* ಗ್ರಾ.ಪಂ.ಗಳಿಂದ ಸೆಸ್ಕ್ ಗೆ ಲಕ್ಷಾಂತರ ರೂ ಬಿಲ್ ಬಾಕಿ.
* 35ಕ್ಕೂ ಹೆಚ್ಚು ಗ್ರಾ.ಪಂ.ನಲ್ಲಿ ಬೀದಿ ದೀಪದ ಕರೆಂಟ್ ಕಟ್
* ಗ್ರಾ.ಪಂ. ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕತ್ತಲಲ್ಲಿ ಜನರ ವಾಸ
ವರದಿ - ಪುಟ್ಟರಾಜು. ಆರ್.ಸಿ. ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ, (ಮಾ.31): ಚಾಮರಾಜನಗರದ(Chamarajnagara) ಬಹುತೇಕ ಗ್ರಾಮಗಳು ಕಗ್ಗತ್ತಲಿನಲ್ಲಿವೆ.ಮನೆಯಿಂದ ಹೊರಬೇಕಾದ್ರೆ ಬ್ಯಾಟರಿ ತರೋ ಪರಿಸ್ಥಿತಿ ಎದುರಾಗಿದೆ. ಸುಮಾರು 30 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬೀದಿ ದೀಪದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.ಇದರಿಂದ ಊರಿನ ಜಾತ್ರೆ, ಯುಗಾದಿ ಹಬ್ಬವನ್ನು ಗ್ರಾಮದಲ್ಲಿ ಕತ್ತಲಲ್ಲಿ ಆಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
undefined
ಹೌದು.. ಕರೆಂಟ್ ಬಿಲ್ (Light Bill) ಕಟ್ಟಲೂ ಸರ್ಕಾರದ ಬಳಿ ಹಣದ ಕೊರತೆಯಿದ್ಯಾ? ಅನ್ನೋ ಅನುಮಾನ ಮೂಡ್ತಿದೆ. ಈ ಕುರಿತ ಕಂಪ್ಲೀಟ್ ಡೀಟೈಲ್ ಇಲ್ಲಿದೆ.
ಚಾಮರಾಜನಗರ ಜಿಲ್ಲೆಯ 130 ಗ್ರಾಮ ಪಂಚಾಯಿತಿಗಳಿಂದ (Gram Panchayat) ಚೆಸ್ಕಾಂಗೆ9CESCOM) 39.56 ಕೋಟಿ ರೂ.ವಿದ್ಯುತ್ ಬಿಲ್ ಬರಬೇಕಿದೆ. 1994ರಿಂದ ಇಲ್ಲಿತನಕ ಬಿಲ್ ಕಟ್ಟದ ಪರಿಣಾಮ ಪ್ರತಿ ಗ್ರಾಪಂನಿಂದ 70 ರಿಂದ 80 ಲಕ್ಷ ರೂ. ವರೆಗೆ ಹಣ ಬರಬೇಕಿದ್ದು ಚೆಸ್ಕಾಂ ಈಗ ಗ್ರಾಪಂ ಹಾಗೂ ಬೀದಿ ದೀಪ ವಿದ್ಯುತ್ ಕಡಿತಕ್ಕೆ ಮುಂದಾಗಿದೆ.
Chamarajanagar: ಪಡ್ನಾ-ಲಿಖ್ನಾ ಅಭಿಯಾನದಲ್ಲಿ ಭಾರೀ ಗೋಲ್‌ಮಾಲ್
ಚಾಮರಾಜನಗರ ಉಪವಿಭಾಗದಲ್ಲಿ 77 ಗ್ರಾಪಂ ಗಳಿಂದ 23.21 ಕೋಟಿ, ಕೊಳ್ಳೇಗಾಲ ಉಪವಿಭಾಗದ 53 ಗ್ರಾ.ಪಂಗಳಿಂದ 15.35 ಕೋಟಿ ರೂ. ಬರಬೇಕಿದೆ. ಹಲವಾರು ಬಾರಿ ನೋಟೀಸ್ ನೀಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ವಿದ್ಯುತ್ ಕಡಿತ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳ್ತಾರೆ. ಚಾಮರಾಜನಗರ ವ್ಯಾಪ್ತಿಯ 62 ಗ್ರಾಮಗಳ ಬೀದಿ ದೀಪ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದಿಂದ ಬರುವ ಅನುದಾನ ತುಂಬಾ ಕಡಿಮೆ. ಮೂರು ದಶಕಗಳಿಂದ ವಿದ್ಯುತ್ ಬಿಲ್ ಪಾವತಿಸದ ಕಾರಣ ಅದು ಬಡ್ಡಿಗೆ ಬಡ್ಡಿ ಸೇರಿ ಪ್ರತಿ ಗ್ರಾಪಂನಿಂದ ಕೋಟಿ ರೂ. ಸಮೀಪ ಬಂದು ನಿಂತಿದೆ. ಈ ವಿಚಾರ ಅರಿತಿರುವ ಜಿಲ್ಲಾಡಳಿತ ಸಂಬಂಧಪಟ್ಟ ಗ್ರಾಪಂ ಪಿಡಿಒ ಹಾಗು ಕಾರ್ಯದರ್ಶಿಗಳಿಗೆ ಪತ್ರ ಬರೆದು ಸಾಧ್ಯವಾದಷ್ಟು ಹಣ ಪಾವತಿಸುವಂತೆ ನಿರ್ದೇಶನ ನೀಡಿದೆ.
ಗ್ರಾಮ ಪಂಚಾಯಿತಿಗಳು ದಶಕಗಳಿಂದ ಉಳಿಸಿಕೊಂಡು ಬಂದಿರುವ ವಿದ್ಯುತ್ ಬಿಲ್ ಈಗ ಉರುಳಾಗಿ ಪರಿಣಮಿಸಿದೆ. ಗ್ರಾಪಂಗಳಲ್ಲಿ ವಿದ್ಯುತ್ ಇಲ್ಲದೆ ಯಾವ ಕೆಲಸವೂ ಆಗುತ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳು ಶೀಘ್ರ ಅಂತ್ಯ ಹಾಡಬೇಕಿದೆ....