಯೂಎಸಿ ನಿರ್ದೇಶಕ ಪ್ರೊ.ಕೆ.ಎನ್‌. ಅಮೃತೇಶ್‌ ಇದ್ದರು.

--ಪ್ರತಿಷ್ಠೆ ನಾಶ--

ಕೃತಿಚೌರ್ಯವು ವಿದ್ಯಾರ್ಥಿಯ ಪ್ರತಿಷ್ಠೆ, ವೃತ್ತಿಪರ ಪ್ರತಿಷ್ಠೆ, ಶಿಕ್ಷಣದ ಪ್ರತಿಷ್ಠೆಗಳು ನಾಶಗೊಳ್ಳುವುದಷ್ಟೇ ಅಲ್ಲದೆ, ಕಾನೂನು ಪರಿಣಾಮ ಹಾಗೂ ಹಣಕಾಸಿನ ಪರಿಣಾಮಗಳೂ ಉಂಟಾಗುತ್ತವೆ. ಪ್ರಬಂಧಗಳನ್ನು ಬರೆಯುವುದಕ್ಕೆ ಮುಂಚೆ ಕೃತಿಚೌರ್ಯದ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಅದನ್ನು ತಪ್ಪಿಸುವುದರ ಕುರಿತು ತಿಳಿದುಕೊಳ್ಳುವುದು ಅಗತ್ಯ ಎಂದು ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಎಚ್‌. ರಾಜಶೇಖರ್‌ ತಿಳಿಸಿದರು.

click me!