ಪ್ರಧಾನಿ ಮೋದಿ ಉದ್ಘಾಟಿಸುತ್ತಿರುವ ತುಮಕೂರಿನ HAL ಘಟಕದ ವಿಶೇಷತೆ

By Suvarna News  |  First Published Jan 31, 2023, 3:33 PM IST

ತುಮಕೂರಿನ  ಬಿದರೆಹಳ್ಳಕಾವಲ್‌ನಲ್ಲಿ  6300 ಕೋಟಿ ರೂ. ಬಂಡವಾಳದಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಎಚ್‌ಎಎಲ್ ಲಘುಹೆಲಿಕ್ಯಾಪ್ಟರ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ  ಲೋಕಾರ್ಪಣೆ ಮಾಡಲಿದ್ದಾರೆ.‌


ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ ತುಮಕೂರು

ತುಮಕೂರು(ಜ.31): ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ  ಬಿದರೆಹಳ್ಳಕಾವಲ್‌ನಲ್ಲಿ  6300 ಕೋಟಿ ರೂ. ಬಂಡವಾಳದಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಎಚ್‌ಎಎಲ್ ಲಘುಹೆಲಿಕ್ಯಾಪ್ಟರ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ  ಲೋಕಾರ್ಪಣೆ ಮಾಡಲಿದ್ದಾರೆ.‌ ಫೆಬ್ರವರಿ 6 ರಂದು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಮೋದಿ ಅಂದೇ ಗುಬ್ಬಿ ಬಳಿಯ ಎಚ್.ಎ.ಎಲ್‌ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. 2015 ಜ.3ರಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ, 2018ಕ್ಕೆ ಹೆಲಿಕ್ಯಾಕ್ಟರ್ ಹಾರಾಟ ನಡೆಸಲಿದೆ ಎಂದು ನೀಡಿದ್ದ ಭರವಸೆ ಹುಸಿಯಾಗಿತ್ತು, ಆದ್ರೀಗ ನಾಲ್ಕು ವರ್ಷ  ತಡವಾಗಿ ಎಚ್.ಎ.ಎಲ್ ಘಟಕ ಲೋಕಾರ್ಪಣೆಯಾಗುತ್ತಿದೆ.

Latest Videos

undefined

ಸುಮಾರು 614 ಎಕರೆ ವಿಸ್ತೀರ್ಣದಲ್ಲಿರುವ ಈ ಎಚ್.ಎ.ಎಲ್‌ ಘಟಕದಲ್ಲಿ ಸೇನೆಗೆ ಅಗತ್ಯವಿರುವ ಲಘು ಹೆಲಿಕಾಪ್ಟರ್ ಅನ್ನು ತಯಾರಿಸಲಾಗುವುದು. 2016  ಜನವರಿ 3ರಂದು ಪ್ರಧಾನಿ ಮೋದಿ ಅವರು ಎಚ್.ಎ.ಎಲ್ ಗೆ ಅಡಿಗಲ್ಲು ಹಾಕಿದ್ದರು, ಅಂದರೇ ಬರೋಬ್ಬರಿ 6 ವರ್ಷಗಳ‌ ನಂತರ ಮೋದಿಯವರೇ ಎಚ್.ಎ.ಎಲ್ ಘಟಕ‌ ಉದ್ಘಾಟನೆ ಮಾಡುತ್ತಿರುವುದು ವಿಶೇಷವಾಗಿದೆ.‌

6400 ಕೋಟಿ ವೆಚ್ಚದಲ್ಲಿ  ನಿರ್ಮಾಣವಾಗಿರುವ ನೂತನ ಹೆಚ್ ಎಎಲ್ ಉತ್ಪಾದನಾ ಘಟಕದಲ್ಲಿ,  3 ಸಾವಿರ ಕೆಜಿ ತೂಕ ಲೈಟ್ ಯುಟಿಲಿಟಿ ಸಾಮರ್ಥ್ಯವುಳ್ಳ ಹೆಲಿಕಾಪ್ಟರ್ ಉತ್ಪಾದನೆ ಮಾಡಲಾಗುತ್ತಿದೆ. ಈ ಹೆಲಿಕಾಪ್ಟರ್ ನಲ್ಲಿ  5-6 ಜನ ಪ್ರಯಾಣ ಮಾಡಬಹುದಾಗಿದೆ. 614 ಎಕರೆಯಲ್ಲಿ,  529 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ಬಿಡಿ ಭಾಗ ತಯಾರಿಸುವ ಜೋಡಿಸುವ ಘಟಕ, ರನ್ ವೇ, ಆಸ್ಪತ್ರೆ, ಆಢಳಿತ ಕಚೇರಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ.   ಇಲ್ಲಿ ಸಿದ್ದವಾಗುವ ಹೆಲಿಕಾಪ್ಟರ್ ಗಳನ್ನು ಭೂ ಸೇನೆ ವಾಯು ಸೇನೆಗೆ ಬಳಕೆ ಮಾಡಲಾಗುತ್ತಿದೆ.

Assembly election: ಭ್ರಷ್ಟಾಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಶಾಮೀಲು: ಸಿದ್ದರಾಮಯ್ಯ ಆರೋಪ

ಸರಿಸುಮಾರು 4000 ಸಾವಿರ ಉದ್ಯೋಗ ಸೃಷ್ಟಿಯಾಗಲಿದ್ದು, ಜನರಿಗೆ ಉದ್ಯೋಗ ಸಿಗಲಿದೆ ಎಂಬ ನಿರೀಕ್ಷೆ ಇದೆ. ಸಾರ್ವಜನಿಕ ವಲಯದ ಬೃಹತ್ ಉದ್ಯಮ ಜಿಲ್ಲೆಯಲ್ಲಿ ಆರಂಭವಾಗುತ್ತಿದ್ದು ಜಿಲ್ಲೆಯ ನಿರುದ್ಯೋಗಿ ಯುವಕರಲ್ಲಿ ಕನಸು ಮೂಡಿದೆ.

ಗಣಿ ಧಣಿಗಳಿಗೆ ಮಾತ್ರವಲ್ಲ- ಸಾಮಾನ್ಯರಿಗೂ ಹೆಲಿಕಾಪ್ಟರ್‌ ಹತ್ತುವ ಭಾಗ್ಯ: ಬಳ್ಳಾರಿಯ ಬೈ-ಸ್ಕೈ ಸೇವೆ

ದೇಶದಲ್ಲಿ ಲಘು ಹೆಲಿಕ್ಯಾಪ್ಟಕರ್‌ಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ 75 ಹೆಲಿಕಾಪ್ಟರ್ ತಯಾರಿಸುವ ಸಾಮಾರ್ಥ್ಯ ಈ ಘಟಕಕ್ಕಿದೆ. ಸಂಪೂರ್ಣ ಸ್ವದೇಶದಲ್ಲೇ ಸೇನೆಗೆ ಅಗತ್ಯ ಇರುವ ಶಸ್ತ್ರ ಹಾಗೂ ವಾಹನಗಳನ್ನು ತಯಾರಿಸಿರುವ ದೂರ ದೃಷ್ಟಿ ಹಿನ್ನೆಯಲ್ಲಿ ಈ ಎಚ್.ಎ.ಎಲ್ ಘಟಕಕ್ಕೆ ಅಡಿಗಲ್ಲು‌ ಹಾಕಲಾಗಿತ್ತು. 1 ಲಘು ಹೆಲಿಕ್ಯಾಪ್ಟರ್ ಉತ್ಪಾದನೆಗೆ 30 ಕೋಟಿ ರೂ. ವೆಚ್ಚ ತಗುಲಲಿದೆ.  ಪ್ರತೀ ವರ್ಷ 2 ಸಾವಿರ ಕೋ.ರೂ. ವಹಿವಾಟು ನಡೆಯಲಿದೆ ಎಂದು ಅಂದಾಜಿಸಲಾಗಿದೆ.

click me!