Ballari; ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ನಡೆಯುತ್ತಿರೋ ಹೋರಾಟದ ವೇಳೆ ಗಲಾಟೆ

By Suvarna News  |  First Published Jul 2, 2022, 2:54 PM IST
  • ಅನುಮತಿ ಪಡೆಯದೇ ಹೋರಾಟ ವಾಗ್ವಾದಕ್ಕೆ ಕಾರಣ
  • ಲಾಠಿ ಬೀಸೋ ಮೂಲಕ ಪ್ರತಿಭಟನಾಕಾರರ ಬಂಧನ
  • ಹೊಸಪೇಟೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಹೈಡ್ರಾಮ

ವರದಿ : ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
 
ಬಳ್ಳಾರಿ (ಜು.2): ರಾಜಸ್ಥಾನದ ಉದಯಪುರದಲ್ಲಿನ ಕನ್ಹಯ್ಯ ಲಾಲ್ ಕೊಲೆ ಪ್ರಕರಣ ಇಡೀ ದೇಶದಲ್ಲಿ ಒಂದಷ್ಟು ಸಂಚಲನ ಮೂಡಿಸಿದ್ದಂತು ಸತ್ಯ. ಯಾಕಂದ್ರೇ, ಇದು ಕೇವಲ ಕೊಲೆಯಾಗಿ  ಉಳಿಯದೇ ಇಡೀ ದೇಶದಲ್ಲಿರೋ ಹಿಂದೂಗಳ ಭಾವನೆಗಳನ್ನು ಕೆರಳಿಸುವಂತೆ ಮಾಡಿತ್ತು. ಇನ್ನೂ ಕೊಲೆ ಆರೋಪಿಗಳನ್ನು ಬಂಧಿಸೋದಷ್ಟೇ ಅಲ್ಲ ನಡು ಬೀದಿಯಲ್ಲಿ ಗಲ್ಲೇಗೇರಿಸಬೇಕೆಂದು ಆಗ್ರಹಿಸಿ ಹೊಸಪೇಟೆಯಲ್ಲಿ ನಡೆಯುತ್ತಿರೋ ಪ್ರತಿಭಟನೆ ವಿಕೋಪಕ್ಕೆ ತಿರುಗಿದ್ದಷ್ಟೇ ಅಲ್ಲದೇ ಲಾಠಿಚಾರ್ಚ್ ನಡೆದು ದೊಡ್ಡ ಹೈಡ್ರಾಮ ನಡೆದಿದೆ. ಈ ವೇಳೆ ಪೊಲೀಸರ ವರ್ತನೆಯನ್ನು ಖಂಡಿಸಿದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ದೇಶದಲ್ಲಿ ಹಿಂದೂಗಳ ಜೀವಕ್ಕೆ ಬೇಲೆಯೇ ಇಲ್ವ ಎಂದು ಪ್ರಶ್ನೆಸಿದ್ರು.
 
ಅನುಮತಿ ಪಡೆಯದೇ ಪ್ರತಿಭಟನೆ ಮಾಡಿದ್ರು.
ಇನ್ನೂ ಶ್ರೀರಾಮ ಸೇನೆ ಸಂಘಟನೆ ನೇತೃತ್ವದಲ್ಲಿ ಶನಿವಾರ ಹೊಸಪೇಟೆಗೆ ಬಂದ್ ಗೆ ಕರೆ ನೀಡಲಾಗಿತ್ತು. ಈ ಕುರಿತು ಪೊಲೀಸರು ಮತ್ತು ತಹಶೀಲ್ದಾರರಿಗೆ ಮನವಿಯನ್ನು ಸಂಘಟಕರು ಕಳೆದೆರಡು ದಿನಗಳ ಹಿಂದೆಯೇ ಮನವಿ ಸಲ್ಲಿಸಿದ್ರು. ಆದ್ರೇ, ಬಂದ್ ಪ್ರತಿಭನೆಗೆ ಸೀಮಿತವಾಗಿದೇ ಹೊಸಪೇಟೆಯ ಹೃದಯ ಭಾಗದಲ್ಲಿರೋ ಪಾದಗಟ್ಟಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಾಣ ಮಾಡಿ ಭಾಷಣ ಮಾಡಲು ಹಿಂದೂ ಕಾರ್ಯಕರ್ತರು ಮುಂದಾದ್ರು.

ಕನ್ಹಯ್ಯಲಾಲ್ ಕುಟುಂಬಕ್ಕೆ ಸಹಾಯ, 24 ಗಂಟೆಯಲ್ಲಿ 1 ಕೋಟಿ ರೂಪಾಯಿ ದೇಣಿಗೆ!

Latest Videos

undefined

ಈ ವೇಳೆ ಪೊಲೀಸರು ಇದಕ್ಕೆ ಅವಕಾಶ ನೀಡದೇ, ಇದ್ದಾಗ ಮೊದಲಿಗೆ ವಾಗ್ವಾದ ಆರಂಭವಾಗಿ ಅದು ಲಾಠಿ ಚಾರ್ಜ್ ಆಗೋ ಮಟ್ಟಕ್ಕೆ ಹೋಯ್ತು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಸಂಘಟನೆ ಮುಖಂಡರಾದ ಗಂಗಾಧರ ಕುಲಕರ್ಣಿ, ಸಂಜೀವ್ ಮರಡಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದ್ರು. ಈ ವೇಳೆ ನೂಕಾಟ ತಳ್ಳಾಟ ನಡೆಯಿತು. ಸ್ವತಃ ವಿಜಯನಗರ ಎಸ್ಪಿ ಅರುಣ್ ಕುಮಾರ ಲಾಠಿ ಬೀಸೋ ಮೂಲಕ ಪ್ರತಿಭಟನೆಯನ್ನು ಚದುರಿಸಿದ್ರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಬಿಜೆಪಿ ಸರ್ಕಾರ ಇದ್ರೂ ಕೂಡ ಪ್ರತಿ ಮಾಡಲು ಹಿಂದೂ ಕಾರ್ಯಕರ್ತರು ಹೆದರೋ ಪರಿಸ್ಥಿತಿ ಇದೆ ಎಂದು  ಪ್ರತಿಭಟನಕಾರಾರರು ಆಕ್ರೋಶ ವ್ಯಕ್ತಪಡಿಸಿದ್ರು.
 
ಬಂಧಿಸಿದ ಮೇಲೂ ಮುಂದುವರೆದ ಪ್ರತಿಭಟನೆ.
ಪಾದಗಟ್ಟೆ ಆಂಜನೇಯ ದೇವಸ್ಥಾನದಲ್ಲಿ ನಡೆದ ಹೈಡ್ರಾಮ ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕರೆದುಕೊಂಡು ಹೋದ್ರು. ವೇದಿಕೆಯನ್ನು ಕೂಡ ಪೊಲಿಸರೇ ತೆರವು ಮಾಡಿದ್ರು. ಆದ್ರೇ, ಮತ್ತೊಮ್ಮೆ ಹಡಗಲಿಯ ಹಾಲಸ್ವಾಮಿ ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಮುಂದೆ ಬಾಯಿಗೆ ಕೇಸರಿ ಬಟ್ಟೆ ಕಟ್ಟಿಕೊಂಡು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸೋ ಮೂಲಕ ಮತ್ತೊಮ್ಮೆ ಪ್ರತಿಭಟನೆ ನಡೆದಲಾಯಿತು. ಈ ವೇಳೆ ಬಂದ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ಸ್ವಾಮೀಜಿಗಳಿಗೆ ಕೈಮುಗಿದ್ರು. ಆದ್ರೇ ಇದ್ಯಾವುದಕ್ಕೂ ಜಗ್ಗದೇ ಪ್ರತಿಭಟನೆ ಮುಂದುವರೆಸಿದಾಗ ಸ್ವಾಮೀಜಿ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ರು.

ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಿಭಟನೆ: ಟೈರ್‌ ಸುಡುವ ವೇಳೆ ಹಿಂದೂ ಕಾರ್ಯಕರ್ತರಿಗೆ ತಗುಲಿದ ಬೆಂಕಿ..!
 
ಅನಾಥವಾಯ್ತೇ ಶಿವಾಜಿ ಮೂರ್ತಿ
ಪ್ರತಿಭಟನಾ ವೇದಿಕೆಯ ಕೇಂದ್ರ ಬಿಂದುವಾಗಿ ಶಿವಾಜಿ ಮೂರ್ತಿಯನ್ನು ಹಿಂದೂ ಪರ ಸಂಘಟನೆಯವರು ತಂದಿದ್ರು. ಆದ್ರೇ, ಪ್ರತಿಭಟನೆ ಜೋರಾಗಿ ಎಲ್ಲರನ್ನು ಬಂಧಿಸುತ್ತಿದ್ದಂತೆ ಶಿವಾಜಿ ಮೂರ್ತಿಯನ್ನು ಪಾದಗಟ್ಟೆ ಆಂಜನೇಯ ದೇವಸ್ಥಾನದೊಳಗೆ ಪೊಲಿಸರು ಇಟ್ಟು ಹೋದ್ರು. ಮೂರುನಾಲ್ಕು ಗಂಟೆ ಕಳೆದ್ರು ಶಿವಾಜಿ ಮೂರ್ತಿ ಹತ್ತಿರ ಯಾರು ಕೂಡ ಸುಳಿಯಲೇ ಇಲ್ಲ. ಹೀಗಾಗಿ ಪ್ರತಿಭಟನೆ ಭರದಲ್ಲಿ  ಶಿವಾಜಿ ಮೂರ್ತಿ ಅನಾಥವಾಯ್ತೇ ಎನ್ನುವ  ಚರ್ಚೆ ಜನರಲ್ಲಿ ಬಂದಿತ್ತು.
 
ಗಲಾಟೆ ಬಗ್ಗೆ ವಿಜಯನಗರ ಎಸ್ಪಿ ಸ್ಪಷ್ಟನೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಾದ್ರೂ ಯಾವ ವಿಷಯಕ್ಕಾದ್ರು ಪ್ರತಿಭಟನೆ ಮಾಡಲು ಅವಕಾಶವಿದೆ. ಆದ್ರೇ, ಪ್ರತಿಭಟನೆ ನೆಪದಲ್ಲಿ ರಸ್ತೆ ತಡೆಯೋದು, ಬಲವಂತದ ಬಂದ್ ಗೆ ಯಾವುದೇ ಕಾರಣಕ್ಕೂ ಅವಕಾಶವಿಲ್ಲ. ಇಲ್ಲಿ ಸಂಘಟಕರು ಕೇವಲ ಪ್ರತಿಭಟನೆಗೆ ಮಾತ್ರ ಅನುಮತಿ ಪಡೆದಿದ್ರು. ಆದ್ರೇ, ನಡು ಬೀದಿಯಲ್ಲಿ ವೇದಿಕೆ ಹಾಕೋ ಮೂಲಕ ಟ್ರಾಫಿಕ್ ಜಾಮ್ ಮಾಡಲು ಮುಂದಾದ್ರು. ಹೀಗಾಗಿ ಲಾಠಿ ಚಾರ್ಜ್ ಮಾಡಬೇಕಾಯ್ತು ಹಲವರ ಬಂಧನವಾಗಿದೆ ವಿಚಾರಣೆ ಮಾಡಿ ಪ್ರಕರಣ ದಾಖಲಿಸೋದಾಗಿ ಹೇಳಿದ್ರು.  

click me!