ಶಿವಮೊಗ್ಗದ ಕುವೆಂಪು ವಿವಿಗೆ ಮೊದಲ ಸ್ಥಾನ

By Kannadaprabha News  |  First Published Sep 18, 2019, 10:48 AM IST

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಣೀಕರಣ ದ 2019ರ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನ ಹಾಗೂ ಸರ್ಕಾರಿ ಅನುದಾನಿತ ವಿವಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.


ಶಿವಮೊಗ್ಗ [ಸೆ.18]:  ಉನ್ನತ ಶಿಕ್ಷಣ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಶ್ರೇಣೀಕರಣ ದ 2019ರ ಪಟ್ಟಿಯಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಮೂರನೇ ಸ್ಥಾನ ಹಾಗೂ ಸರ್ಕಾರಿ ಅನುದಾನಿತ ವಿವಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರು ಕುವೆಂಪು ವಿವಿ ಕುಲಪತಿ ಪೊ›.ಬಿ.ಪಿ.ವೀರಭದ್ರಪ್ಪಗೆ ಪ್ರಮಾಣ ಪತ್ರ ನೀಡಿದರು.

Latest Videos

undefined

ಹತ್ತು ವರ್ಷಕ್ಕಿಂತ ಹೆಚ್ಚಿನ ಕಾಲಾವಧಿ ಪೂರೈಸಿರುವ ವಿವಿಗಳ ಪಟ್ಟಿಯಲ್ಲಿ ಒಂದು ಸಾವಿರಕ್ಕೆ 718 ಅಂಕಗಳನ್ನು ಪಡೆದಿರುವ ಕುವೆಂಪು ವಿವಿಯು 2019ನೇ ಸಾಲಿನಲ್ಲಿ ಮೂರನೇ ಸ್ಥಾನ ಗಳಿಸಿದೆ. ಮೊದಲೆರೆಡು ಸ್ಥಾನಗಳನ್ನು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಕೆಎಲ್‌ಇ ವಿವಿಗಳು ಪಡೆದಿವೆ. ಖಾಸಗಿ ವಿವಿಗಳ ಜೊತೆಯ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದರೆ, ಸರ್ಕಾರಿ ಅನುದಾನಿತ ವಿವಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಸಾಧನೆ ಮಾಡಿದೆ.

ಕೆಎಸ್‌ಯುಆರ್‌ಎಫ್‌ ರ‌್ಯಾಂಕ್ ಅನ್ನು ಶಿಕ್ಷಣ ಸಂಸ್ಥೆಯ ಸಂಶೋಧನೆ, ಆವಿಷ್ಕಾರ, ಬೋಧನೆ, ಮೂಲಭೂತಸೌಕರ್ಯ ಹಾಗೂ ಸಾಮಾಜಿಕ ಪರಿಣಾಮಗಳೆಂಬ ಐದು ಮಾನದಂಡಗಳನ್ನು ಪರಿಗಣಿಸಿ ಈ ಪಟ್ಟಿಸಿದ್ಧಪಡಿಸಲಾಗುತ್ತದೆ. ಕುವೆಂಪು ವಿವಿಯು ಸಂಶೋಧನೆ ಮತ್ತು ಬೋಧನೆ ವಿಭಾಗಗಳಲ್ಲಿ ಐದಕ್ಕೆ ಐದು ಅಂಕಗಳನ್ನು ಗಳಿಸಿದ್ದು ವಿವಿಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ವಿಶ್ವವಿದ್ಯಾಲಯ ನ್ಯಾಕ್‌ನಿಂದ ‘ಎ’ ಶ್ರೇಣಿ, ಎನ್‌ಐಆರ್‌ಎಫ್‌ನಿಂದ 73ನೇ ರಾರ‍ಯಂಕ್‌ ಹಾಗೂ ಸೈಮ್ಯಾಗೋ ರ‌್ಯಾಂಕ್ ಭಾರತಕ್ಕೆ 45ನೇ ಸ್ಥಾನ ಪಡೆದಿದ್ದು, ಪ್ರಸ್ತುತ ಕೆಎಸ್‌ಯುಆರ್‌ಎಫ್‌ ರ‌್ಯಾಂಕ್ ನಲ್ಲಿ ಕೂಡ ವಿವಿಯು ಮೂರನೇ ರ‌್ಯಾಂಕ್ ಪಡೆದಿರುವುದು ಶೈಕ್ಷಣಿಕ ಮತ್ತು ಸಂಶೋಧನಾ ಗುಣಮಟ್ಟದ ಸ್ಥಿರತೆಯನ್ನು ತೋರ್ಪಡಿಸುತ್ತದೆ ಎಂದು ಕುಲಪತಿ ಪೊ›. ಬಿ.ಪಿ. ವೀರಭದ್ರಪ್ಪ ಹರ್ಷ ವ್ಯಕ್ತಪಡಿಸಿದರು.

ಕೆಎಸ್‌ಯುಆರ್‌ಎಫ್‌ ಬಗ್ಗೆ: ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯು 2017ರಿಂದ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳ ಗುಣಮಟ್ಟ, ಕಾರ್ಯ ಸಾಧನೆಗಳ ಮೌಲ್ಯಮಾಪನ ನಡೆಸಲು ಕೆಎಸ್‌ಯುಆರ್‌ಎಫ್‌ ರ‌್ಯಾಂಕ್ ಪ್ರಾರಂಭಿಸಿದೆ. ಈ ವರ್ಷದ ರ‌್ಯಾಂಕ್ ಪಟ್ಟಿಯು ಇದರ ಮೂರನೇ ಆವೃತಿಯಾಗಿದೆ. ರಾಷ್ಟ್ರಮಟ್ಟದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಆರಂಭಿಸಿರುವ ಎನ್‌ಐಆರ್‌ಎಫ್‌ ರ‌್ಯಾಂಕ್ನಂತೆ ರಾಜ್ಯಮಟ್ಟದಲ್ಲಿ ಉನ್ನತಶಿಕ್ಷಣ ಸಂಸ್ಥೆಗಳ ಶ್ರೇಣಿಕರಣವನ್ನು ಕೆಎಸ್‌ಯುಆರ್‌ಎಫ್‌ ನಿರ್ಧರಿಸುತ್ತದೆ.

ಈ ಶ್ರೇಣೀಕರಣದಲ್ಲಿ ಸಂಶೋಧನೆ, ಆವಿಷ್ಕಾರ, ಬೋಧನೆ, ಮೂಲಭೂತಸೌಕರ್ಯ ಹಾಗೂ ಸಾಮಾಜಿಕ ಪರಿಣಾಮಗಳೆಂಬ ಐದು ಮಾನದಂಡವಾಗುಳಿದ್ದು, ಸಂಶೋಧನಾ ಉತ್ಪಾದಕತೆ, ಪೇಟೆಂಟ್‌ಗಳು, ಅಧ್ಯಾಪಕರ ಉತ್ಕಷ್ಟತೆ ಮತ್ತಿತರ 27 ಅಂಶಗಳನ್ನು ಪರಿಗಣಿಸಿ ರ‌್ಯಾಂಕ್ ನೀಡಲಾಗುತ್ತದೆ.

click me!