ಚಾಮರಾಜನಗರ ಜಿಲ್ಲೆಯಲ್ಲಿ ಸೌತೆಕಾಯಿ ವಿಚಾರಕ್ಕೆ ಜಗಳ ತೆಗೆದು ಅಣ್ಣನೊಬ್ಬ ತನ್ನ ಸ್ವಂತ ತಂಗಿಯನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ್ದಲ್ಲದೆ ಅತ್ತಿಗೆ ಮತ್ತು ತಂದೆ ಮೇಲೆಯೂ ಹಲ್ಲೆ ನಡೆಸಿದ್ದಾನೆ.
ಚಾಮರಾಜನಗರ (ಜ.02): ಮನೆಯಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಬರುವುದು ಸಾಮಾನ್ಯ. ಒಂದೆರೆಡು ಬೈದು ಸುಮ್ಮನಾಗುತ್ತಾರೆ. ಇಲ್ಲೊಬ್ಬ ಕ್ರೂರಿ ಕೇವಲ ಸೌತೆಕಾಯಿ ವಿಚಾರಕ್ಕೆ ತನ್ನ ಸ್ವಂತ ತಂಗಿಯ ಕುತ್ತಿಗೆಯನ್ನೇ ಕೊಯ್ದು ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಕೊಲೆ ಮಾಡಿದ್ದಲ್ಲದೇ ಅತ್ತಿಗೆಗೂ ಹಲ್ಲೆ ಮಾಡಿದ್ದಾರೆ.
ಈ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಈದ್ಗಾ ಮೊಹಲ್ಲಾದಲ್ಲಿ ನಿನ್ನೆ ರಾತ್ರಿ ನಡೆದಿದೆ. ಕೊಲೆಯಾದ ಯುವತಿ ಐಮನ್ ಬಾನು ಆಗಿದ್ದಾಳೆ. ಕೊಲೆ ಮಾಡಿದ ಆರೋಪಿ ಫರ್ಮನ್ ಪಾಷಾ ಎಂಬಾತನಾಗಿದ್ದಾನೆ. ಇನ್ನು ಸೌತೆಕಾಯಿ ವಿಚಾರವಾಗಿ ಅಣ್ಣನೇ ಮಾಂಸ ಕತ್ತರಿಸುವ ಚಾಕುವಿನಿಂದ ತಂಗಿಯ ಕುತ್ತಿಗ ಕೊಯ್ದು ಹಲ್ಲೆ ಮಾಡಿದ್ದನ್ನು ಕಂಡು ಬಿಡಿಸಲು ಬಂದ ಅತ್ತಿಗೆ ಹಾಗೂ ಆತನ ಸ್ವಂತ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದಾನೆ. ಮನೆಯಲ್ಲಿ ಕೂಗಾಟ, ಚೀರಾಟ ಹೆಚ್ಚಾಗುತ್ತಿದ್ದಂತೆ ಅಕ್ಕ-ಪಕ್ಕದವರೆಲ್ಲಾ ಜಮಾವಣೆ ಆಗುತ್ತಿದ್ದಂತೆ ಮನೆಯ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ನಂತರ, ತಾನೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಿದ್ದಾನೆ.
ಸೌತೆಕಾಯಿಗಾಗಿ ಕೊಲೆ ನಡೆದಿದ್ದೇಕೆ? ಘಟನೆಯ ವಿವರ ಇಲ್ಲಿದೆ ನೋಡಿ..
ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಭ್ರಮ ತುಂಬಿದ್ದ ಮನೆಯಲ್ಲಿ ಬಾಡೂಟವನ್ನು ಮಾಡಲಾಗಿತ್ತು. ನಿನ್ನೆ ರಾತ್ರಿ ಮನೆಯಲ್ಲಿ ಊಟ ಮಾಡುವ ಆರೋಪಿ ಫರ್ಮಾನ್ ತನ್ನ ಅಣ್ಣನ ಮಗುವಿಗೆ ಸೌತೆಕಾಯಿ ತಿನ್ನಿಸುತ್ತಿದ್ದನು. ಆಗ ಅವರ ಅತ್ತಿಗೆ ಮಗುವಿಗೆ ಮೊದಲೇ ಜ್ವರವಿದೆ. ನೀನು ಸೌತೆಕಾಯಿ ತಿನ್ನಿಸಬೇಡ, ಅದು ಶೀತ ಪದಾರ್ಥ ಎಂದು ಅತ್ತಿಗೆ ತಸ್ಲಿಮ್ ತಾಜ್ ಹೇಳಿದ್ದಾರೆ. ಈ ವೇಳೆ ಅಣ್ಣನಿಗೆ ಅತ್ತಿಗೆ ಬೈಯುತ್ತಿದ್ದಾಗ ತನ್ನದೂ ಒಂದೆರೆಡು ಮಾತು ಎಂಬಂತೆ ಆತನ ಐಮಾನು ಭಾನು ಕೂಡ ಒಂದೆರೆಡು ಮಾತನ್ನು ಬೈದು ನಿಂದನೆ ಮಾಡಿದ್ದಾಳೆ.
ಇದನ್ನೂ ಓದಿ: ಹೊಸ ವರ್ಷದ ದಿನವೇ ಬಯೋಕಾನ್ ಉದ್ಯೋಗಿ ನಿಗೂಢ ಸಾವು
ತನಗಿಂತ ಚಿಕ್ಕವಳಾಗಿದ್ದ ತಂಗಿ ಐಮಾನು ತನಗೆ ಬೈಯುತ್ತಿದ್ದ ತೀವ್ರ ಕೋಪಗೊಂಡ ಅಣ್ಣ ಫರ್ಮಾನ್ ಪಾಷಾ ಕೂಡಲೇ ಅಡಿಗೆ ಮನೆಯಲ್ಲಿದ್ದ ಮಾಂಸವನ್ನು ಕತ್ತರಿಸುವ ಹರಿತವಾದ ಕತ್ತಿಯನ್ನು ತೆಗೆದುಕೊಂಡು ತಂಗಿ ಐಮಾನ್‌ಳ ಕುತ್ತಿಗೆಯನ್ನು ಸೀಳಿದ್ದಾನೆ. ಇದರಿಂದ ಆತನ ತಂಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದಾಳೆ. ಇದನ್ನು ನೋಡಿದ ಅತ್ತಿಗೆ ಕೂಡಲೇ ಜಗಳ ಬಿಡಿಸಲು ಮುಂದಾಗಿದ್ದಾಳೆ. ಆಗ ಅತ್ತಿಗೆಗೂ ಕತ್ತಿಯಿಂದ ಹಲ್ಲೆ ಮಾಡಿ ಕೈ ಕೊಯ್ದಿದ್ದಾನೆ. ಚೀರಾಟ ಆಗುತ್ತಿದ್ದನ್ನು ಕೇಳಿದ ಅವರ ತಂದೆ ಕೋನೆಯಿಂದ ಎದ್ದುಬಂದು ಬೈದು ಬುದ್ಧಿಹೇಳಿ ಕತ್ತಿಯನ್ನು ಕಿತ್ತುಕೊಳ್ಳಲು ಬಂದಾಗ ಅವರ ಮೇಲೂ ಹಲ್ಲೆ ಮಾಡದ್ದಾನೆ.
ಇನ್ನು ಮನೆಯಲ್ಲಿ ಜನರ ಚೀರಾಟ ಕೂಗಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಅಕ್ಕ-ಪಕ್ಕದ ಮನೆಯವರು ಹಾಗೂ ಸ್ಥಳೀಯರು ಬರುತ್ತಿದ್ದಂತೆ ಫರ್ಮಾನ್ ಪಾಷಾ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ನಂತರ, ತಾನೆ 112ಗೆ ಕರೆ ಮಾಡಿ ಪೊಲೀಸರನ್ನ ಮನೆಗೆ ಕರೆಸಿಕೊಂಡು ಶರಣಾಗತಿ ಆಗಿದ್ದಾನೆ. ಸದ್ಯ ಕೊಳ್ಳೇಗಾಲ ಪಟ್ಟಣ ಪೊಲೀಸರಿಂದ ಆರೋಪಿಯ ವಿಚಾರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ: ನಾಲ್ವರು ಸಹೋದರಿಯರು, ತಾಯಿಯ ಹತ್ಯೆಗೈದು ವಿಡಿಯೋ ಮಾಡಿದ ಯುವಕ ಸೆರೆ!