ಬ್ರಾಹ್ಮೀ​ನದಿ ದಡ​ದಲ್ಲಿ ನವಶಿಲಾಯುಗ ಸಲಕರಣೆಗಳು ಪತ್ತೆ!

By Kannadaprabha NewsFirst Published Mar 19, 2023, 8:20 AM IST
Highlights

ತಾಲೂ​ಕಿನ ಹೆದ್ದೂರು ಸಮೀಪ ತುಂಗಾನದಿ ಉಪನದಿಯಾದ ಬ್ರಾಹ್ಮೀನದಿಯ ದಡದ ಮೇಲೆ ಇತ್ತೀಚೆಗೆ ಶಿಲಾಯುಗ ಸಂಸ್ಕೃತಿಯ ಕುರುಹು ಹಾಗೂ ಆದಿಮಾನವನ ಹಲವಾರು ಆಯುಧಗಳನ್ನು ಸಂಶೋಧನೆಯ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.

ತೀರ್ಥಹಳ್ಳಿ (ಮಾ.19) : ತಾಲೂ​ಕಿನ ಹೆದ್ದೂರು ಸಮೀಪ ತುಂಗಾನದಿ ಉಪನದಿಯಾದ ಬ್ರಾಹ್ಮೀನದಿಯ ದಡದ ಮೇಲೆ ಇತ್ತೀಚೆಗೆ ಶಿಲಾಯುಗ ಸಂಸ್ಕೃತಿಯ ಕುರುಹು ಹಾಗೂ ಆದಿಮಾನವನ ಹಲವಾರು ಆಯುಧಗಳನ್ನು ಸಂಶೋಧನೆಯ ಸಂದರ್ಭದಲ್ಲಿ ಪತ್ತೆ ಹಚ್ಚಲಾಗಿದೆ.

ನವಶಿಲಾಯುಗ(Neolithic Age)ದ ಮಾನವ ಇಂಥಹ ಅಪರೂಪದ ಆಯುಧಗಳನ್ನು ಗೆಡ್ಡೆ-ಗೆಣಸುಗಳನ್ನು ಕೀಳಲು, ಪ್ರಾಣಿಗಳನ್ನು ಬೇಟೆಯಾಡಲು ಹಾಗೂ ಸ್ವರಕ್ಷಣೆಯ ಉದ್ಧೇಶದಿಂದ ಸುಮಾರು 3000 ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಎಂಬುದು ಇತಿಹಾಸ ಸಂಶೋಧನಾ ತಜ್ಞರಿಂದ ತಿಳಿದುಬಂದಿದೆ.

ಉಡುಪಿಯ ಅಡ್ಕದಕಟ್ಟೆಯ ಬಳಿ ತ್ರಿಕೋನಾಕಾರದ ಶಾಸನ ಪತ್ತೆ!

ಸಂಶೋ​ಧನೆ ವೇಳೆ ದೊರೆ​ತಿ​ರುವ ಆಯುಧಗಳು ವಿವಿಧ ವಿನ್ಯಾಸ ಹಾಗೂ ಗಾತ್ರದಲ್ಲಿವೆ. ಇಲ್ಲಿನ ನದಿಯ ದಡದ ಮೇಲೆ ಮಣ್ಣು ಅಗೆಯುತ್ತಿದ್ದಾಗ ಸೂಕ್ಷ್ಮ ಶಿಲಾಯುಗ ಸಂಸ್ಕ ೃತಿಗೆ ಸಂಬಂಧಿಸಿದ ಚಕಮಕಿ ಕಲ್ಲು, ಕ್ವಾಟ್ಜ, ಬಾಸ್ಪರ್‌, ಅಗೆಟ್‌ ಮೊದಲಾದ ಶಿಲೆಗಳಿಂದ ತಯಾರಿಸಿದ ಹೆರೆಚಕ್ಕೆ, ಮೊನೆ, ನೀಳಚಕ್ಕೆ ದೊರೆತಿದ್ದು, ಕ್ರಿಸ್ತಪೂರ್ವ ಕಾಲದ್ದೆಂದು ಗುರುತಿಸಲಾಗಿದೆ.

ಹಾಗೆಯೇ ಇಲ್ಲಿನ ನದಿ ದಡದ ಮೇಲೆ ಹಾಗೂ ನದಿಯಲ್ಲಿ ಪುರಾತನ ಶಿಲಾಯುಗದ ಡಾಲ್‌ರೈಟ್‌ ಶಿಲೆ(Dalrite rock)ಯಿಂದ ಮಾಡಿದ ಮಚ್ಚು (ಮೂವತ್ತು ಸೆಂಟಿ ಮೀಟರ್‌ ಉದ್ದವಿದ್ದು ಕೈಯಲ್ಲಿ ಬಿಗಿಯಾಗಿ ಹಿಡಿಯುವ ಹಿಡಿಕೆಯೂ ಇದೆ) ಬಸಾಲ್ಟ್‌ ಶಿಲೆಯಿಂದ ತಯಾರಿಸಿದ ಏಳು ವಿವಿಧ ನಮೂನೆಯ ಉಳಿಗಳು ದೊರೆತಿವೆ. ಅರೆಯುವ ಕಲ್ಲುಗಳು, ಹರಿತವಾದ ಬಾಚಿಗಳು ದೊರೆತಿವೆ. ಮೂರು ಉಂಗುರ ಕಲ್ಲುಗಳು ದೊರೆತಿದ್ದು, ತಲಾ 2 ಕೆ.ಜಿ. ತೂಕವಿದ್ದು ಕಲ್ಲುಗಳ ರಂಧ್ರದಲ್ಲಿ ಉದ್ದನೆಯ ಕೋಲನ್ನು ಅಸಮ ಅಳತೆಯಲ್ಲಿ ಗಟ್ಟಿಯಾಗಿ ಸಿಕ್ಕಿಸಲಾಗುತ್ತಿತ್ತು. ಇವುಗಳ ಅಳತೆಗಳು ವ್ಯಾಸ 10 ಸೆಂ.ಮೀ., ಎತ್ತರ 4 ಸೆಂ.ಮೀ ಇವೆ. ಹಾಗೆಯೇ ಬೃಹತ್‌ ಶಿಲಾಯುಗದ ಮೂರು ಕಬ್ಬಿಣದ ಕಿಟ್ಟಹಾಗೂ 1,000 ವರ್ಷದ ಹಿಂದಿನ ಅಸ್ಥಿ ದೊರೆತಿದೆ. ಈ ಪರಿಸರವನ್ನು ಇನ್ನೂ ಹೆಚ್ಚಿನಕ್ಕೆ ಒಳಪಡಿಸಲಾಗುವುದು ಎಂದು ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಎಂ.ಎ. ಪ್ರಭಾಕರ್‌(MM Prabhakar) ತಿಳಿಸಿದ್ದಾರೆ.

ಉಡುಪಿ: ಕುಂದಾಪುರದಲ್ಲಿ ಅಪರೂಪದ ಶಾಸನ ಪತ್ತೆ

click me!