ಮೈಸೂರು ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರಿಗೆ ಪ್ರಮುಖ ಆಕರ್ಷಣಿಯವಾದ ಆಹಾರ ಮೇಳವು ಇನ್ನೂ ಅರ್ಧದಷ್ಟು ಮಳಿಗೆಗಳು ಖಾಲಿಯಾಗಿದೆ.
ಮೈಸೂರು : ಮೈಸೂರು ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರಿಗೆ ಪ್ರಮುಖ ಆಕರ್ಷಣಿಯವಾದ ಆಹಾರ ಮೇಳವು ಇನ್ನೂ ಅರ್ಧದಷ್ಟು ಮಳಿಗೆಗಳು ಖಾಲಿಯಾಗಿದೆ.
ಆಹಾರ ಮೇಳದಲ್ಲಿ ಒಟ್ಟು 150 ಮಳಿಗೆಗಳಿದ್ದು, ಬೆರಳಿಣಿಕೆಯಷ್ಟು ಮಾತ್ರ ಭರ್ತಿಯಾಗಿದ್ದು, ಕೆಲವು ಮಳಿಗೆಗಳ ಮಾಲೀಕರು ಇನ್ನೂ ತಯಾರಿ ಮಾಡಿಕೊಳ್ಳುತ್ತಿದ್ದು, ಉಳಿದ ಮಳಿಗೆಗಳು ಖಾಲಿಯಾಗಿದ್ದವು.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಾನಿಪುರಿ, ಮುಳುಬಾಗಿಲು ದೋಸೆ, ದಾವಣಗೆರೆ ಬೆಣ್ಣೆ ದೋಸೆ, ಬಾಣಲಿ ರೊಟ್ಟಿ, ಮಶ್ರೂಮ್ಪಲಾವ್, ಬಾಂಬೆ ಪಾವ್ಬಾಜಿ, ಬಂಬೂ ಬಿರಿಯಾನಿ, ಹೊಸಕೋಟೆ ಧಮ್ ಬಿರಿಯಾನಿ, ಉತ್ತರ ಕರ್ನಾಟಕ ಶೈಲಿಯ ಅಮೀನಗಡದ ಕರದಂಟು, ಕುಂದಾ, ಪೇಡಾ ಈ ಮಳಿಗೆಗಳು ವ್ಯಾಪಾರಕ್ಕೆ ಸಿದ್ದತೆಯಾಗಿದ್ದವು. ಉಳಿದ ಮಳಿಗೆಗಳು ಇನ್ನೂ ಭರ್ತಿಯಾಗಬೇಕಿದೆ.
ಇಲ್ಲೂ ನಡೆಯುತ್ತೆ ದಸರಾ
ಬೆಂಗಳೂರು: ಮೈಸೂರಲ್ಲಿ ಮಾತ್ರವಲ್ಲ ಕರುನಾಡಿನ ಹಲವೆಡೆ ದಸರಾವನ್ನು ವಿಶಿಷ್ಚವಾಗಿ ಆಚರಿಸುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕೆಲ ಆಚರಣೆಗಳಿಗೆ ನೂರಾರು ವರ್ಷಗಳ ಇತಿಹಾಸ ಇದ್ದರೆ, ಇನ್ನು ಕೆಲವೆಡೆ ಕಳೆದ ಹತ್ತೈವತ್ತು ವರ್ಷಗಳಿಂದ ಚಾಲ್ತಿಗೆ ಬಂದಂಥವು. ಅಂಥ ಒಂದಷ್ಟು ದಸರಾ ಮೆರುಗು ಕುರಿತು ಇಲ್ಲಿದೆ ಕಿರು ಮಾಹಿತಿ.
250ಕ್ಕೂ ಅಧಿಕ ವರ್ಷದ ಇತಿಹಾಸ ಹೊಂದಿರುವ ಮಡಿಕೇರಿ ದಸರಾ
‘ಇರುಳನ್ನೇ ಬೆಳಕಾಗಿಸುವ ದಸರೆ’ ಎಂದೇ ಮಡಿಕೇರಿ ದಸರಾ ಖ್ಯಾತಿ ಗಳಿಸಿದೆ. ಈ ಐತಿಹಾಸಿಕ ದಸರಾ ಉತ್ಸವಕ್ಕೆ ಭಾನುವಾರ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರ ಆರಂಭಿಸುವ ಮೂಲಕ ವೈಭವದ ಚಾಲನೆ ಸಿಗಲಿದೆ.
ಪ್ರಾಯೋಜಕತ್ವ ಮೂಲಕ ಈ ಬಾರಿ ಸಾಂಪ್ರದಾಯಿಕ ದಸರಾ
ಮಡಿಕೇರಿಯ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ ಹಾಗೂ ಕೋಟೆ ಮಾರಿಯಮ್ಮ ದೇವತೆಗಳ ಕರಗವು ನಗರದ ಪಂಪಿನ ಕೆರೆಯಿಂದ ಸಂಜೆ 5ಕ್ಕೆ ಹೊರಡಲಿದ್ದು, 9 ದಿನಗಳ ಕಾಲ ನಗರ ಪ್ರದಕ್ಷಿಣೆ ನಡೆಸಲಿದೆ. ಮಡಿಕೇರಿ ದಸರಾ ಉತ್ಸವಕ್ಕೆ ಸುಮಾರು ಇನ್ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಕೊಡಗಿನಲ್ಲಿ ರಾಜರ ಆಳ್ವಿಕೆ ಕಾಲದಲ್ಲಿ ಮಡಿಕೇರಿ ಜನರನ್ನು ಸಾಂಕ್ರಾಮಿಕ ರೋಗವೊಂದು ಕಾಡಿತ್ತು. ಇದರಿಂದ ಅಪಾರ ಸಾವು-ನೋವು ಉಂಟಾಗಿತ್ತು. ಈ ಸಂದರ್ಭದಲ್ಲಿ ರಾಜರು ನಗರದಲ್ಲಿ 4 ಶಕ್ತಿ ದೇವತೆಗಳನ್ನು ಪ್ರತಿಷ್ಠಾಪಿಸಿ ಕರಗ ಹೊರಡಿಸಿ ಪೂಜಿಸುತ್ತಿದ್ದರು. ಈ ದೇವತೆಗಳ ಕರಗಗಳು ನಗರ ಪ್ರದಕ್ಷಿಣೆ ನಡೆಸಿದ ನಂತರ ಸಾಂಕ್ರಾಮಿಕ ರೋಗ ದೂರವಾಯಿತು ಎಂಬ ಐತಿಹ್ಯವಿದೆ.
ಮೈಸೂರು ಮಾದರಿಯಲ್ಲೇ ಶಿವಮೊಗ್ಗ ದಸರಾ ವೈಭವ
ಮೈಸೂರು ಮಾದರಿಯಲ್ಲೇ ದಸರಾ ಆಚರಣೆಯಲ್ಲಿ ಶಿವಮೊಗ್ಗ ಕೂಡ ಹೆಸರುವಾಸಿ. ಕಳೆದೆರಡು ದಶಕಗಳಿಂದೀಚೆಗೆ ದಸರಾಕ್ಕೆ ಇಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ನಗರಸಭೆ ಉಸ್ತುವಾರಿಯಲ್ಲಿ ನಡೆಯುವ ಈ ಆಚರಣೆಗೆ ಸರ್ಕಾರ ಪ್ರತಿ ವರ್ಷ ವಿಶೇಷ ಅನುದಾನ ನೀಡುತ್ತಾ ಬಂದಿದೆ. ನಗರಸಭೆ ತನ್ನ ಆಯವ್ಯಯದಲ್ಲಿ ಇದಕ್ಕೆಂದೇ ಹೆಚ್ಚುವರಿ ಬಜೆಟ್ ನಿಗದಿಪಡಿಸಿದೆ. ಇದಕ್ಕಾಗಿ 9 ವಿವಿಧ ಸಮಿತಿ ರಚಿಸಲಾಗಿದ್ದು, ಮಕ್ಕಳ ದಸರಾ, ಯೋಗ ದಸರಾ, ಆಹಾರ ದಸರಾ, ರಂಗ ದಸರಾ, ಚಲನಚಿತ್ರ ದಸರಾ, ರೈತ ದಸರಾ, ಪರಿಸರ ದಸರಾ, ಮಹಿಳಾ ದಸರಾ, ಕಲಾ ದಸರಾ, ವಿದ್ಯಾರ್ಥಿಗಳಿಗಾಗಿ ಜ್ಞಾನ ದಸರಾ ವಿಭಾಗದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ವಿಜಯದಶಮಿಯಂದು ಅದ್ಧೂರಿ ದಸರಾ ಮೆರವಣಿಗೆ ನಡೆಯುತ್ತದೆ. ಚಾಮುಂಡೇಶ್ವರಿ ವಿಗ್ರಹ ಹೊತ್ತ ಸಕ್ರೆಬೈಲು ಆನೆಗಳ ತಂಡ ಎರಡೂವರೆ ಕಿ.ಮೀ. ಸಾಗಿ, ಅಂತಿಮವಾಗಿ ಫ್ರೀಡಂ ಪಾರ್ಕ್ ನಲ್ಲಿ ಬನ್ನಿ ಕಡಿಯುವ ಮೂಲಕ ಅಂತ್ಯಗೊಳ್ಳುತ್ತದೆ.