ಶಿವಮೊಗ್ಗ: ಹೊಸನಗರದಲ್ಲಿ ಕಾಡು ಕೋಣಗಳ ಮಾರಣ ಹೋಮ, ಅಕ್ರಮ ಬಂದೂಕು ಬಳಸಿ ಹತ್ಯೆ?

By Girish Goudar  |  First Published Jun 18, 2024, 9:36 AM IST

ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ದುಷ್ಕರ್ಮಿಗಳು ಬೇಟೆಯಾಡಿದ್ದಾರೆ. ಅಕ್ರಮ ಬಂದೂಕು ಬಳಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಾಡುಕೋಣಗಳು ಕೆಲವೊಮ್ಮೆ ಪ್ರತ್ಯಕ್ಷಗೊಳ್ಳುತ್ತಿದ್ದವು. ಆದರೆ ಈಗ ಗುಂಪಿನಲ್ಲಿ ನಾಲ್ಕೈದು ಮಾತ್ರ ಇವೆ. ಈ ಹಿನ್ನೆಲೆಯಲ್ಲಿ ಕಾಡುಕೋಣಗಳ ಮಾರಣಹೋಮವೇ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ. 
 


ಶಿವಮೊಗ್ಗ(ಜೂ.18):  ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ನಾಗರಹಳ್ಳಿ ಗ್ರಾಮದಲ್ಲಿ ಕಾಡು ಕೋಣಗಳ ಮಾರಣ ಹೋಮವೇ ನಡೆದಿದೆ. ಹೌದು, ನಾಗರಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ಕಾಡು ಕೋಣಗಳನ್ನ ಬೇಟೆಯಾಡಿರುವ ಶಂಕೆ ವ್ಯಕ್ತವಾಗಿದೆ. 

ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ದುಷ್ಕರ್ಮಿಗಳು ಬೇಟೆಯಾಡಿದ್ದಾರೆ. ಅಕ್ರಮ ಬಂದೂಕು ಬಳಸಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಾಡುಕೋಣಗಳು ಕೆಲವೊಮ್ಮೆ ಪ್ರತ್ಯಕ್ಷಗೊಳ್ಳುತ್ತಿದ್ದವು. ಆದರೆ ಈಗ ಗುಂಪಿನಲ್ಲಿ ನಾಲ್ಕೈದು ಮಾತ್ರ ಇವೆ. ಈ ಹಿನ್ನೆಲೆಯಲ್ಲಿ ಕಾಡುಕೋಣಗಳ ಮಾರಣಹೋಮವೇ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದೆ.  ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ಸಂತೋಷ್ ಕೆಂಚಣ್ಣನವರ್ ಮತ್ತು ವಲಯ ಅಣ್ಯಾಧಿಕಾರಿ ರಾಘವೇಂದ್ರ ಅವರು ಪರಿಶೀಲನೆ ನಡೆಸಿದ್ದಾರೆ. 

Tap to resize

Latest Videos

undefined

ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಸುಸ್ತಾದ ಬಿಜೆಪಿಯ ಹಿರಿಯ ನಾಯಕ ಭಾನುಪ್ರಕಾಶ್ ನಿಧನ

ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಕ್ಕೆ ರವಾನೆ ಮಾಡಲಾಗಿದೆ. ಇನ್ನೂ ಹಲವು ಕಾಡುಕೋಣಗಳ ಕಳೇಬರಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳು ಕಾಡುಕೋಣಗಳನ್ನು ಮಾಂಸಕಾಗಿ ಬೇಟೆ ಮಾಡಿದ್ದಾರೋ?, ಅಥವಾ ಬೆಳೆ ನಾಶ ಪಡಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರಾ? ಎನ್ನುವುದು ತನಿಖೆಯಲ್ಲಿ ತಿಳಿದು ಬರಬೇಕಾಗಿದೆ. 

ಕಾಡು ಕೋಣಗಳ ಹತ್ಯೆಗೆ ಕಳ್ಳಕೋವಿಗಳನ್ನು ಬಳಸಿದ್ದಾರೆ ಎನ್ನಲಾಗುತ್ತಿದೆ. ಹೊಸನಗರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ. ಅಕ್ರಮ ಬಂದೂಕು ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷವೇ ಕಾಡು ಕೋಣಗಳ ಹತ್ಯೆಗೆ ಕಾರಣ  ಎನ್ನಲಾಗುತಿದೆ. ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಕೆಲವು ಪ್ರಭಾವಿಗಳ ಪ್ರಭಾವದಿಂದ  ಕಾಡು ಕೋಣಗಳ ಹತ್ಯೆ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸುಮಾರು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಹತ್ಯೆಗೈಯಲಾಗಿದೆ. 

click me!