ಹಿಂಡಲಗಾ ‌ಜೈಲಲ್ಲಿ ಕೈದಿಗಳ ಜಾಲಿ..ಜಾಲಿ: ಕಾರವಾರದಿಂದ ಬಂತು ಫಿಶ್!

By Govindaraj S  |  First Published Dec 23, 2024, 6:08 PM IST

ರಾಜ್ಯದಲ್ಲಿ ಜೈಲುಗಳು ಮೋಜು, ಮಸ್ತಿಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ಕಲಬುರ್ಗಿ ಜೈಲಿನ ಬಳಿಕ ಬೆಳಗಾವಿ ಜೈಲಿನ ಸರದಿ ಈಗ ಆರಂಭವಾಗಿದೆ. ಜೈಲಿನಲ್ಲಿ ಕಾಸು ಇದ್ದವನೇ ಬಾಸ್ ಎನ್ನುವಂತೆ ಆಗಿದೆ. ಪಿಎಸ್ಐ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಕೈದಿಯೊಬ್ಬನಿಗೆ ರಾಜಾತಿಥ್ಯ ನೀಡಲಾಗಿದೆ. 


ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ‌ಬೆಳಗಾವಿ

ಬೆಳಗಾವಿ (ಡಿ.23): ರಾಜ್ಯದಲ್ಲಿ ಜೈಲುಗಳು ಮೋಜು, ಮಸ್ತಿಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ಕಲಬುರ್ಗಿ ಜೈಲಿನ ಬಳಿಕ ಬೆಳಗಾವಿ ಜೈಲಿನ ಸರದಿ ಈಗ ಆರಂಭವಾಗಿದೆ. ಜೈಲಿನಲ್ಲಿ ಕಾಸು ಇದ್ದವನೇ ಬಾಸ್ ಎನ್ನುವಂತೆ ಆಗಿದೆ. ಪಿಎಸ್ಐ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಕೈದಿಯೊಬ್ಬನಿಗೆ ರಾಜಾತಿಥ್ಯ ನೀಡಲಾಗಿದೆ. ಯಸ್ ಈ ದೃಶ್ಯಗಳು ಸದ್ಯ ವೈರಲ್ ಆಗಿದ್ದು,  ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಿದೆ. ಹೀಗೆ ಬಹಿರಂಗವಾಗಿ ಲಂಚದ ಹಣವನ್ನೂ ಸ್ವೀಕರಿಸುತ್ತಿರೋ ಅಧಿಕಾರಿಗಳು. ಲಂಚದ ಹಣ ಕೈಸೇರಿದ ತಕ್ಷಣ ಜೈಲಿಗೆ ಒಳಗೆ ಸಪ್ಲೆಯಾಗಿರೋ ಫಿಶ್. ಯಸ್ ಬೆಳಗಾವಿ ಹಿಂಡಗಲಾ ಜೈಲಿನಲ್ಲಿ ಕಾಸು ಇದ್ದವನೇ ಬಾಸ್ ಎನ್ನುವುದು ಮೊತ್ತೊಮ್ಮೆ ಪ್ರೂ ಆಗಿದೆ. 

Tap to resize

Latest Videos

undefined

ಬೆಳಗಾವಿ ಹಿಂಡಗಲಾ ಜೈಲಿನಲ್ಲಿ 900 ಜನ ಕೈದಿಗಳು ಇದ್ದರೆ. ಕೈದಿಗಳಿಗೆ ಹೊರಗಿನಿಂದ ಎನೆಲ್ಲ ಬೇಕು ಆ ವಸ್ತುಗಳು ಪೂರೈಕೆಯಾಗುತ್ತಿವೆ. ಹೀಗೆ ಲಂಚದ ಹಣ ಪಡೆದ ಅಧಿಕಾರಿ ಮಾಡಿದ್ದು ಮಾತ್ರ ದೊಡ್ಡ ಯಡವಟ್ಟು. ಲಂಚದ ಹಣ ಪಡೆದು, ಜೈಲಿನ ಒಳಗೆ ಕಾರವಾರದ ಮೀನನ್ನು ಸಪ್ಲೆ ಮಾಡಿದ್ದಾನೆ. ಹೌದು ಜೈಲಿನ ಊಟದ ಮೆನುನಲ್ಲಿ ವಾರಕ್ಕೆ ಒಮ್ಮೆ ಚಿಕನ್, ಮಟನ್ ಕೊಡಬೇಕು ಎನ್ನುವುದು ಇದೆ. ಆದರೇ ಹಿಂಡಲಗಾ ಜೈಲಾಧಿಕಾರಿಗಳು ನಿಯಮ ಉಲ್ಲಂಘನೆ ಮಾಡಿ ಫಿಷ್ ಪೂರೈಕೆ ಮಾಡಿದ್ದಾರೆ. ಪಿಎಸ್ಐ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದ ಕೈದಿಯೊಬ್ಬನಿಗೆ ಬೇಕಾದ ಸೌಲಭ್ಯ ನೀಡಿದ್ದಾರೆ. 

ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಒಂದು ವಾರದಲ್ಲಿ ಜೈಲಿಗೆ ಒಳಗೆ ಮೊಬೈಲ್ ಹಾಗೂ ವಿವಿಧ ವಸ್ತುಗಳ ಅಕ್ರಮ ಸಾಗಾಟದ ಬಗ್ಗೆ ದೂರು ದಾಖಲಾಗಿವೆ. ಜೈಲಿನ ಒಳಗಿನ ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ ಎಂದರು. 2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದ ಪಿಎಸ್ಐ  ಜಗದೀಶ ಮರ್ಡರ್ ಕೇಸ್ ನಲ್ಲಿ ಹರೀಶಬಾಬು ಎನ್ನುವ ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿ ಹರೀಶ ಬಾಬು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇದ್ದು, ಈತನೇ ತನ್ನ ಆಪ್ತರ ಮೂಲಕ ಜೈಲಾಧಿಕಾರಿಗಳಿಗೆ ಲಂಚ ನೀಡಿದ್ದಾನೆ. ಬಳಿಕ ಜೈಲಿನ ಒಳಗೆ ಕಾರವಾರದಿಂದ ಮೀನು ಸರಬರಾಜು ಮಾಡಲಾಗಿದೆ. ಕಾರವಾರದಿಂದ ವಿವಿಧ ಮೀನಗಳನ್ನು ಕೆಜಿಗಟ್ಟೆಲೇ ತರಸಿಕೊಂಡು ಭಕ್ಷ ಭೋಜನ ಮಾಡಿದ್ದಾರೆ. 

ಬಿಗ್ ಬಾಸ್ ಕನ್ನಡ 11: ಗೆಲ್ಲೋದು ಹನುಮಂತನೋ? ತ್ರಿವಿಕ್ರಮನೋ?: ಸಮೀಕ್ಷೆಯಲ್ಲೇನಿದೆ?

ಜೈಲಿನ ಅಧಿಕಾರಿಗಳಿಗೆ ದುಡ್ಡು ಕೊಟ್ಟರೇ ಏನ್ ಬೇಕಾದ್ರು ಸಿಗುತ್ತದೆ ಎನ್ನುವುದು ಸಾಬೀತು ಮಾಡಿದೆ. ಈ ಕುರಿತು ಪ್ರತಿಕ್ರಿಯೆ ‌ನೀಡಿರುವ ಗೃಹಸಚಿವ ಜಿ. ಪರಮೇಶ್ವರ, ಹಣ ಪಡೆದಿರುವ ವಿಡಿಯೋ ಪರಿಶೀಲನೆ ‌ನಡೆಸಲಾಗ್ತಿದೆ. ಆಂತರಿಕ ತನಿಖೆಗೆ ಆದೇಶಿಸುವೆ ಎಂದು ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ಜೈಲಿನ ಒಳಗೆ ಅಕ್ರಮವಾಗಿ ಮೊಬೈಲ್ ಹಾಗೂ ಮಾದಕ ವಸ್ತುಗಳ ಸಾಗಟ ಸಂಬಂಧ ಎರಡು ಕೇಸ್ ದಾಖಲಾಗಿವೆ. ಈ ಬಗ್ಗೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಈಗ ಜೈಲಿನಲ್ಲಿ ಭರ್ಜರಿ ಫೀಶ್ ಊಟವನ್ನು ಜೈಲಾಧಿಕಾರಗಳ ನೆರವಿನಿಂದಲೇ ಕೈದಿಗಳು ಸವಿದಿದ್ದಾರೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. 

click me!