ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶ

By Web Desk  |  First Published Sep 22, 2019, 2:14 PM IST

ಎಥಿಕಲ್‌ ಹ್ಯಾಕರ್ಸ್ ಗೆ ಐಟಿಯಲ್ಲಿ ಸಾಕಷ್ಟು ಉದ್ಯೋಗಾವಕಾಶ| ನಗರದ ಜಿಎಂಐಟಿಯಲ್ಲಿ ಎಥಿಕಲ್‌ ಹ್ಯಾಕಿಂಗ್‌ ಕಾರ್ಯಾಗಾರದಲ್ಲಿ ಎಚ್‌. ರಾಘವೇಂದ್ರ ರಾವ್‌ ಹೇಳಿಕೆ| ಸೈಬರ್‌ ಕ್ರೈಂ ತಡೆಗಟ್ಟುವಲ್ಲಿ, ಸೈಬರ್‌ ದಾಳಿ ಬಗ್ಗೆ ಎಚ್ಚರ ವಹಿಸಲು ಕಾರ್ಯಾಗಾರ ಸಹಕಾರಿ| ಅನುಭವ, ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಇದರ ಸದುಪಯೋಗ ಪಡೆಯಬಹುದು| 


ದಾವಣಗೆರೆ:(ಸೆ.22) ಡಿಜಿಟಲ್‌ ತಂತ್ರಜ್ಞಾನದ ಇಂದಿನ ಯುಗದಲ್ಲಿ ಮೊಬೈಲ್‌, ಕಂಪ್ಯೂಟರ್‌ ಮತ್ತಿತರೆ ಉಪಕರಣ ಬಳಸುವವರು ಸೈಬರ್‌ ಕ್ರೈಂ ಬಗ್ಗೆ ಸಮಗ್ರ ಮಾಹಿತಿ ಹೊಂದುವುದು ಅತ್ಯವಶ್ಯಕ ಎಂದು ಒರಾಕಲ್‌ ಸಂಸ್ಥೆಯ ಹಿರಿಯ ನಿರ್ದೇಶಕ ಎಚ್‌.ರಾಘವೇಂದ್ರ ರಾವ್‌ ಅವರು ತಿಳಿಸಿದರು.

ಶನಿವಾರ ನಗರದ ಜಿಎಂಐಟಿ ಕಾಲೇಜಿನ ಗಣಕ ಯಂತ್ರ ವಿಭಾಗದಲ್ಲಿ ಬೆಂಗಳೂರಿನ ಸಿಎಸ್‌ಐ, ಸಿರಿಂಟೆಲ್‌ ಮತ್ತು ಕೋಡ್‌ ಫ್ರಕ್ಸ್‌ ಸಂಸ್ಥೆಗಳಿಂದ ಹಮ್ಮಿಕೊಂಡಿರುವ ಎಥಿಕಲ್‌ ಹ್ಯಾಕಿಂಗ್‌ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Latest Videos

undefined

ಸೈಬರ್‌ ಕ್ರೈಂ ತಡೆಗಟ್ಟುವಲ್ಲಿ, ಸೈಬರ್‌ ದಾಳಿಕೋರರಿಂದ ಎಚ್ಚರ ವಹಿಸಲು ಕಂಪ್ಯೂಟರ್‌, ಮೊಬೈಲ್‌ ಅಪ್ಲಿಕೇಷನ್‌ ಮತ್ತು ಕಂಪ್ಯೂಟರ್‌ ನೆಟ್‌ವರ್ಕ್ಗಳ ಗುಣಮಟ್ಟ ಅಳೆಯುವಲ್ಲಿ ಈ ಕಾರ್ಯಾಗಾರ ಸಹಕಾರಿ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಥಿಕಲ್‌ ಹ್ಯಾಕರ್‌ಗಳಿಗೆ ಇಂದಿನ ದಿನಮಾನಗಳಲ್ಲಿ ಐಟಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಮೂರು ದಿನಗಳ ಕಾರ್ಯಾಗಾರದಲ್ಲಿ ಕಂಪ್ಯೂಟರ್‌, ಮೊಬೈಲ್‌ ಅಪ್ಲಿಕೇಷನ, ಕಂಪ್ಯೂಟರ್‌ ನೆಟ್‌ವರ್ಕ್ಗಳ ಗುಣಮಟ್ಟ ಹೀಗೆ ನಾನಾ ವಿಚಾರಗಳ ಬಗ್ಗೆ ಮೂರು ದಿನಗಳ ಕಾಲ ಐಟಿ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ತರಬೇತಿ, ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು. 

ಮಾನವನಿಗೆ ಜ್ಞಾನಾರ್ಜನೆ ಸದಾ ಇರಬೇಕು. ಕಲಿಕೆಗೆ ವಯಸ್ಸಿನ ಹಂಗು ಇಲ್ಲ. ಕಲಿಕೆಯೆಂಬುದು ನಿರಂತರ ಪ್ರಕ್ರಿಯೆಯಾಗಿದೆ. ಈ ಹಿನ್ನೆಲೆಯಲ್ಲಿ ಜ್ಞಾನವನ್ನು ಪಡೆಯುವ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಂತಹ ಎಥಿಕಲ್‌ ಹ್ಯಾಕಿಂಗ್‌ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ವಿದ್ಯಾರ್ಥಿಗಳೂ ತಮ್ಮ ಜ್ಞಾನ, ಅನುಭವ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಮಾತನಾಡಿದ ಸಿರೆಂಟಲ್‌ ಸಂಸ್ಥೆಯ ಮುಖ್ಯಸ್ಥ ಶಿವಾಲಿ ಅವರು, ಕೇಂದ್ರ ಸೈಬರ್‌ ಸಂಸ್ಥೆಯ ಅನುಮತಿ ಮೇರೆಗೆ ಇಂತಹದ್ದೊಂದು ಕಾರ್ಯಾಗಾರ ಆಯೋಜಿಸಲಾಗಿದೆ. ನಿಬಂಧನೆಗಳಿಗೆ ಒಪ್ಪಿಗೆ ಸೂಚಿಸಿ ಆಗಮಿಸಿದವರು ಈ ಮೂರು ದಿನಗಳ ಕಾರ್ಯಾಗಾರದಲ್ಲಿ ತಮ್ಮ ಅನುಭವ, ಜ್ಞಾನ ಹೆಚ್ಚಿಸಿಕೊಳ್ಳುವ ಮೂಲಕ ಇದರ ಸದುಪಯೋಗ ಪಡೆಯಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ.ವೈ.ವಿಜಯಕುಮಾರ ಮಾತನಾಡಿ, ಎಥಿಕಲ್‌ ಹ್ಯಾಕರ್‌ಗಳಿಗೆ ಐಟಿ ಕ್ಷೇತ್ರದಲ್ಲಿ ಸಾಕಷ್ಟುಉದ್ಯೋಗಾವಕಾಶಗಳಿವೆ. ತಮ್ಮ ಔದ್ಯೋಗಿಕ ಜೀವನದಲ್ಲಿ ಆದ ಅನುಭವ, ಘಟನೆಗಳನ್ನು ಎಳೆ ಎಳೆಯಾಗಿ ವಿವರಿಸಿದ ಅವರು, ಕಾರ್ಯಾಗಾರದ ಸಂಪೂರ್ಣ ಉಪಯೋಗ ಪಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
 

click me!