ನನಗೆ ಜೀವ ಬೆದರಿಕೆ ಬಂದಿಲ್ಲ: ಖಾದರ್‌

By Kannadaprabha NewsFirst Published Jan 18, 2020, 7:31 AM IST
Highlights

ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಮೇಲೆ ನಡೆದ ಹತ್ಯೆ ಸ್ಕೆಚ್‌ನ ಹಿನ್ನೆಲೆಯಲ್ಲಿ ಶಾಸಕ ಯು. ಟಿ. ಖಾದರ್ ತಮಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಶಾಸಕ ತನ್ವೀರ್ ಸೇಠ್ ಹತ್ಯೆಗೂ ಯತ್ನ ನಡೆದಿತ್ತು.

ಮಂಗಳೂರು(ಜ.18): ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಮೇಲೆ ನಡೆದ ಹತ್ಯೆ ಸ್ಕೆಚ್‌ನ ಹಿನ್ನೆಲೆಯಲ್ಲಿ ಶಾಸಕ ಯು. ಟಿ. ಖಾದರ್ ತಮಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಶಾಸಕ ತನ್ವೀರ್ ಸೇಠ್ ಹತ್ಯೆಗೂ ಯತ್ನ ನಡೆದಿತ್ತು.

ನನಗೆ ಈವರೆಗೆ ಯಾವುದೇ ಜೀವ ಬೆದರಿಕೆ ಬಂದಿಲ್ಲ ಎಂದು ಶಾಸಕ ಯು.ಟಿ. ಖಾದರ್‌ ಸ್ಪಷ್ಟಪಡಿಸಿದ್ದಾರೆ. ಶಾಸಕ ತನ್ವೀರ್‌ ಸೇಠ್‌ ಮೇಲೆ ಹಲ್ಲೆ ಘಟನೆ ಬಳಿಕ ನನಗೂ ಪೊಲೀಸರು ಭದ್ರತೆ ನೀಡಿದ್ದರು. ಆದ್ರೆ ನಾನು ಭದ್ರತೆ ಬೇಡ ಅಂದಿದ್ದೆ, ನನಗೆ ವೈಯಕ್ತಿಕವಾಗಿ ಯಾವುದೇ ಬೆದರಿಕೆ ಬಂದಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಟೌನ್‌ಹಾಲ್ ಟಾರ್ಗೆಟ್: ತೇಜಸ್ವಿ ಸೂರ್ಯ, ಸೂಲಿಬೆಲೆ ಮಿಸ್ ಆಗಿದ್ದು ಹೀಗೆ!

ಕಾನೂನು ಸಮರ್ಪಕವಾಗಿ ಎಲ್ಲರಿಗೂ ಒಂದೇ ರೀತಿ ಇರಬೇಕು. ಕಾನೂನಿನಲ್ಲಿ ಯಾರಿಗೂ ತಾರತಮ್ಯ ಇರಬಾರದು ಎಂದ ಖಾದರ್‌, ಪೊಲೀಸ್‌ ಇಲಾಖೆ ತಪ್ಪು- ಸರಿ ಮತ್ತು ಸತ್ಯಾಂಶ ಸರಿಯಾಗಿ ನೋಡಲಿ. ಕಾನೂನು ವಿರೋಧಿ ಕೃತ್ಯ ಮಾಡೋರಲ್ಲಿ ತಾರತಮ್ಯ ಬೇಡ. ಒಬ್ಬರು ಮಾಡಿದಾಗ ಒಂದು, ಇನ್ನೊಬ್ಬರು ಮಾಡಿದಾಗ ಇನ್ನೊಂದು ನೀತಿ ಸರಿಯಲ್ಲ. ಯಾವುದೇ ವಿಚಾರ ಹೇಳುವಾಗ ಪೊಲೀಸರು ಸಾಕ್ಷ್ಯಾಧಾರ ಇಡಬೇಕು. ಜನರಿಗೆ ಸಂಶಯ ಇಲ್ಲದ ರೀತಿಯಲ್ಲಿ ಕೆಲಸ ನಿರ್ವಹಿಸಿ ಪೊಲೀಸ್‌ ಇಲಾಖೆ ಗೌರವ ಹೆಚ್ಚಿಸಬೇಕು ಎಂದಿದ್ದಾರೆ.

click me!