ನಗರದ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಜಿಲ್ಲಾಡಳಿತ ಪರಿವರ್ತಿಸಿದೆ. ಇನ್ನು ಪ್ರತಿಷ್ಟಿತ ದೊಡ್ಡ ಖಾಸಗಿ ಆಸ್ಪತ್ರೆಗಳು, ಸಣ್ಣ ಪುಟ್ಟನರ್ಸಿಂಗ್ ಹೋಂಗಳಲ್ಲೂ ಬೆಡ್‌ಗಳಾಗಲೀ, ಚಿಕಿತ್ಸೆಯಾಗಲೀ ಬಡ ರೋಗಿಗಳಿಗೆ, ಗ್ರಾಮೀಣ ರೋಗಿಗಳಿಗೆ ಸಿಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದಾವಣಗೆರೆ(ಜು.27): ಸಾಮಾನ್ಯ ಕಾಯಿಲೆಯಿಂದ, ದೀರ್ಘಾವಧಿ ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ನಗರದ ಜಿಲ್ಲಾಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಯಾಗಲೀ, ಬೆಡ್‌ಗಳಾಗಲೀ ಸಿಗದೇ ತೀವ್ರ ಪರದಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ನಗರದ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಜಿಲ್ಲಾಡಳಿತ ಪರಿವರ್ತಿಸಿದೆ. ಇನ್ನು ಪ್ರತಿಷ್ಟಿತ ದೊಡ್ಡ ಖಾಸಗಿ ಆಸ್ಪತ್ರೆಗಳು, ಸಣ್ಣ ಪುಟ್ಟನರ್ಸಿಂಗ್ ಹೋಂಗಳಲ್ಲೂ ಬೆಡ್‌ಗಳಾಗಲೀ, ಚಿಕಿತ್ಸೆಯಾಗಲೀ ಬಡ ರೋಗಿಗಳಿಗೆ, ಗ್ರಾಮೀಣ ರೋಗಿಗಳಿಗೆ ಸಿಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೊರೋನಾ ಹೊರತುಪಡಿಸಿ ಬೇರೆ ಯಾವುದೇ ಕಾಯಿಲೆಗೆ ತಪಾಸಣೆ, ಚಿಕಿತ್ಸೆಗೆಂದು ಜಿಲ್ಲಾ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಿಗೆ ಹೋಗುವಂತೆ ಸೂಚಿಸಲಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಂತೂ ತಮ್ಮಲ್ಲಿ ಬೆಡ್‌ಗಳೇ ಇಲ್ಲವೆಂದು ಸಾರಾಸಗಟಾಗಿ ಹೇಳಿ, ವಾಪಾಸ್ಸು ಕಳಿಸುತ್ತಿವೆ.
ದಿನದಿನಕ್ಕೂ ಕೊರೋನಾ ಹೊರತುಪಡಿಸಿದ ರೋಗಿಗಳು ಚಿಕಿತ್ಸೆಯಾಗಲೀ, ಬೆಡ್‌ಗಳಾಗಲೀ ಸಿಗದೇ ಪರದಾಡುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ನಿತ್ಯವೂ ಜಿಲ್ಲಾಸ್ಪತ್ರೆಗೆ ನಗರ, ಜಿಲ್ಲೆ, ಅನ್ಯ ಜಿಲ್ಲೆಗಳ ಬಡವರು, ಕಡು ಬಡವರು, ರೈತಾಪಿ ಜನರು ಬಂದು ಜಿಲ್ಲಾಸ್ಪತ್ರೆಯಲ್ಲೂ ಚಿಕಿತ್ಸೆ ಸಿಗದೇ, ಖಾಸಗಿ ಆಸ್ಪತ್ರೆಗಳಲ್ಲೂ ಆರೈಕೆಗೆ ದಾಖಲು ಮಾಡಿಕೊಳ್ಳದ ಕಾರಣಕ್ಕೆ ಏನು ಮಾಡಬೇಕೆಂಬುದೇ ತೋಚದಂತಾಗಿದ್ದಾರೆ.
ಚಿಕ್ಕಮಗಳೂರಿನ ಕೋವಿಡ್ ಲ್ಯಾಬ್: ಟ್ರಯಲ್ ರನ್ ಆರಂಭ
ಎದ್ದು ಕೂಡುವುದಕ್ಕೂ ಆಗದೇ, ನಿಲ್ಲುವುದಕ್ಕೂ ಆಗದಷ್ಟುನಿತ್ರಾಣರಾದ ರೋಗಿಗಳನ್ನು ವ್ಹೀಲ್ ಚೇರ್, ಸ್ಟೆ್ರಚರ್‌ಗಳಲ್ಲಿ ತಂದು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ನಿಲ್ಲಿಸಿಕೊಂಡು ಕುಟುಂಬ ವರ್ಗದವರು ಕಣ್ಣೀರು ಹಾಕುವಂತಾಗಿದೆ. ಕೋವಿಡ್ ಹೊರತುಪಡಿಸಿದಂತೆ ಉಳಿದ ಚಿಕಿತ್ಸೆಗಾಗಿ ಬಂದವರು ಚಿಕಿತ್ಸೆಯಾಗಲೀ, ಬೆಡ್ ಆಗಲೀ ಸಿಗದ ಕಾರಣಕ್ಕೆ ಜಿಲ್ಲಾಸ್ಪತ್ರೆ ಆವರಣದಲ್ಲಿ ನರಕಯಾತನೆ ಅನುಭವಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾ ಕೇಂದ್ರದಲ್ಲಂತೂ ದಿನದಿನಕ್ಕೂ ನಾನ್ ಕೋವಿಡ್ ರೋಗಿಗಳ ಪರದಾಟವು ಹೆಚ್ಚಾಗುತ್ತಿದೆ. ಕೊರೋನಾಗೆ ಮುಂಚೆ ಪ್ರತಿಷ್ಟಿತ ಬಡಾವಣೆಗಳಲ್ಲಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಖಾಸಗಿ ಆಸ್ಪತ್ರೆಗಳು, ವೈದ್ಯರು ಸಹ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂಗೆ ಬರುತ್ತಿಲ್ಲ. ಸಾಕಷ್ಟುವೈದ್ಯರು, ಶುಶ್ರೂಷಕರು, ಸಿಬ್ಬಂದಿ ಸಹ ಸೋಂಕಿಗೊಳಗಾಗಿದ್ದರೆ, ಮತ್ತೆ ಕೆಲವರು ಕೊರೋನಾ ಭಯದಿಂದ ಹೊರ ಬರುತ್ತಿಲ್ಲವೆಂಬ ಮಾತು ಕೇಳಿ ಬರುತ್ತಿದೆ.