ಅನಧಿಕೃತ ಲೋಡ್‌ಶೆಡ್ಡಿಂಗ್ ಪ್ರಾರಂಭ, ಕರೆಂಟ್ ಯಾವಾಗ?

By Kannadaprabha News  |  First Published Oct 11, 2023, 8:27 AM IST

ನಗರದಾದ್ಯಂತ ಸೋಮವಾರ ಬೆಳಿಗ್ಗೆಯಿಂದಲೇ ಹಲವು ಭಾಗಗಳಲ್ಲಿ ವಿದ್ಯುತ್ ಗಂಟೆಗಟ್ಟಲೆ ಕಡಿತವಾಗಿದ್ದರಿಂದ ಸಾರ್ವಜನಿಕರು ಎದುರಿಗೆ ಸಿಕ್ಕವರನ್ನೆಲ್ಲಾ ಕರೆಂಟ್ ಯಾವಾಗ ಬರುತ್ತಂತೆ ಸರ್ ಎಂದು ಪರಸ್ಪರ ವಿಚಾರಿಸುತ್ತಿದ್ದ ದೃಶ್ಯಗಳು ದಿನಪೂರ್ತಿ ಕಂಡುಬಂದವು.


ತಿಪಟೂರು: ನಗರದಾದ್ಯಂತ  ಹಲವು ಭಾಗಗಳಲ್ಲಿ ವಿದ್ಯುತ್ ಗಂಟೆಗಟ್ಟಲೆ ಕಡಿತವಾಗುತ್ತಿದ್ದು,  ಸಾರ್ವಜನಿಕರು ಎದುರಿಗೆ ಸಿಕ್ಕವರನ್ನೆಲ್ಲಾ ಕರೆಂಟ್ ಯಾವಾಗ ಬರುತ್ತಂತೆ ಸರ್ ಎಂದು ಪರಸ್ಪರ ವಿಚಾರಿಸುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬರುತ್ತಿವೆ. 

ನಂಬಿಯೇ ವ್ಯಾಪಾರ, ವ್ಯವಹಾರ ಹಾಗೂ ಇತರೆ ಉದ್ಯಮ ನಡೆಸುವವರಂತೂ ಅನಧಿಕೃತ ಲೋಡ್‌ಶೆಡ್ಡಿಂಗ್ ವಿರೋಧಿಸಿ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತಮ್ಮದೇ ದಾಟಿಯಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಗ್ರಾಹಕರು ಹಾಗೂ ಸಾರ್ವಜನಿಕರು ವಿದ್ಯುತ್ ಇಲಾಖೆಯವರಿಗೆ ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ರಿಸೀವ್ ಮಾಡಿದ ಕೆಲ ಅಧಿಕಾರಿಗಳು ಲೋಡ್‌ಶೆಡ್ಡಿಂಗ್ ಇದೆ ಎಂದರೆ, ಮತ್ತೆ ಕೆಲ ಅಧಿಕಾರಿಗಳು ಮೈನ್ ಸರಬರಾಜು ತೆಗೆದಿದ್ದಾರೆ ಎನ್ನುತ್ತಿದ್ದರೇ ಹೊರತು ಕರೆಂಟ್ ಯಾವಾಗ? ಎಷ್ಟು ಗಂಟೆಗೆ ಬರುತ್ತದೆ ಎಂದು ಹೇಳುತ್ತಿರಲಿಲ್ಲ.

Tap to resize

Latest Videos

ಕರೆಂಟ್ ಯಾವಾಗ ಬರುತ್ತದೆ ಎಂಬ ಪ್ರಶ್ನೆಗಳ ನಡುವೆ ರಾತ್ರಿ 8 ಗಂಟೆ ಹೊತ್ತಿಗೆ ಲೋಡ್‌ ಶೆಡ್ಡಿಂಗ್ ಮುಗಿದು ದಿಢೀರ್‌ ವಿದ್ಯುತ್ ಸಂಪರ್ಕ ಬಂದಿದ್ದರಿಂದ ಈಗಲಾದರೂ ಕರೆಂಟ್ ಬಂತಲ್ಲ ಎಂದು ಕೆಲವರು ಸಮಧಾನ ಪಟ್ಟುಕೊಂಡರೆ ಮತ್ತೆ ಕೆಲವರು ಮತ್ತೆ ಕರೆಂಟ್ ಹೋಗಬಹುದು ಎಂಬ ಆತಂಕದ ಮಾತಗಳನ್ನಾಡುತ್ತಿದ್ದರು. ಮುಂಗಾರು ಮಳೆಯ ಕೊನೆಯ ಹಂತದಲ್ಲೇ ಲೋಡ್‌ಶೆಡ್ಡಿಂಗ್ ಪ್ರಾರಂಭವಾಗಿದ್ದು, ಹಿಂಗಾರು, ಚಳಿಗಾಲ ನಂತರದ ಬಿರುಬೇಸಿಗೆ ಕಾಲದಲ್ಲಿ ವಿದ್ಯುತ್ ಇನ್ನೂ ಯಾವ್ಯಾವ ತರಹ ಕಣ್ಣಮುಚ್ಚಾಲೆಯಾಡುತ್ತದೆಯೋ ಎಂದು ಸಾರ್ವಜನಿಕರು ಮಾತಾನಾಡಿಕೊಂಡು ಸರ್ಕಾರದ ಪುಗಸಟ್ಟೆ ವಿದ್ಯುತ್ ಯಾಕೆ ಬೇಕಿತ್ತು ಎಂದು ಲೋಡ್‌ಶೆಡ್ಡಿಂಗ್ ಬಗ್ಗೆ ಟೀಕಿಸುತ್ತಿದ್ದು ಕಂಡು ಬಂದಿತು.

ನಿತ್ಯ ಅಗತ್ಯಕ್ಕಿಂತ 40ರಿಂದ 50 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಕೊರತೆ

ಬೆಂಗಳೂರು(ಅ.11):  ರಾಜ್ಯದಲ್ಲಿ ಮುಂಗಾರು ಕೊರತೆಯಿಂದಾಗಿ ವಿದ್ಯುತ್‌ ಉತ್ಪಾದನೆಯಲ್ಲಿ ಕುಸಿತ ಹಾಗೂ ಬೇಡಿಕೆಯಲ್ಲಿ ತೀವ್ರಗತಿಯ ಹೆಚ್ಚಳವಾಗಿರುವುದರಿಂದ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಪ್ರತಿ ನಿತ್ಯ ಅಗತ್ಯಕ್ಕಿಂತ 40ರಿಂದ 50 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಕೊರತೆ ಎದುರಿಸುತ್ತಿದೆ.

ಈ ವರ್ಷ ಆಗಸ್ಟ್‌ ತಿಂಗಳಲ್ಲಿ 16,950 ಮೆ.ವ್ಯಾಟ್‌ನಷ್ಟು (2022ರ ಆಗಸ್ಟ್‌ ಬೇಡಿಕೆ 11286 ಮೆ.ವ್ಯಾ) ಗರಿಷ್ಠ ಬೇಡಿಕೆ ಕಂಡುಬಂದಿತ್ತು. ಇದೀಗ ಅಕ್ಟೋಬರ್‌ನಲ್ಲಿ ವಿದ್ಯುತ್‌ ಬೇಡಿಕೆ ಮತ್ತೆ 15000 ಮೆ.ವ್ಯಾಟ್‌ಗಿಂತಲೂ ಹೆಚ್ಚಳವಾಗುವ ಅಂದಾಜಿಸಲಾಗಿದೆ. 2022ರ ಅಕ್ಟೋಬರ್‌ನಲ್ಲಿ ನಿತ್ಯ 150 ಮೆ.ವ್ಯಾಟ್‌ನಷ್ಟು ಇರುತ್ತಿದ್ದ ಬೇಡಿಕೆ, ಈ ವರ್ಷ ಅ.1ರಿಂದ 6ರವರೆಗಿನ ಸರಾಸರಿ ಬೇಡಿಕೆ 250 ಮೆ.ವ್ಯಾಟ್‌ ದಾಟಿದೆ. 2024ರ ಮುಂಗಾರು ಹಂಗಾಮಿನ ವರೆಗು ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥತಿ ನಿಭಾಯಿಸಲು ಇಲಾಖೆಯು ಉತ್ತರ ಪ್ರದೇಶ, ಪಂಜಾಬ್‌ನಿಂದ ವಿನಿಮಯ ಯೋಜನೆಯಡಿ ವಿದ್ಯುತ್‌ ಪಡೆಯಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ.

ಕರ್ನಾಟಕದಲ್ಲಿ 3000 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ತೀರ್ಮಾನ: ಸಚಿವ ಜಾರ್ಜ್

ಇದು ಇಂಧನ ಇಲಾಖೆಯೇ ರಾಜ್ಯದಲ್ಲಿ ಸದ್ಯ ವಿದ್ಯುತ್‌ ಸ್ಥಿತಿಗತಿ ಬಗ್ಗೆ ಸಿದ್ಧಪಡಿಸಿರುವ ಅಂಕಿ ಅಂಶಗಳು. ಈ ಅಂಕಿ ಅಂಶಗಳ ಪ್ರಕಾರ ರಾಜ್ಯ ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆ ವಿಚಾರದಲ್ಲಿ ತೀವ್ರ ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಇದರೊಂದಿಗೆ ರಾಜ್ಯದಲ್ಲಿ ಕಂಡುಬರುತ್ತಿರುವ ವಿದ್ಯುತ್‌ ವ್ಯತ್ಯಯ, ಅಘೋಷಿತ ಲೋಡ್‌ ಶೆಡ್ಡಿಂಗ್‌ ಪ್ರಕ್ರಿಯೆಗೆ ಕಾರಣ ಬಯಲಾಗಿದೆ. ರಾಜ್ಯ ಸರ್ಕಾರ ಸದ್ಯ ವಿದ್ಯುತ್‌ ಕೊರತೆ ಇಲ್ಲ. ಲೋಡ್‌ ಶೆಡ್ಡಿಂಗ್‌ ಮಾಡುತ್ತಿಲ್ಲ ಎಂದು ಬಾಯಿಮಾತಿಗೆ ಹೇಳುತ್ತಿದ್ದರೂ ರಾಜ್ಯಾದ್ಯಂತ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವಿದ್ಯುತ್‌ ವ್ಯತ್ಯಯ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ ಮುಂದುವರೆದಿದೆ.

ವಿದ್ಯುತ್ ಬಾಕಿ ಬಿಲ್ ಪಾವತಿಗೆ ಇಂದೇ ಕೊನೆಯ ದಿನ: ಕಟ್ಟದಿದ್ರೆ ಗೃಹ ಜ್ಯೋತಿ ಯೋಜನೆ ಸಿಗಲ್ಲ..!

ಅಂಕಿ ಅಂಶಗಳ ಪ್ರಕಾರ, ಜಲಾಶಯಗಳಲ್ಲಿ ತೀವ್ರ ನೀರಿನ ಕೊರತೆಯಿಂದಾಗಿ ಪ್ರಸಕ್ತ ವರ್ಷ ಅಂದಾಜು 3000 ಮಿಲಿಯನ್ ಯುನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ಇದು ರಾಜ್ಯದ ವಾರ್ಷಿಕ ಬೇಡಿಕೆಯ ಶೇ.4ರಷ್ಟಾಗಿದೆ. ಮತ್ತೊಂದೆಡೆ ಉಷ್ಣ ವಿದ್ಯುತ್‌ ಸ್ಥಾವರಗಳಿಗೆ ಕಲ್ಲಿದ್ದಲು ಖರೀದಿಸುವ ರಾಜ್ಯಗಳಲ್ಲಿ ತೀವ್ರ ಮಳೆಯಿಂದಾಗಿ ತೇವಾಂಶದ ಕಲ್ಲಿದ್ದಲು ಸರಬರಾಜಾಗುತ್ತಿದ್ದು ಇದರಿಂದ ಆಗಾಗ ಸ್ಥಾವರಗಳು ಸ್ಥಿಗಿತಗೊಳ್ಳುತ್ತಿವೆ. ಇದರಿಂದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲೂ ಸರಾಸರಿ 1500ರಿಂದ 2000 ಮೆ.ವ್ಯಾಟ್‌ನಷ್ಟು ಉತ್ಪಾದನೆ ಕುಂಠಿತವಾಗಿದೆ. ಮತ್ತೊಂದೆಡೆ ಪವನ ಶಕ್ತಿ ಉತ್ಪಾದನೆಲ್ಲು ಕುಸಿತವಾಗಿದೆ. ಸೌರಶಕ್ತಿಯ ವಿದ್ಯುತ್‌ ಉತ್ಪಾದನೆ ಮಾತ್ರ ತಕ್ಕಮಟ್ಟಿಗಿದೆ.

click me!