ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಗ್ಯಾಂಗ್ ರೇಪ್: ಇಬ್ಬರು ಕ್ಲಾಸ್‌ಮೇಟ್ಸ್ ಅರೆಸ್ಟ್

By Web Desk  |  First Published Jul 3, 2019, 2:03 PM IST

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಗ್ಯಾಂಗ್ ರೇಪ್| ಯುವತಿಗೆ ಗಾಂಜಾ ನೀಡಿ ಸಾಮೂಹಿಕ ಅತ್ಯಾಚಾರ‌| ವಿದ್ಯಾರ್ಥಿಗಳಿಂದ ಸಹಪಾಠಿಯ ಮೇಲೆ ಅತ್ಯಾಚಾರ| ಪ್ರಜ್ಞಾಹೀನ ಸ್ಥಿತಿಯಲ್ಲಿರುವ ವಿದ್ಯಾರ್ಥಿನಿ ಮೇಲೆ ಎರಗಿದ ಕ್ರಿಮಿಗಳು| ಇಬ್ಬರು ವಿದ್ಯಾರ್ಥಿಗಳ ಬಂಧನ


ಮಂಗಳೂರು[ಜು.03]: ವಿದ್ಯಾರ್ಥಿನಿಗೆ ಗಾಂಜಾ ತಿನ್ನಿಸಿದ ಸಹಪಾಠಿಗಳು, ಆಕೆ ಅರೆ ಪ್ರಜ್ಞಾವಸ್ಥೆ ತಲುಪಿದ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಖಾಸಗಿ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ತಮ್ಮ ಸಹಪಾಠಿಗೆ ಗಾಂಜಾ ತಿನ್ನಿಸಿದ್ದಾರೆ. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿಯನ್ನು ಕಾರು ಹತ್ತಿಸಿದ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇಷ್ಟೇ ಅಲ್ಲದೇ  ಇದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ವಿಡೀಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈಗಾಗಲೇ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ವಿದ್ಯಾರ್ಥಿಗಳ ಹುಡುಕಾಟ ಮುಂದುವರೆದಿದೆ.

ಪುತ್ತೂರಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್, 'ಕೃತ್ಯದಲ್ಲಿ ತೊಡಗಿರುವ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ಯಾರೂ ಈ ವೀಡಿಯೋವನ್ನು ಶೇರ್ ಮಾಡಬಾರದು. ಹಾಗೆ ಮಾಡುವುದು ಅಪರಾಧ' ಎಂದು ಎಚ್ಚರಿಸಿದ್ದಾರೆ.

ಪತ್ರಿಕಾ ಪ್ರಕಟಣೆ:

ಓರ್ವ ಹುಡುಗಿ ಜೊತೆ 3 ರಿಂದ 4 ಮಂದಿ ಹುಡುಗರು ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವೀಡಿಯೋ ಒಂದು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ಸುಮೋಟೊ ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಉಲ್ಲೇಖಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖಿತ ವೀಡಿಯೊಗಳನ್ನು ಅವರ ಫೋನ್ / ಕಂಪ್ಯೂಟರ್‌ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರ ಸದಸ್ಯರನ್ನು ಕೋರುತ್ತೇವೆ, ಹಾಗೆ ಮಾಡುವುದು ಐಪಿಸಿಯ 354 ಸಿ ಮತ್ತು 66 ಇ, ಐಟಿ ಕಾಯ್ದೆಯ 66 ಎ ಮತ್ತು ವ್ಯಕ್ತಿಗಳು (ಗುಂಪು ನಿರ್ವಾಹಕರು ಸೇರಿದಂತೆ) ಅಡಿಯಲ್ಲಿ ಅಪರಾಧವಾಗಿದೆ ಹೇಳಿದ ವಿಭಾಗಗಳ ಅಡಿಯಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು.

- ಎಸ್‌.ಪಿ, ದಕ್ಷಿಣ ಕನ್ನಡ

click me!