chikkaballapura : ಚರ್ಮಗುಂಟು ರೋಗಕ್ಕೆ 113 ರಾಸುಗಳು ಬಲಿ

By Kannadaprabha News  |  First Published Dec 3, 2022, 8:52 AM IST

ಜಿಲ್ಲೆಯಲ್ಲಿ ಜಾನುವಾರುಗಳ ಮರಣ ಮೃದಂಗಕ್ಕೆ ಕಾರಣವಾದ ಮಾರಣಾಂತಿಕ ಚರ್ಮಗುಂಟು ರೋಗಕ್ಕೆ ಜಿಲ್ಲಾದ್ಯಂತ ಅನ್ನದಾತರ ಬರೋಬ್ಬರಿ 113 ರಾಸುಗಳು ರೋಗಕ್ಕೆ ಬಲಿಯಾಗಿರುವುದು ಬೆಳಕಿಗೆ ಬಂದಿವೆ.


ಕಾಗತಿ ನಾಗರಾಜಪ್ಪ.

ಚಿಕ್ಕಬಳ್ಳಾಪುರ (ಡಿ.03): ಜಿಲ್ಲೆಯಲ್ಲಿ ಜಾನುವಾರುಗಳ ಮರಣ ಮೃದಂಗಕ್ಕೆ ಕಾರಣವಾದ ಮಾರಣಾಂತಿಕ ಚರ್ಮಗುಂಟು ರೋಗಕ್ಕೆ ಜಿಲ್ಲಾದ್ಯಂತ ಅನ್ನದಾತರ ಬರೋಬ್ಬರಿ 113 ರಾಸುಗಳು ರೋಗಕ್ಕೆ ಬಲಿಯಾಗಿರುವುದು ಬೆಳಕಿಗೆ ಬಂದಿವೆ.

Tap to resize

Latest Videos

ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿರವ ಬಡ ಕುಟುಂಬಗಳು ಸಾವಿರಾರು ಸಂಖ್ಯೆಯಲ್ಲಿದ್ದು ಸಹಜವಾಗಿಯೆ ಚರ್ಮಗಂಟು ರೋಗ ಜಿಲ್ಲೆಯ ಅನ್ನದಾತರನ್ನು ಚಿಂತೆಗೀಡು ಮಾಡಿದ್ದು ರೋಗದ ಉಲ್ಬಣಕ್ಕೆ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ರಾಸುಗಳ ಮರಣ ಹೋಮಕ್ಕೆ ಕಾರಣವಾಗಿದೆ.

625 ಗ್ರಾಮಗಳಲ್ಲಿ ರೋಗ ಉಲ್ಬಣ

ಜಿಲ್ಲೆಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 625 ಗ್ರಾಮಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು ಅನ್ನದಾತರನ್ನು ತತ್ತರಿಸುವಂತೆ ಮಾಡಿದೆ. ಕಾಲುಬಾಯಿ ಜ್ವರದ ಮಾದರಿಯಲ್ಲಿ ಚರ್ಮಗಂಟು ರೋಗ ಇದೀಗ ಜಾನುವಾರುಗಳನ್ನು ಸಾವಿನ ದವಡೆಗೆ ತಳ್ಳುತ್ತಿದ್ದು ಗೌರಿಬಿದನೂರು, ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ರೋಗ ಪ್ರಮಾಣ ತಾರಕ್ಕೇರಿ ಜಾನುವಾರುಗಳನ್ನೆ ನಂಬಿ ಬದುಕಿನ ಬಂಡಿ ನಡೆಸುತ್ತಿರುವ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ.

ಜಿಲ್ಲೆಯಲ್ಲಿ ಒಟ್ಟು 1,933 ಜಾನುವಾರುಗಳು ಚರ್ಮಗಂಟು ರೋಗಕ್ಕೆ ತುತ್ತಾಗಿವೆ ಆಪೈಕಿ 893 ಜಾನುವಾರುಗಳು ರೋಗದಿಂದ ಗುಣಮುಖವಾಗಿ ಪಾರಾಗಿದ್ದರೆ ಆ ಪೈಕಿ 113 ಜಾನುವಾರುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿವೆ. ಇನ್ನೂ ಚರ್ಮಗಂಟು ರೋಗ ಕಾಣಿಸಿಕೊಂಡ ತಕ್ಷಣ ಸಕಾಲದಲ್ಲಿ ಜಾನುವಾರುಗಳಿಗೆ ಸರ್ಕಾರ ಲಸಿಕೆ ಕೊಡಲಿಲ್ಲ. ಆಗಾಗಿ ರಾಸುಗಳ ಸಾವಿನ ಪ್ರಮಾಣದ ಜೊತೆಗೆ ರೋಗ ಕೂಡ ಹೆಚ್ಚು ಉಲ್ಬಣಗೊಳ್ಳಲು ಸಾಧ್ಯವಾಯಿತು ಎಂದು ರೈತರು ತಿಳಿಸುತ್ತಾರೆ.

1,06,932 ರಾಸುಗಳಿಕೆ ಸಿಲಕೆ

ಜಿಲ್ಲೆಯ ಪಶುಪಾಲನಾ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಚರ್ಮಗಂಟು ರೋಗದ ವಿರುದ್ದ ಲಸಿಕಾ ಕಾರ್ಯಕ್ರಮ ಕೈಗೊಂಡು ಒಟ್ಟು 1,06,932 ರಾಸುಗಳಿಗೆ ಲಸಿಕೆ ಹಾಕಲಾಗಿದ್ದು ಜಿಲ್ಲೆಗೆ ಒಟ್ಟು 1,66,500 ಡೋಸ್‌ ಲಸಿಕೆ ಸರಬರಾಜು ಆಗಿದ್ದು ಆ ಪೈಕಿ 55,600 ಲಸಿಕೆ ಇನ್ನೂ ದಾಸ್ತುಣು ಇದೆಯೆಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದವರೆದ ಸಂತೆ ನಿಷೇಧ

ಜಿಲ್ಲೆಯ ರಾಸುಗಳಿಗೆ ಚರ್ಮಗುಂಟು ರೋಗ ಭಾದಿಸುತ್ತಿರುವ ಪರಿಣಾಮ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ಮುಂದುವರೆದಿದೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ವಿವಿಧೆಡೆ ನಡೆಯುವ ಜಾನುವಾರುಗಳ ಸಂತೆ ಹಾಗೂ ಜಾತ್ರೆಯನ್ನು ಡಿ.15 ರವರೆಗೂ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಹಸುಗಳ ಬಾಯಿಯನ್ನೂ ಸ್ಕ್ಯಾನ್‌ ಮಾಡಿ ಸಾಫ್ಟ್‌ವೇರ್‌ನಲ್ಲಿ ದಾಖಲೆ

ಬೆಂಗಳೂರು (ನ.17): ‘ಆಧಾರ್‌’ ಮೂಲಕ ಮನುಷ್ಯರ ‘ಜಾತಕ’ ಸಂಗ್ರಹಿಸುವಂತೆ ಹಸುಗಳ ಮಾಹಿತಿಯನ್ನೂ ಸಂಗ್ರಹಿಸುವ ತಂತ್ರಜ್ಞಾನ ತಮಿಳುನಾಡಿನ ಚೆನ್ನೈನ ‘ದ್ವಾರ ಸುರಭಿ’ ಸಾಫ್ಟ್‌ವೇರ್‌ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಗಮನ ಸೆಳೆಯಿತು.

ಆಧಾರ್‌ನಲ್ಲಿ ಬೆರಳಚ್ಚು ತೆಗೆದುಕೊಂಡರೆ ಇಲ್ಲಿ ಹಸುಗಳ ಬಾಯಿಯನ್ನೂ ಸ್ಕ್ಯಾನ್‌ ಮಾಡಿ ಸಾಫ್ಟ್‌ವೇರ್‌ನಲ್ಲಿ ದಾಖಲೆಯನ್ನು ಸಂಗ್ರಹಿಸಿದರೆ ಸಾಕು, ಹಸುವಿನ ಸಂಪೂರ್ಣ ಮಾಹಿತಿಯನ್ನು ಯಾವಾಗ ಬೇಕಾದರೂ ವೀಕ್ಷಿಸಬಹುದಾಗಿದೆ. ಹಸುವೊಂದಕ್ಕೆ ವಿಮೆ ಮಾಡಿಸಿದಾಗ, ಕಿವಿಗೆ ಟ್ಯಾಗ್‌ ಹಾಕಿ ಮಾಹಿತಿ ಪಡೆಯುವುದು ಪ್ರಸಕ್ತ ಪ್ರಚಲಿತದಲ್ಲಿದೆ. ವಿಮೆ ಮಾಡಿಸದ ಹಸು ಮೃತಪಟ್ಟಾಗ ಕೆಲ ರೈತರು ವಿಮೆ ಮಾಡಿಸಿದ ಹಸುವಿನ ಹಣಕ್ಕೆ ವಿಮಾ ಕಂಪನಿಗಳಿಂದ ಹಣ ಪಡೆಯುವುದನ್ನು ತಪ್ಪಿಸಲು ಈ ಸಾಫ್ಟ್‌ವೇರ್‌ ವಿಮಾ ಕಂಪನಿಗಳಿಗೆ ಸಹಾಯ ಮಾಡಲಿದೆ.

ಹೈಕಮಾಂಡ್‌ ಹೇಳಿದರೆ ದೇವನಹಳ್ಳಿಯಿಂದ ಸ್ಪರ್ಧೆ: ಮುನಿಯಪ್ಪ

ಹಸುಗಳ ಆರೋಗ್ಯದ ಬಗ್ಗೆಯೂ ಪಶು ವೈದ್ಯರೊಂದಿಗೆ ಚಾಟ್‌ ಬಾಟ್‌ ಮಾಡಬಹುದು. ಬೃಹತ್‌ ಸಂಖ್ಯೆಯಲ್ಲಿ ರಾಸುಗಳನ್ನು ಸಾಕಿರುವ ಫಾಮ್‌ರ್‍ನವರು, ಹಾಲಿನ ಕಂಪನಿಗಳು ಸದ್ಯ ಈ ತಂತ್ರಜ್ಞಾನ ಬಳಸುತ್ತಿವೆ. ಆಂಧ್ರಪ್ರದೇಶ, ರಾಜಸ್ಥಾನ, ಗುಜರಾತ್‌ ರಾಜ್ಯಗಳ ಕೆಲ ಫಾಮ್‌ರ್‍ಗಳು ಈಗಾಗಲೇ ಈ ತಂತ್ರಜ್ಞಾನ ಅಳವಡಿಸಿಕೊಂಡು ಯಶಸ್ವಿಯಾಗಿವೆ. ರಾಜ್ಯದ ಮಂಡ್ಯ, ಶಿವಮೊಗ್ಗ, ಹಾವೇರಿಯ ಕೆಲ ಡೈರಿ ಫಾರ್ಮ್‌ಗಳ ರಾಸುಗಳಿಗೂ ಅಳವಡಿಸಲಾಗಿದೆ ಎನ್ನುತ್ತಾರೆ ‘ದ್ವಾರ ಸುರಭಿ’ಯ ಪಶು ವೈದ್ಯಾಧಿಕಾರಿ ಭವಾನಿ ಶಂಕರ ರೆಡ್ಡಿ.

ರಾಸುಗಳ ಮಾಹಿತಿಯನ್ನು ಸಂಗ್ರಹಿಸುವುದರಿಂದ ಅನಾರೋಗ್ಯ ಉಂಟಾದರೆ ಅದನ್ನು ಪತ್ತೆ ಹಚ್ಚಬಹುದು. ಎಷ್ಟು ಕರುಗಳನ್ನು ಹಾಕಿದೆ. ಇಲ್ಲಿಯವರೆಗೂ ಯಾವ್ಯಾವ ವ್ಯಾಕ್ಸಿನ್‌ ಹಾಕಲಾಗಿದೆ. ಎಷ್ಟು ಲೀಟರ್‌ ಹಾಲು ನೀಡಲಿದೆ. ಇಲ್ಲಿಯವರೆಗೆ ಯಾವ ರೋಗದಿಂದ ನರಳಿದೆ ಮುಂತಾದ ವಿಷಯಗಳನ್ನೂ ತಿಳಿದುಕೊಳ್ಳಬಹುದು. ಸಾವಿರಾರು ಸಂಖ್ಯೆಯಲ್ಲಿ ರಾಸುಗಳನ್ನು ಸಾಕುವ ಹಾಲು ಕಂಪನಿಗಳು ಮತ್ತು ರೈತರಿಗೂ ಇದರಿಂದ ಬಹಳಷ್ಟುಪ್ರಯೋಜನವಾಗಲಿದೆ ಎನ್ನುತ್ತಾರೆ ಭವಾನಿಶಂಕರ ರೆಡ್ಡಿ.

ನೀರಲ್ಲಿ ಮುಳುಗುವವರ ರಕ್ಷಿಸುವ ‘ಮೈ ಬಾಯ್‌’: ನೀರಿನಲ್ಲಿ ಮುಳುಗುತ್ತಿರುವವರನ್ನು ರಕ್ಷಿಸಲೆಂದೇ ಮಂಗಳೂರಿನ ಡ್ರೋನ್‌ಲೆಕ್‌ ಎಂಟರ್‌ಪ್ರೈಸಸ್‌ ‘ಮೈ ಬಾಯ್‌’ ಎಂಬ ರಿಮೋಟ್‌ ಮೂಲಕ ನಿಯಂತ್ರಿಸುವ ಸಾಧನವನ್ನು ಅನ್ವೇಷಿಸಿದೆ. ಅರ್ಧ ಕಿ.ಮೀ. ದೂರದವರೆಗೂ ನೀರಿನಲ್ಲಿ ಸ್ವಯಂಚಾಲಿತವಾಗಿ ಇದು ಸಂಚರಿಸಲಿದ್ದು, ಮುಳುಗುತ್ತಿರುವ ನಾಲ್ವರನ್ನೂ ಏಕಕಾಲದಲ್ಲಿ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ.

click me!