ಚಾಮರಾಜನಗರ ಜಿಲ್ಲೆಯ ಪಾಲಾರ್ ನ ಸೋಲಿಗರ ಬದುಕು ಕತ್ತಲಲ್ಲಿ ಕಮರಿ ಹೋಗ್ತಿದೆ. ಸೋಲಿಗರ ಪಾಲಿಗಂತೂ ಈ ವಿದ್ಯುತ್ ಬೆಳಕು ಎಂಬುದು ಮರೀಚಿಕೆಯಾಗಿ ಉಳಿದಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಸ್ವಯಂ ಸೇವಾ ಸಂಸ್ಥೆಗಳು ನೀಡಿದ್ದ ಸೋಲಾರ್ ಲೈಟ್ ಕೆಟ್ಟು ಹೋಗಿವೆ. ಅದನ್ನು ಸರಿಪಡಿಸುವ ಹಾಗೂ ಹೊಸದಾಗಿ ವಿತರಿಸುವ ಕೆಲಸಕ್ಕೂ ಅಧಿಕಾರಿಗಳು ಮುಂದಾಗಿಲ್ಲ ಅಂತಾ ಆಕ್ಷೇಪ ವ್ಯಕ್ತಪಡಿಸುತ್ತಾರೆ.
ವರದಿ- ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಫೆ.20): ಸ್ವಾತಂತ್ರ್ಯ ಬಂದು 75 ವರ್ಷ ಪೂರೈಸಿದ್ರು, ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಸುಮಾರು ಹದಿನಾರು ಗ್ರಾಮಗಳು ಇನ್ನೂ ಕಗ್ಗತ್ತಲಲ್ಲೇ ಇವೆ. ಅಂಧಕಾರದಲ್ಲೇ ಆದಿವಾಸಿಗಳ ಜೀವನ ಕಳೆದು ಹೋಗ್ತಿದೆ. ಸೋಲಿಗರ ಪಾಲಿಗಂತೂ ವಿದ್ಯುತ್ ಬೆಳಕು ಮರೀಚಿಕೆಯಾಗಿದೆ. ವಿಧ್ಯಾರ್ಥಿಗಳ ಪಾಡಂತು ಹೇಳತೀರದಾಗಿದೆ, ಅರೇ ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ.
undefined
ಚಾಮರಾಜನಗರ ಜಿಲ್ಲೆಯ ಪಾಲಾರ್ ನ ಸೋಲಿಗರ ಬದುಕು ಕತ್ತಲಲ್ಲಿ ಕಮರಿ ಹೋಗ್ತಿದೆ. ಸೋಲಿಗರ ಪಾಲಿಗಂತೂ ಈ ವಿದ್ಯುತ್ ಬೆಳಕು ಎಂಬುದು ಮರೀಚಿಕೆಯಾಗಿ ಉಳಿದಿದೆ. ಕಳೆದ ಒಂಬತ್ತು ವರ್ಷಗಳ ಹಿಂದೆ ಸ್ವಯಂ ಸೇವಾ ಸಂಸ್ಥೆಗಳು ನೀಡಿದ್ದ ಸೋಲಾರ್ ಲೈಟ್ ಕೆಟ್ಟು ಹೋಗಿವೆ. ಅದನ್ನು ಸರಿಪಡಿಸುವ ಹಾಗೂ ಹೊಸದಾಗಿ ವಿತರಿಸುವ ಕೆಲಸಕ್ಕೂ ಅಧಿಕಾರಿಗಳು ಮುಂದಾಗಿಲ್ಲ ಅಂತಾ ಆಕ್ಷೇಪ ವ್ಯಕ್ತಪಡಿಸುತ್ತಾರೆ.
ಎಳೆ ಕಬ್ಬು ನುರಿಸಲು ಮುಂದಾಯ್ತು ಕಾರ್ಖಾನೆ: ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಆರೋಪ!
ಇದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಗಡಿ ಗ್ರಾಮವಾದ ಪಾಲಾರ್ ಜನರ ದುಸ್ಥಿತಿ. ವಿದ್ಯುತ್ ಇಲ್ಲದೇ ಮನೆಯಿಂದ ರಾತ್ರಿಯ ವೇಳೆ ಶೌಚಕ್ಕೂ ಹೊರಗಡೆ ಬರಲೂ ಭಯಪಡುವ ಪರಿಸ್ಥಿತಿ ಇದೆ. ಸಂಜೆಯೊಳಗೆ ಮನೆ ಸೇರಿಕೊಳ್ಳಬೇಕು, ರಾತ್ರಿ ಊಟ ಮುಗಿಸಿ ಹೊರಗೆ ಬರುವಂತಿಲ್ಲ ಹೊರಗಡೆ ಬರಬೇಕಾದರೆ ಆನೆ ಚಿರತೆಯಂತಹ ಕಾಡು ಪ್ರಾಣಿಗಳ ಭಯ, ಸಣ್ಣ ಸೋಲಾರ್ ದೀಪ ಎರಡು ಗಂಟೆಯಷ್ಟೇ ಉರಿಯುತ್ತೆ, ನಂತರ ನಾವೂ ಓದಬೇಕಾದ್ರೆ ಬೆಂಕಿಯನ್ನು ಹಚ್ಚಿ ಬೆಂಕಿಯ ಬೆಳಕಲ್ಲಿ ಓದಬೇಕಾಗಿದೆ. ವಿಧ್ಯಾರ್ಥಿಗಳ ಪಾಡು ಕೂಡ ಹೇಳತೀರದಾಗಿದೆ. 70 ಕ್ಕೂ ಹೆಚ್ಚು ಕುಟುಂಬ ಕತ್ತಲೆಯಲ್ಲಿ ವಾಸ ಮಾಡುವ ದುಸ್ಥಿತಿಯಿದೆ.
ಇನ್ನೂ ಮಹದೇಶ್ವರ ಬೆಟ್ಟಕ್ಕೆ ಪಾಲಾರ್ ಸಮೀಪದಿಂದ ಕಾವೇರಿ ಕುಡಿಯುವ ನೀರಿನ ಯೋಜನೆಗೆ ಪಾಲಾರ್ ಗ್ರಾಮದ ಮೂಲಕವೇ ವಿದ್ಯುತ್ ಲೈನ್ ಹಾದು ಹೋಗಿದೆ. ಇದೇ ವಿದ್ಯುತ್ ನಿಂದ ಗ್ರಾಮಕ್ಕೂ ವಿದ್ಯುತ್ ಕಲ್ಪಿಸದೆ ಚೆಸ್ಕಾಂ ನಿರ್ಲಕ್ಷ್ಯ ವಹಿಸ್ತಿದೆ. ದೀಪದ ಕೆಳಗೆ ಕತ್ತಲು ಎಂಬಂತಾಗಿದೆ ನಮ್ಮ ಬದುಕು.ಬೆಳೆದ ರಾಗಿ, ಜೋಳ,ಮತ್ತಿತ್ತರ ಧಾನ್ಯಗಳನ್ನು ಮಿಲ್ ಮಾಡಿಸಲು ಕೂಡ ನೆರೆಯ ತಮಿಳುನಾಡು ಇಲ್ಲವೇ ಮಹದೇಶ್ವರ ಬೆಟ್ಟಕ್ಕೆ ಹೋಗಬೇಕಾಗಿದೆ. ಗ್ರಾಮದ ಪಕ್ಕದಲ್ಲಿ ವಿದ್ಯುತ್ ಲೈನ್ ಇರುವುದರಿಂದ ಹಲವು ವರ್ಷದಿಂದ ಹೋರಾಟ ಮಾಡುತ್ತಿದ್ದರು ಕೂಡ ವಿದ್ಯುತ್ ಸಂಪರ್ಕ ಮಾತ್ರ ಸಿಗ್ತಿಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೂ ತಂದರೂ ಕೂಡ ಯಾವುದೇ ಪ್ರಯೋಜನವಾಗ್ತಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಒಟ್ನಲ್ಲಿ ಮಲೆ ಮಹದೇಶ್ವರ ಬೆಟ್ಟದ ಕಾಡಂಚಿನ ಜನರ ಗೋಳು ಮಾತ್ರ ಆ ಮಾದಪ್ಪನಿಗೆ ಪ್ರೀತಿ ಎಂಬಂತಿದೆ. ಬೆಳಕಿಗಾಗಿ ಇದ್ದ ಸೋಲಾರ್ ಕೂಡ ಕೈ ಕೊಟ್ಟಿದೆ. ರಾತ್ರಿ ವೇಳೆ ಮನೆಯಿಂದ ಹೊರಬರಲೂ ಕಾಡು ಪ್ರಾಣಿಗಳ ಭಯ ಕೂಡ ಇದೆ. ಸರ್ಕಾರ ಆದಿವಾಸಿಗಳ ಅಭಿವೃದ್ದಿಗೆ ಅನೇಕ ಸ್ಕೀಂ ಜಾರಿಗೆ ತರ್ತಿದೆ. ಆದ್ರೆ ಕಳೆದ 30 ವರ್ಷದಿಂದ ಈ ಜನರಿಗೆ ಮೂಲಭೂತ ಸೌಕರ್ಯ ಕೊಡದೆ ಇರೋದು ಮಾತ್ರ ವಿಪರ್ಯಾಸವೇ ಸರಿ.