ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕುಮಟಾ (ಮಾ.06) : ದ್ವಿತೀಯ ಪಿಯುಸಿ ಓದುತ್ತಿರುವ ಅಪ್ರಾಪ್ತ ಯುವತಿಯೊರ್ವಳ ಮೇಲೆ ಮೂರೂರು ಬಳಿಯ ಯುವನೊರ್ವ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಘಟನೆ ಗುರುವಾರ ನಡೆದಿದೆ.
ಈಶ್ವರ ಗೌಡ (20) ಬಂಧಿತ ಆರೋಪಿ. ಈತ 17 ವರ್ಷದ ಬಾಲಕಿಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಗೆಳೆಯನ ಮಂಚಕ್ಕೆ ದೂಡಿದ ಪತಿ, ಗೃಹಿಣಿ ಆತ್ಮಹತ್ಯೆ..
ಈತನನ್ನು ಪೊಕ್ಸೋ ಮತ್ತು ಅತ್ಯಾಚಾರ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಮಾ. 19 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.