ಪಟಾಕಿ ಅವಘಡ: ಚಿಕಿತ್ಸೆಗೆ ಮಿಂಟೋ ಆಸ್ಪತ್ರೆ ಸಜ್ಜು

By Sujatha NR  |  First Published Oct 30, 2021, 10:13 AM IST
  • ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಅವಘಡ
  • ಪಟಾಕಿ ಅವಘಡಗಳಿಂದ ಸಂಭವಿಸುವ ಕಣ್ಣಿನ ಹಾನಿ ತಪ್ಪಿಸಲು ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯು ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ಸಿದ್ಧತೆ

 ಬೆಂಗಳೂರು (ಅ.30):  ದೀಪಾವಳಿ (Deepavali) ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ (crackers) ಅವಘಡಗಳಿಂದ ಸಂಭವಿಸುವ ಕಣ್ಣಿನ ಹಾನಿ ತಪ್ಪಿಸಲು ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯು (Minto eye Hospital) ಗಾಯಾಳುಗಳ ಚಿಕಿತ್ಸೆಗೆ (Tratment) ಅಗತ್ಯ ಸಿದ್ಧತೆಗಳೊಂದಿಗೆ ಹಬ್ಬದ ದಿನಗಳಲ್ಲಿ 24 ಗಂಟೆಯೂ ಸೇವೆ ನೀಡಲು ಸಜ್ಜಾಗಿದೆ.

ಇದೇ ವೇಳೆ ಹಸಿರು ಪಟಾಕಿಗಳಲ್ಲಿಯೂ (Green crackers) ರಾಸಾಯನಿಕಗಳು (chemicals) ಇರುತ್ತವೆ. ಹಾಗಾಗಿ ಅವುಗಳಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿವೆ. ಪರಿಸರ ಮಾಲಿನ್ಯ ಕಡಿಮೆಯಾದರೂ ಶಬ್ಧ ಹಾಗೂ ಸ್ಫೋಟದ ತೀವ್ರತೆ ಇತರೆ ಪಟಾಕಿಗಳಷ್ಟೇ ಇರುತ್ತದೆ. ಹೀಗಾಗಿ ಹಸಿರು ಪಟಾಕಿಗಳ ಬಗ್ಗೆಯೂ ಎಚ್ಚರ ವಹಿಸಬೇಕು ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕಿ ಡಾ. ಸುಜಾತಾ ರಾಥೋಡ್‌ (Dr Sujatha Rathod) ಹೇಳಿದ್ದಾರೆ.

Tap to resize

Latest Videos

ದೀಪಾವಳಿ : ಎಲ್ಲಾ ಪಟಾಕಿಗಳಿಗೂ ನಿಷೇಧ ಇಲ್ಲ

ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕತ್ತಲೆಯಿಂದ ಬೆಳೆಕಿನೆಗೆಡೆ ಕೊಂಡೊಯ್ಯುವ ಹಬ್ಬ ದೀಪಾವಳಿ ಆಚರಣೆಯಲ್ಲಿ ಯಾರೂ ಬೆಳಕಿನಿಂದ (Light) ಕತ್ತಲೆಯೆಡೆಗೆ ಹೋಗಬಾರದು. ಈ ನಿಟ್ಟಿನಲ್ಲಿ ಪಟಾಕಿ ಹಚ್ಚುವವರು ಹೆಚ್ಚು ಜಾಗ್ರತೆ ವಹಿಸಬೇಕು. ಎಚ್ಚರ ತಪ್ಪಿದರೆ ಕಣ್ಣಿಗೆ ಅಪಾಯ. ಹಾಗಾಗಿ ಪಟಾಕಿ ಹಚ್ಚಬೇಡಿ ಎಂದು ಹೇಳುವ ಬದಲು ಪಟಾಕಿಗಳನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡುವುದೇ ಒಳಿತು ಎಂದು ಹೇಳಿದರು.

ದೃಷ್ಟಿಹೋದರೆ ಬಾರದು :  ಪಟಾಕಿಯಿಂದ ದೃಷ್ಟಿಕಳೆದುಕೊಂಡರೆ (eye Sight) ಪುನಃ ದೃಷ್ಟಿಪಡೆಯುವುದು ಸಾಧ್ಯವಿಲ್ಲ. ಒಂದು ವೇಳೆ ಬೇರೆಯವರು ನೇತ್ರದಾನ ಮಾಡಿದರೂ ಅದನ್ನು ಅಳವಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕಣ್ಣಿಗೆ ಹಾನಿ ಉಂಟು ಮಾಡುವ ಪಟಾಕಿ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಅಪಾಯ ಉಂಟಾದರೆ ಹೀಗೆ ಮಾಡಿ:

ಪಟಾಕಿಯಿಂದ ಕಣ್ಣಿಗೆ ಹಾನಿಯಾದರೆ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಸಿಡಿಸಿದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಅರಿವಿಲ್ಲದೆಯೇ ಸುಟ್ಟಪಟಾಕಿಗಳ ಬಿಸಿ ತುಂಡುಗಳನ್ನು ತುಳಿಯುವುದು ತಪ್ಪಲಿದೆ ಎಂದು ಸಲಹೆ ನೀಡಿದರು.

ದೀಪಾವಳಿ ಪೂಜೆಗೆ ಏನು ಮಾಡಬೇಕು? ಏನು ಮಾಡಬಾರದು ಇಲ್ಲಿದೆ ನೋಡಿ...

ಅಗತ್ಯ ಸಿದ್ಧತೆ

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅಗತ್ಯವಾದ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿಯಿದ್ದು, ಅಗತ್ಯ ಔಷಧ ಸಾಮಗ್ರಿಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕಣ್ಣಿನ ಚಿಕಿತ್ಸೆಗೆ ಪ್ರತಿವರ್ಷ ಸರಾಸರಿ 50ರಿಂದ 60 ಮಂದಿ ದಾಖಲಾಗುತ್ತಿದ್ದಾರೆ. ಇವರುಗಳಲ್ಲಿ ಶೇ. 40 ಗಾಯಾಳುಗಳು 14 ವರ್ಷದ ಒಳಗಿನವರಾಗಿದ್ದಾರೆ. ಹಾಗಾಗಿ, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸುಜಾತಾ ರಾಥೋಡ್‌ ತಿಳಿಸಿದರು.

ಸಹಾಯವಾಣಿ:  ಆಸ್ಪತ್ರೆ ಸಹಾಯವಾಣಿ : 9480832430

ಸಲಹೆಗಳು

- ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಪಾಲಿಸಿ

- ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ

- ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ

- ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್‌ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ

- ಮೈದಾನ, ಖಾಲಿ ಜಾಗಗಳಲ್ಲಷ್ಟೆಪಟಾಕಿ ಹಚ್ಚಿ

- ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ

- ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ

- ಅರೆಬರೆ ಸುಟ್ಟಪಟಾಕಿ ತುಣುಕನ್ನು ಮುಟ್ಟುವ, ಗಾಳಿಯಲ್ಲಿ ಎಸೆಯುವ ಪ್ರಯತ್ನ ಬೇಡ

- ಗಾಜು, ಡಬ್ಬ ಇತರೆ ಪಾತ್ರೆಗಳನ್ನು ಇರಿಸಿ ಪಟಾಕಿ , ರಾಕೆಟ್‌ ಹಚ್ಚುವ ಸಾಹಸ ಮಾಡಬೇಡಿ

click me!