* ರೈತನಿಗೆ ಕಣ್ಣೀರು ತರಿಸಿದ ‘ಈರುಳ್ಳಿ’
* ಈರಳ್ಳಿಗೆ ಸೂಕ್ತ ಬೆಲೆ ಇಲ್ಲದೆ ರೈತರು ಕಂಗಾಲು
* ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿಯಲು ತಮಿಳುನಾಡು ಸರ್ಕಾರ ಕಾರಣ ಎಂದ ರೈತರು
ವರದಿ - ಪುಟ್ಟರಾಜು. ಆರ್.ಸಿ ಏಷ್ಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ, (ಮಾ.21): ಈರುಳ್ಳಿ (Onion) ಅಡುಗೆಮನೆಯಲ್ಲಿ ಹೆಣ್ಮಕ್ಕಳ ಮುಖದಲ್ಲಿ ಕಣ್ಣೀರು ಬರಿಸುವುದು ಕಾಮನ್. ಆದ್ರೀಗ ಈರುಳ್ಳಿ ಬೆಳೆದ ರೈತರ ಮೊಗದಲ್ಲೂ ಕಣ್ಣೀರು ತರಿಸುತ್ತಿದೆ. ಯಾಕಪ್ಪಾ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ...
undefined
ಒಂದೆಡೆ ದಿನನಿತ್ಯ ಅಗತ್ಯ ವಸ್ತುಗಳಾದ ದಿನಸಿ ಪದಾರ್ಥಗಳು ಹಾಗು ಅಡುಗೆ ಎಣ್ಣೆ ಹಾಗು ತರಕಾರಿ ಬೆಲೆಗಳು ಗಗನಕ್ಜೆ ಏರುತ್ತಾ ಇದ್ರೆ ಇತ್ತ ಚಾಮರಾಜನಗರ ದಲ್ಲಿ ಈರುಳ್ಳಿ ಬೆಳೆದಿರುವ ರೈತರ ಪಾಡು ಹೇಳತೀರದಾಗಿದೆ ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತೆ. ಪ್ರತಿ ವರ್ಷ ಬರುತ್ತಿದ್ದ ಲಾಭವನ್ನು ಗಮನದಲ್ಲಿಟ್ಟುಕೊಂಡು ರೈತರು ಈ ಬಾರಿಯೂ ಈರುಳ್ಳಿ ಬೆಳೆದಿದ್ರು. ಒಂದೊಂದು ಬಾರಿ ಒಂದು ಕೆಜಿಗೆ 200 ರೂಪಾಯಿ ತನಕ ಮಾರಾಟವಾಗುವ ಈರುಳ್ಳಿ ಈ ವರ್ಷ ಒಂದು ಕೆ.ಜಿ. ಈರುಳ್ಳಿಗೆ ಆರರಿಂದ ಏಳು ರೂಪಾಯಿ(Onion Price) ಮಾತ್ರ ಸಿಗುತ್ತಿದ್ದು, ಕೂಲಿ ಕಾರ್ಮಿಕರ ವೆಚ್ಚ ಭರಿಸಲು ರೈತರಿಂದ ಸಾಧ್ಯವಾಗುತ್ತಿಲ್ಲ. ಬೆಲೆ ಕುಸಿದಿರುವ ಪರಿಣಾಮ ಜಮೀನುಗಳಲ್ಲೇ ಈರುಳ್ಳಿ ರಾಶಿ ಹಾಕಿಕೊಂಡು ಮಾರಾಟಕ್ಕಾಗಿ ರೈತರು ಪರಿತಪಿಸುವಂತಾಗಿದೆ..
Onions Bring Tears to Farmer :1 ಟನ್ ಈರುಳ್ಳಿ ಮಾರಿದ ರೈತಗೆ ಉಳಿದದ್ದು ಕೇವಲ 13 ರುಪಾಯಿ!
ಇನ್ನು ಚಾಮರಾಜನಗರ ಜಿಲ್ಲೆಯಲ್ಲಿ ಈರುಳ್ಳಿ ಬೆಲೆ ಕುಸಿಯಲು ತಮಿಳುನಾಡು ಸರ್ಕಾರ ಕಾರಣ ಅಂತ ರೈತರು ಆರೋಪಿಸುತ್ತಿದ್ದಾರೆ. ಜಿಲ್ಲೆಯ ತರಕಾರಿ ಉತ್ಪನ್ನಗಳಿಗೆ ತಮಿಳುನಾಡಿನಲ್ಲಿ ಬೇಡಿಕೆಯಿದೆ. ಆದ್ರೆ ದಿಂಬಂ-ಸತ್ಯಮಂಗಲ ಹೆದ್ದಾರಿಯಲ್ಲಿ ರಾತ್ರಿ ಸಂಚಾರ ನಿಷೇಧಿಸಿರುವುದರಿಂದ ಉತ್ಪನ್ನಗಳ ಮಾರಾಟಕ್ಕೆ ತೊಂದರೆ ಆಗಿದೆ ಎನ್ನಲಾಗ್ತಿದೆ. ಇನ್ನೂ ಈರುಳ್ಳಿ ಬೆಲೆ ಕುಸಿದಿರುವುದರಿಂದ ರೈತರ ಪರಿಸ್ಥಿತಿ ಹೇಳತೀರದಾಗಿದೆ. ಕಬ್ಬು ಬೆಳೆಯಿಂದ ನಷ್ಟವಾಯ್ತು ಅಂತ ಈರುಳ್ಳಿ ಬೆಳೆದ್ವಿ. ಈಗ ಅದಕ್ಕೂ ಬೆಲೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಕೂಲಿ ವೆಚ್ಚ ಸಹ ಸರಿದೂಗ್ತಿಲ್ಲ ಅಂತ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಈ ಬಾರಿ ಈರುಳ್ಳಿ ಬೆಳೆ ಮಾತ್ರ ರೈತರ ಕಣ್ಣಲ್ಲಿ ನೀರು ತರಿಸಿದೆ. ಲಾಭದಾಸೆಯಿಂದ ಬಡ್ಡಿ ಸಾಲ ಮಾಡಿ ಬಿತ್ತನೆ ಮಾಡಿದ್ದ ಅನ್ನದಾತರ ಸಂಕಷ್ಟ ಹೇಳತೀರದಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರು ಬೆಳೆಯುವ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿದೆ..
1 ಟನ್ ಈರುಳ್ಳಿ ಮಾರಿದ ರೈತಗೆ ಉಳಿದದ್ದು ಕೇವಲ 13 ರುಪಾಯಿ!
ಕಳೆದೊಂದು 4-5 ತಿಂಗಳನಿಂದ ದರ ಏರಿಕೆ ಮೂಲಕ ಗ್ರಾಹಕನ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ (Oninon Price) ಇದೀಗ ಬೆಳೆ ಬೆಳೆದ ರೈತನಿಗೆ (Farmer) ಕಣ್ಣೀರು ತರಿಸಿದೆ. ಮಹಾರಾಷ್ಟ್ರದ ಸೊಲ್ಲಾಪುರದ ರೈತನೊಬ್ಬನಿಗೆ ಆತ ಬೆಳೆದ 1.1 ಟನ್ ಈರುಳ್ಳಿ ಮಾರಾಟ ಮಾಡಿದ ಬಳಿಕ ಎಲ್ಲಾ ಖರ್ಚು-ವೆಚ್ಚ ಕಳೆದ ಕೇವಲ 13 ರು. ಉಳಿದಿದೆ. ಈ ಕುರಿತ ಲೆಕ್ಕಾಚಾರದ ಪಟ್ಟಿಯನ್ನು ಮಾಜಿ ಸಂಸದ ರಾಜು ಶೆಟ್ಟಿ ಟ್ವೀಟರ್‌ನಲ್ಲಿ ಹಾಕಿದ್ದು ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ದಳ್ಳಾಳಿ (Agent) ಅತಿ ಕಡಿಮೆ ಬೆಲೆ ನೀಡಿದ್ದನ್ನು ನಂಬಲಾಗುತ್ತಿಲ್ಲ ಎಂದು ರೈತ ಕಣ್ಣೀರು ಹಾಕಿದ್ದಾರೆ. ಆದರೆ ಈರುಳ್ಳಿ ಗುಣಮಟ್ಟ ಚೆನ್ನಾಗಿರದ ಕಾರಣ ಅತಿ ಕಡಿಮೆ ಬೆಲೆಗೆ ಮಾರಾಟವಾಗಿದೆ ಎಂದು ದಳ್ಳಾಳಿ ಹೇಳಿದ್ದಾನೆ. ಶುಕ್ರವಾರ ಸೊಲ್ಲಾಪುರ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆಜಿಗೆ 30 ರು.ನಂತೆ ಮತ್ತು ಕಡಿಮೆ ಗುಣಮಟ್ಟದ ಈರುಳ್ಳಿ ಕೆಜಿಗೆ 1 ರು.ನಂತೆ ಮಾರಾಟವಾಗಿದೆ.
ಸೊಲ್ಲಾಪುರದ (Sollapur) ಬಾಪು ಕವಾಡೆ 1123 ಕೆಜಿ ಈರುಳ್ಳಿ ಬೆಳೆದು ಅದನ್ನು ಮಾರಾಟಕ್ಕೆ ಕಳುಹಿಸಿದ್ದರು. ಅಲ್ಲಿ ಕೆಜಿಗೆ 1 ರು.ನಂತೆ ಈರುಳ್ಳಿ ಮಾರಾಟ ಮಾಡಿ, ದಲ್ಲಾಳಿ ಇವರಿಗೆ 1665 ರು. ನೀಡಿದ್ದಾನೆ. ಈರುಳ್ಳಿ ಬೆಳೆಯಲು ಮಾಡಿದ ಕಾರ್ಮಿಕರ ವೆಚ್ಚ, ಮಾರುಕಟ್ಟೆಗೆ ಈರುಳ್ಳಿ ಸಾಗಣೆ ವೆಚ್ಚ, ಕಮೀಷನ್ ಎಲ್ಲಾ ಸೇರಿ ಕವಾಡೆಗೆ 1651 ರು. ವೆಚ್ಚವಾಗಿತ್ತು. ಅಂದರೆ ಅವರಿಗೆ ಉಳಿದಿದ್ದು ಕೇವಲ 13 ರುಪಾಯಿ ಮಾತ್ರ.