ಗೋ ಕಳ್ಳರಿಗೆ ಸಿದ್ದರಾಮಯ್ಯ ಸರ್ಕಾರ ಪರೋಕ್ಷ ಬೆಂಬಲ‌ ನೀಡ್ತಿದೆ: ಬಿಜೆಪಿ ಮುಖಂಡರ‌ ಆರೋಪ

By Girish Goudar  |  First Published Jul 14, 2023, 12:00 AM IST

ಒಬ್ಬರು ಮಂತ್ರಿ ಗೋ ರಕ್ಷಣಾ ಕಾಯ್ದೆ ಹಿಂಪಡೆಯುತ್ತೇವೆ ಅಂತಾರೆ. ಇನ್ನೊಬ್ರು ಮಂತ್ರಿ ಗೋರಕ್ಷಣೆಗೆ ಹೊರಟರೆ ಜೋಕೆ‌ ಅಂತಾ ಪರೋಕ್ಷ ಧಮ್ಕಿ‌ ನೀಡುತ್ತಿದ್ದಾರೆ. ಇದರಿಂದ ಶಿಷ್ಟರಿಗೆ ತೊಂದರೆಯಾಗಿದ್ದು, ಕಳ್ಳರಿಗೆ ಅನುಕೂಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ್


ಉತ್ತರ ಕನ್ನಡ(ಜು.14): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗೋ ಹತ್ಯೆ, ಗೋ ಕಳ್ಳತನ ನಡೆಯುತ್ತಿದೆ. ಸುಂದರವಾದ ಉತ್ತರಕನ್ನಡ ಜಿಲ್ಲೆಯ ಕಟುಕರ ಜಿಲ್ಲೆಯಾಗಿ ಬದಲಾಗುತ್ತಿದೆ.‌ ಗೋ ಕಳ್ಳರಿಗೆ ಕಾಂಗ್ರೆಸ್ ಸರಕಾರ ಪರೋಕ್ಷ ಬೆಂಬಲ‌ ನೀಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರು, ಯಾವ ತಾಲಿಬಾನ್ ಸಂಸ್ಕೃತಿ ಬೆಳೆಸ್ತಿದ್ದೀರಿ ಸಿದ್ದರಾಮಯ್ಯನವರೇ..? ಎಂದು ಕಿಡಿಕಾರಿದ್ದಾರೆ.

ಒಬ್ಬರು ಮಂತ್ರಿ ಗೋ ರಕ್ಷಣಾ ಕಾಯ್ದೆ ಹಿಂಪಡೆಯುತ್ತೇವೆ ಅಂತಾರೆ. ಇನ್ನೊಬ್ರು ಮಂತ್ರಿ ಗೋರಕ್ಷಣೆಗೆ ಹೊರಟರೆ ಜೋಕೆ‌ ಅಂತಾ ಪರೋಕ್ಷ ಧಮ್ಕಿ‌ ನೀಡುತ್ತಿದ್ದಾರೆ. ಇದರಿಂದ ಶಿಷ್ಟರಿಗೆ ತೊಂದರೆಯಾಗಿದ್ದು, ಕಳ್ಳರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ್, ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

undefined

VIRAL NEWS:  ಕೊರಗಜ್ಜಗೆ ಹರಕೆ ಫಲಿಸಿತು, ಮರಳಿ ಸಿಕ್ಕಿತು ಕಾರ್ಮಿಕನ ದುಡಿಮೆ ಹಣ!

ಇತ್ತೀಚೆಗೆ ಭಟ್ಕಳದಲ್ಲಿ ಗೋ ರಕ್ಷಣೆಗೆ ತೆರಳಿದ್ದ ಯುವಕರ ಕುತ್ತಿಗೆ ಮೇಲೆ ಹಲ್ಲೆ ಮಾಡಲಾಗಿದೆ. ಆದರೂ, ಸಣ್ಣ ಕೇಸ್ ಹಾಕಿ ಪ್ರಕರಣ ಮುಚ್ಚುವ ಕೆಲಸ ಮಾಡಲಾಗಿದೆ. ಗೋ ರಕ್ಷಣೆ ಮಾಡುವುದು ಆ್ಯಕ್ಟ್‌ನಲ್ಲಿದೆ. ನಾವು ಗೋರಕ್ಷಣೆ ಮಾಡುವುದು ತಪ್ಪಾ..? ಶಿರಸಿ ಹೆಗಡೆಕಟ್ಟಾದಲ್ಲಿ ರಸ್ತೆ ಮಧ್ಯೆ ಗೋವಿನ‌ ತಲೆ ಇಟ್ಟು ಹೋಗ್ತಾರೆ. ಯಾವ ತಾಲಿಬಾನ್ ಸಂಸ್ಕೃತಿ ಬೆಳೆಸ್ತಿದ್ದೀರಿ ಸಿದ್ದರಾಮಯ್ಯನವರೇ..? ಯಾಕೆ‌ ಆರೋಪಿಗಳನ್ನು ಬಂಧಿಸಿಲ್ಲ..?  ಸಿದ್ದರಾಮಯ್ಯ ಬಜೆಟ್‌ನಲ್ಲೂ ಅನ್ಯಾಯ, ಗೋ ರಕ್ಷಣೆಯಲ್ಲೂ ಅನ್ಯಾಯ ಮಾಡಿದ್ದಾರೆ. ಹಿಂದೂಗಳ ಧಾರ್ಮಿಕ‌ ಭಾವನೆಗಳಿಗೆ ಧಕ್ಕೆ ಮಾಡುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಒಂದೇ ಒಂದು ಗೋವಿನ ರೋಮಕ್ಕೆ ತೊಂದರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಇನ್ನು ಬಿಜೆಪಿ ಮುಖಂಡರ ಈ ಆರೋಪಕ್ಕೆ ಉತ್ತರಿಸಿರುವ ಉತ್ತರ ಕನ್ನಡ‌ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ, ಬಿಜೆಪಿಯವರ ಆರೋಪದಲ್ಲಿ ಯಾವತ್ತೂ ಸತ್ಯತೆಯಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಷಯ. ಅವರು ಸುಳ್ಳು ಹೇಳಿದ್ದು ಬಿಟ್ರೆ ಇಲ್ಲಿಯವರೆಗೆ ಯಾವುದಾದ್ರೂ ಸತ್ಯ ಹೇಳಿದ್ದು ತೋರಿಸ್ತೀರಾ..? ಎಂದು ಮರು ಪ್ರಶ್ನಿಸಿ ಸುಮ್ಮನಾಗಿದ್ದಾರೆ. 

click me!