ಹೈನುಗಾರಿಕೆ ಅಂದರೆ ಹಾಲಿನ ಮಾರಾಟವೊಂದೇ ಲಾಭದ ಮೂಲವೆಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಕಸದಿಂದ ರಸವೆಂಬಂತೆ ದೇಶಿಯ ಹಸುಗಳ ಸಗಣಿ ಹಾಗು ಗೋ ಮೂತ್ರದಿಂದ ಲಕ್ಷಾಂತರ ರೂಪಾಯಿ ಲಾಭ ಗಳಿಸ್ತಿರುವ ಕೋಟೆನಾಡಿನ ಉದ್ಯಮಿಯೊಬ್ಬರು ಇತರರಿಗೆ ಮಾದರಿ ಎನಿಸಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಡಿ.24): ಹೈನುಗಾರಿಕೆ ಅಂದರೆ ಹಾಲಿನ ಮಾರಾಟವೊಂದೇ ಲಾಭದ ಮೂಲವೆಂದು ಎಲ್ಲರೂ ಭಾವಿಸಿದ್ದಾರೆ. ಆದರೆ ಕಸದಿಂದ ರಸವೆಂಬಂತೆ ದೇಶಿಯ ಹಸುಗಳ ಸಗಣಿ ಹಾಗು ಗೋ ಮೂತ್ರದಿಂದ ಲಕ್ಷಾಂತರ ರೂಪಾಯಿ ಲಾಭ ಗಳಿಸ್ತಿರುವ ಕೋಟೆನಾಡಿನ ಉದ್ಯಮಿಯೊಬ್ಬರು ಇತರರಿಗೆ ಮಾದರಿ ಎನಿಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ಈ ಚಿತ್ರದಲ್ಲಿ ನೋಡಿ ಹೀಗೆ ಸಾಲಾಗಿ ಕಾಣ್ತಿರೋ ದೇಶಿಯ ಹಸುಗಳು. ಹಸುಗಳ ಸಗಣಿ ಗಂಜಲದಿಂದ ಸಿದ್ಧವಾಗಿರುವ ಉತ್ಪನ್ನಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿಯಲ್ಲಿರುವ ನಂದಿ ಗೋಶಾಲೆ. ಚಿತ್ರದುರ್ಗದ ಕೊ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ನಿಶಾನಿ ಎಂ. ಜಯ್ಯಣ್ಣ ಅವರು ಮೂಲತಃ ರೈತರಾಗಿದ್ದೂ, ಬೆಳೆನಾಶದಿಂದ ತೀವ್ರ ನಷ್ಟ ಅನುಭವಿಸಿದ್ದರು. ನೀರಿನ ಅಭಾವದಿಂದ ಹೈನುಗಾರಿಕೆ ಮೊರೆ ಹೋಗಿದ್ದು, ಕೇವಲ ಒಂದು ಗಿರ್ ತಳಿಯಿಂದ ಆರಂಭವಾದ ಹೈನುಗಾರಿಕೆ ಇಂದು 90ಕ್ಕೂ ಅಧಿಕ ಹಸುಗಳಾಗುವಷ್ಟು ಬೆಳೆದಿದೆ.
tumakur ಹೈನುಗಾರಿಕೆಯಲ್ಲಿ ಸ್ತ್ರೀಯರ ಪಾತ್ರ ಅತಿ ದೊಡ್ಡದು
ದಿನಕ್ಕೆ 80 ಲೀ ಹಾಲು ಮಾರಾಟ: ಪ್ರತಿದಿನ 80 ಲೀಟರ್ ಗೂ ಅಧಿಕ ಹಾಲು ಮಾರಾಟವಾಗ್ತಿದೆ. ಇಲ್ಲಿನ ಬೆಣ್ಣೆ ತುಪ್ಪಕ್ಕೂ ಕೂಡ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಅಲ್ಲದೇ 40 ಎಕರೆ ಜಮೀನಿನಲ್ಲಿ ದೊಡ್ಡದೊಂದು ಶೆಡ್ ನಿರ್ಮಿಸಿರೋ ಜಯಣ್ಣ ಅವರು, ಮಲ್ನಾಡ್ ಗಿಡ್ಡ ಹಾಗು ಗಿರ್ ತಳಿಯ ಹಸುಗಳು ನೀಡುವ ಸಗಣಿಯಿಂದ ವಿಭೂತಿ, ಧೂಪ, ಭಸ್ಮ, ಸಾಬೂನು, ಸೊಳ್ಳೆ ಬತ್ತಿ, ಹಲ್ಲುಪುಡಿ, ದೀಪದ ಹಣತೆಯನ್ನು ತಯಾರು ಮಾಡ್ತಿದ್ದಾರೆ. ಗೋಮೂತ್ರದಿಂದ ಆರ್ಕ, ಫಿನಾಯಿಲ್ ಸೇರಿದಂತೆ ಅನೇಕ ಉತ್ಪನಗಳನ್ನು ಸಿದ್ಧಪಡಿಸುವ ಮೂಲಕ ಅಪಾರ ಲಾಭಗಳಿಸ್ತಿರುವ ಜಯ್ಯಣ್ಣ ಬರದ ನಾಡಿನ ರೈತರಿಗೆ ಮಾದರಿಯಾಗಿದ್ದಾರೆ.
ಮಕ್ಕಳನ್ನು ಹೈನುಗಾರಿಕೆಗೆ ಸೇರಿಸಿಕೊಂಡ ಜಯಣ್ಣ: ಈ ಹೈನುಗಾರಿಕೆಯು ಕೂಡ ದೊಡ್ಡ ಉದ್ಯಮವಾಗಿ ಬೆಳೆದಿದ್ದು, ಎಂಬಿಎ ಓದಿರುವ ಜಯ್ಯಣ್ಣನವರ ಇಬ್ಬರು ಮಕ್ಕಳನ್ನು ಸಹ ಈ ಉದ್ಯಮದಲ್ಲಿ ತೊಡಗಿಸಿದ್ದಾರೆ. ಅಲ್ಲದೇ ಹಸುಗಳಿಂದ ಸಿಗುವ ಸಗಣಿಯಿಂದ ಒಂದು ವರ್ಷಕ್ಕೆ 50-60 ಟ್ರಾಕ್ಟರ್ ಸಗಣಿ ಗೊಬ್ಬರ ಸಂಗ್ರಹಿಸಿ ಸಾವಯವ ಕೃಷಿಯಡಿಯಲ್ಲಿ ತೆಂಗು, ಅಡಿಕೆ, ಮೆಕ್ಕೆಜೋಳ,ನೇರಳೆ ಹಾಗು ಬೆಟ್ಟದ ನೆಲ್ಲಿಕಾಯಿಯಂತಹ ಮಿಶ್ರ ಬೆಳೆಗಳನ್ನು ಬೆಳೆದು ಮಾದರಿ ಸಾವಯವ ಕೃಷಿಕರೆನಿದ್ದಾರೆ.
Kolara: ಹಸುಗಳಿಗೆ ಬೊಬ್ಬೆ ರೋಗ, ಹೈನುಗಾರಿಕೆ ನಂಬಿರುವ ಕುಟುಂಬಗಳಿಗೆ ಪೆಟ್ಟು!
ಜಿಲ್ಲೆಯ ಕೃಷಿಕರಿಗೆ ಮಾದರಿಯಾದ ಜಯಣ್ಣನ ಹೈನುಗಾರಿಕೆ: ಒಟ್ಟಾರೆ ಕೃಷಿಯಿಂದ ಅಪಾರ ನಷ್ಟ ಅನುಭವಿಸಿ ರುವ ರೈತರಿಗೆ ಜಯ್ಯಣ್ಣನ ಹೈನುಗಾರಿಕೆ ಮಾದರಿ ಎನಿಸಿದೆ. ಹೀಗಾಗಿ ಇವರ ಗೋಶಾಲೆಯಲ್ಲಿನ ಹಸುಗಳಸಾಕಣೆ ಹಾಗು ಸಗಣಿ, ಗಂಜಲದಿಂದ ನಿರ್ಮಾಣವಾಗುವ ಉತ್ಪನ್ನಗಳ ತಯಾರಿಕೆಯನ್ನು ವೀಕ್ಷಿಸಲು ಜನಸಾಗರವೇ ನಂದಿ ಗೋಶಾಲೆಯತ್ತ ಹರಿದು ಬರ್ತಿದೆ. ಹಾಗಾದ್ರೆ ನೀವು ಸಹ ಈ ಗೋ ಶಾಲೆಯನ್ನು ನೋಡಬೇಕಾ ಹಾಗಾದ್ರೆ ಬನ್ನಿ ಒಮ್ಮೆ ಕೋಟೆನಾಡಿಗೆ ಭೇಟಿ ನೀಡಿ ಅಂತಿದ್ದಾರೆ ಸ್ಥಳೀಯರು. ಇವರಹೈನುಗಾರಿಕೆ ಅಳವಡಿಕೆ ಮಾಡಿಕೊಂಡರೆ ಲಾಭ ಕಟ್ಟಿಟ್ಟಬುತ್ತಿ ಎಂದು ಹಲವರು ಹೇಳುತ್ತಿದ್ದಾರೆ.