‘ಘಟಸರ್ಪ ಕಂಗಾಲಾದೀತಲೇ ಪರಾಕ್ ’ ಎಂದು ಕಾರಣೀಕ/ ಜನರು ಮತ್ತೆ ಪ್ರವಾಹಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾ? ದೊಡ್ಡ ದೊಡ್ಡ ರಾಜಕೀಯ ನಾಯಕರಿಗೆ ಸಂಕಷ್ಟ ಎದುರಾಗುತ್ತದೆಯಾ? ಮತ್ತೊಂದು ಪ್ರಕೃತಿ ವಿಕೋಪದ ಮುನ್ಸೂಚನೆಯಾ?
ಹಾವೇರಿ[ಅ. 07] ಐತಿಹಾಸಿಕ ದೇವರಗುಡ್ಡ ಕ್ಷೇತ್ರದ ಕಾರಣೀಕ ಈ ಸಾರಿ ‘ಘಟಸರ್ಪ ಕಂಗಾಲಾದೀತಲೇ ಪರಾಕ್ ’ ಎಂದು ನುಡಿದಿದೆ. ಶ್ರೀ ದೇವರಗುಡ್ಡ ಮಾಲತೇಶ ಸ್ವಾಮಿಯ ಕಾರಣೀಕ ಹೀಗೆ ನುಡಿದಿದ್ದು ಭಕ್ತರು ಬಗೆಬಗೆಯಾಗಿ ವಿಶ್ಲೇಷಣೆ ಮಾಡುತ್ತಿದ್ದಾರೆ.
ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಘಟಸರ್ಪ ಕಂಗಾಲಾದೀತಲೇ ಪರಾಕ್’ ಎಂದು ಗೊರವಯ್ಯ ಕಾರಣೀಕ ನುಡಿದರು. ನಾಗಪ್ಪಜ್ಜ ಉರ್ಮಿ ಗೊರವಯ್ಯರಿಂದ ಕಾರಣೀಕ ನುಡಿಯಿತು. ಪ್ರತೀ ವರ್ಷ ಆಯುಧ ಪೂಜೆ ದಿನ ಕಾರಣೀಕ ನುಡಿಯುವ ಗೊರವಯ್ಯನವರ ಮಾತು ಸತ್ಯವಾಗುತ್ತದೆ ಎಂಬ ನಂಬಿಕೆಯಿದೆ.
ಬಿಜೆಪಿಯಲ್ಲಿ ಬಿಎಸ್ ವೈ ಸೈಡ್ ಲೈನ್ ಆಗಿದ್ದು ಹೇಗೆ?
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಐತಿಹಾಸಿಕ ಸುಕ್ಷೇತ್ರ ದೇವರಗುಡ್ಡ ಕಾರಣೀಕ ಕೇಳಲು ಸಾವಿರಾರು ಜನ ಸೇರುತ್ತಾರೆ. ಮತ್ತೊಂದು ಪ್ರಕೃತಿ ವಿಕೋಪದ ಮುನ್ಸೂಚನೆಯಾ? ಮಳೆ,ಗಾಳಿ ಮತ್ತು ಪ್ರವಾಹದಿಂದ ಜನ ಮತ್ತೆ ಕಂಗಾಲಾಗಬೇಕಾ? ದೊಡ್ಡ ಪಕ್ಷ ಮತ್ತು ದೊಡ್ಡ ರಾಜಕೀಯ ವ್ಯಕ್ತಿಗಳಿಗೆ ಸಂಕಷ್ಟ ಎದುರಾಗುತ್ತಾ? ರಾಜಕೀಯ ನಾಯಕರು, ಪಕ್ಷಗಳು ಕಂಗಾಲಾಗುವ ಸಾಧ್ಯತೆ ಉಂಟಾ? ಅಧಿಕಾರ ಹಿಡಿಯುವಲ್ಲಿ, ಕಾಪಾಡುವಲ್ಲಿ ಪರದಾಡುವ ಸ್ಥಿತಿ ಬರುತ್ತದೆಯಾ ಎಂಬೆಲ್ಲ ಮಾತುಗಳು ಆರಂಭವಾಗಿದೆ.