ರಕ್ಷಣಾ ಚುಚ್ಚುಮದ್ದಿನಿಂದ ವಂಚಿತರಾದ ಮಕ್ಕಳು, ಗರ್ಭಿಣಿಯರನ್ನು ಗುರುತಿಸಿ ಲಸಿಕೆ ನೀಡಲು ಮುಂದಾಗಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಹೇಳಿದರು.
ಸರಗೂರು : ರಕ್ಷಣಾ ಚುಚ್ಚುಮದ್ದಿನಿಂದ ವಂಚಿತರಾದ ಮಕ್ಕಳು, ಗರ್ಭಿಣಿಯರನ್ನು ಗುರುತಿಸಿ ಲಸಿಕೆ ನೀಡಲು ಮುಂದಾಗಿ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ. ರವಿಕುಮಾರ್ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಿಷನ್ ಇಂದ್ರ ಧನುಷ್ 5.0 ಅಭಿಯಾನಕ್ಕೆ ಚಾಲನೆ ನೀಜಿ ಮಾತನಾಡಿದ ಅವರು, ತೀವ್ರತರ ಮಿಷನ್ ಇಂದ್ರಧನುಷ್ ಅಭಿಯಾನದ ಕಾರ್ಯಕ್ರಮವು 2014ರ ಡಿ. 25ರಂದು ಭಾರತ ಸರ್ಕಾರದಿಂದ ಪ್ರಾರಂಭಗೊಂಡಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿವಿಧ ಹಂತದಲ್ಲಿ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಅಗತ್ಯವಿರುವ ರಕ್ಷಣಾ ಚುಚ್ಚುಮದ್ದಿನಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯರು ಹಾಗೂ 0-5ವರ್ಷದ ಮಕ್ಕಳನ್ನು ಗುರುತಿಸಿ ಈ ಹಂತದಲ್ಲಿ ಫಲಾನುಭವಿಗಳಿಗೆ ಪೂರ್ಣ ಮತ್ತು ಸಂಪೂರ್ಣ ರಕ್ಷಣ ಲಸಿಕೆ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿರುತ್ತದೆ ಎಂದರು.
ಅದರಂತೆ 2023-24ನೇ ಸಾಲಿನಲ್ಲಿ ಮಿಷನ್ ಇಂದ್ರ ಧನುಷ್ 5.0 ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಪ್ರಾರಂಭವಾಗುತ್ತದೆ. ಈ ಅಭಿಯಾನವನ್ನು ಮೂರು ಹಂತದಲ್ಲಿ ಅಂದರೆ 1ನೇ ಹಂತವು ಆ. 7 ರಿಂದ 12ರವರೆಗೆ, 2ನೇ ಹಂತ ಸೆ. 11 ರಿಂದ 16 ರವರೆಗೆ, 3ನೇ ಹಂತ ಅ. 9 ರಿಂದ 14ರವರೆಗೆ ನಡೆಯುತ್ತದೆ, ಆದ್ದರಿಂದ ಎಲ್ಲ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆ ಪಡೆಯಿರಿ ಎಂದು ತಿಳಿಸಿದರು.
ನಾನ್‌ವೆಜ್ ತಿನ್ನೋದು ಓಕೆ, ಆದ್ರೆ ಡೆಂಗ್ಯೂ ಇದ್ದಾಗ ಅಪ್ಪಿತಪ್ಪಿಯೂ ಮುಟ್ಬೇಡಿ
ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಮಕ್ಕಳಿಗೆ ಸಾಂಕೇತಿಕವಾಗಿ ಲಸಿಕೆ ಹಾಕಿ, ಮಿಷನ್ ಇಂದ್ರ ಧನುಷ್ 5.0 ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮಚಂದ್ರ, ಸದಸ್ಯರಾದ ದಿವ್ಯ ನವೀನ್‌ಕುಮಾರ್, ಸಣ್ಣ ತಾಯಮ್ಮ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಪಾರ್ಥಿ ಸಾರಥಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರಾದ ಸರಳ, ರವಿರಾಜ…, ನಾಗರಾಜು, ಉಮೇಶ್, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗದೀಶ್, ಮಹದೇವ್, ಪುಷ್ಪ ಶಾಂತಿ, ಮಾನಸ, ಮಂಜುಳಾ, ಶ್ವೇತಾ, ಸಹನಾ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು, ತಾಯಿಂದಿರು, ಗರ್ಭಿಣಿಯರು ಇದ್ದರು.
ಡೆಂಗ್ಯೂಗೆ ಸದ್ಯದಲ್ಲೇ ಬರಲಿದೆ ಲಸಿಕೆ
ಡೆಂಗ್ಯೂದಿಂದ ಬಳಲಿದವರಿಗೆ ಅದರ ಕಾಟ ಗೊತ್ತು. ಡೆಂಗ್ಯೂ ಜ್ವರ ಒಮ್ಮೆ ಬಂದರೆ ಸುಧಾರಿಸಿಕೊಳ್ಳಲು ತಿಂಗಳಾನುಕಾಲ ಬೇಕು. ನಮ್ಮ ದೇಶದಲ್ಲಂತೂ ಡೆಂಗ್ಯೂ ಹಾವಳಿ ವಿಪರೀತ. ಡೆಂಗ್ಯೂದಿಂದ ಸಾವಿಗೀಡಾದವರ ನಿಖರ ಸಂಖ್ಯೆ ಅದೆಷ್ಟೋ ಗೊತ್ತಿಲ್ಲ. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ದಾಖಲೆ ಪ್ರಕಾರ, 2022ರಲ್ಲಿ ಡೆಂಗ್ಯೂದಿಂದ ಮೃತಪಟ್ಟವರ ಸಂಖ್ಯೆ 303. ಕೊರೋನಾ ಹಾವಳಿ ಹೆಚ್ಚಾಗಿದ್ದ 2021ರಲ್ಲೂ ಡೆಂಗ್ಯೂ ಸಾಕಷ್ಟು ಕಾಟ ಕೊಟ್ಟಿತ್ತು. ಡೆಂಗ್ಯೂದಿಂದ ಸಾವಿಗೀಡಾದವರ ಸಂಖ್ಯೆ 2021ರಲ್ಲೇ ಅತಿ ಹೆಚ್ಚು. ಡೆಂಗ್ಯೂ ನಿಯಂತ್ರಣ ಭಾರೀ ಕಷ್ಟ. ಏಕೆಂದರೆ, ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸೊಳ್ಳೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಡೆಂಗ್ಯೂ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಲೇ ಇರುತ್ತವೆ. ಇಷ್ಟೆಲ್ಲ ಆದರೂ ಡೆಂಗ್ಯೂ ಜ್ವರಕ್ಕೆ ನಮ್ಮ ದೇಶೀಯ ಲಸಿಕೆ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತದೆ.
ಅಷ್ಟೇ ಏಕೆ? ಡೆಂಗ್ಯೂವಿಗೆ ನಿರ್ದಿಷ್ಟ ಚಿಕಿತ್ಸೆಯೇ ಇಲ್ಲ. ಜ್ವರ ಕಡಿಮೆ ಮಾಡುವುದು, ರೋಗನಿರೋಧಕತೆ ಹೆಚ್ಚಿಸುವುದಷ್ಟೇ ಸದ್ಯದ ಆದ್ಯತೆಯಾಗಿದೆ. ಆದರೆ, ಈಗ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. ಇಡೀ ಜಗತ್ತನ್ನೇ ಪೀಡಿಸಿದ ಕೊರೋನಾ ಸಾಂಕ್ರಾಮಿಕಕ್ಕೆ ದೇಶೀಯ ಲಸಿಕೆ ಸಿದ್ಧಪಡಿಸಿ ವಿಶ್ವವಿಖ್ಯಾತಿ ಪಡೆದಿರುವ ಸೀರಮ್ ಇನ್ಸ್ ಸ್ಟಿಟ್ಯೂಟ್ ಡೆಂಗ್ಯೂ ಸೋಂಕಿಗೂ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಸೀರಮ್ ಸಂಸ್ಥೆ ಹಾಗೂ ಪೆನೀಷಿಯಾ ಬಯೋಟೆಕ್ ಡೆಂಗ್ಯೂ ಲಸಿಕೆಯ ಮೂರನೇ ಹಂತದ ಪರೀಕ್ಷೆಗೆ ಸಿದ್ಧವಾಗಿವೆ. 3ನೇ ಹಂತದ ಪರೀಕ್ಷೆಗೆ ಅನುಮತಿ ಕೋರಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಗೆ ಮನವಿ ಸಲ್ಲಿಸಿವೆ. ಎಕ್ಸ್ ಪ್ರೆಷನ್ ಆಫ್ ಇಂಟೆರೆಸ್ಟ್ ಗೆ ಕೋರಿಕೆ ಮಾಡಿವೆ.