ನಟ ದರ್ಶನ್‌ಗೆ ಜಾಮೀನು: ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ, ರೇಣಕಾಸ್ವಾಮಿ ತಂದೆ

By Girish Goudar  |  First Published Dec 13, 2024, 5:31 PM IST

ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ಜಾಮೀನು ಮಂಜೂರು ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ವಿಚಾರಣೆ ಬಳಿಕೆ ಸೂಕ್ತ ನ್ಯಾಯ ಸಿಗುವ ನಂಬಿಕೆಯಿದೆ. ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿರಬಹುದು. ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ಆಗುವ ನಂಬಿಕೆಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ರೇಣಕಾಸ್ವಾಮಿ ತಂದೆ ಕಾಶೀನಾಥಯ್ಯ 
 


ಚಿತ್ರದುರ್ಗ(ಡಿ.13):  ರೇಣಕಾಸ್ವಾಮಿ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ ಇತರೆ ಆರೋಪಿಗಳಿಗೆ ಹೈಕೋರ್ಟ್‌ ಇಂದು(ಶುಕ್ರವಾರ) ಜಾಮೀನು ಮಂಜೂರು ಮಾಡಿದೆ. 

ಈ ಸಂಬಂಧ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಕೊಲೆಯಾದ ರೇಣಕಾಸ್ವಾಮಿ ತಂದೆ ಕಾಶೀನಾಥಯ್ಯ ಅವರು, ನ್ಯಾಯಾಂಗ ವ್ಯವಸ್ಥೆ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ಜಾಮೀನು ಮಂಜೂರು ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ವಿಚಾರಣೆ ಬಳಿಕೆ ಸೂಕ್ತ ನ್ಯಾಯ ಸಿಗುವ ನಂಬಿಕೆಯಿದೆ. ತಾತ್ಕಾಲಿಕವಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿರಬಹುದು. ಅಂತಿಮವಾಗಿ ಆರೋಪಿಗಳಿಗೆ ಶಿಕ್ಷೆ ಆಗುವ ನಂಬಿಕೆಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

Tap to resize

Latest Videos

ದರ್ಶನ್‌ನ ಕಾಪಾಡಿದ ಅಸ್ಸಾಂನ 'ಕಾಮಾಕ್ಯ', ಇಲ್ಲಿ ಹರಕೆ ಹೊತ್ತವರಿಗೆ ಸೋಲೇ ಇಲ್ಲ

ಸರ್ಕಾರ ನಮ್ಮ ಸೊಸೆ ಸಹನಾಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಹೇಳುತ್ತಿದ್ದಂತೆ ಕಾಶೀನಾಥಯ್ಯ ಅವರು ಭಾವುಕರಾಗಿದ್ದಾರೆ. ನಟ ದರ್ಶನ್ ನಮ್ಮ ಜತೆ ಮಾತುಕತೆಗೆ ಬರುವ ವಿಚಾರ ಇಲ್ಲ, ಅವರು ನಮ್ಮ ಜತೆ ಮಾತನಾಡುವಂಥದ್ದು ಏನು ಇಲ್ಲ. ನಾವು ಮಗನ ಕಳೆದುಕೊಂಡು ದುಖಃದಲ್ಲಿದ್ದೇವೆ. ನಮಗೆ ಮಗ ಬೇಕೆ ಹೊರತು ಮಾತುಕತೆ ಏನೂ ಬೇಕಿಲ್ಲ. ಈವರೆಗೆ ನಮಗೆ ಮಾತುಕತೆಗೆಂದು ಯಾರೂ ಸಂಪರ್ಕ ಮಾಡಿಲ್ಲ. ಮಾತುಕತೆಗೆಂದು ನಮ್ಮ ಸಂಪರ್ಕ ಮಾಡಲು ಅವಕಾಶ ಇಲ್ಲ. ನಾವು ನಟ ದರ್ಶನ್ ಜತೆ ಮಾತುಕತೆ ಬಗ್ಗೆ ಅಪೇಕ್ಷೆ ಪಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

undefined

ಸಿಎಂ ಭೇಟಿ ಮಾಡಿ ಮನವಿ ಮಾಡುವ ಬಗ್ಗೆ ಆಪ್ತರ ಜತೆ ಚರ್ಚಿಸುತ್ತೇವೆ. ಸರ್ಕಾರ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗಿದೆ. ಜಾಮೀನು ಪ್ರಶ್ನಿಸಿ ಸಹ ಸುಪ್ರೀಂ ಮೊರೆ ಹೋಗುವ ವಿಶ್ವಾಸವಿದೆ. ಸಿಎಂ, ಸರ್ಕಾರದ ಮೇಲೆ ಒತ್ತಡ ಹಾಕಲ್ಲ, ಯೋಚಿಸುತ್ತೇವೆ ಎಂದು ಕಾಶಿನಾಥಯ್ಯ ತಿಳಿಸಿದ್ದಾರೆ. 

ದರ್ಶನ್‌ಗೆ ಜಾಮೀನು ಸಿಕ್ಕ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರೇಣುಕಾಸ್ವಾಮಿ ಪತ್ನಿ 

ದಾವಣಗೆರೆ: ನಟ ದರ್ಶನ್‌ಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಪತ್ನಿ ಹಾಗೂ ಸಂಬಂಧಿಕರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.  ನಾವು ಪ್ರತಿಕ್ರಿಯೆ ನೀಡಲ್ಲ ಎಂದು ರೇಣುಕಾಸ್ವಾಮಿ ಮಾವ ಸೋಮಣ್ಣ ಮನೆ ಬಾಗಿಲು ಮುಚ್ಚಿಕೊಂಡಿದ್ದಾರೆ. 

ಚಿತ್ರದುರ್ಗದಲ್ಲಿಯೇ ಪ್ರತಿಕ್ರಿಯೆ ತೆಗೆದುಕೊಳ್ಳಿ ರೇಣುಕಾಸ್ವಾಮಿ ಪತ್ನಿಯ ಮನೆಯರು ಎಂದು ಹೇಳಿದ್ದಾರೆ.   ರೇಣುಕಾಸ್ವಾಮಿ ಪತ್ನಿ ಹೆರಿಗೆ ಆದ ಬಳಿತ ತನ್ನ ತವರು ಮನೆ ಹರಿಹರದಲ್ಲಿ ವಾಸವಾಗಿದ್ದಾರೆ. ರೇಣುಕಾಸ್ವಾಮಿ ಪತ್ನಿ ಸಹನಾ ಬಹು ದಿನಗಳಿಂದ ಚಿತ್ರದುರ್ಗಕ್ಕೆ ಹೋಗದೇ ಹರಿಹರದಲ್ಲಿಯೇ ಇದ್ದಾರೆ. 

ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ಇತ್ತೀಚಿಗೆ ರಂಭಾಪುರಿ ಸ್ವಾಮೀಗಳಿಂದ ವಿಶೇಷ ಪೂಜೆ ನಡೆದರೂ ಸಹ ಚಿತ್ರದುರ್ಗಕ್ಕೆ ಸಹನಾ ಹೋಗಿಲ್ಲ. ತನ್ನ ಗಂಡು ಮಗುವಿನೊಂದಿಗೆ ಹರಿಹರದ ತವರು ಮನೆಯಲ್ಲೇ ವಾಸವಾಗಿದ್ದಾರೆ. 

ಪವಿತ್ರಾಗೌಡಗೆ ಜಾಮೀನು ಸಿಕ್ಕಿದರೂ ಜೈಲಿಂದ ಹೊರಗೆ ಬರೋದು ಡೌಟು!

ಪುತ್ರ ಜಗದೀಶ್ ಗೆ ಜಾಮೀನು ಸಿಕ್ಕಿದ್ದು ನನಗೆ‌ ಖುಷಿಯಾಗಿದೆ

ಚಿತ್ರದುರ್ಗ: ನಟ ದರ್ಶನ್ ಸೇರಿ 7 ಜನರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಎ6 ಜಗದೀಶ್ ತಾಯಿ ಸುಲೋಚನಮ್ಮ ಹೇಳಿಕೆ ನೀಡಿದ್ದು, ಪುತ್ರ ಜಗದೀಶ್ ಗೆ ಜಾಮೀನು ಸಿಕ್ಕಿದ್ದು ನನಗೆ‌ ಖುಷಿಯಾಗಿದೆ. ದುಡಿಯುವ ಮಗ ಜೈಲು ಪಾಲಾಗಿದ್ದು ನಮ್ಮ ಜೀವನ ಕಷ್ಟವಾಗಿತ್ತು. ಮಗ ಜೈಲಿನಲ್ಲಿರುವ ಕಾರಣ ಟೀ ಮಾರಿ ಜೀವನ ಸಾಗಿಸಿದ್ದೇನೆ. ಮಗನಿಗೆ ಜಾಮೀನು ಸಿಕ್ಕಿದ್ದು ನಮಗೆ ಬಹಳ ಖುಷಿಯಾಗಿದೆ. ಸೊಸೆ, ಮಕ್ಕಳನ್ನು ಸಾಕೋದು ನಮಗೆ ತುಂಬಾ ಕಷ್ಟ ಆಗಿತ್ತು. ಈಗ ಮಗ ಬರ್ತಾನೆ, ನಮ್ಮನ್ನೆಲ್ಲಾ ಸಾಕ್ತಾನೆಂದು ಖುಷಿ ಆಗಿದೆ. ದೇವರೆ ಇನ್ಮುಂದೆ ನಮಗೆ ಒಳಿತಾಗಲೆಂದು ಕೈಮುಗಿದಿದ್ದಾರೆ. ಮಗನ ಮುಖ ಯಾವಾಗ ನೋಡ್ತೀನಿ ಎನ್ನುತ್ತ  ಸುಲೋಚನಮ್ಮ ಭಾವುಕರಾಗಿದ್ದಾರೆ. 

ಮಗ ಅನುಕುಮಾರ್ ಜೈಲಿಗೆ ಹೋಗಿದ್ದರಿಂದ ನೋವು ತಿಂದಿದ್ದೇವೆ

ಚಿತ್ರದುರ್ಗ: ಎ7 ಆರೋಪಿ ಅನುಕುಮಾರ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದಕ್ಕೆ ಅನುಕುಮಾರ್ ತಾಯಿ ಜಯಮ್ಮ ಪ್ರತಿಕ್ರಿಯೆ ನೀಡಿದ್ದು, ನನ್ನ ಮಗ ಅನುಕುಮಾರ್ ಜೈಲಿಗೆ ಹೋಗಿದ್ದರಿಂದ ನಾವು ಬಹಳಷ್ಟು ನೋವು ತಿಂದಿದ್ದೇವೆ. ನಮ್ಮ ಯಜಮಾನ ಚಂದ್ರಣ್ಣ ಸಹ ಅಸುನೀಗಿದ್ದಾರೆ. ನಮ್ಮ ಕಷ್ಟ ನಮಗೆ ಮಾತ್ರ ಗೊತ್ತು. ಇಂದು ಅನುಕುಮಾರ್ ಜಾಮೀನು ಸಿಕ್ಕಿದ್ದು ಕೇಳಿ ಸಂತೋಷವಾಗಿದೆ.  ಎದೆ ನೋಯುತ್ತದೆ ನನಗೆ ಜಾಸ್ತಿ ಮಾತಾಡಲು ಆಗಲ್ಲ, ದುಡಿಯುವ‌ ಮಗನಿಲ್ಲದೇ ಹೂವು ಕಟ್ಟಿ ಜೀವನ ಸಾಗಿಸಿದ್ದೇನೆ. ಮಗ, ಪತಿ ಇಲ್ಲದೆ ಜೀವನ ಸಾಗಿಸಿದ್ದು ಕಷ್ಟ ಅನುಭವಿಸಿದ್ದೇನೆ ಎಂದು ತಿಳಿಸಿದ್ದಾರೆ. 

click me!