ಪೈಲಟ್‌ ರಹಿತ ಕ್ಯಾಪ್ಟರ್‌ ತಯಾರಿಕೆಗೆ ಸಿದ್ಧತೆ

By Kannadaprabha News  |  First Published Aug 2, 2023, 4:58 AM IST

ಯುದ್ಧ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗುವ ಪೈಲಟ್‌ ರಹಿತ ಕ್ಯಾಪ್ಟರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಿಆರ್‌ಡಿಒ ಸಂಸ್ಥೆಯ ಏರೋನಾಟಿಕಲ್‌ ಸಿಸ್ಟಮ್ಸ್‌ನ ವಿಶ್ರಾಂತ ನಿರ್ದೇಶಕ ಮತ್ತು ಅಗ್ನಿ ಮಿಷನ್‌ಗಳ ಯೋಜನಾ ನಿರ್ದೇಶಕ ಟೆಸ್ಸಿ ಥಾಮಸ್‌ ತಿಳಿಸಿದರು.


  ಮೈಸೂರು : ಯುದ್ಧ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗುವ ಪೈಲಟ್‌ ರಹಿತ ಕ್ಯಾಪ್ಟರ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಿಆರ್‌ಡಿಒ ಸಂಸ್ಥೆಯ ಏರೋನಾಟಿಕಲ್‌ ಸಿಸ್ಟಮ್ಸ್‌ನ ವಿಶ್ರಾಂತ ನಿರ್ದೇಶಕ ಮತ್ತು ಅಗ್ನಿ ಮಿಷನ್‌ಗಳ ಯೋಜನಾ ನಿರ್ದೇಶಕ ಟೆಸ್ಸಿ ಥಾಮಸ್‌ ತಿಳಿಸಿದರು.

ನಗರದ ಪ್ರಾದೇಶಿಕ ಸಂಸ್ಥೆಯಲ್ಲಿ ಮಂಗಳವಾರ ನಡೆದ 61ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸರ್ದಾರ್‌ ಪಣಿಕ್ಕರ್‌ ಸ್ಮರಣಾರ್ಥ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Tap to resize

Latest Videos

ಪೈಲಟ್‌ ಇಲ್ಲದೇ ಚಾಲನೆಗೊಳ್ಳುವ ಕ್ಯಾಪ್ಟರ್‌ ಸಿದ್ಧಪಡಿಸುತ್ತಿದೆ. ಹೀಗಾಗಿ ಈ ರೀತಿಯ ಕ್ಯಾಪ್ಟರ್‌ ಸಿದ್ಧಪಡಿಸಲು ಸಿದ್ಧತೆ ನಡೆಯುತ್ತಿದೆ ಎಂದರು.

ಈ ವೇಳೆ ವಿದ್ಯಾರ್ಥಿಯೊಬ್ಬರು ಯುದ್ಧ ವಿಮಾನಗಳ ತಯಾರಿಗೆ ನೀಡಿದಷ್ಟುಮಹತ್ವವನ್ನು ಸಿವಿಲ್‌ ಏವಿಯೇಷನ್‌ಗೆ ಏಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಂದಿನ ಎರಡು ದಶಕದಲ್ಲಿ ದೊಡ್ಡ ಎಂಜಿನ್‌ ಒಳಗೊಂಡ ಸಿವಿಲ್‌ ಏರ್‌ಕ್ರಾಫ್‌್ಟಬರುತ್ತದೆ. ಬೆಂಗಳೂರಿನ ಎನ್‌ಎಎಲ್‌ನಲ್ಲಿ ಸದ್ಯ 90 ಸೀಟ್‌ನ ಸಾರಸ್‌ ಏರ್‌ಕ್ರಾಫ್‌್ಟತಯಾರಾಗುತ್ತಿದೆ. ನಮ್ಮಲ್ಲಿ ಎಂಜಿನ್‌ ತಯಾರಿಕೆಗೆ ಪೂರಕ ವಾತಾವರಣವಿದ್ದರೂ ಏರ್‌ಕ್ರಾಫ್‌್ಟಮೇಲ್ಮೈ ಹಾಗೂ ಇತರ ಭಾಗಗಳನ್ನು ತಯಾರಿಸುವ ವ್ಯವಸ್ಥೆ ಇಲ್ಲ. ಅದಕ್ಕೆ ಬೇಕಾದ ಲೋಹವನ್ನು ಪಡೆದುಕೊಂಡರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಅವರು ಹೇಳಿದರು.

ಆಧುನಿಕ ಸಂದರ್ಭದಲ್ಲಿ ಸಂಶೋಧಕರಿಗೆ ಬೇಡಿಕೆ ಹೆಚ್ಚಿದೆ. ಡಿಆರ್‌ಡಿಒನಲ್ಲಿ ದೊರೆತ ಅನುಭವದಿಂದ ಹೊಸ ಸಂಶೋಧನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಆಧುನಿಕ ಜಗತ್ತಿನಲ್ಲಿ ಸಂಶೋಧಕರಿಗೆ ಹೆಚ್ಚು ಅವಕಾಶವಿದೆ. ಅದಕ್ಕೆ ಪೂರಕ ವಾತಾವರಣ ಇದೆ. ನಮ್ಮೆಲ್ಲರಿಗೂ ಇಂತಹ ಸನ್ನಿವೇಶ ಇರಲಿಲ್ಲ. ಪಠ್ಯ ಬಿಟ್ಟರೆ ಬೇರೆ ವೇದಿಕೆ ಇರಲಿಲ್ಲ. ಶ್ರಮವಹಿಸಿ ಕೆಲಸ ಮಾಡಿದರೆ ಮೇಲೆ ಬರಲು ಸಾಧ್ಯವಿದೆ ಎಂಬುದಕ್ಕೆ ನಾನೇ ಸಾಕ್ಷಿ ಆಗಿದ್ದೇನೆ ಎಂದು ಅವರು ತಿಳಿಸಿದರು.

ಕಲಿಕೆಯು ಆಲೋಚನೆಯನ್ನು ಹುಟ್ಟುಹಾಕುತ್ತದೆ. ಆಲೋಚನೆ ಆಸಕ್ತಿಯನ್ನು ಉಂಟುಮಾಡುತ್ತದೆ. ಆಸಕ್ತಿಯು ಜ್ಞಾನವನ್ನು ತಂದುಕೊಡುತ್ತದೆ. ಜ್ಞಾನವು ವ್ಯಕ್ತಿಯನ್ನು ದೊಡ್ಡ ಜ್ಞಾನವಂತನಾಗಿ ಮಾಡುತ್ತದೆ ಎಂಬ ಕಲಾಂ ಅವರ ಮಾತು ಸದಾ ಪ್ರೇರಣೆ ಎಂದರು.

ಎನ್‌ಇಪಿ ಶಿಕ್ಷಣ ವ್ಯವಸ್ಥೆಯನ್ನೇ ಪುನರ್‌ ವ್ಯಾಖ್ಯಾನಿಸುತ್ತದೆ. ಈ ಮಾಧ್ಯಮವನ್ನು ಬಳಕೆ ಮಾಡಿಕೊಂಡು ಶ್ರಮವಹಿಸಿ ಅಧ್ಯಯನ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನ ಪಡೆಯಲು ಇದರಿಂದ ಯಾವುದೇ ಅಡೆ ತಡೆಗಳಿಲ್ಲ ಎಂದು ಅವರು ಹೇಳಿದರು.

ದೊಡ್ಡ ಯೋಜನೆಗಳನ್ನು ಮಾಡಲು ಮುಂದುವರಿದ ದೇಶಗಳಂತೆ ನಮ್ಮಲ್ಲಿ ಆರ್ಥಿಕ ಬಲ ಹಾಗೂ ಮೂಲಸೌಲಭ್ಯಗಳಿಲ್ಲ. ಕ್ರಮೇಣ ಸಂಶೋಧನೆಗೆ ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ ಎಂದರು.

ವಿದ್ಯಾರ್ಥಿಗಳು ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹೇಗೆ? ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿ, ಡಿಆರ್‌ಡಿಒ ಸಂಸ್ಥೆಯು ಸಂಸ್ಥಾಪನಾ ದಿನಾಚರಣೆಯಂದು ತನ್ನ ಸಂಶೋಧನೆ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡುತ್ತದೆ ಎಂದರು.

ಚಲನಚಿತ್ರ ನಟಿ ಮಾಳವಿಕಾ ಅವಿನಾಶ್‌, ಪ್ರಾಂಶುಪಾಲ ಪೊ›.ವೈ. ಶ್ರೀಕಾಂತ್‌ ಮೊದಲಾದವರು ಇದ್ದರು.

click me!