ಮಹಿಳೆ ಮೇಲೆ ಅತ್ಯಾಚಾರ| ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಇಟ್ಟಂಗಿ ಬಟ್ಟಿಯಲ್ಲಿ ನಡೆದ ಘಟನೆ| ಅತ್ಯಾಚಾರವೆಗಿ ಪರಾರಿಯಾದ ಕಾಮುಕ|
ಜಮಖಂಡಿ(ಮಾ.13): ಬಟ್ಟಿ ಮಾಲೀಕನ ಮಗನಿಂದ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ತಾಲೂಕಿನ ಇಟ್ಟಂಗಿ ಬಟ್ಟಿಯೊಂದರಲ್ಲಿ ಗುರುವಾರ ನಡೆದಿದೆ.
ತಾಲೂಕಿನ ಅನಿಲ ಹಣಮಂತ ಲಿಂಬಾಳಕರ(23) ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿಯು ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆರೋಪಿಯು ಇಟ್ಟಂಗಿ ಬಟ್ಟಿಯಲ್ಲಿ ಮೂರು ತಿಂಗಳಿಂದ ಕೆಲಸ ಮಾಡುತ್ತಿದ್ದ. ಅಲ್ಲಿಯೇ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಈತ, ಆಕೆಯ ಗಂಡ ಮನೆಯಲ್ಲಿ ಇರದ ಸಮಯ ನೋಡಿ ಅತ್ಯಾಚಾರ ಮಾಡಿದ್ದಾನೆ ದೂರಿನಲ್ಲಿ ದಾಖಲಾಗಿದೆ. ಈ ಬಗ್ಗೆ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.