ಕಿರುತೆರೆ ನಟನ ವಿರುದ್ಧ ಅತ್ಯಾಚಾರ ಕೇಸ್ : ಬಂಧನ

By Web Desk  |  First Published Jul 3, 2019, 1:42 PM IST

ಕಿರುತೆರೆ ನಟಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಹಿನ್ನೆಲೆ ಕಿರುತೆರೆ ನಟನೋರ್ವನನ್ನು ಬಂಧಿಸಲಾಗಿದೆ. 


ಚಿಕ್ಕಬಳ್ಳಾಪುರ [ಜು.3] :  ಮದುವೆಯಾಗುವುದಾಗಿ ವಂಚಿಸಿ, ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಕಿರುತೆರೆ ನಟಿಯೊಬ್ಬಳು ನೀಡಿರುವ ದೂರಿನ ಆಧಾರದ ಮೇಲೆ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ.

ಕಿರುತೆರೆ ನಟ ಹಾಗೂ ಪ್ರೊಡಕ್ಷನ್ ಮ್ಯಾನೇಜರ್ ತೇಜಸ್ ಗೌಡ ಅಲಿಯಾಸ್ ಅಭಿಗೌಡ ಬಂಧಿತ ಆರೋಪಿ. 

Tap to resize

Latest Videos

 ಏಳು ವರ್ಷಗಳ ಹಿಂದೆ ತೇಜಸ್ ಹಾಗೂ ನಟಿ ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಆ ವೇಳೆ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿಯೂ ಬಳಸಿಕೊಳ್ಳಲಾಗಿದೆ. ಹಲವು ಬಾರಿ ಅತ್ಯಾಚಾರವೆಸಗಿದ್ದು, ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾಗಿ ನಟನ ವಿರುದ್ಧ ದೂರು ದಾಖಲಾಗಿದೆ. 

ಚಿಕ್ಕಬಳ್ಳಾಪುರ ಪೊಲೀಸರು ನಟನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ. 

click me!