ಮೈಸೂರು: ಮುಂದಿನ ವರ್ಷದಿಂದ ತಾಲೂಕು ಆಡಳಿತದಿಂದ ರೈತ ದಿನಾಚರಣೆ ಆಚರಿಸಲು ಕ್ರಮ

By Kannadaprabha News  |  First Published Nov 1, 2022, 5:06 AM IST

ಮುಂದಿನ ವರ್ಷದಿಂದ ರೈತರ ದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.


 ಕೆ.ಆರ್‌. ನಗರ (ನ.01):  ಮುಂದಿನ ವರ್ಷದಿಂದ ರೈತರ ದಿನಾಚರಣೆಯನ್ನು ತಾಲೂಕು ಆಡಳಿತದ ವತಿಯಿಂದ ಆಚರಣೆ ಮಾಡಲು ಕ್ರಮ ವಹಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ (Farmers)  ಉತ್ಪಾದಕ ಸಂಸ್ಥೆಗಳು, ತಾಲೂಕು ಯುವ ರೈತ ವೇದಿಕೆ ಹಾಗೂ ಕೃಷಿ (Agriculture)  ಪೂರಕ ಇಲಾಖೆಯ ಸಂಯುಕ್ತಾಶ್ರದಲ್ಲಿ ರೈತ ಮಹಿಳಾ ದಿನಾಚರಣೆ ಮತ್ತು ವಿಶ್ವ ಆಹಾರ ದಿನಾಚರಣೆ ಅಂಗವಾಗಿ ನಡೆದ ತಾಲೂಕು ಮಟ್ಟದ ಕಿಸಾನ್‌ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Tap to resize

Latest Videos

ರೈತ ಉತ್ಪಾದಕ ಸಂಸ್ಥೆಯ ಪದಾಧಿಕಾರಿಗಳು ರೈತರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ ಶಾಸಕರು ಉತ್ತಮ ಬೆಳೆ ಬೆಳೆಯಲು ಅನುಕೂಲವಾಗುವಂತಹ ಕಾರ್ಯಗಾರಗಳನ್ನು ರೈತರಿಗಾಗಿ ಆಯೋಜಿಸಬೇಕು, ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಯುವ ರೈತ ವೇದಿಕೆ ತಾಲೂಕು ಅಧ್ಯಕ್ಷ ಅರ್ಜುನಹಳ್ಳಿ ರಾಂಪ್ರಸಾದ್‌ ಮಾತನಾಡಿ, ದೇಶದಲ್ಲಿ ಶೇ. 70ರಷ್ಟುಕೃಷಿ ಮಾಡುವ ರೈತ ಅರ್ಧ ಗಂಟೆಗೊಬ್ಬರಅತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದ್ದು, ಆಡಳಿತ ನಡೆಸುವವರು ರೈತರಿಗೆ ಉಪಯುಕ್ತವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಕೃಷಿ ನೀತಿ ಜಾರಿಗೆ ತಂದು ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು. ರೈತರು ಬೆಳೆದ ಭತ್ತದ ಬೆಲೆ 1 ಕೆ.ಜಿಗೆ 24 ರು. ಗಳಾಗಿದ್ದು, ರಿಲಯನ್ಸ್‌ ಕಂಪನಿಯವರು ಮಾರಾಟ ಮಾಡುವ 1 ಕೆ.ಜಿ. ಅಕ್ಕಿ 140 ರು. ಇಷ್ಟುಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಸರ್ಕಾರ ರೈತರ ಪರವಾಗಿ ಸರಿಯಾದ ನಿರ್ಧರ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ವಿಜಯಮಲ್ಯ ಸೇರಿದಂತೆ ಇತರ ಉದ್ಯಮಿಗಳು ಮಾಡಲಾದ 10 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ರೈತರು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳು ಪಡೆದಿರುವ 5 ಲಕ್ಷ ಕೋಟಿ ರು. ಸಾಲಮನ್ನಾ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಸ್ವತಂತ್ರ್ಯ ಸಂದರ್ಭದಲ್ಲಿ 33 ಕೋಟಿ ಜನ ಸಂಖ್ಯೆ ಹೊಂದಿದ್ದ ದೇಶದಲ್ಲಿ ಇಂದು 130 ಕೋಟಿ ಇದ್ದರೂ ಸಹ ಆಹಾರಕ್ಕೆ ತೊಂದರೆಯಿಲ್ಲ ಇದಕ್ಕೆ ರೈತರೇ ಕಾರಣ ಎಂದರು.

ಪ್ರಗತಿಪರ ರೈತರಾದ ಇಂದ್ರಮ್ಮ, ಮೈಸೂರು ಮಹಾತ್ಮ ಗಾಂಧಿ ಟ್ರಸ್ಟ್‌ನ ಆದಿಶೇಷನ್‌ಗೌಡ, ತಹಸೀಲ್ದಾರ್‌ ಎಂ.ಎಸ್‌. ಯದುಗಿರೀಶ್‌, ಇಒ ಎಚ್‌.ಕೆ. ಸತೀಶ್‌, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತಿಮ್ಮಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್‌. ಗುರುಪ್ರಸಾದ್‌, ಸಿಡಿಪಿಒ ಕೆ.ಆರ್‌. ಪೂರ್ಣಿಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಎನ್‌. ಪ್ರಸನ್ನ, ರೈತ ಮುಖಂಡ ಮೃತ್ಯುಂಜಯ, ಎ.ಟಿ. ಗೋಪಾಲ…, ಸಂಪತ್‌, ಎಚ್‌.ಪಿ. ಶಿವಣ್ಣ, ಕೃಷ್ಣಶೆಟ್ಟಿ, ಮಲ್ಲೇಶ್‌ ಇದ್ದರು.

ಭತ್ತವೇ ಆಸರೆ

ಅತಿವೃಷ್ಟಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸಂಕಟಕ್ಕೆ ಸಿಲುಕಿರುವ ಜಿಲ್ಲೆಯ ಅನ್ನದಾತರು ಈಗಾಗಲೇ ಬಿತ್ತನೆ ಮಾಡಿದ ಶೇಂಗಾ, ರಾಗಿ, ತೊಗರಿ, ಅವರೆ ಮತ್ತಿತರ ಮಳೆ ಅಶ್ರಿತ ಬೆಳೆಗಳನ್ನು ವ್ಯಾಪಕ ಮಳೆಯಿಂದಾಗಿ ಕಳೆದುಕೊಂಡಿದ್ದು ಇದೀಗ ಬರೀ ಭತ್ತದ ಬೆಳೆ ಮಾತ್ರ ಆಸರೆ ಎನ್ನುವಂತಾಗಿದೆ.

ಹಲವು ದಶಕಗಳ ಕಾಲ ಮಳೆ ಕೊರತೆಯಿಂದ ಕೃಷಿ ಕಾರ್ಯಗಳಿಗೆ ಅಂತರ್ಜಲವನ್ನೆ ನಂಬಿದ್ದ ರೈತರು ಜಿಲ್ಲೆಯಲ್ಲಿ ಭತ್ತ ಬೆಳೆಯುವುದನ್ನು ಸಂಪೂರ್ಣ ಕೈ ಬಿಟ್ಟಿದ್ದರು. ಹೆಚ್ಚು ನೀರು ಬೇಡುವ ಭತ್ತದ ಬೆಳೆ ಸಹವಾಸದಿಂದ ದೂರ ಉಳಿದಿದ್ದರು. ಆದರೆ ಈಗ ಎಲ್ಲಿ ನೋಡಿದರೂ ಭತ್ತದ ಬೆಳೆಯ ಸಿರಿ ನೋಡಗರ ಕೈ ಬೀಸಿ ಕರೆಯುತ್ತಿದೆ.

ಮಳೆಗೆ ಶೇಂಗಾ, ರಾಗಿ ಹಾನಿ

ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಆದ ತೀವ್ರ ಮಳೆಯಿಂದಾಗಿ ಬಿತ್ತನೆಗೂ ಸಮರ್ಪಕವಾಗಿ ಸಮಯ ಸಿಗಲಿಲ್ಲ. ಬಿತ್ತನೆ ಆದರೂ ನಿರಂತರ ಮಳೆಯಿಂದಾಗಿ ಅಪಾರ ಪ್ರಮಾಣದ ಶೇಂಗಾ, ರಾಗಿ, ಅವರೆ, ತೊಗರಿ ಮತ್ತತರ ಬೆಳೆಗಳು ಮಳೆಯಿಂದ ಸಾಕಷ್ಟುಹಾನಿಯಾಗಿದ್ದು ರೈತರು ಕಣ್ಣೀರು ಸುರಿಸುವಂತಾಗಿದೆ. ಜೊತೆಗೆ ಈ ಬಾರಿ ಶೇಂಗಾ, ರಾಗಿ ಬಿತ್ತನೆ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ.

ಹೀಗಾಗಿ ಮುಂಗಾರು ಕೈ ಹಿಡಿದರೂ ಜಿಲ್ಲೆಯಲ್ಲಿ ಅತಿವೃಷ್ಠಿ ಪರಿಣಾಮ ರೈತರ ಪರಿಸ್ಥಿತಿ ಸಂಕಷ್ಟಕ್ಕೀಡಾಗಿದ್ದು ಮಳೆಯ ತೀವ್ರತೆಯ ಪರಿಣಾಮ ಖುಷ್ಕಿ ಬೇಸಾಯದ ಮೇಲೆ ವ್ಯತಿರಕ್ತ ಪರಿಣಾಮ ಬೀರಿದೆ. ಇನ್ನೂ ಅವರೆ, ತೊಗರಿ, ಹುರುಳಿ ಬಿತ್ತನೆಗೂ ಮಳೆ ಕಾಟ ತಪ್ಪಲಿಲ್ಲ. ಇಲ್ಲಿವರೆಗೂ ಜಿಲ್ಲಾದ್ಯಂತ ಶೇ.80 ರಷ್ಟುಬಿತ್ತನೆ ಗುರಿ ಸಾಧಿಸಲಾಗಿದೆ.

ಭತ್ತ ಬಂಪರ್‌ ಬೆಳೆ ನಿರೀಕ್ಷೆ

ಸದ್ಯ ರೈತರಿಗೆ ಜಿಲ್ಲೆಯಲ್ಲಿ ಭತ್ತದ ಬಂಪರ್‌ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಸಣ್ಣಪುಟ್ಟಹೊಲ, ಗದ್ದೆ ಇರುವರು ಕೂಡ ಈ ಭಾರಿ ಮಳೆ ಆಗುತ್ತಿರುವುದನ್ನು ನೋಡಿ ಭತ್ತದ ಗದ್ದೆ ಸಿದ್ದಪಡಿಸಿ ಭತ್ತದ ನಾಟಿ ಮಾಡಿದ್ದು ಎಲ್ಲಿ ನೋಡಿದರೂ ಈಗ ನಾಟಿ ಮಾಡಿರುವ ಭತ್ತದ ಪೈರು ಹಚ್ಚ ಹರಿಸಿನಿಂದ ಕಂಗೊಳಿಸುತ್ತಿದೆ. ಸತತ ಎರಡು ವರ್ಷಗಳಿಂದ ಜಿಲ್ಲಾದ್ಯಂತ ಭರ್ಜರಿ ಮಳೆ ಆಗಿರುವ ಪರಿಣಾಮ ಈಗಾಗಲೇ ಕೆರೆ, ಕುಂಟೆ, ಜಲಾಶಯಗಳು ತುಂಬಿ ಹರಿಯುತ್ತಿದ್ದು ಎಲ್ಲಿ ನೋಡಿದರೂ ನೀರಿನ ಸೆಲೆಗಳು ಇರುವ ಕಾರಣದಿಂದ ರೈತರು ಧೈರ್ಯ ತೋರಿ ಭತ್ತದ ನಾಟಿಗೆ ಮುಂದಾಗಿರುವ ಪರಿಣಾಮ ಜಿಲ್ಲಾದ್ಯಂತ ನಿರೀಕ್ಷೆಗೂ ಮೀರಿ ಭತ್ತದ ನಾಟಿಯಾಗಿದ್ದು ಬಂಪರ್‌ ಬೆಳೆ ನಿರೀಕ್ಷಿಸಿದ್ದಾರೆ.

click me!