* ಚಿತ್ರರಂಗ ಸಮುದ್ರ ಇದ್ದಂತೆ
* ವಾಯ್ಸ್ ಕ್ರಿಯೇಷನ್ ಆಶ್ಚರ್ಯ ತಂತು
* ಮಕ್ಕಳಿಗೆ ಬೇಕಿಂಗ್ ಹಾಗೂ ಮೇಕಿಂಗ್ ಅಭ್ಯಾಸ ಕಲಿಸುತ್ತಿರುವ ಗೀತಾ ಶಿವರಾಜ್‌ಕುಮಾರ್
ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು
ಮೈಸೂರು(ಏ.19): ಅವ್ರೆಲ್ಲ ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್(Dr Puneeth Rajkumar) ಪೋಷಿಸುತ್ತಿದ್ದ ಮುದ್ದಿನ ಮಕ್ಕಳು. ಬೇಸಿಗೆ ಬಂದ್ರೆ ಸಾಕು ಇತರ ಮಕ್ಕಳೆಲ್ಲ, ಅಜ್ಜಿ ತಾತನ ಮನೆಗೆ ತೆರಳಿ ಮಜಾ ಮಾಡುತ್ತಾರೆ. ಸಿಟಿಲಿರೋ ಮಕ್ಕಳು ಬೇಸಿಗೆ ಶಿಬಿರಕ್ಕೆ ತೆರಳಿ ಖುಷಿ ಪಡ್ತಾರೆ. ಆದ್ರೆ ಅನಾಥರಾದ ಈ ಮಕ್ಕಳಿಗೆ ಮಿಸ್ ಆಗಿದ್ದ ಆ ಮಜಾವನ್ನು ಕರುನಾಡ ಚಕ್ರವರ್ತಿ ಡಾ.ಶಿವಣ್ಣ ದಂಪತಿ ಮಾಡಿದ್ದಾರೆ.
undefined
ಹೌದು, ಡಾ.ಪುನೀತ್ ರಾಜ್‌ಕುಮಾರ್ ನಿಧನರಾದ ನಂತರ ಮೈಸೂರಿನಲ್ಲಿರುವ(Mysuru) ಶಕ್ತಿಧಾಮದ ಮಕ್ಕಳು(Children) ಒಂದಿಷ್ಟೂ ಮಂಕಾಗದಂತೆ ಅವರ ಅಣ್ಣ, ನಟ ಡಾ.ಶಿವಕುಮಾರ್(Dr Shivarj Kumar) ದಂಪತಿ ನೋಡಿಕೊಂಡಿದ್ದಾರೆ. ತಮ್ಮ ಬಿಡುವಿಲ್ಲದ ವೇಳೆಯಲ್ಲಿ ಸಮಯ ಹೊಂದಿಸಿಕೊಳ್ಳುತ್ತಿರುವ ದಂಪತಿಗಳು ಶಕ್ತಿಧಾಮಕ್ಕೆ ಬಂದು ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಶಕ್ತಿಧಾಮದ ಗೌರವ ಅಧ್ಯಕ್ಷರೂ ಆಗಿರುವ ಗೀತಾ ಶಿವಕುಮಾರ್(Geeta Shivaraj Kumar) ಶಕ್ತಿಧಾಮದ ಮಕ್ಕಳು ಸಶಕ್ತರಾಗುವಂತೆ ಅವರು ಸ್ವಯಂ ಉದ್ಯೋಗವೇ ಮಾಡಲು ನೆರವಾಗುತ್ತಿದ್ದಾರೆ. ಬೇಕಿಂಗ್ ಹಾಗೂ ಮೇಕಿಂಗ್ ಅಭ್ಯಾಸವನ್ನು ಸ್ವತಃ ಗೀತಾ ಶಿವರಾಜ್‌ಕುಮಾರ್ ಮಕ್ಕಳಿಗೆ ಕಲಿಸುತ್ತಿದ್ದಾರೆ. ಇನ್ನು ಶಿವಣ್ಣ ಕೂಡ ಹೆಚ್ಚು ಸಮಯವನ್ನ ಶಕ್ತಿಧಾಮದ(Shaktidhama) ಮಕ್ಕಳ ಜೊತೆಗೆ ಕಳೆಯುತ್ತಿದ್ದಾರೆ.
JDS Jaladhare: ನಮ್ಮ ಹಕ್ಕಿಗೆ ನಾವು ಹೋರಾಟ ನಡೆಸಬೇಕು: ಎಚ್.ಡಿ. ದೇವೇಗೌಡ
ಅಂತಹ ಮಕ್ಕಳಿಗೆ ಬೇಸಿಗೆಯಲ್ಲಿ ಕೂಡ ಬೋರ್ ಹೊಡೆಯದಂತೆ ನೋಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಶಕ್ತಿಧಾಮದ ಹೆಣ್ಣುಮಕ್ಕಳಿದಾಗಿ 7 ದಿನಗಳ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿತ್ತು. ಶಿವಣ್ಣ ಬೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳ ಜೊತೆ ಮಕ್ಕಳಾಗಿ ಬೆರೆತು ಫೋಟೊಗೆ ಫೋಸ್ ನೀಡಿದರು. ಶಕ್ತಿಧಾಮಕ್ಕೆ ಬಂದ ಶಿವಣ್ಣ ದಂಪತಿಯನ್ನು ಶಕ್ತಿಧಾಮದ ಮಕ್ಕಳು ನಗಾರಿ ಬಾರಿಸಿ ಸ್ವಾಗತಿಸಿದರು. ನಂತರ ಮಕ್ಕಳಿಗೆ ಬಿದಿರಿನ ಕುಸುರಿ ಕೆಲಸಗಳು, ಮಣ್ಣಿನ ಮಡಿಕೆ ಕುಡಿಕೆ ಮಾಡುವ ಕಲೆಗಳ ಬಗ್ಗೆ ಹೇಳಿಕೊಡಲಾಯಿತು. ಕಾರ್ಯಕ್ರಮದಲ್ಲಿ ಶಕ್ತಿಧಾಮದ ಬಾಲಕಿ ಭರತನಾಟ್ಯ ಮಾಡಿ ರಂಜಿಸಿದರೆ, ಪೆನ್ಸಿಲ್ ಕಲಾವಿದ ಅಪ್ಪು ಸ್ಕೆಚ್ ಮಾಡಿ ಶಿವಣ್ಣನಿಗೆ ಗಿಫ್ಟ್ ಕೊಟ್ಟು ಸಂತೋಷ ಪಡಿಸಿದರು.
7 ದಿನಗಳು ನಡೆಯುವ ಬೇಸಿಗೆ ಶಿಬಿರದಲ್ಲಿ ಶಕ್ತಿಧಾಮದ ನೂರಾರು ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಾನಪದ ಗೀತೆ, ಜಾನಪದ ನೃತ್ಯ, ಕತೆ ಕಟ್ಟುವಿಕೆ, ಮಣ್ಣಿನ ಕಲಾಕೃತಿಗಳ ತಯಾರಿಕೆ, ಕ್ರಯಾನ್ಸ್, ಚಿತ್ರಕಲೆ, ನಾಟಕ, ಅಭಿನಯ ಗೀತೆಗಳು, ನಟನೆ, ಸೇರಿ ದೇಸೀ ಆಟಗಳನ್ನು ಹೇಳಿಕೊಡಲಾಗುತ್ತದೆ. ರಂಗಾಯಣ, ನೀನಾಸಂ ಹಾಗೂ ಕಾವಾ ಕಲಾವಿದರು ಮಕ್ಕಳಿಗೆ ಟ್ರೈನಿಂಗ್ ನೀಡಲಿದ್ದಾರೆ. ಆಡಿ ನಲಿಯೋಣ, ಕೂಡಿ ಬಾಳೋಣ ಎಂಬ ವಿಚಾರ ಮುಂದಿಟ್ಟುಕೊಂಡು ಆಯೋಜಿಸಿರುವ ಬೇಸಿಗೆ ಶಿಬಿರ ಶಕ್ತಿಧಾಮದ ಮಕ್ಕಳಿಗೆ ಹೆಚ್ಚು ರಂಜನೆ ನೀಡಿದೆ.
ಈಶ್ವರಪ್ಪ ರಾಜೀನಾಮೆಗೂ ಮುನ್ನ PDOಗಳ ಟ್ರಾನ್ಸ್‌ಫರ್, ಚರ್ಚೆಗೆ ಗ್ರಾಸ..!
ವಾಯ್ಸ್ ಕ್ರಿಯೇಷನ್ ಆಶ್ಚರ್ಯ ತಂತು.!
ಬೇಸಿಗೆ ಶಿಬಿರ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಿವಣ್ಣ, ಜೇಮ್ಸ್(Jamesh) ಚಿತ್ರಕ್ಕೆ ಪುನೀತ್ ವಾಯ್ಸ್ ರಿಕ್ರಿಯೇಷನ್ ವಿಚಾರ ಕೇಳಿ ಆಶ್ಚರ್ಯ ಪಟ್ಟರು. ನನಗೆ ನಿಜಕ್ಕೂ ಆಶ್ಚರ್ಯ ಆಯ್ತು, ಈ ರೀತಿಯೂ ಆಪ್‌ಗಳು ಇದ್ದಾವ ಅಂತ ಕೇಳಿದ್ರು. ಫಿಲಂ ವಾಯ್ಸ್ ರಿಗೈನ್ಡ್ ಫುಲ್ ಕಂಪ್ಲೀಟ್ ವಾಯ್ಸ್‌ನ ರೀಗೈನ್ಡ್ ಮಾಡಬಹುದು ಅಂತ ಹೇಳಿದ್ದಾರೆ. ಇದು ಯಾವ ರೀತಿ ಟೆಕ್ನಿಕಲ್ ಆಗಿದೆ ಅಂತ ಗೊತ್ತಿಲ್ಲ. ಮೊದಲೇ ಪುನೀತ್ ವಾಯ್ಸ್ ರೀಗೈನ್ಡ್ ಮಾಡಬಹುದಾಗಿತ್ತೇನೋ ಅಂದ್ರು.
ಚಿತ್ರರಂಗ ಸಮುದ್ರ ಇದ್ದಂತೆ
ನೂರು ಕೆಜಿಎಫ್(KGF-2) ಚಿತ್ರಕ್ಕೆ ಒಂದು ಪುಷ್ಪ ಸಿನಿಮಾ ಸಮಾನ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಶಿವಣ್ಣ, ಚಿತ್ರರಂಗ(Film Industry) ಅನ್ನೋದು ಒಂದು ಸಮುದ್ರವಿದ್ದಂತೆ. ಅದರಲ್ಲಿ ಯಾರು ಬೇಕಾದರೂ ಈಜಬಹುದು. ಯಾರು ಬೇಕಾದರೂ ಮೇಲಕ್ಕೆ ಹೋಗಬಹುದು. ಹಾಗೆಯೇ ಕೆಳಗೂ ಹೋಗಬಹುದು. ಇದು ನನಗೆ ಬೇಕಿಲ್ಲದ ವಿಚಾರ, ಅದನ್ನ ಜನತೆಗೆ ಬಿಡೋಣ. ಯಾವ್ದು ಏನಾಗ್ತಿದೆ ಅದು ದೇವರಿಗೆ ಗೊತ್ತು, ನಿರ್ಮಾಪಕರಿಗೆ ಗೊತ್ತಷ್ಟೆ. ಮಾತನಾಡಿ ಏನೂ ಪ್ರಯೋಜನವಿಲ್ಲ. ಯಾವುದನ್ನೂ ವಿವಾದ ಮಾಡಬಾರದು. ಜಸ್ಟ್ ಲೈಕ್ ಎ ಸೀ, ಅಂತ ಉತ್ತರ ನೀಡಿದರು.